ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಮ್ಮ ಗಿರಿಯ ತಿಮ್ಮ | ಹಯವದನ | Namma Giriya Timma | Hayavadana


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ನಮ್ಮ ಗಿರಿಯ ತಿಮ್ಮ ಪರಬೊಮ್ಮ
ನಮ್ಮ ಒಮ್ಮೆ ಕಾಯೋತ್ತಮ್ಮ ||ಪ||

ರಂಗ ದುರಿತ ಭಂಗ ಗುಣ ತ-
ರಂಗ ಜಗದೊಳಗೆ ನೀನೆ ಸರ್ವೋತ್ತುಂಗ ||೧||

ನೋಡೋ ಎನ್ನಲ್ಲಿ ಕೃಪೆಮಾಡೋ ಕೈಯ 
ನೀಡೋ ಎನ್ನ ಪೊರೆವೆನೆಂಬ ಮಾತನಾಡೊ ||೨||

ಏಳು ಎನ್ನ ಮಾತ ಕೇಳು ಕಡು ಕೃ-
ಪಾಳು ನಿನ್ನ ಹದನ ಎನಗೊಲಿದು ಪೇಳು ||೩||

ಎಂದ ಮಾತಿಗೆ ಮುಂದೆ ನಿಂದ ನೀ ಕರುಣಿ ಗೋ-
ವಿಂದ ಎಂಬುದಿನ್ನು ನಿನಗೆ ಚಂದ ||೪||

ಪ್ರಿಯ ಎನ್ನ ಕಾಯೋ ಜೀಯ ಮುಕ್ತ್ಯು-
ಪಾಯ ಹಯವದನ ಶೇಷಗಿರಿರಾಯ ||೫|| 

namma giriya timma parabomma
namma omme kAyOttamma ||pa||

raMga durita bhaMga guNa ta-
raMga jagadoLage nIne sarvOttuMga ||1||

nODO ennalli kRupemaaDO kaiya 
neeDO enna poreveneMba maatanaaDo ||2||

ELu enna maata kELu kaDu kRu-
paaLu ninna hadana enagolidu pELu ||3||

eMda maatige muMde niMda nI karuNi gO-
viMda eMbudinnu ninage chaMda ||4||

priya enna kaayO jIya muktyu-
paaya hayavadana shEshagiriraaya ||5|| 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru