Posts

Showing posts from January, 2021

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ತಾಳು ತಾಳೆಲೋ ರಂಗಯ್ಯ | ಪುರಂದರ ವಿಠಲ | Taalu Taalelo Rangayya | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ತಾಳು ತಾಳೆಲೋ ರಂಗಯ್ಯ ನೀ ತಾಳು ತಾಳೆಲೋ ಕೃಷ್ಣಯ್ಯ ||ಪ|| ನಾಳೆ ನಮ್ಮನೆಗೆ ಬಂದರೆ ನಿನ್ನ ಕಾಲು ಕಂಭಕೆ  ಕಟ್ಟಿ ಹೇಳುವೆ ಗೋಪಿಗೆ ||ಅಪ|| ದೊರೆಗಳ ಮಗನೆಂಬುದಕೇನೋ |  ಬಹು ದೂರದಿ ಮನೆ ಪೊಕ್ಕ ಪರಿಯೇನೋ ||  ದುರುಳು ಬುದ್ಧಿ ನಿನಗೆ ತರವೇನು  ಹಿಂದೆ ತಿರುಗಿ ಬೇಡ್ಯುಂಡದ್ದು ಮರೆತ್ಯೇನೋ ||೧|| ಚಿಕ್ಕ ಮಕ್ಕಳು ಹೋದರು ಎಂದು |  ನೀ ಕಕ್ಕುಲತೆ ಮಾಡೋದು ಸರಿಯೇನು ||  ಸಿಕ್ಕಿದ ಗೋಪಾಲ ಹಿಡಿ ಹಿಡಿ ಎಂದರೆ |  ಬಿಕ್ಕಿ ಬಿಕ್ಕಿ ಅತ್ತರೆ ಬಿಡುವರೇನೋ ರಂಗ ||೨|| ಕಟ್ಟಿದ ಆಕಳ ಹಾಲುಂಡು ಕರು ಬಿಟ್ಟು  ಹೇಳುವುದೇನೆಲೊ ರಂಗ ||  ಸೃಷ್ಟಿಗೊಡೆಯ ಶ್ರೀ ಪುರಂದರ ವಿಠಲ  ನೀ ಕಟ್ಟಲ್ಲಿ ನಿಂತ ಕಾರಣವೇನೋ ||೩|| tALu tALelO raMgayya nI tALu tALelO kRuShNayya ||pa|| nALe nammanege baMdare ninna kAlu kaMBake  kaTTi hELuve gOpige ||apa|| doregaLa maganeMbudakEnO |  bahu dUradi mane pokka pariyEnO ||  duruLu buddhi ninage taravEnu  hiMde tirugi bEDyuMDaddu maretyEnO ||1|| cikka makkaLu hOdaru eMdu |  nI kakkulate mADOdu sariyEnu ||  sikkida gOpAla hiDi hiD...

ನಲಿವ ಬೆಣ್ಣೆಯನು ಮೆಲುವ | ಹಯವದನ | Naliva Benneyanu Meluva | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನಲಿವ ಬೆಣ್ಣೆಯನು ಮೆಲುವ  ಕೃಷ್ಣ ನಮಗೊಲಿವ ಖಳರನ್ನೆ ಕೊಲುವ ||ಪ|| ನಗವ ಕರದಿಂದ ನೆಗೆವ ಅದರೊಳಗೆ ಪೋಗುವ ನರರ ಕಂಡು ನಗುವ ||೧|| ಕಡೆವಕೋಲನ್ನು ಪಿಡಿವ ಭೂಷಣವ ತೊಡುವ ಪಟ್ಟೆಗಳನುಡುವ ||೨|| ಬಡವರಭೀಷ್ಟಗಳ ಕೊಡುವ ದುರಿತಗಳ ಜಡಿವ ದೈತ್ಯರನು ಬಡಿವ ||೩|| ಶರಣನಾಯಕನ ಚರಣದ್ವಯಕೆ  ಪುರಹರಣ ಮಸ್ತಕಾಭರಣ ||೪|| ಶರಣಜನರ ಹಿತಕರಣ ಹಯವದನ- ಸ್ಮರಣ ಭವಕೆ ಸಂಹರಣ ||೫|| naliva beNNeyanu meluva kRuShNa  namagoliva khaLaranne koluva ||pa|| nagava karadiMda negeva adaroLage pOguva narara kaMDu naguva ||1|| kaDevakOlannu piDiva bhUShaNava toDuva paTTegaLanuDuva ||2|| baDavarabhIShTagaLa koDuva duritagaLa jaDiva daityaranu baDiva ||3|| sharaNanaayakana charaNadwayake  puraharaNa mastakaabharaNa ||4|| sharaNajanara hitakaraNa hayavadana- smaraNa bhavake saMharaNa ||5||

ಬಂದನೇನೆ ರಂಗ ಬಂದನೇನೆ | ಪುರಂದರ ವಿಠಲ | Bandanene Ranga | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಬಂದನೇನೆ ರಂಗ ಬಂದನೇನೆ |ಪ| ಎನ್ನ ತಂದೆ ಬಾಲಕೃಷ್ಣ ನವನೀತ ಚೋರ |ಅಪ| ಘಿಲು ಘಿಲು ಘಿಲುರೆಂಬ ಪೊನ್ನೊಂದುಗೆ ಗೆಜ್ಜೆ|  ಹೊಳೆ ಹೊಳೆ ಹೊಳೆಯುವ ಪಾದವ ನೂರುತ| ನಲಿ ನಲಿದಾಡುವ ಉಂಗುರ ಅರಳೆಲೆ|  ಥಳ ಥಳ ಥಳ ಥಳ ಹೊಳೆಯುತ ಶ್ರೀಕೃಷ್ಣಾ |೧| ಕಿಣಿ ಕಿಣಿ ಕಿಣಿರೆಂಬ ಕರದ ಕಂಕಣ ಬಳೆ|  ಝಣ ಝಣ ಝಣರೆಂಬ ನಡುವಿನ ಘಂಟೆ| ಢಣ ಢಣ ಢಣರೆಂಬ ಪಾದದ ತೊಡರಿನ|  ಮಿಣಿ ಮಿಣಿ ಮಿಣಿ ಕುಣಿದಾಡುತ ಶ್ರೀಕೃಷ್ಣಾ|೨| ಹಿಡಿ ಹಿಡಿ ಹಿಡಿ ಎಂದು ಪುರಂದರ ವಿಠಲನ  ದುಡು ದುಡು ದುಡು ದುಡುನೇ ಓಡುತಾ| ನಡೆ ನಡೆ ನಡೆಯೆಂದು ಮೆಲ್ಲನೆ ಪಿಡಿಯಲು|  ಬಿಡಿ ಬಿಡಿ ಬಿಡಿ ಬಿಡಿ ದಮ್ಮಯ್ಯ ಎನ್ನುತ |೩| baMdanEne raMga baMdanEne |pa| enna taMde bAlakRuShNa navanIta cOra |apa|   Gilu Gilu GilureMba ponnoMduge gejje|  hoLe hoLe hoLeyuva pAdava nUruta| nali nalidADuva uMgura araLele|  thaLa thaLa thaLa thaLa hoLeyuta SrIkRuShNA |1|   kiNi kiNi kiNireMba karada kaMkaNa baLe|  JaNa JaNa JaNareMba naDuvina GaMTe| DhaNa DhaNa DhaNareMba pAdada toDarina|  miNi miNi miNi kuNidADuta SrIkRuShNA|2|  ...

ಎನ್ನನುದ್ಧರಿಸಲಾಗದೇ ಚೆನ್ನರಾಯ | ಹಯವದನ | Ennanuddharisalaagade Chenna | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಎನ್ನನುದ್ಧರಿಸಲಾಗದೇ ಚೆನ್ನರಾಯ ||ಪ|| ಎನ್ನನುದ್ಧರಿಸಲಾಗದೇ ಚೆನ್ನರಾಯ ಬಿನ್ನೈಸುವೆ  ಇನ್ನು ಬೇರೆ ಗತಿಯ ಕಾಣೆ ನಿನ್ನ ಚರಣ ಕಮಲದಾಣೆ ||ಅಪ|| ಶರಣಜನರ ಪಾಲ ಕಲ್ಪತರು ಗುರುಸ್ವರೂಪನೆಂದು  ಧರೆಯೊಳಖಿಳ ನಿಗಮ ಉಸುರುತಿರಲು ನಿನ್ನ ಚರಣವನ್ನು  ಶಿರದೊಳಾಂತೆ ಎನ್ನ ಮೇಲಣ ಕರುಣವಿಲ್ಲದು  ಅದೇನು ಕಾರಣ ಸಲಹಬೇಕು ಸುರರ ಮಸ್ತಕದ ಸುಭೂಷಣ ||೧|| ಹಿಂದೆ ನಾನನಾಥನಾಗಿ ಒಂದೆರಡಲ್ಲಾನೇಕ ಜನ್ಮದಿ ಬಂದು  ನರಕಯಾತನೆಯಲ್ಲಿ ನೊಂದು ಬೆಂದು ಬಾಯ ಬಿಡುತ ಬಂದೆ  ನಿನ್ನ ಪೆಸರುಗೊಂಡೆನೊ ಸನಾಥನಾಗಿ ಮುಂದೆ ನಾಮ ಸುಧೆಯನ್ನುಂಡೆನೊ  ನೀ ಕೃಪಾಳು ಎಂದು ನುಡಿವರನ್ನು ಕಂಡೆನೊ ||೨|| ಹಲವು ಮಾತನಾಡಲೇನು ಒಲಿವುದಿನ್ನು ಹರಿಯೆ ನಿನ್ನ ಸಲಿಗೆಯೊಳೀ  ಬಿನ್ನಪವನು ಸಲಿಸುತಿಹೆನು ಮುಂದಕಿನ್ನು ಜಲುಮ ಬಾರದಂತೆ  ವರವನು ಇತ್ತು ಎನ್ನ ಸಲಹೋ ದೊರೆಯೇ ನಿನ್ನ  ಕರೆವೆನು ಮುಂದೆ ಮುಕುತಿ ಲಲನೆಯೊಡನೆ ಸುಖದಲಿರುವೆನು ||೩|| ದೇಶವರಿಯೆ ನಾನು ನಿನ್ನ ದಾಸನೆಂದು ಡಂಗುರವನು ಹೊಯಿಸಿ  ತಿರುಗುತಿರಲು ಮೋಹಪಾಶವೆನ್ನ ಸುತ್ತಿಕೊಂಡು ಘಾಸಿ ಮಾಡುತಿರಲು  ಬಿಡಿಸದೆ ಇರುವ ಪಂಥವಾಸಿಯೇನು ಇನ್ನು ಅಲೆಸದೆ  ಸಲಹೋ ಸರ್ವೇಶ ನಂಬಿದವನ ಕೆಡಿಸದೆ ||೪|| ಎನ್ನ ದುರ್ಗುಣವನ್ನು ಮರೆದು ನಿನ್ನ ಸದ್ಗುಣದಿ ಪೊರೆದು  ಮನ್ನಿಸಿದರ...

ಆವ ಕಡೆಯಿಂದ ಬಂದೆ | ಹಯವದನ | Ava Kadeyinda Bande | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಆವ ಕಡೆಯಿಂದ ಬಂದೆ ವಾಜಿವದನನೆ | ಭಾವಿಸುವ ವಾದಿರಾಜ ಮುನಿಯ ಕಾಣುತ ||ಪ|| ನೇವರಿಸಿ ಮೈಯ ತಡವಿ ಸ್ನೇಹದಿಂದಲಿ  ಮೇಲು ನೈವೇದ್ಯವನ್ನು ಇತ್ತು ಭಜಿಸುವೆ ||ಅಪ|| ಭಕುತಿ ಕಡಲೆ ಜ್ಞಾನ ವೈರಾಗ್ಯ ಬೆಲ್ಲದ | ಮುಕುತಿ ಆನಂದ ಸುಖದ ಕ್ಷೀರ ಲಡ್ಡಿಗೆ || ಯುಕುತಿ ಧ್ಯಾನ ಕೊಟ್ಟು ನೀನು ಎಲ್ಲ ಮಾತಲಿ | ಶಕುತಿ ಸಂತೋಷ ಮಹಿಮೆ ತೋರ ಬಂದೆಯ ||೧|| ಹೆತ್ತ ತುಪ್ಪ ಸಕ್ಕರೆಯ ಮಾಡಿ ಮುದ್ದೆಯ | ತುತ್ತು ಮಾಡಿಕೊಡಲು ಅದನು ಮೆಲುತ ಮೆಚ್ಚುತ || ಅತ್ಯಂತ ಸಂತೋಷ ನೀನು ಆಟ ತೋರುತ | ಭೃತ್ಯ ವಾದಿರಾಜ ಮುನಿಯ ಸಲಹ ಬಂದೆಯಾ ||೨|| ಫಲವ ಕೊಟ್ಟು ರಕ್ಷಿಸಿದಿ ವಾಜಿ ವದನನೆ | ನಿಲುವೋ ಜ್ಞಾನ ಭಕ್ತಿಯನ್ನು ನೀಡ ಬಂದೆಯ || ಸುಲಭ ಸುಮುಖ ಸುಪ್ರಸನ್ನ ಹಯವದನನೆ | ಚೆಲುವ ಚಿನ್ಮಯ ಮೂರ್ತಿ ನಮ್ಮ ಸಲಹ ಬಂದೆಯಾ ||೩|| Ava kaDeyiMda baMde vAjivadanane | BAvisuva vAdirAja muniya kANuta ||pa||   nEvarisi maiya taDavi snEhadiMdali  mElu naivEdyavannu ittu Bajisuve ||apa||   Bakuti kaDale j~jAna vairAgya bellada | mukuti AnaMda suKada kShIra laDDige || yukuti dhyAna koTTu nInu ella mAtali | Sakuti saMtOSha mahime tOra baMdeya ||1||   hetta tuppa sakkareya mADi muddeya | ...

ಬಾರಯ್ಯ ದಯಮಾಡಿ | ಹಯವದನ | Baarayya Daya Maadi | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಬಾರಯ್ಯ ದಯಮಾಡಿ | ತ್ವರಿತದಿ ಬೇಗ |  ಬಾರಯ್ಯ ದಯಮಾಡಿ ||ಪ|| ಒದರಲು ಕರಿರಾಜನೊದಗಿ ಬಂದೆ ಅಲ್ಲಿ |  ಮದ ಭಯ ಭಾಗ್ಯವು ಒದಗಿದುಬ್ಬಸದಿಂದ ||೧|| ಸ್ತಂಭದಿ ನರಹರಿ ಎಂಬ ಭಾವದಿ ಬಂದು |  ಕುಂಬಿನಿಪತಿ ಬಹು ಸಂಭ್ರಮಗೊಳುತಲಿ ||೨|| ನರನು ಅರ್ಚಕನೆತ್ತ ನರಹರಿ ನೀನೆತ್ತ  ಕರುಣದಿ ಬರಬೇಕು ಸಿರಿಹಯವದನ ||೩|| bArayya dayamADi | tvaritadi bEga |  bArayya dayamADi ||pa|| odaralu karirAjanodagi baMde alli |  mada Baya BAgyavu odagidubbasadiMda ||1|| staMBadi narahari eMba BAvadi baMdu |  kuMbinipati bahu saMBramagoLutali ||2|| naranu arcakanetta narahari nInetta  karuNadi barabEku sirihayavadana ||3||

ಹಣ್ಣು ಬಂದಿದೆ ಕೊಳ್ಳಿರೋ | ಪುರಂದರವಿಠಲ | Hannu Bandide Kolliro | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಹಣ್ಣು ಬಂದಿದೆ ಕೊಳ್ಳಿರೋ ನೀವೀಗ ||ಪ|| ಬಾಲಕೃಷ್ಣನೆಂಬ ಚೆನ್ನಾದ ಬಾಳೆಯ ||ಅಪ|| ಹವ್ಯ ಕವ್ಯದ ಹಣ್ಣು ಸವಿವ ಸಕ್ಕರೆ ಹಣ್ಣು | ಭವರೋಗಗಳೆಲ್ಲ ಕಳೆವ ಹಣ್ಣು || ನವನೀತ ಚೋರನೆಂಬ ಜವನ ಅಂಜಿಪ ಹಣ್ಣು | ಅವನಿಯೋಳು ಶ್ರೀ ರಾಮನೆಂಬೋ ಹಣ್ಣು ||೧|| ಕೊಳೆತು ಹೋಗುವುದಲ್ಲ ಹುಳಿತು ಹೋಗುವುದಲ್ಲ | ಕಳೆದು ಬಿಸಾಡಿಸಿ ಕೊಳ್ಳುವುದಲ್ಲ || ಅಳತೆ ಕೊಂಬುವುದಲ್ಲ ಗಿಳಿ ಕಚ್ಚಿ ತಿಂಬೋದಲ್ಲ | ಒಳಿತಾದ ಹರಿಯೆಂಬೊ ಮಾವಿನ ಹಣ್ಣು ||೨|| ಕೆಟ್ಟು ನಾರುವುದಲ್ಲ ಬಿತ್ತಿ ಬೆಳೆಯೋದಲ್ಲ | ಕಷ್ಟದಿ ಹಣ ಕೊಟ್ಟು ಕೊಂಬುವುದಲ್ಲ | ಸೃಷ್ಟಿಯೊಳಗೆ ನಮ್ಮ ಪುರಂದರ ವಿಠಲನ | ಕೃಷ್ಣರಾಯನೆಂಬೊ ಶ್ರೇಷ್ಠವಾದ ಹಣ್ಣು ||೩|| haNNu baMdide koLLirO nIvIga ||pa|| bAlakRuShNaneMba chennAda bALeya ||apa||   havya kavyada haNNu saviva sakkare haNNu | BavarOgagaLella kaLeva haNNu || navanIta cOraneMba javana aMjipa haNNu | avaniyOLu SrI rAmaneMbO haNNu ||1||   koLetu hOguvudalla huLitu hOguvudalla | kaLedu bisADisi koLLuvudalla || aLate koMbuvudalla giLi kacci tiMbOdalla | oLitAda hariyeMbo mAvina haNNu ||2||   keTTu nAruvudalla bitti beLeyO...

ಗಜಮುಖ ಗಣಪತಿಗೆ ನಮೋ | ಹರಪನಹಳ್ಳಿ ಭೀಮವ್ವ | Gajamukha Ganapatige Namo | Harapana halli Bheemavva

Image
ಸಾಹಿತ್ಯ :    ಹರಪನಹಳ್ಳಿ ಭೀಮವ್ವ (ಭೀಮೇಶಕೃಷ್ಣ)  Kruti: Harapanahalli Bhimavva (Bhimesha Krishna) ಗಜಮುಖ ಗಣಪತಿಗೆ ನಮೋ ನಮೋ ತ್ರಿಜಗದೊಳ್ ಪೂಜಿಪಗೆ ನಮೋ ನಮೋ ಗಣಪತಿಗೆ ನಮೋ || ಪ || ಸಿದ್ಧಿವಿನಾಯಕ ವಿದ್ಯಾಪ್ರದಾಯಕ|  ಸಿದ್ಧಿವಿನಾಯಕಗೆ ನಮೋ ನಮೋ  ವಿದ್ಯಾಪ್ರದಾಯಕಗೆ ನಮೋ ನಮೋ ಲಡ್ಡಿಗೆ ಮೋದಕ ನೈವೇದ್ಯ ನಿನಗೆ|  ಲಡ್ಡಿಗೆ ಮೋದಕವ ನಮೋ ನಮೋ  ನೈವೇದ್ಯಕರ್ಪಿಸುವೆ ನಮೋ ನಮೋ || ೧ || ಹರನ ಕುಮಾರನೆ ಗಿರಿಜೆಯ ವರಪುತ್ರ|  ಹರನ ಕುಮಾರನೆ ನಮೋ ನಮೋ  ಗಿರಿಜೆಯ ವರಪುತ್ರನೆ ನಮೋ ನಮೋ| ಹರಿಕಥೆಗಳ ಪೇಳ್ವೆ ವರಮತಿ ಪಾಲಿಸೋ|  ಹರಿಕಥೆಗಳ ಪೇಳ್ವೆನೋ ನಮೋ ನಮೋ  ವರಮತಿ ಪಾಲಿಸೋ ನಮೋ ನಮೋ || ೨ || ಆಕಾಶಕ್ಕಭಿಮಾನಿ ಮೂಷಿಕವಾಹನ|  ಆಕಾಶಕ್ಕಭಿಮಾನಿಗೆ ನಮೋ ನಮೋ  ಮೂಷಿಕ ವಾಹನಗೆ ನಮೋ ನಮೋ| ಭೀಮೇಶ ಕೃಷ್ಣ ಕಥೆ ಸಂತೋಷದಿ ಪೇಳ್ವೆ|  ಭೀಮೇಶ ಕೃಷ್ಣ ಕಥೆ ನಮೋ ನಮೋ  ಸಂತೋಷದಿ ಪೇಳ್ವೆನು ನಮೋ ನಮೋ || ೩ || gajamuKa gaNapatige namO namO trijagadoL pUjipage namO namO gaNapatige namO || pa ||   siddhivinAyaka vidyApradAyaka|  siddhivinAyakage namO namO  vidyApradAyakage namO namO laDDige mOdaka naivEdya ninage|  laDDige mOdakava namO namO  naivEdyakarpi...

ಬಾರಯ್ಯ ರಂಗ ಬಾರಯ್ಯ ಕೃಷ್ಣ | ಪುರಂದರವಿಠಲ | Baarayya Ranga | Purandara Vithala

Image
  ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಬಾರಯ್ಯ ರಂಗ ಬಾರಯ್ಯ ಕೃಷ್ಣ  ಬಾರಯ್ಯ ಸ್ವಾಮಿ ಬಾರಯ್ಯ ||ಪ|| ವಾರಣ ಭಯವ ನಿವಾರಣ ಮಾಡಿದ ಕಾರುಣ್ಯ  ನಿಧಿ ಎನ್ನ ಹೃದಯ ಮಂದಿರಕೆ ||ಅಪ|| ಮೊದಲಿಂದ ಬರಬಾರದೆ ನಾನು ಬಂದೆ     ತುದಿ ಮೊದಲಿಲ್ಲದೊಂದದು ಅಪನಿಂದೆ   ಇದು ಗೆದ್ದು ಕಳೆದು ಪೋಪುದು ಹೇಗೆ ಮುಂದೆ   ಪದುಮನಾಭನೆ ತಪ್ಪು ಕ್ಷಮಿಸಯ್ಯಾ ತಂದೆ ||೧|| ಹೆಣ್ಣು ಹೊನ್ನು ಮಣ್ಣಿನಾಸೆಯೊಳಿದ್ದು   ಪುಣ್ಯ ಪಾಪಂಗಳ ನಾನರಿತಿದ್ದು  ಅನ್ಯಾಯವಾಯಿತು ಇದಕೇನು ಮದ್ದು   ನಿನ್ನ ಧ್ಯಾನವ ಕೊಡು ಹೃದಯದೊಳಿದ್ದು ||೨|| ಇಂದೆನ್ನ ಪೂರ್ವ ಪಾಪಂಗಳ ಕಳೆದು  ಮುಂದೆನ್ನ ಜನ್ಮ ಸಫಲವನ್ನು ಗೈದು   ತಂದೆ ಪುರಂದರ ವಿಠಲ ನೀನೊಲಿದು   ಎಂದೆಂದಿಗಾನಂದ ಸುಖವನ್ನು ಸುರಿದು ||೩|| bArayya raMga bArayya kRuShNa  bArayya svAmi bArayya ||pa|| vAraNa Bayava nivAraNa mADida kAruNya  nidhi enna hRudaya maMdirake ||apa|| modaliMda barabArade nAnu baMde     tudi modalilladoMdadu apaniMde   idu geddu kaLedu pOpudu hEge muMde   padumanABane tappu kShamisay...

ಕುದುರೆ ಬಂದಿದೆ ಚೆಲ್ವ | ಹಯವದನ | Kudure Bandide Chelva | Vadirajaru

Image
  ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಕುದುರೆ ಬಂದಿದೆ ಚೆಲ್ವ ಕುದುರೆ ಬಂದಿದೆ |ಪ| ವಾದಿರಾಜರಿಜಗೊಲಿದು ಬಂದು ಸ್ವಾದಿ ಪುರದಲ್ಲಿ ನಿಂದ |ಅಪ| ಮುಂಗಾಲು ಕೆದರಿ ಕುಣಿವ ಕುದುರೆ ಹಿಂಗಾಲಲಸುರರ ಒದೆವ ಕುದುರೆ| ರಂಗನೆಂದರೆ ಸಲಹೋ ಕುದುರೆ ತುಂಗ ಹಯವದನ ಕುದುರೆ |೧| ಹಲ್ಲಣದೊಳಗೆ ನಿಲ್ಲದು ಕುದುರೆ| ಬೆಲ್ಲ ಕಡಲೆ ಮೆಲ್ವ ಕುದುರೆ| ಪುಲ್ಲಭವನಿಗೊಲಿದ ಕುದುರೆ| ಚೆಲ್ವ ಹಯವದನ ಕುದುರೆ |೨| ಸುತ್ತಮುತ್ತಲು ಆಡುವ ಕುದುರೆ ಮತ್ತವಾದಿಯ ಗೆಲ್ವ ಕುದುರೆ| ಶತ್ರುಗಳೆಲ್ಲರ ಬಡಿವ ಕುದುರೆ| ತತ್ತ್ವ ಹಯವದನ ಕುದುರೆ |೩| kudure baMdide celva kudure baMdide |pa| vAdirAjarijagolidu baMdu svAdi puradalli niMda |apa|   muMgAlu kedari kuNiva kudure hiMgAlalasurara odeva kudure| raMganeMdare salahO kudure tuMga hayavadana kudure |1|   hallaNadoLage nilladu kudure| bella kaDale melva kudure| pullaBavanigolida kudure| celva hayavadana kudure |2|   suttamuttalu ADuva kudure mattavAdiya gelva kudure| SatrugaLellara baDiva kudure| tattva hayavadana kudure |3|

ಒಲಿಸುವೆವು ಶ್ರೀ ವಾಸುದೇವನಂ | ಶ್ರೀಮಧ್ವಾಚಾರ್ಯರ ದ್ವಾದಶ ಸ್ತೋತ್ರದ ಕನ್ನಡ ಅನುವಾದ | Olisuvevu | Dwadasha Stotra

Image
  ಶ್ರೀ ಮದಾನಂದತೀರ್ಥ ವಿರಚಿತ ದ್ವಾದಶ ಸ್ತೋತ್ರದ ಕನ್ನಡ ಅನುವಾದ  Kannada translation of Dwadasha Stotra by Srimad Ananda Teerthacharya ಕನ್ನಡಕ್ಕೆ : ಶ್ರೀ ಬನ್ನಂಜೆ ಗೋವಿಂದಾಚಾರ್ಯ  Kannada Translation : Sri Bannanje Govindacharya ಜಗವೆ ಮಣಿವ ಹಿರಿಯ ಸುರರ ಗಡಣದಿಂದ ವಂದನ ಹೆಗಲ ತುಂಬ ಕಂಪು ಬಳಿದ ಸೊಗದ ಗಂಧ ಚಂದನ ಜಗದ ತಾಯ ಚಪಲವಾದ ಕಣ್ಣ ನೋಟದಾರತಿ ನಗುತ ಮಂದರಾದ್ರಿ ಹೊತ್ತ ತುಂಬು ತೋಳ ಮೂರುತಿ ಒಲಿಸುವೆವು ಒಲಿಸುವೆವು ಶ್ರೀ ವಾಸುದೇವನಂ || ೧ || ಜಗದ ಹುಟ್ಟು ಸಾವು ಎಲ್ಲ ಇವನಿಗೊಂದು ಆಟವು ಸುಗುಣಗಳದೆ ಗಡಣವಂತೆ ಇವನ ಮೈಯ ಮಾಟವು ಬೀಗಿದಂಥ ಕೆಟ್ಟ ಜನರ ಹುಟ್ಟು ತರಿವ ದೇವನು ಬಾಗಿ ನಡೆದ ಹೃಷ್ಟ ಪುಷ್ಟ ಶಿಷ್ಟ ಜನರ ಕಾವನು ಒಲಿಸುವೆವು ಒಲಿಸುವೆವು ಶ್ರೀ ವಾಸುದೇವನಂ || ೨ || ಹಿರಿಯ ಮಂದಿ ಬಯಸಿದಂಥ ಬಯಕೆಗಳನು ಈವನು ಹರಿಯ ಚರಣಕ್ಕೆರಗಿ ಮುಕುತಿ ಪಡೆಯದವನು ಯಾವನು ಪರಿಯ ಪರಿಯ ತಿಳಿವು ಕರ್ಮ ಕರುಣಿಪಾತ ಎನುವರು ಅರಿವು ಜನರು ದೇವರಿಲ್ಲ ಉಂಟು ಎಂದು ಬಡಿವರು ಒಲಿಸುವೆವು ಒಲಿಸುವೆವು ಶ್ರೀ ವಾಸುದೇವನಂ || ೩ || ವೇದವಾದ ನಿರತ ವಿಪ್ರ ವೃಂದದಿಂದ ಪೂಜಿತ ಕಾದುವಂಥ ಕ್ಷಾತ್ರ ವೀರರಿಂದ ನೀರಾಜಿತ ಓದಿಗೆಟುಕದಂಥ ವಿಮಲ ಹಿರಿಯ ತಿಳಿವಿನಾಗರ ಮೋದ ರೂಪ ಮುಪ್ಪು ಬರದ ಪರಮ ತೇಜ ಸಾಗರ ಒಲಿಸುವೆವು ಒಲಿಸುವೆವು ಶ್ರೀ ವಾಸುದೇವನಂ || ೪ || ಎಲ್ಲು ಕೂಡ ಯಾರು ಕೂಡ ಇವನ ಮೀರಲಾರರು ಎಲ್ಲ ...

ನೆನೆವೆನು ಅನುದಿನ | ಪುರಂದರವಿಠಲ | Nenevenu Anudina | Purandara vithala

Image
  ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ನೆನೆವೆನು ಅನುದಿನ ನಿಮ್ಮ ಮಹಿಮೆಯನು ಮಧ್ವರಾಯ ಸನಕಾದಿ ಮುನಿವಂದ್ಯ ಸೇವಿತ ಪಾದಾಬ್ಜ ಮಧ್ವರಾಯ ||ಪ|| ಕಲಿಮಲದಿಂ ಜ್ಞಾನ ಕಲುಷಿತವಾಗಲು ಮಧ್ವರಾಯ ನಳಿನಾಕ್ಷನಾಜ್ಞದಿ ಇಳೆಯೊಳಗುದಿಸಿದ್ಯೊ ಮಧ್ವರಾಯ ||೧|| ಗೋವಿತ್ತ ವಿಪ್ರಗೆ ನಿರುತ ಮೋಕ್ಷವನಿತ್ತೆ ಮಧ್ವರಾಯ ಜೀವೇಶರೊಂದೆಂಬ ಮತವ ಭೇದಿಸಿದೆ ಮಧ್ವರಾಯ ||೨|| ಸೂತ್ರಾರ್ಥಗಳನೆಲ್ಲ ವೇತೃಗಳಿಗೆ ತಿಳಿಸಿ ಮಧ್ವರಾಯ ಶಾಸ್ತ್ರದ ತಾತ್ಪರ್ಯ ಪ್ರಕರಣ ರಚಿಸಿದೆ ಮಧ್ವರಾಯ ||೩|| ಸುಜನರ ಹೃದಯದಿ ಸೇರಿದ್ದ ತಮಸಿಗೆ ಮಧ್ವರಾಯ ನಿಜಜ್ಞಾನ ರವಿಯಂತೆ ಕಿರಣವ ಹರಡಿದೆ ಮಧ್ವರಾಯ ||೪|| ವ್ಯಾಸದೇವರಿಗಭಿವಂದಿಸಿ ಬದರಿಲಿ ಮಧ್ವರಾಯ ಶ್ರೀಶ ಪುರಂದರ ವಿಠಲನ ದಾಸನಾದೆ ಮಧ್ವರಾಯ ||೫|| nenevenu anudina nimma mahimeyanu madhwaraaya sanakaadi munivaMdya sEvita paadaabja madhwaraaya ||pa|| kalimaladiM j~jaana kaluShitavaagalu madhwaraaya naLinaakShanaaj~jadi iLeyoLagudisidyo madhwaraaya ||1|| gOvitta viprage niruta mOkShavanitte madhwaraaya jeevEsharoMdeMba matava bhEdiside madhwaraaya ||2|| sUtraarthagaLanella vEtRugaLige tiLisi madhwaraaya shaastrada taatparya prakaraNa rachiside madhwaraa...

ಬಂದನಲ್ಲೆ ಭಾಗ್ಯ ನಿಧಿ | ಹಯವದನ | Bandanalle Bhagyanidhi | Sri Vadirajaru

Image
  ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಬಂದನಲ್ಲೆ ಭಾಗ್ಯ ನಿಧಿ|  ಬಂದನಲ್ಲೇ ಕೃಪಾ ಸಿಂಧು|  ಬಂದನಲ್ಲೇ ರಮಣಿ ನಿನ್ನರಮನೆಗೆ || ಪ || ನಂದಗೋಪ ಕಂದನಾಗಿ ಬೃಂದಾವನದೊಳಗಾಡಿ|  ಇಂದಿರಾರಮಣ ಬಂದ ಮಂದರೋದ್ಧಾರ| ಇಂದ್ರಾದಿ ಸುರರಿಗಾನಂದ ಅಭಯವಿತ್ತು|  ಬಂದ ಸಿರಿ ಹಯವದನ ದೇವ ಕಾಣಮ್ಮಾ || ೧ || ಮುತ್ತು ಮಾಣಿಕ್ಯ ನವರತ್ನದ ಕಿರೀಟ ತೊಟ್ಟು|  ಸಪ್ತ ಸೂರ್ಯ ಮಂಟಪದಿ ಬರುವನ್ಯಾರಮ್ಮಾ| ಕತ್ತಲೆ ನಿವಾರಿಸು ಕಸ್ತೂರಿ ತಿಲಕವಿಟ್ಟು|  ಕೌಸ್ತುಭ ಹಯವದನ ದೇವ ಕಾಣಮ್ಮಾ || ೨ || ಕಾಲಲಂದುಗೆ ಕಡಗ ನೀಲದುಡುಗೆಯ ತೊಟ್ಟು|  ನೀಲವರ್ಣ ದೇಹದಿಂದ ಬರುವನ್ಯಾರಮ್ಮ| ಸಾಲು ಸಾಲು ಸಾಲು ಎಂಬ ಯತಿಗಳಾ ಸಂದಣಿಯಿಂದ|  ಮೇಲಾಗಿ ಒಲಿದ ಹಯವದನ ಕಾಣಮ್ಮಾ || ೩ || ಚಿನ್ನ ತುರಗ ಮಿಂಚುತ್ತ ರನ್ನ ತೊಡೆಯು ಹೊಳೆಯುತ್ತಾ|  ಉನ್ನಂತ ಗಾಂಭೀರ್ಯದಿಂದ ಬರುವನ್ಯಾರಮ್ಮಾ| ಕನ್ನೆ ಮಹಾಲಕುಮಿಯ ಮನವ ಸೂರೆಗೊಂಡಿಹ|  ಚೆನ್ನಿಗ ಹಯವದನ ದೇವ ಕಾಣಮ್ಮಾ || ೪ || ಉರದಲ್ಲಿ ಶ್ರೀವತ್ಸ ಕೊರಳ ಕೌಸ್ತುಭ ಹಾರ|  ಸರಿಹೆಜ್ಜೆ ಇಕ್ಕುತ ಬರುವನ್ಯಾರಮ್ಮಾ| ಗುರು ವಾದಿರಾಜರಿಗೊಲಿದು ಸೋದೆ ಪುರದಲ್ಲಿ ನಿಂದ|  ವರದ ಶ್ರೀ ಹಯವದನ ದೇವ ಕಾಣಮ್ಮಾ || ೫ || baMdanalle BAgya nidhi|  baMdanallE kRupA siMdhu|  baMdanallE ramaNi ninnaramanege |...

ಬಾರಯ್ಯ ವೇಂಕಟರಮಣ | ಪುರಂದರ ವಿಠಲ | Baarayya Venkataramana | Purandara Vithala

Image
  ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಬಾರಯ್ಯ ವೇಂಕಟರಮಣ | ಭಕ್ತರ ನಿಧಿಯೆ ||ಪ|| ತೋರೋ ನಿನ್ನ ದಯ ತೋಯಜಾಂಬಕನೆ ||ಅಪ|| ವೇದಗೋಚರ ಬಾರೋ | ಆದಿ ಕಚ್ಚಪ ಬಾರೋ ಮೋದ ಸೂಕರ ಬಾರೋ ಸದಯ ನರಸಿಂಹ ಬಾರೋ ||೧|| ವಾಮನ ಭಾರ್ಗವ ಬಾರೋ | ರಾಮಕೃಷ್ಣನೇ ಬಾರೋ ಪ್ರೇಮದ ಬುದ್ಧನೆ ಬಾರೋ | ಸ್ವಾಮಿ ಕಲ್ಕಿ ನೀ ಬಾರೋ ||೨|| ಅರವಿಂದನಾಭ ಬಾರೋ | ಸುರರ ಪ್ರಭುವೆ ಬಾರೋ | ಪುರುಹೂತ ವಂದ್ಯ ಬಾರೋ ಪುರಂದರ ವಿಠಲ ಬಾರೋ ||೩|| bArayya vEMkaTaramaNa | Baktara nidhiye ||pa|| tOrO ninna daya tOyajAMbakane ||apa|| vEdagOcara bArO | Adi kaccapa bArO mOda sUkara bArO sadaya narasiMha bArO ||1|| vAmana BArgava bArO | rAmakRuShNanE bArO prEmada buddhane bArO | svAmi kalki nI bArO ||2|| araviMdanABa bArO | surara praBuve bArO | puruhUta vaMdya bArO puraMdara viThala bArO ||3||

ರಾಮಕೃಷ್ಣರು ಮನೆಗೆ ಬಂದರು | ಪುರಂದರವಿಠಲ | Ramakrishnaru Manege Bandaru | Purandara Vithala

Image
  ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆರೆಯಿರೋ || ಕಾಮಧೇನು ಬಂದಂತಾಯ್ತು ವರವ ಬೇಡಿರೋ ||ಪ|| ಚೆಂಡು ಬುಗುರಿ ಚಿಣ್ಣಿಕೋಲು ಗಜ್ಜುಗವಾಡುತ  ದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತ || ಹಿಂಡು ಪೆಣ್ಗಳ ಮುದ್ದು ಮುಖದ ಸೊಬಗ ನೋಡುತ  ಬಂಡು ಮಾಡಿ ಬಾಲೆಯರೊಡನೆ ಸರಸವಾಡುತ ||೧|| ಮಕರ ಕುಂಡಲ ನೀಲ ಮುತ್ತಿನ ಬಾವುಲಿಡುತಲಿ  ಕಂಕಣಹಾರ ತೋಳಬಂದಿ ತೊಡುಗೆ ತೊಡುತಲಿ || ಸುಕುಮಾರ ಸುಂದರವಾದ ಉಡುಗೆ ಉಡುತಲಿ ಮುಖದ ಕಮಲ ಮುಗುಳು ನಗೆಯ ಸುಖವ ಕೊಡುತಲಿ ||೨|| ಪೊಕ್ಕುಳಲ್ಲಿ ಅಜನ ಪಡೆದ ದೇವ ದೇವನು  ಚಿಕ್ಕ ಉಂಗುಷ್ಟದಲ್ಲಿ ಗಂಗೆಯ ಪಡೆದನು || ಮಕ್ಕಳ ಮಾಣಿಕ್ಯ ಗುರು ಪುರಂದರ ವಿಠಲರಾಯನು  ಅಕ್ಕರೆಯಿಂದಲಿ ಮುಕುತಿ ಕೊಡುವ ರಂಗನಾಥನು ||೩|| rAmakRuShNaru manege baMdaru bAgilu tereyirO || kAmadhEnu baMdaMtAytu varava bEDirO ||pa|| cheMDu buguri ciNNikOlu gajjugavADuta  duMDu mallige muDidu koLalanUdi pADuta || hiMDu peNgaLa muddu muKada sobaga nODuta  baMDu mADi bAleyaroDane sarasavADuta ||1||   makara kuMDala nIla muttina bAvuliDutali  kaMkaNahAra tOLabaMdi toDuge toDutali || sukumA...

ತಾರಮ್ಮಯ್ಯ ಯದುಕುಲ | ಪುರಂದರ ವಿಠ್ಠಲ | Tarammayya Yadukula | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ತಾರಮ್ಮಯ್ಯ ಯದುಕುಲ ವಾರಿಧಿ ಚಂದ್ರಮನ ||ಪ|| ಮಾರ ಜನಕನ ಮೋಹನಾಂಗನ |  ಸೇರಿ ಸುಖಿಸೇ ಹಾರೈಸಿ ಬಂದೆವು ||ಅಪ|| ಬಿಲ್ಲು ಹಬ್ಬಗಳಂತೆ ಅಲ್ಲಿ ಬೀದಿ ಶೃಂಗಾರವಂತೆ | ಮಲ್ಲರ ಕಾಳಗ ಮದ್ದಾನೆಯಂತೆ  ಫುಲ್ಲಾಕ್ಷನು ತಾನಲ್ಲಿಗೆ ತೆರಳಿದ ||೧|| ಮಧುರಾಪುರವಂತೆ ಅಲ್ಲಿ ಮಾವ ಕಂಸನಂತೆ | ಒದಗಿದ ಮದಗಜ ತುರಗ ಸಾಲಿನಲ್ಲಿ  ಮದನ ಮೋಹನ ಕೃಷ್ಣ ಮಧುರೆಗೆ ತೆರಳಿದ ||೨|| ಅತ್ತೆ ಮಾವನ ಬಿಟ್ಟು ಬಂದೆವು ಹಿತ್ತಲ ಬಾಗಿಲಿಂದ  ಭಕ್ತವತ್ಸನಲ ಬಹು ನಂಬಿದೆವು  ಉತ್ಸಾಹ ಭಂಗವ ಮಾಡಿದನಮ್ಮ ||೩|| ರಂಗನ ನೆರೆನಂಬಿ ಬಂದೆವು ಸಂಗ ಸುಖವ ಬಯಸಿ | ಭಂಗಿಸಿ ನಮ್ಮನು ಹ್ಯಾಂಗೆ ಪೋದನಮ್ಮ  ಮಂಗಳ ಮೂರುತಿ ಮದನ ಗೋಪಾಲನ ||೪|| ಶೇಷಗಿರಿಯ ಮೇಲೆ ಹರಿ ತಾ ವಾಸವಾಗಿಹ ಕಾಣೆ || ಸಾಸಿರ ನಾಮದ ಒಡೆಯನೆಂದೆನಿಸಿದ  ಶ್ರೀಶ ಪುರಂದರ ವಿಠ್ಠಲರಾಯನ ||೫|| tArammayya yadukula vAridhi chaMdramana ||pa|| mAra janakana mOhanAMgana |  sEri suKisE hAraisi baMdevu ||apa||   billu habbagaLaMte alli bIdi SRuMgAravaMte | mallara kALaga maddAneyaMte  PullAkShanu tAnallige teraLida ||1||   madhurApuravaMte alli mAva kaMsanaMte | odagida madaga...

ಬಂದನೇನೇ ಸುಂದರ ಶ್ರೀ ರಾಮಚಂದಿರ | ಶೇಷ ವಿಠ್ಠಲ | Bandanene Sundara Sri Rama | Shesha Vithala

Image
  ಸಾಹಿತ್ಯ : ಶ್ರೀ ಶೇಷ ವಿಠಲ ದಾಸರು Kruti: Sri Shesha Vittala Dasaru ಬಂದನೇನೇ ಸುಂದರ ಶ್ರೀ ರಾಮಚಂದಿರ ||ಪ|| ಸಿರಿವತ್ಸಧಾರನು ಶ್ರಿತಜನೋದ್ಧರನು ಮಾರಸುಂದರನು ಮಾಮನೋಹರನು ||೧|| ಕೋಮಲ ಗಾತ್ರನು ಕಮಲಕಳತ್ರನು ಕಮಲಾಪ್ತ ತೇಜನು ವಿಮಲ ಸತ್ಪಾತ್ರನು ||೨|| ಸಾಸಿರ ನಾಮನು ಭಾಸುರ ವದನನು  ಈಶ ವಂದಿತನು ಶೇಷ ವಿಠ್ಠಲನು ||೩|| baMdanEnE suMdara shrI raamachaMdira ||pa|| sirivatsadhaaranu shritajanOddharanu maarasuMdaranu maamanOharanu ||1|| kOmala gaatranu kamalakaLatranu kamalaapta tEjanu vimala satpaatranu ||2|| saasira naamanu bhaasura vadananu  Isha vaMditanu shESha viThThalanu ||3||

ಈ ಮುದ್ದು ಕೃಷ್ಣನ | ಹಯವದನ | Ee Muddu Krishnana | Vadirajaru

Image
  ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಈ ಮುದ್ದು ಕೃಷ್ಣನ ಈ ಕ್ಷಣದ ಸುಖವೆ ಸಾಕು ಶ್ರೀ ಮಧ್ವ ಮುನಿಯ ಮನದೈವ ಉಡುಪಿನ ಕೃಷ್ಣಾ ||ಪ|| ಚೆಲುವ ಚರಣ ದ್ವಂದ್ವ ಜಂಘೆ ಜಾನೂರು ಕಟಿ,  ವಳಿಪಂಕ್ತಿ ಜಠರ ವಕ್ಷ ಕಂಬುಕಂದರದಿ || ನಳಿತೋಳು ಮುದ್ದು ಮುಖ ನಯನ ನಾಸಿಕ ಕರ್ಣ  ಸುಳಿಗುರುಳು ಮಸ್ತಕದ ನಳಿನನಾಭನ ಸೊಬಗು ||೧|| ಕಿರುಗೆಜ್ಜೆ ಕಡೆಪೆಂಡೆ ಗಂಟೆ ಕಟಿಸೂತ್ರ,  ವರಹಾರ ಪದಕ ಶ್ರೀವತ್ಸ ಕೌಸ್ತುಭರತ್ನ || ಉರುಮುದ್ರೆ ಕಂಕಣಾಂಗದ ಕುಂಡಲ ಪ್ರಭೆಯ,  ಸಿರಿನಾಮ ಮಕುಟ, ನಾಸಿಕದ ವರಮಣಿಯ ||೨|| ಸಕಲ ದೇವೋತ್ತಮನೆ ಸರ್ವಗುಣ ಪೂರ್ಣನೆ,  ಅಕಳಂಕ ಅಖಿಳಾಗಮ ಸ್ತುತನೆ ಅಪ್ರಾಕೃತನೆ || ಅಖಿಳಾ ಜೀವೋತ್ತಮರ ಭಿನ್ನ ಹಯವದನನೆ  ಮುಕುರ ಕಡೆಗೋಲು ನೇಣುಗಳ ಪಿಡಿದಿಪ್ಪನೆ ||೩|| I muddu kRuShNana I kShaNada suKave sAku SrI madhva muniya manadaiva uDupina kRuShNA ||pa|| cheluva caraNa dvaMdwa jaMGe jAnUru kaTi,  vaLipaMkti jaThara vakSha kaMbukaMdaradi || naLitOLu muddu muKa nayana nAsika karNa  suLiguruLu mastakada naLinanABana sobagu ||1||   kirugejje kaDepeMDe gaMTe kaTisUtra,  varahAra padaka SrIvatsa kaustuBaratna || urumudre kaMkaNAMgada kuMDala p...

ಬೈಲಿಗೆ ಬೈಲಾಯಿತು ಬೈಲೊಳಗೆ | ಪುರಂದರ ವಿಠಲ | Bailige Bailayitu | Purandara Vithala

Image
  ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಬೈಲಿಗೆ ಬೈಲಾಯಿತು ಬೈಲೊಳಗೆ ||ಪ|| ಸೂತ್ರ ಬೊಂಬೆಯು ಮಾಡಿ ಹರಿ ಸೂತ್ರದಿಂ ಕುಣಿಸ್ಯಾಡಿ ಸೂತ್ರ ಹರಿಯಿತು ಬೊಂಬೆ ಮುರಿಯಿತು ಆಟ ನಿಂತಿತು ಕೇಳೋ ಮನುಜ ||೧|| ಚಂದಾಗಿ ಜ್ಯೋತಿಯು ಬೆಳಗಿ | ಎಣ್ಣೆಯು ಬತ್ತಿಯು ಹಾಕಿ || ಎಣ್ಣೆ ಮುಗಿಯಿತು ಬತ್ತಿ ಕಡಿಯಿತು ಕತ್ತಲು ಆಯಿತು ಕೇಳೋ ಮನುಜ ||೨|| ನೆಂಟರಿಷ್ಟರು ಕೂಡಿ, ಅವರು ಸಂತೆಗೋಸ್ಕರವಾಗಿ ಸಂತೆ ಮುಗಿಯಿತು ಚಿಂತೆ ಹತ್ತಿತು ಭ್ರಾಂತಿ ಆಯಿತು ಕೇಳೋ ಮನುಜ ||೩|| ಬಾಲೆಯೊಬ್ಬಳು ಕೂಡಿ ಅವಳು ನೀರಿಗೋಸ್ಕರ ಪೋಗಿ ನೀರು ತುಂಬಿತು ಕಾಲು ಜಾರಿತು ಕೊಡವು ಒಡೆಯಿತು ಕೇಳೋ ಮನುಜ ||೪|| ಪರಿಪರಿ ವಿಧದಲ್ಲಿ ನಾನು ಪರಮಾತ್ಮನ ಸ್ತುತಿಯು ಮಾಡಿ ಪರಮ ಮೂರುತಿ ಪುರಂದರ ವಿಠಲನೆ ಕರುಣಿಸೊ | ಪಾಲಿಸೊ ಪರಮ ದಯಾಳೋ ||೫|| bailige bailAyitu bailoLage ||pa|| sUtra boMbeyu mADi hari sUtradiM kuNisyADi sUtra hariyitu boMbe muriyitu ATa niMtitu kELO manuja ||1|| chaMdAgi jyOtiyu beLagi | eNNeyu battiyu hAki || eNNe mugiyitu batti kaDiyitu kattalu Ayitu kELO manuja ||2|| neMTariShTaru kUDi, avaru saMtegOskaravAgi saMte mugiyitu chiMte hattitu BrAMti Ayitu kELO manuja ||3|| bAleyobbaLu kUDi avaLu nIr...

ಪಾಲಿಸೆನ್ನ ಗೋಪಾಲಕೃಷ್ಣ | ಜಗನ್ನಾಥ ವಿಠಲ | Palisenna Gopalakrishna | Jagannatha Vithala

Image
  ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha dasaru (Jagannatha vittala) ಪಾಲಿಸೆನ್ನ ಗೋಪಾಲಕೃಷ್ಣ ||ಪ|| ಪಾಲಿಸೆನ್ನ ದಧಿಪಾಲ ಮುಖರ  ಗೋಪಾಲ ಬಾಲ ಕೃಪಾಲಯ ಹರಿಯೇ ||ಅಪ|| ಪುಂಡರೀಕ ಭವ ರುಂಡ ಮಾಲಾ  ಮೇಷಾಂಡ ಪ್ರಮುಖ ಸುರಷಂಡ ಮಂಡಿತನೇ ||೧|| ಗೋಪ ಗೋಪಿ ಗೋಪಾಲ ವೃಷ್ಣಿ ಕುಲದೀಪ  ಶ್ರೀಪತ ಶಿವಚಾಪ ಭಂಜನ ||೨|| ಅಂಡಜಾಧಿಪ ಪ್ರಕಾಂಡ ಪೀಠ  ಕೋದಂಡ ಪಾಣಿ ಬ್ರಹ್ಮಾಂಡನಾಯಕ ||೩|| ವ್ಯಾಪ್ತ ಗೋಪ್ತ ಜಗದಾಪ್ತ ದೋಷ  ನಿರ್ಲಿಪ್ತ ಪ್ರಾಪ್ತ ಗತ ಸುಪ್ತ ಸುಷುಪ್ತಾ ||೪|| ವೇದ ವೇದ್ಯ ಬ್ರಹ್ಮಾದಿ ವಂದ್ಯ  ಸುಖಬೋಧ ಪೂರ್ಣ ಬ್ರಹ್ಮೋದನ ಭೋಕ್ತ ||೫|| ಅದ್ವರೇಶ ಲೋಕೋದ್ಧರ ಪಾಣಿ  ಸರಿದ್ವರಪಿತ ಗುರು ಮಧ್ವ ವಲ್ಲಭ ||೬|| ಪೋತವೇಷಧರ ಪೂತನಾರಿ  ಪುರುಹೂತ ಮದಹ ಜಗನ್ನಾಥ ವಿಠಲ ||೭|| pAlisenna gOpAlakRuShNa ||pa|| pAlisenna dadhipAla muKara  gOpAla bAla kRupAlaya hariyE ||apa|| puMDarIka Bava ruMDa mAlA  mEShAMDa pramuKa suraShaMDa maMDitanE ||1|| gOpa gOpi gOpAla vRuShNi kuladIpa  SrIpata SivacApa BaMjana ||2|| aMDajAdhipa prakAMDa pITha  kOdaMDa pANi brahmAMDanAyaka ||3|| vyApta gOpta jagadApta dOSha  nirlipta prApta gata supta su...

ಬಾರಯ್ಯ ಯದುಕುಲ ತಿಲಕ | ಹಯವದನ | Barayya yadukula Tilaka | Hayavadana

Image
  ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಬಾರಯ್ಯ ಯದುಕುಲ ತಿಲಕ | ತೋರಯ್ಯ ನಿನ್ನ ಮುದ್ದು ಮುಖವ |  ಓರಂತೆ ಮುದ್ದಿಸಿ ಯಶೋದೆ ಕುಮಾರನೇ ಬಾರೆಂದಳೈ ||ಪ|| ಅಂದವಾದ ನಿನ್ನ ಮುದ್ದು ಮುಖದ ಚೆಂದವನ್ನು ತಾ ನೋಡಿ |  ಕಂದಿ ಕುಂದಿ ಇಂದಿರೆಯು ಮರುಳಾಗಿ ಕಂದ ನಿನ್ನ ಪೊಂದೇನೆಂದಳೈ ||೧|| ಕೃಷ್ಣ ನಿನ್ನ ಮಕ್ಕಳಾಟಿಕೆ ಶ್ರೇಷ್ಠರಿಗೆ ಮೋಹವಾಯಿತು |  ದುಷ್ಟಮತ ಮಾತಂಗಕ್ಕೆ ಅಟ್ಟುವ ಸಿಂಹದ ಮರಿಯೆ ||೨|| ಇಂಥ ಹಯವದನನ | ಇಂಥ ದೇವರ ನಾ ಕಾಣೆ |  ಪಂಥವೇನೋ ಎನ್ನ ಕೂಡೆ ದಿನಮಣಿ ತಿಂತಿಣಿಯ ಬಾರೆಂದಳೈ ||೩|| bArayya yadukula tilaka | tOrayya ninna muddu muKava |  OraMte muddisi yaSOde kumAranE bAreMdaLai ||pa|| aMdavAda ninna muddu muKada ceMdavannu tA nODi |  kaMdi kuMdi iMdireyu maruLAgi kaMda ninna poMdEneMdaLai ||1|| kRuShNa ninna makkaLATike SrEShTharige mOhavAyitu |  duShTamata mAtaMgakke aTTuva siMhada mariye ||2|| iMtha hayavadanana | iMtha dEvara nA kANe |  paMthavEnO enna kUDe dinamaNi tiMtiNiya bAreMdaLai ||3||

ಬಯಗು ತನಕ ಆಟ | ಕಾಗಿನೆಲೆಯಾದಿ ಕೇಶವ | Bayagu Tanaka Aata | Kaginele Adikeshava

Image
  ಸಾಹಿತ್ಯ : ಶ್ರೀ ಕನಕದಾಸರು Kruti: Sri Kanaka Dasaru ಬಯಗು ತನಕ ಆಟ ಕೂಟ ಊಟದ ಕೆಲಸ ಉಂಡ ಮೇಲೆ ಶಯನ ||ಪ|| ಬಯಲಾಯಿತು ಈ ಒಗತನವೆಲ್ಲ ರಕ್ಷಿಸಯ್ಯ ರಘುಕುಲ ತಿಲಕ ||ಅಪ|| ಪುರಾಣವಿಲ್ಲ ಪುಣ್ಯಕಥೆಯಿಲ್ಲ ಪಾರಾಯಣದಿ ಮನಸಿಲ್ಲ ತರೋಣ ಬರೋಣ ತಿನ್ನೋಣ ಮಲಗೋಣ ಮತ್ತೇಳೋಣ ||೧|| ಕಣ್ಣಿಗೆ ಜೊಂಪು ಹತ್ತುವ ತನಕ ಅನ್ಯ ವಿಷಯ ಮಾತುಕತೆಯಾಟ ಹೆಣ್ಣು ಹೊನ್ನು ಮಣ್ಣು ಮಮಕಾರದಿ ಒಳಹೊರಗಿಣುಕಾಟ ||೨|| ಹೀಗಾಗಿ ನಿನ್ನಲ್ಲಿಗೆ ಬಂದೆ ಇನ್ನಾದರು ಸಲಹೋ ಸಿರಿ ಕಾಗಿನೆಲೆಯಾದಿ ಕೇಶವ ಶಿರಬಾಗಿ ಬೇಡಿಕೊಂಬೆ ||೩|| bayagu tanaka aaTa kUTa ooTada kelasa uMDa mEle shayana ||pa|| bayalaayitu I ogatanavella rakShisayya raghukula tilaka ||apa|| puraaNavilla puNyakatheyilla paaraayaNadi manasilla tarONa barONa tinnONa malagONa mattELONa ||1|| kaNNige joMpu hattuva tanaka anya viShaya maatukateyaaTa heNNu honnu maNNu mamakaaradi oLahoragiNukaaTa ||2|| hIgaagi ninnallige baMde innaadaru salahO siri kaagineleyaadi kEshava shirabaagi bEDikoMbe ||3||

ನಿಲ್ಲಬೇಕಯ್ಯ ಕೃಷ್ಣಯ್ಯ | ಪುರಂದರ ವಿಠಲ | Nillabekayya Krishnayya | Purandara Vithala

Image
  ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ನಿಲ್ಲಬೇಕಯ್ಯ ಕೃಷ್ಣಯ್ಯ ನೀ ||ಪ|| ನಿಲ್ಲಬೇಕಯ್ಯ ಮಲ್ಲ ಮರ್ದನ ಸಿರಿ ವಲ್ಲಭ  ಎನ್ನ ಹೃದಯದಲಿ ಸಂತತ ನೀ |ಅಪ|| ಸುಪ್ಪಾಣಿ ಮುತ್ತಿಟ್ಟು ನೋಡುವೆ | ಸದಾ | ಚಪ್ಪಾಳೆ ತಟ್ಟಿ ನಾ ಪಾಡುವೆ || ಅಪ್ಪಾ ಶ್ರೀ ಕೃಷ್ಣನೇ ಎತ್ತಿ ಮುದ್ದಿಸಿಕೊಂಬೆ | ಸರ್ಪಶಯನ ಕೃಪೆ ಮಾಡೆಂದು ಬೇಡುವೆ ||೧|| ಚಂದದ ಹಾಸಿಗೆ ಹಾಸುವೆ | ಪುನಗು | ಗಂಧ ಕಸ್ತೂರಿಯ ಪೂಸುವೆ || ಅಂದದಿ ಮುತ್ತಿನ ಹಾರ ಹಾಕುವೆಯಾ | ಆ | ನಂದದಿಂದಲಿ ನಿನ್ನ ಎತ್ತಿ ಮುದ್ದಿಸಿಕೊಂಬೆ ||೨|| ನೀಲದ ಕಿರೀಟ ನಿನಗಿಡುವೆ | ಬಲು | ಬಾಲಲೀಲೆಗಳನ್ನು ಪಾಡುವೆ || ಮಾಲೋಲ ಪುರಂದರ ವಿಠಲ ರಾಯನೆ | ನಿಲು ಎನ್ನ ಮನದಲಿ ಒಂದೇ ಘಳಿಗೆ ||೩|| nillabEkayya kRuShNayya nI ||pa||   nillabEkayya malla mardana siri vallaBa  enna hRudayadali saMtata nI |apa||   suppANi muttiTTu nODuve | sadA | cappALe taTTi nA pADuve || appA SrI kRuShNanE etti muddisikoMbe | sarpaSayana kRupe mADeMdu bEDuve ||1||   caMdada hAsige hAsuve | punagu | gaMdha kastUriya pUsuve || aMdadi muttina hAra hAkuveyA | A | naMdadiMdali ninna etti muddisikoMbe ||2||   nIlada kirIT...

ನಿನ್ನನಾಶ್ರಯಿಸುವೆನು | ಪುರಂದರ ವಿಠಲ | Ninnanashrayisuvenu | Purandara Vithala

Image
  ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ನಿನ್ನನಾಶ್ರಯಿಸುವೆನು ನಿಗಮ ಗೋಚರ ನಿತ್ಯ | ಬೆನ್ನ ಬಿಡದೆ ಕಾಯೋ ಮನದಿಷ್ಟವೀಯೋ ||ಪ|| ಕುಂದಣದ ಆಶ್ರಯವು ನವರತ್ನಗಳಿಗೆಲ್ಲ | ಚಂದಿರನ ಆಶ್ರಯವು ಚಕೋರಗೆ || ಕಂದರ್ಪನಾಶ್ರಯವು ವಸಂತ ಕಾಲಕೆ | ಗೋವಿಂದನಾಶ್ರಯವು ಮರಣ ಕಾಲದೊಳು ||೧|| ಹಣ್ಣುಳ್ಳ ಮರಗಳು ಪಕ್ಷಿಗಳಿಗಾಶ್ರಯವು | ಪುಣ್ಯನದಿಗಳು ಋಷಿಗಳಿಗೆ ಆಶ್ರಯವು || ಕಣ್ಣಿಲ್ಲದಾತಗೆ ಕೈಗೋಲಿನಾಶ್ರಯವು | ತನ್ನಿಷ್ಟಪಡೆದವಗೆ ನಿನ್ನ ಆಶ್ರಯವು ||೨|| ಪತಿವ್ರತೆ ವನಿತೆಗೆ ಪತಿಯೊಂದೆ ಆಶ್ರಯವು | ಯತಿಗಳಿಗೆ ಶೃತಿಪ್ರಣವ ಮಂತ್ರದಾಶ್ರಯವು | ಮತಿವಂತನಿಗೆ ಹರಿಸ್ತುತಿಗಳೇ ಆಶ್ರಯವು | ಹಿತವಾದ ಪುರಂದರ ವಿಠಲನಾಶ್ರಯವು ||೩|| ninnanASrayisuvenu nigama gOcara nitya | benna biDade kAyO manadiShTavIyO ||pa|| kuMdaNada ASrayavu navaratnagaLigella | caMdirana ASrayavu cakOrage || kaMdarpanASrayavu vasaMta kAlake | gOviMdanASrayavu maraNa kAladoLu ||1|| haNNuLLa maragaLu pakShigaLigASrayavu | puNyanadigaLu RuShigaLige ASrayavu || kaNNilladAtage kaigOlinASrayavu | tanniShTapaDedavage ninna ASrayavu ||2|| pativrate vanitege patiyoMde ASrayavu | yatigaLige SRut...

ಲೋಕಭರಿತನೋ ರಂಗ | ಹಯವದನ | Lokabharitano Ranga | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಲೋಕಭರಿತನೋ ರಂಗ ಅ | ನೇಕ ಚರಿತನೋ ||ಪ|| ಕಾಕು ಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅಪ|| ರಾಜಸೂಯ ಯಾಗದಲ್ಲಿ ರಾಜರಾಜರಿರಲು ಧರ್ಮ | ರಾಜಸುತನು ಈತನೆ ಸಭಾ ಪೂಜೆಗರ್ಹನೆನಿಸಿದಾತ ||೧|| ಮಿಕ್ಕ ನೃಪರ ಜರೆದು ಅಮಿತ ವಿಕ್ರಮದಲಿ ಮೆರೆವ ಹರಿಯ | ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮನದಿ ಒಲಿದಳಾಗ ||೨|| ಜ್ಞಾನ ಶೂನ್ಯನಾಗಿ ಸೊಕ್ಕಿ ತಾನೆ ವಾಸುದೇವ ಎನಲು | ಹೀನ ಪೌಂಡ್ರಕನ ಶಿರವ ಜಾಣರಾಯ ತರಿದನಾಗ ||೩|| ಉತ್ತರೆಯ ಗರ್ಭದಲ್ಲಿ ಸುತ್ತಿ ಸುಳಿವ ಅಸ್ತ್ರವನ್ನು | ಒತ್ತಿ ಚಕ್ರದಿಂದ ನಿಜ ಭಕ್ತ ಪರೀಕ್ಷಿತನ ಕಾಯ್ದ ||೪|| ತನ್ನ ಸೇವಕ ಜನರ ಪೊರೆದು ಉನ್ನತುಡುಪಿಯಲ್ಲಿ ನಿಂದು ಘನ್ನ ಮಹಿಮೆಯಿಂದ ಮೆರೆವ ಪ್ರಸನ್ನ ಹಯವದನ ಕೃಷ್ಣ ||೫|| lOkaBaritanO raMga a | nEka caritanO ||pa|| kAku janara taridu tannEkAMta Baktara poreva kRuShNa ||apa||   rAjasUya yAgadalli rAjarAjariralu dharma | rAjasutanu Itane saBA pUjegarhanenisidAta ||1||   mikka nRupara jaredu amita vikramadali mereva hariya | takka ramaNaneMdu rukmiNi ukki manadi olidaLAga ||2||   j~jAna SUnyanAgi sokki tAne vAsudEva enalu | hIna pauMDrakana Sirava jANarAya taridanAga |...

ಶ್ರೀಶ ಕೊಳಲನೂದಿದ | ವಿಜಯವಿಠಲ | Shreesha Kolalanoodida | Vijaya Vithala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಶ್ರೀಶ ಕೊಳಲನೂದಿದನಂದು ಶ್ರೀಧರನಿಂದು ವಾಸವ ವಂದಿತ ವಾತಜ ಸೇವಿತ ವಾಸುಕಿಶಯನನು ವಾರೆ ಸುನೋಟದಿ ||ಪ|| ಬೆರಳ ಸಂದಿಲಿ ಮುರಳಿ ಪಿಡಿದು, ಮುರಾರಿ ತಾನು ಹರುಷದಿಂದಲಿ ಸ್ವರವ ನುಡಿದು, ವಾರಿಜನೇತ್ರ ಅರಳು ಮಲ್ಲಿಗೆ ಸರಗಳ ಮುಡಿದು ಮರುಳು ಮಾಡುತ ಮಡದಿಯೆಲ್ಲರ ||೧|| ಗೌರಿ ಗಾಂಧಾರಿ ಗೌಳಪಂತು ಗೌರೀಶ ಭೂಷಣ ಶೌರೀ ಸಾರಂಗ ಮೋಹನವಿಂತು ಸಾವೇರಿ ಸುರುಟಿ ಭೈರವಿ ಬ್ಯಾಗಡೆ ಊದುತ ನಿಂತು ವೀರ ಶ್ರೀ ಕೃಷ್ಣನು ವಿಧ ವಿಧ ರಾಗದಿ ||೨|| ನಾರದ ತುಂಬುರ ನಾಟ್ಯವನಾಡೆ ನಳಿನನಾಭನ ಗಿರಿಜಾಪತಿಯು ವಂದಿಸಿ ಬೇಡೆ ಗೋಪಾಲಕೃಷ್ಣನ ವರಗುರು ವಂದಿತ ವಿಜಯವಿಠಲರೇಯ ಹರುಷವ ಪಡಿಸುತ ವನಿತೆಯರೆಲ್ಲರ ||೩|| shreesha koLalanUdidanaMdu shrIdharaniMdu vaasava vaMdita vaataja sEvita vaasukishayananu vaare sunOTadi ||pa|| beraLa saMdili muraLi piDidu, muraari taanu haruShadiMdali swaragaLa nuDidu, vaarijanEtra araLu mallige saragaLa muDidu maruLu maaDuta maDadiyellara ||1|| gouri gaaMdhaari gouLapaMtu gourIsha bhUShaNa shourI saaraMga mOhanaviMtu saavEri suruTi bhairavi byaagaDe Uduta niMtu veera shrI kRuShNa vidha vidha raagadi ||2|| naarada tuMbura naaTyavanaaDe naLinanaabhana girija...

ನಮ್ಮ ಗಿರಿಯ ತಿಮ್ಮ | ಹಯವದನ | Namma Giriya Timma | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನಮ್ಮ ಗಿರಿಯ ತಿಮ್ಮ ಪರಬೊಮ್ಮ ನಮ್ಮ ಒಮ್ಮೆ ಕಾಯೋತ್ತಮ್ಮ ||ಪ|| ರಂಗ ದುರಿತ ಭಂಗ ಗುಣ ತ- ರಂಗ ಜಗದೊಳಗೆ ನೀನೆ ಸರ್ವೋತ್ತುಂಗ ||೧|| ನೋಡೋ ಎನ್ನಲ್ಲಿ ಕೃಪೆಮಾಡೋ ಕೈಯ  ನೀಡೋ ಎನ್ನ ಪೊರೆವೆನೆಂಬ ಮಾತನಾಡೊ ||೨|| ಏಳು ಎನ್ನ ಮಾತ ಕೇಳು ಕಡು ಕೃ- ಪಾಳು ನಿನ್ನ ಹದನ ಎನಗೊಲಿದು ಪೇಳು ||೩|| ಎಂದ ಮಾತಿಗೆ ಮುಂದೆ ನಿಂದ ನೀ ಕರುಣಿ ಗೋ- ವಿಂದ ಎಂಬುದಿನ್ನು ನಿನಗೆ ಚಂದ ||೪|| ಪ್ರಿಯ ಎನ್ನ ಕಾಯೋ ಜೀಯ ಮುಕ್ತ್ಯು- ಪಾಯ ಹಯವದನ ಶೇಷಗಿರಿರಾಯ ||೫||  namma giriya timma parabomma namma omme kAyOttamma ||pa|| raMga durita bhaMga guNa ta- raMga jagadoLage nIne sarvOttuMga ||1|| nODO ennalli kRupemaaDO kaiya  neeDO enna poreveneMba maatanaaDo ||2|| ELu enna maata kELu kaDu kRu- paaLu ninna hadana enagolidu pELu ||3|| eMda maatige muMde niMda nI karuNi gO- viMda eMbudinnu ninage chaMda ||4|| priya enna kaayO jIya muktyu- paaya hayavadana shEshagiriraaya ||5|| 

ಮಾತು ಮಾತಿಗೆ ಕೇಶವ | ಹಯವದನ | Maatu Maatige Keshava | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಮಾತು ಮಾತಿಗೆ ಕೇಶವ, ನಾರಾಯಣ, ಮಾಧವ ಎನಬಾರದೇ ||ಪ|| ಪ್ರಾತಃ ಕಾಲದಲೆದ್ದು ಪಾರ್ಥಸಾರಥಿಯನು ಪ್ರೀತಿಲಿ ನೆನೆದರೆ ಪ್ರೀತನಾಗುವ ಹರಿ ||ಅಪ|| ಜಲಜನಾಭನ ನಾಮವು ಈ ಜಗಕೆಲ್ಲ ಜನನ ಮರಣ ಹರವು ಸುಲಭವೆಂದೆನಲಾಗಿ ಸುಖಕೆ ಕಾರಣವಿದು ಬಲ್ಲಿದ ಪಾಪಂಗಳೆಲ್ಲ ಪರಿಹರಿಸುವುದೆಂದು ತಿಳಿದು ತಿಳಿಯದಿಹರೆ ಹೇ ಜಿಹ್ವೆ ||೧|| ತರಳೆ ದ್ರೌಪದಿ ಸೀರೆಯ ಸೆಳೆಯಲಾಗ ಹರಿ ನೀನೆ ಗತಿ ಎನಲು ಪರಮ ಪುರುಷ ಭವ ಭಂಜನ ಕೇಶವ ದುರುಳರ ಮರ್ಧಿಸಿ ತರಳೆಗಭಯವಿತ್ತ, ಹರಿ ನಮ್ಮ ಒಡೆಯನಲ್ಲವೇ ಹೇ ಜಿಹ್ವೆ ||೨|| ಹೇಮ ಕಶ್ಯಪ ಸಂಭವ ಈ ಜಗಕೆಲ್ಲ ನಾಮವೆ ಗತಿ ಎನಲು ವಾಮನ ನೀನೆಂದು ವಂದಿಸಿದವರಿಗೆ ಶ್ರೀಮದನಂತ ಸ್ವಾಮಿ ಹಯವದನನು ಕಾಮಿತ ಫಲವೀವನು ಹೇ ಜಿಹ್ವೆ ||೩|| mAtu mAtige kESava, nArAyaNa, mAdhava enabAradE ||pa|| prAtaH kAladaleddu pArthasArathiyanu prItili nenedare prItanAguva hari ||apa|| jalajanABana nAmavu I jagakella janana maraNa haravu sulaBaveMdenalAgi suKake kAraNavidu ballida pApaMgaLella pariharisuvudeMdu tiLidu tiLiyadihare hE jihve ||1|| taraLe draupadi sIreya seLeyalAga hari nIne gati enalu parama puruSha Bava BaMjana kESava duruLara mardhisi taraLegaBaya...

ಹರಿ ಬಾರನೇ ನರಹರಿ | ಹಯವದನ | Hari Baarane Narahari | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಹರಿ ಬಾರನೇ ನರಹರಿ ಬಾರನೇ ಕರಿಭಯಹರ ಮುರಾರಿ ಬಾರನೆ || ಪ || ವೃಂದಾವನದ ಗೋವಿಂದ ಬಾರನೇ ಕಂದರ್ಪನ ತಂದೆ ಮುಕುಂದ ಬಾರನೇ || ೧ || ಎಂದು ಕಾಂಬೆವೊ ನಾವವನನೆಂದು ಕಾಂಬೆವೊ ಇಂದಿರೆಯರಸನನೆಂದು ಕಾಂಬೆವೊ || ೨ || ಧನ ನಿತ್ಯವೇ ಯೌವ್ವನ ನಿತ್ಯವೇ ಜನ ನಿತ್ಯವೇ ಕರಣ ನಿತ್ಯವೇ || ೩ || ಭವಗೊಲಿದ ಪಾಂಡವಗೊಲಿದ ಧ್ರುವಗೊಲಿದ ಮಾಧವ ಒಲಿದ || ೪ || ಇಂದುವರ್ಣದ ಹಯವದನನಾದ ಮಂದರಧರನ ಸಖಿ ತಂದು ತೋರೆನಗೆ || ೫ || hari baaranE narahari baaranE karibhayahara muraari baarane || pa || vruMdaavanada gOviMda baaranE kaMdarpana taMde mukuMda baaranE || 1 || eMdu kaaMbevo naavavananeMdu kaaMbevo iMdireyarasananeMdu kaaMbevo || 2 || dhana nityavE youvvana nityavE jana nityavE karaNa nityavE || 3 || bhavagolida paaMDavagolida dhruvagolida maadhava olida || 4 || iMduvarNada hayavadananaada maMdaradharana saKi taMdu tOrenage || 5 ||

ರಂಗನಾಥನೆ ನೀಲಘನಂಗ | ಹಯವದನ | Ranganathane Neelaghananga | Hayavadana

Image
  ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ರಂಗನಾಥನೆ ನೀಲಘನಂಗ ದೇವರದೇವ  ಗುಣಂಗಳ ಖಣಿಯೆ ನಿನ್ನ ಪದಂಗಳು ಗತಿಯೆಮಗೆ ||ಪ|| ಉಭಯ ಕಾವೇರಿಮಧ್ಯದಲಭಯನೀವುತ  ಪವಡಿಸಿದಬುಜಲೋಚನನೆ ನಿನ್ನ ವಿಭವಕ್ಕೆ ನಮೋಯೆಂಬೆ ||೧|| ದೋಷದೂರನೆ ಭೂಮಿಗೆ ಭೂಮೋಹನನೆ ರಂಗ ಶ್ರೀಶ ನಿನ್ನ ನಂಬಿದೆ ಶೇಷಶಯನ ಕಾಯೊ ||೨|| ಚೆಲುವ ನಿನ್ನನು ಪೋಲುವರಿಲ್ಲ ಮೂಜಗದೊಳು  ಲಕುಮಿಯನಲ್ಲ ನಿನ್ನನು ಬಣ್ಣಿಸಲಳವಲ್ಲವೋ ಹಯವದನ ||೩||  raMganaathane neelaghanaMga dEvaradEva  guNaMgaLa KaNiye ninna padaMgaLu gatiyemage ||pa|| ubhaya kaavErimadhyadalabhayanIvuta  pavaDisidabujalOchanane ninna vibhavakke namOyeMbe ||1|| dOShadUrane bhUmige bhUmOhanane raMga shrIsha ninna naMbide shEShashayana kaayo ||2|| cheluva ninnanu pOluvarilla mUjagadoLu  lakumiyanalla ninnanu baNNisalaLavallavO hayavadana ||3|| 

ಶ್ರೀನಿವಾಸ ನೀನೇ ಪಾಲಿಸೋ | ಪುರಂದರ ವಿಠಲ | Srinivasa Neene Paliso | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಶ್ರೀನಿವಾಸ ನೀನೇ ಪಾಲಿಸೋ | ಆಶ್ರಿತ ಜನಪಾಲ ಗಾನ ಲೋಲ ಶ್ರೀ ಮುಕುಂದನೆ ||ಪ|| ಧ್ಯಾನ ಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪ | ವೇಣುಗೋಪಾಲ ಮುಕುಂದ ವೇದ ವೇದ್ಯ ನಿತ್ಯಾನಂದ ||ಅಪ|| ಎಂದಿಗೆ ನಿನ್ನಯ ಪಾದವ ಪೊಂದುವ ಸುಖ ಎಂದಿಗೆ ಲಭ್ಯವೋ ಮಾಧವ || ಅಂಧಕಾರಣ್ಯದಲ್ಲಿ ನಿಂದು ತತ್ತರಿಸುತಿಹೆನು | ಅಂದದಿಂ ಭವಾಬ್ಧಿಯೊಳು ಮಿಂದು ನೊಂದೆನೋ ಮುಕುಂದ ||೧|| ಎಷ್ಟು ದಿನ ಕಷ್ಟ ಪಡುವುದೋ ಯಶೋದೆ ಕಂದ ದೃಷ್ಟಿಯಿಂದ ನೋಡಲಾಗದೆ || ಮುಟ್ಟಿ ನಿನ್ನ ಭಜಿಸಲಾರೆ ಕೆಟ್ಟ ನರ ಜನ್ಮದವ ದುಷ್ಟ ಕಾರ್ಯ ಮಾಡಿದಾಗ್ಯೂ ಇಷ್ಟನಾಗಿ ಕೈಯ್ಯ ಪಿಡಿದು ||೨|| ಅನುದಿನ ಅನೇಕ ರೋಗಂಗಳ ಅನುಭವಿಸುವೆನು ಘನ್ನ ಮಹಿಮನೆ ಕೇಳಯ್ಯ || ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ ಹನುಮಧೀಶ ಪುರಂದರ ವಿಠಲನೆ ಕೈಯ್ಯ ಪಿಡಿದು ||೩|| SrInivAsa nInE pAlisO | ASrita janapAla gAna lOla SrI mukuMdane ||pa|| dhyAna mALpa sajjanara mAnadiM paripAlipa | vENugOpAla mukuMda vEda vEdya nityAnaMda ||apa|| eMdige ninnaya pAdava poMduva suKa eMdige laByavO mAdhava || aMdhakAraNyadalli niMdu tattarisutihenu | aMdadiM BavAbdhiyoLu miMdu noMdenO mukuMda ||1|| eShTu dina kaShTa paDuvudO yaSOde k...

ಏನೆಂದು ಸ್ತುತಿಸಲಿ | ಹಯವದನ | Enendu Stutisali | Hayavadana

Image
  ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಏನೆಂದು ಸ್ತುತಿಸಲಿ ದೇವರಂಗಯ್ಯ ನಿನ್ನ  ಜಾಣತನವ ನೀನೆ ಬಲ್ಲೆ ಶ್ರೀರಂಗಯ್ಯ ||ಪ|| ಮತ್ಸ್ಯನಾಗಿ ಶ್ರುತಿಯ ತಂದೆ ರಂಗಯ್ಯ   ನೀನು ಕುತ್ಸಿತ ತಮನ ಕೊಂದೆ ರಂಗಯ್ಯ||  ಸ್ವಚ್ಛ ಕೂರುಮನಾದೆ ರಂಗಯ್ಯ  ಭಕ್ತರಿಚ್ಛೆಯ ಪಾಲಿಸಿದೆ ಶ್ರೀರಂಗಯ್ಯ ||೧|| ಆದಿವರಾಹ ನೀನಾದೆ ರಂಗಯ್ಯ  ನೀನು ಪೋದ ಮೇದಿನಿಯ ತಂದೆ ರಂಗಯ್ಯ||  ಬೇಧಿಸಿ ಕಂಭದಿ ಬಂದೆ ರಂಗಯ್ಯ  ಪ್ರಹ್ಲಾದನ ಕಾಯ್ದೆ ಶ್ರೀರಂಗಯ್ಯ ||೨|| ಬಲಿಯನು ವಂಚಿಸಿದಂಥ ರಂಗಯ್ಯ   ನೀನು ನೆಲವ ಓರಡಿ ಮಾಡ್ದೆ ರಂಗಯ್ಯ||  ಬಲವಂತ ಭಾರ್ಗವನಾದೆ ರಂಗಯ್ಯ  ನೀನು ಛಲದಿ ಕ್ಷತ್ರಿಯರ ಗೆದ್ದೆ ರಂಗಯ್ಯ ||೩|| ಜಲಧಿಯನು ಕಟ್ಟಿದೆ ರಂಗಯ್ಯ  ಹತ್ತು ತಲೆಯವನ ಕುಟ್ಟಿದೆ ರಂಗಯ್ಯ  ಮಲೆತ ಮಾವನ ಕೊಂದೆ ರಂಗಯ್ಯ  ಯದುಕುಲವನುದ್ಧರಿಸಿದೆ ಶ್ರೀರಂಗಯ್ಯ ||೪|| ಸತಿಯರ ಮೋಹಿಸಿದೆ ನೀನು ರಂಗಯ್ಯ  ಬಲು ಚತುರ ಬೌದ್ಧನಾದೆ ರಂಗಯ್ಯ||  ಖತಿಯಿಂದ ಹಯವೇರಿದೆ ರಂಗಯ್ಯ  ದುರ್ಮತಿಯ ಕಲಿಯ ಕೊಂದೆ ಶ್ರೀರಂಗಯ್ಯ ||೫|| ತ್ರಿಭುವನದೊಳಗಧಿಕ ರಂಗಯ್ಯ  ನೀನು ಉಭಯ ಕಾವೇರಿವಾಸ ರಂಗಯ್ಯ  ವಿಭೀಷಣನಿಗೆ ಪ್ರಸನ್ನ ರಂಗಯ್ಯ ನೀನು ಅಭಯವಿತ್ತೆನ್ನ ಕಾಯೋ ಶ್ರೀರಂಗಯ್ಯ ||೬|| ವಾದಿರಾಜನಿಗೊಲಿದೆ ರಂಗಯ್ಯ  ನೀನು ಮೋದಿ ಹಯ...

Bhajane - Dasara Hadugalu ಭಜನೆ - ದಾಸರ ಹಾಡುಗಳು

 'ಕಲಿಯುಗದಲಿ ಹರಿ ನಾಮವ ನೆನೆದರೆ, ಕುಲಕೋಟಿಗಳುದ್ಧರಿಸುವವು' . ಇದು ದಾಸ ಶ್ರೇಷ್ಠರಾದ ಶ್ರೀ ಪುರಂದರದಾಸರ ವಾಣಿ. ಸಕಲ ವೇದ ಶಾಸ್ತ್ರಗಳ ಸಾರವನ್ನು ಸರಳ ಕನ್ನಡದಲ್ಲಿ, ಅನೇಕ ದಾಸರ ಮತ್ತು ಅಪರೋಕ್ಷ ಜ್ಞಾನಿಗಳ ಬಾಯಿಂದ ನುಡಿಸಿದ ಭಗವಂತನ ಕರುಣೆಯನ್ನು ವರ್ಣಿಸಲಸದಳ. ಇಂತಹ ದಾಸರ ಕೀರ್ತನೆಗಳನ್ನು ಪಾಮರರಾದ ನಾವು ತಿಳಿದು ಹಾಡುವುದರಿಂದ, ಶ್ರೀ ಭಗವಂತನನ್ನು ಅರ್ಚಿಸಿದಂತೆ. ರಾಗ, ತಾಳ, ಭಾವದಿಂದ ಭಗವಂತನನ್ನು ವರ್ಣಿಸುವ ಭಜನೆಗಳನ್ನು ಅನುಭವಿಸಿ ಹಾಡುವಾಗ ಆಗುವ ಆನಂದ ಅಪಾರ. Bhajane - Dasara Hadugalu ಭಜನೆ - ದಾಸರ ಹಾಡುಗಳು   YouTube ಚಾನೆಲ್ನಲ್ಲಿ ದಾಸರ ಹಾಡುಗಳನ್ನು ಭಜನಾ ರೂಪದಲ್ಲಿ ಪ್ರಸ್ತುತಿಸಲಾಗಿದೆ ಈ Blog post ಗಳಲ್ಲಿ ಅದರ ಸಾಹಿತ್ಯವನ್ನು ಇರಿಸಿದೆ.  ದಾಸ ಸಾಹಿತ್ಯದ ಬಗ್ಗೆ ಹೆಚ್ಚಿನ ವಿವರಣೆಗಾಗಿ Wikipedia ಓದಿ

ಒಲ್ಲೇ ದುರಿತಗಳ ನಾ ಒಲ್ಲೆ | ಹಯವದನ | Olle Duritagala song | Hayavadana

Image
  ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana)   ಒಲ್ಲೇ ದುರಿತಗಳ ನಾ ಒಲ್ಲೆ ಹರಿಯೇ  ಫುಲ್ಲನಾಭನ ಸ್ಮರಣೆ ಇಲ್ಲದೆ ಇರಲೊಲ್ಲೆ ||ಪ||  ದುರ್ಜನ ಸಂಗವ, ಎಂದೆಂದಿಗೂ ಒಲ್ಲೆ,  ಸಜ್ಜನ ವಿರಸಗಳ ಒಲ್ಲೆ ಒಲ್ಲೆನೋ ಸ್ವಾಮಿ ||  ಅರ್ಜುನ ಸಖ ನಿನ್ನ ಸೇವೆಯ ಬಿಡಲೊಲ್ಲೆ,  ಅಬ್ಜ ಬಾಣನ ಮೇಳ ಒಲ್ಲೆ ಒಲ್ಲೆನೋ ಸ್ವಾಮಿ ||೧||  ಬಲ್ಲಿದ ಹರಿಪಾದ ಸೇವೆಯ ಬಿಡಲೊಲ್ಲೆ  ಸಲ್ಲದ ಸುಖಗಳ ಒಲ್ಲೆ ಒಲ್ಲೆನೋ ಸ್ವಾಮಿ ||  ಅಲ್ಲದ ಕರ್ಮಗಳ ಆಚರಿಸಲೊಲ್ಲೆ,  ಕ್ಷುಲ್ಲ ದೈವದ ಪೂಜೆ ಎಂದೆಂದಿಗೂ ಒಲ್ಲೆ ||೨||  ಹರಿನಾಮ ಸ್ಮರಣೆಯ ಮನದಿ ಬಿಟ್ಟಿರಲೊಲ್ಲೆ,  ದುರ್ವಿಷಯದಿ ಹರುಷ ಒಲ್ಲೆ ಒಲ್ಲೆನೋ ಸ್ವಾಮಿ ||  ಕರುಣಿ ಹಯವದನನ ಕಾಣದೆ ಇರಲೊಲ್ಲೆ  ಹರಿಯೇ ನೀನಲ್ಲದ ಅನ್ಯ ದೈವವ ಒಲ್ಲೇ ||೩||  ollE duritagaLa nA olle hariyE  PullanABana smaraNe illade iralolle ||pa||  durjana saMgava, eMdeMdigU olle,  sajjana virasagaLa olle ollenO svAmi ||  arjuna saKa ninna sEveya biDalolle,  abja bANana mELa olle ollenO svAmi ||1||  ballida haripAda sEveya biDalolle  sallada sukhagaLa olle ollenO svAmi ||  allada...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru