ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಏನೆಂದು ಸ್ತುತಿಸಲಿ | ಹಯವದನ | Enendu Stutisali | Hayavadana

 


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಏನೆಂದು ಸ್ತುತಿಸಲಿ ದೇವರಂಗಯ್ಯ ನಿನ್ನ 
ಜಾಣತನವ ನೀನೆ ಬಲ್ಲೆ ಶ್ರೀರಂಗಯ್ಯ ||ಪ||

ಮತ್ಸ್ಯನಾಗಿ ಶ್ರುತಿಯ ತಂದೆ ರಂಗಯ್ಯ  
ನೀನು ಕುತ್ಸಿತ ತಮನ ಕೊಂದೆ ರಂಗಯ್ಯ|| 
ಸ್ವಚ್ಛ ಕೂರುಮನಾದೆ ರಂಗಯ್ಯ 
ಭಕ್ತರಿಚ್ಛೆಯ ಪಾಲಿಸಿದೆ ಶ್ರೀರಂಗಯ್ಯ ||೧||

ಆದಿವರಾಹ ನೀನಾದೆ ರಂಗಯ್ಯ 
ನೀನು ಪೋದ ಮೇದಿನಿಯ ತಂದೆ ರಂಗಯ್ಯ|| 
ಬೇಧಿಸಿ ಕಂಭದಿ ಬಂದೆ ರಂಗಯ್ಯ 
ಪ್ರಹ್ಲಾದನ ಕಾಯ್ದೆ ಶ್ರೀರಂಗಯ್ಯ ||೨||

ಬಲಿಯನು ವಂಚಿಸಿದಂಥ ರಂಗಯ್ಯ  
ನೀನು ನೆಲವ ಓರಡಿ ಮಾಡ್ದೆ ರಂಗಯ್ಯ|| 
ಬಲವಂತ ಭಾರ್ಗವನಾದೆ ರಂಗಯ್ಯ 
ನೀನು ಛಲದಿ ಕ್ಷತ್ರಿಯರ ಗೆದ್ದೆ ರಂಗಯ್ಯ ||೩||

ಜಲಧಿಯನು ಕಟ್ಟಿದೆ ರಂಗಯ್ಯ 
ಹತ್ತು ತಲೆಯವನ ಕುಟ್ಟಿದೆ ರಂಗಯ್ಯ 
ಮಲೆತ ಮಾವನ ಕೊಂದೆ ರಂಗಯ್ಯ 
ಯದುಕುಲವನುದ್ಧರಿಸಿದೆ ಶ್ರೀರಂಗಯ್ಯ ||೪||

ಸತಿಯರ ಮೋಹಿಸಿದೆ ನೀನು ರಂಗಯ್ಯ 
ಬಲು ಚತುರ ಬೌದ್ಧನಾದೆ ರಂಗಯ್ಯ|| 
ಖತಿಯಿಂದ ಹಯವೇರಿದೆ ರಂಗಯ್ಯ 
ದುರ್ಮತಿಯ ಕಲಿಯ ಕೊಂದೆ ಶ್ರೀರಂಗಯ್ಯ ||೫||

ತ್ರಿಭುವನದೊಳಗಧಿಕ ರಂಗಯ್ಯ 
ನೀನು ಉಭಯ ಕಾವೇರಿವಾಸ ರಂಗಯ್ಯ 
ವಿಭೀಷಣನಿಗೆ ಪ್ರಸನ್ನ ರಂಗಯ್ಯ
ನೀನು ಅಭಯವಿತ್ತೆನ್ನ ಕಾಯೋ ಶ್ರೀರಂಗಯ್ಯ ||೬||

ವಾದಿರಾಜನಿಗೊಲಿದೆ ರಂಗಯ್ಯ 
ನೀನು ಮೋದಿ ಹಯವದನನಾದೆ ರಂಗಯ್ಯ 
ಸಾಧಿಸಿ ಖಳರ ಕೊಂದೆ ರಂಗಯ್ಯ 
ವಿನೋದದಿ ವೇದವ ತಂದೆ ಶ್ರೀರಂಗಯ್ಯ  ||೭|| 

EneMdu stutisali dEvaraMgayya ninna 
jANatanava nIne balle SrIraMgayya ||pa||

matsyanAgi Srutiya taMde raMgayya  
nInu kutsita tamana koMde raMgayya|| 
svacCa kUrumanAde raMgayya 
BaktaricCheya pAliside SrIraMgayya ||1||

AdivarAha nInAde raMgayya 
nInu pOda mEdiniya taMde raMgayya|| 
bEdhisi kaMBadi baMde raMgayya 
prahlAdana kAyde SrIraMgayya ||2||

baliyanu vaMcisidaMtha raMgayya  
nInu nelava OraDi mADde raMgayya|| 
balavaMta BArgavanAde raMgayya 
nInu Caladi kShatriyara gedde raMgayya ||3||

jaladhiyanu kaTTide raMgayya 
hattu taleyavana kuTTide raMgayya 
maleta mAvana koMde raMgayya 
yadukulavanuddhariside SrIraMgayya ||4||

satiyara mOhiside nInu raMgayya 
balu chatura bauddhanAde raMgayya|| 
KatiyiMda hayavEride raMgayya 
durmatiya kaliya koMde SrIraMgayya ||5||

triBuvanadoLagadhika raMgayya 
nInu uBaya kAvErivAsa raMgayya 
viBIShaNanige prasanna raMgayya
nInu aBayavittenna kAyO SrIraMgayya ||6||

vAdirAjanigolide raMgayya 
nInu mOdi hayavadananAde raMgayya 
sAdhisi KaLara koMde raMgayya 
vinOdadi vEdava taMde SrIraMgayya  ||7|| 


Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru