ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಾಮ ರಾಮ ಶ್ರೀ ರಘುರಾಮ | ಭೀಮೇಶ ಕೃಷ್ಣ | Rama Rama Sri Raghurama | Bhimesha Krishna


ಸಾಹಿತ್ಯ :    ಶ್ರೀ ಹರಪನಹಳ್ಳಿ ಭೀಮವ್ವ (ಭೀಮೇಶ ಕೃಷ್ಣ)
Kruti: Sri Harapanahalli Bhimavva (Bhimesha Krishna)


ರಾಮ ರಾಮ ಶ್ರೀ ರಘುರಾಮ ನೀಲಮೇಘಶ್ಯಾಮ ನಿಸ್ಸೀಮ 
ಕಾಮಿತಾರ್ಥವ ಕರೆದತಿ ಪ್ರೇಮದಿಂದ ಪಾಲಿಪುದು ನಿನ್ನ ನಾಮ  || ಪ ||

ಕಲ್ಲೋದ್ಧಾರಕ ಕರುಣಾಳು ರಾಮ
ಬಿಲ್ಲನೆತ್ತಿದ್ದ ಬಿರುದಾತ ರಾಮ
ಸೊಲ್ಲು ಸೊಲ್ಲುಗಿರಲು ಹರಿನಾಮ
ಚಿಲ್ಲ್ಯಾಡುವ ದಯ ಅವರಲ್ಲಿ ಪ್ರೇಮ || ೧ ||

ಧೀರಪುರುಷನೆ ದಿಗ್ವಿಜಯ ರಾಮ
ವಾರಿಧಿಯ ಕಟ್ಟಿದ ವನಜಾಕ್ಷ ರಾಮ
ಕ್ರೂರರಾಕ್ಷಸನನ್ನು ಕೊಂದು ಲಂಕಾ
ಸೂರೆಯನು ಮಾಡಿದಂಥ ನಿಸ್ಸೀಮ  || ೨ ||

ದುಷ್ಟರಾವಣಶತ್ರು ಶ್ರೀರಾಮ
ಹುಟ್ಟಿ ಭಾನುವಂಶದಿ ಸೀತಾರಾಮ
ಮುಟ್ಟಿಭಜಿಸೆ ಸಜ್ಜನರಿಗೆ ಭೀಮೇಶ-
ಕೃಷ್ಣ ಕರೆದು ನೀಡುವ ತನ್ನ ಧಾಮ || ೩ ||

rAma rAma SrI raGurAma nIlamEGaSyAma nissIma 
kAmitArthava karedati prEmadiMda pAlipudu ninna nAma  || pa ||

kallOddhAraka karuNALu rAma
billanettidda birudAta rAma
sollu sollugiralu harinAma
cillyADuva daya avaralli prEma || 1 ||

dhIrapuruShane digvijaya rAma
vAridhiya kaTTida vanajAkSha rAma
krUrarAkShasanannu koMdu laMkA
sUreyanu mADidaMtha nissIma  || 2 ||

duShTarAvaNaSatru SrIrAma
huTTi BAnuvaMSadi sItArAma
muTTiBajise sajjanarige BImESa-
kRuShNa karedu nIDuva tanna dhAma || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru