ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಧನ್ಯನಾದೆ ವಿಠಲನ ಕಂಡು | ಜಗನ್ನಾಥ ವಿಠಲ | Dhanyanade Vithalana | Jagannatha vittala


ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)
Kruti:Sri Jagannatha dasaru (Jagannatha vittala)


ಧನ್ಯನಾದೆ ವಿಠಲನ ಕಂಡು ||ಪ|| 
ಧನ್ಯನಾದೆ ಕಾಮನ್ನ ಪಿತನ ಲಾವಣ್ಯ ಮೂರುತಿಯ ಕಣ್ಣಲ್ಲಿ ಕಂಡು ||ಅಪ|| 

ದೇವವರೇಣ್ಯ ಸದಾ ವಿನೋದಿ | 
ವೃಂದಾವನದಿ ಸಂಚರಿಪನ ಕಂಡು ||೧|| 

ಮಂಗಳಾಂಗ ಕಾಳಿಂಗ ಮಥನ | 
ಮಾತಂಗ ವರದ ವರ ರಂಗನ ಕಂಡು ||೨|| 

ಹಾಟಕಾಂಬರ ಕಿರೀಟಿ ಸಾರಥಿ | 
ತಾಟಕಾರಿ ವೈರಾಟನ ಕಂಡು ||೩|| 

ಚಿಂತಿತ ಫಲದ ಕೃತಾಂತನಾತ್ಮಜಾ | 
ದ್ಯಂತ ರಹಿತ ನಿಶ್ಚಿಂತನ ಕಂಡು ||೪|| 

ಮಾತುಳಾಂತಕ ವಿಧಾತ ಪಿತ ಜಗನ್ನಾಥ ವಿಠಲ 
ವಿಖ್ಯಾತನ ಕಂಡು ||೫|| 

dhanyanAde viThalana kaMDu ||pa|| 
dhanyanAde kAmanna pitana lAvaNya mUrutiya kaNNalli kaMDu ||apa|| 
 
dEvavarENya sadA vinOdi | 
vRuMdAvanadi saMcaripana kaMDu ||1|| 
 
maMgaLAMga kALiMga mathana | 
mAtaMga varada vara raMgana kaMDu ||2|| 
 
hATakAMbara kirITi sArathi | 
tATakAri vairATana kaMDu ||3|| 
 
ciMtita Palada kRutAMtanAtmajA | 
dyaMta rahita niSciMtana kaMDu ||4|| 
 
mAtuLAMtaka vidhAta pita jagannAtha viThala 
viKyAtana kaMDu ||5|| 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru