ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಭೀಮರಾಯನ ನಂಬಿ ಭೀಮಸೇನನ | ಹಯವದನ | Bhimaraayana Nambi | Hayavadana


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಭೀಮರಾಯನ ನಂಬಿ ಭೀಮಸೇನನ
ಭೀಮಭವವಾರಿಧಿಯ ಬೇಗ ದಾಟುವರೆ ನಮ್ಮ || ಪ ||

ಬಕ ಮೊದಲಾದ ಹಿಡಿಂಬಕ ದುರ್ಜನರ ಕೊಂದು
ಸುಖಪಡಿಸಿದನಂದು ದ್ವಿಜಕುಲಜರಾಗ ಕೂಡ || ೧ ||

ಜರಾಸಂಧನ ಕೂಡೆ ವರ ಯುದ್ಧವನ್ನೇ ಮಾಡಿ
ಸರಕು ಮಾಡದೆ ಕೊಂದ ಧಾರುಣಿಯೊಳಗೆ ನಿಂದ || ೨ ||

ಅಸುರ ಕೀಚಕನೆಂಬುವ ಸತಿಯ ಕೃಷ್ಣೆಯ
ಬಾಧಿಸೆ ಘಾಸಿಮಾಡಲು ವಂದ್ಯರ ಹೇಸದೆ ಮೋಸದಿ ಕೊಂದ || ೩ ||

ಕಡುತೃಷೆಗೆ ದುಶ್ಯಾಸನನೊಡಲ ಬಗಿದು ರಕ್ತ
ಕುಡಿದಂತೆ ತೋರ್ದ ನಮ್ಮೊಡೆಯ ದ್ರೌಪದಿಪ್ರಿಯ || ೪ ||

ಭೀಮ ತನ್ನ ಮರೆಹೊಕ್ಕ ಸುಜನರ ಕಾವ
ಸ್ವಾಮಿ ಶ್ರೀಹಯವದನ ರಾಮನಾಣೆ ಸತ್ಯವಿದು || ೫ ||

bhImaraayana naMbi bhImasEnana
bhImabhavavaaridhiya bEga dATuvare namma || pa ||

baka modalaada hiDiMbaka durjanara koMdu
suKapaDisidanaMdu dvijakulajaraaga kUDa || 1 ||

jaraasaMdhana kUDe vara yuddhavannE maaDi
saraku maaDade koMda dhaaruNiyoLage niMda || 2 ||

asura kIcakaneMbuva satiya kRuShNeya
baadhise GaasimaaDalu vaMdyara hEsade mOsadi koMda || 3 ||

kaDutRuShege dushyaasananoDala bagidu rakta
kuDidaMte tOrda nammoDeya droupadipriya || 4 ||

bhIma tanna marehokka sujanara kaava
svaami shrIhayavadana raamanaaNe satyavidu || 5 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru