ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ತಾಳು ತಾಳೆಲೋ ರಂಗಯ್ಯ | ಪುರಂದರ ವಿಠಲ | Taalu Taalelo Rangayya | Purandara Vithala


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara dasaru (Purandara vittala)


ತಾಳು ತಾಳೆಲೋ ರಂಗಯ್ಯ ನೀ ತಾಳು ತಾಳೆಲೋ ಕೃಷ್ಣಯ್ಯ ||ಪ||

ನಾಳೆ ನಮ್ಮನೆಗೆ ಬಂದರೆ ನಿನ್ನ ಕಾಲು ಕಂಭಕೆ 
ಕಟ್ಟಿ ಹೇಳುವೆ ಗೋಪಿಗೆ ||ಅಪ||

ದೊರೆಗಳ ಮಗನೆಂಬುದಕೇನೋ | 
ಬಹು ದೂರದಿ ಮನೆ ಪೊಕ್ಕ ಪರಿಯೇನೋ || 
ದುರುಳು ಬುದ್ಧಿ ನಿನಗೆ ತರವೇನು 
ಹಿಂದೆ ತಿರುಗಿ ಬೇಡ್ಯುಂಡದ್ದು ಮರೆತ್ಯೇನೋ ||೧||

ಚಿಕ್ಕ ಮಕ್ಕಳು ಹೋದರು ಎಂದು | 
ನೀ ಕಕ್ಕುಲತೆ ಮಾಡೋದು ಸರಿಯೇನು || 
ಸಿಕ್ಕಿದ ಗೋಪಾಲ ಹಿಡಿ ಹಿಡಿ ಎಂದರೆ | 
ಬಿಕ್ಕಿ ಬಿಕ್ಕಿ ಅತ್ತರೆ ಬಿಡುವರೇನೋ ರಂಗ ||೨||

ಕಟ್ಟಿದ ಆಕಳ ಹಾಲುಂಡು ಕರು ಬಿಟ್ಟು 
ಹೇಳುವುದೇನೆಲೊ ರಂಗ || 
ಸೃಷ್ಟಿಗೊಡೆಯ ಶ್ರೀ ಪುರಂದರ ವಿಠಲ 
ನೀ ಕಟ್ಟಲ್ಲಿ ನಿಂತ ಕಾರಣವೇನೋ ||೩||

tALu tALelO raMgayya nI tALu tALelO kRuShNayya ||pa||

nALe nammanege baMdare ninna kAlu kaMBake 
kaTTi hELuve gOpige ||apa||

doregaLa maganeMbudakEnO | 
bahu dUradi mane pokka pariyEnO || 
duruLu buddhi ninage taravEnu 
hiMde tirugi bEDyuMDaddu maretyEnO ||1||

cikka makkaLu hOdaru eMdu | 
nI kakkulate mADOdu sariyEnu || 
sikkida gOpAla hiDi hiDi eMdare | 
bikki bikki attare biDuvarEnO raMga ||2||

kaTTida AkaLa hAluMDu karu biTTu 
hELuvudEnelo raMga || 
sRuShTigoDeya SrI puraMdara viThala 
nI kaTTalli niMta kAraNavEnO ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru