ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಜಗದ ಇರವು | ಕನ್ನಡ ದ್ವಾದಶಸ್ತೋತ್ರ | Jagada iravu | Dwadasha Stotra Kannada



ಸಾಹಿತ್ಯ : ಶ್ರೀ ಮನ್ಮಧ್ವಾಚಾರ್ಯರ ದ್ವಾದಶ ಸ್ತೋತ್ರದ ಏಳನೇ ಅಧ್ಯಾಯ 
ಕನ್ನಡ ಅನುವಾದ : ಶ್ರೀ ಬನ್ನಂಜೆ ಗೋವಿಂದಾಚಾರ್ಯರು  
Kruti: Srimanmadhwacharya's 7th Chapter of Dwadasha Stotra
Kannada Translation: Sri Bannanje Govindacharya

 ಜಗದ ಇರವು ಮೇಣಳಿವು ಹುಟ್ಟು ಐಸಿರಿಯ ಹಿರಿಯ ಯೋಗ |
ಬಾಳು ತಿಳಿವು ನಿಯಮನವು ಅಂತೆ ಅಜ್ಞಾನ ಬಂಧ ಮೋಕ್ಷ ||
ಯಾವ ರಮೆಯ ಕಡೆಗಣ್ಣ ನೋಟಕೀ ಎಲ್ಲ ನಡೆಯುತಿಹುದೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೧ ||

ಬ್ರಹ್ಮ-ರುದ್ರ-ದೇವೇಂದ್ರ-ಸೂರ್ಯ-ಯಮಧರ್ಮ-ಚಂದ್ರರಾದಿ |
ಸುರರ ಗುಂಪು ಈ ಜಗದ ವಿಜಯವನು ತಿಳಿವಿಗೆಟುಕದಂಥ ||
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನಡೆಯುತಿಹುದೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೨ ||

ಧರ್ಮನಿರತ ಸಜ್ಜನರ ಪೂಜೆಯನು ಕೊಳುವ ದೇವತೆಗಳೂ |
ಸತ್ಯದರಿವು-ಧರ್ಮಾರ್ಥ-ಕಾಮ-ಮುಂತಾದ ಮಂಗಲವನು ||
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನೀಡುತಿಹರೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೩ ||

ಯಾರನಾಶ್ರಯಿಸೆ ಬಾಳ ದುಗುಡ ನಮ್ಮೆಡೆಗೆ ಬರದೊ ಅಂಥ |
ಆರು ವೈರಿಗಳ ಗೆದ್ದ ಮುನಿಗಳೂ ಹರಿಯ ಮಹಿಮೆಯನ್ನು ||
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನೆನೆಯುತಿಹರೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೪ ||

ಶೇಷ-ಗರುಡ-ಗೌರೀಶ-ಇಂದ್ರ-ಮನು ಎಂಬ ತುಂಬ ಬಗೆಯ |
ಸೃಷ್ಟಿಯಚ್ಚರಿಯ ಪಡೆದ ವಿಶ್ವವನು ಬ್ರಹ್ಮದೇವ ತಾನು ||
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ರಚಿಸುತಿಹನೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೫ ||

ಇಂದ್ರ - ಚಂದ್ರಮರು ಸೂರ್ಯನಂತಕಂ ಇಂಥ ಎಲ್ಲ ಜಗವ |
ಪ್ರಳಯ ಕಾಲದಲಿ ಶಿವನು ಸಂಹರಿಸಿ ದಿವ್ಯಶಕ್ತಿ ಪಡೆದು ||
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ಕುಣಿಯಬಹನೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೬ ||

ಶಂಕರಾದಿವಂದಿತನು ಶೇಷ ತಾನಿತರ ಸುರರಿಗಿರದ |
ಹರಿಯ ಪಾದಪಂಕಜಕೆ ಪೀಠವಹ ಹಿರಿಯ ಭಾಗ್ಯವನ್ನು ||
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ಪಡೆಯಬಹನೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೭ ||

ಅಮಿತವೇಗ ನಡುಗಿಸುವ ಬಲದ ಪೌರುಷದ ಗರುಡದೇವ |
ಸುರರ ಕಲ್ಪನೆಗು ನಿಲುಕದಂಥ ಶ್ರೀ ಹರಿಯ ಹೊರುವ ಪುಣ್ಯಂ ||
ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ಪಡೆಯಬಹನೋ |
ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೮ ||

ಮಧ್ವ ಮುನಿಯ ಮುಖಕಮಲದಿಂದ ಹೊರಹೊಮ್ಮಿದಂಥ ಹಾಡು |
ಹಿರಿಯ ಅರ್ಥವನು ಸಾರುತಿದೆ | ಹರಿ-ರಮೆಯರಚ್ಚುಮೆಚ್ಚು ||
ಭಕ್ತಿಯಿಂದ ಭಗವಂತನನ್ನು ನೆನೆದಿದನು ಓದುವವನು |
ಹರಿಯ - ರಮೆಯ ಕೃಪೆಯಿಂದ ಹೊಂದುವನು ತನ್ನ ಬಯಕೆಗಳನು || ೯ ||

jagada iravu mENaLivu huTTu aisiriya hiriya yOga |
bALu tiLivu niyamanavu aMte ajnaana baMdha mOkSha ||
yAva rameya kaDegaNNa nOTakI ella naDeyutihudO |
aMthavaLanu tanna melunOTadiMda kApiDuva harige namanaM || 1 ||
 
brahma-rudra-dEvEMdra-sUrya-yamadharma-caMdrarAdi |
surara guMpu I jagada vijayavanu tiLivigeTukadaMtha ||
yAva rameya kaDegaNNa nOTadASrayadi naDeyutihudO |
aMthavaLanu tanna melunOTadiMda kApiDuva harige namanaM || 2 ||

dharmanirata sajjanara pUjeyanu koLuva dEvategaLU |
satyadarivu-dharmArtha-kAma-muMtAda maMgalavanu ||
yAva rameya kaDegaNNa nOTadASrayadi nIDutiharO |
aMthavaLanu tanna melunOTadiMda kApiDuva harige namanaM || 3 ||

yAranASrayise bALa duguDa nammeDege barado aMtha |
Aru vairigaLa gedda munigaLU hariya mahimeyannu ||
yAva rameya kaDegaNNa nOTadASrayadi neneyutiharO |
aMthavaLanu tanna melunOTadiMda kApiDuva harige namanaM || 4 ||
 
SESha-garuDa-gaurISa-iMdra-manu eMba tuMba bageya |
sRuShTiyaccariya paDeda viSvavanu brahmadEva tAnu ||
yAva rameya kaDegaNNa nOTadASrayadi racisutihanO |
aMthavaLanu tanna melunOTadiMda kApiDuva harige namanaM || 5 ||
  
iMdra - caMdramaru sUryanaMtakaM iMtha ella jagava |
praLaya kAladali Sivanu saMharisi divyaSakti paDedu ||
yAva rameya kaDegaNNa nOTadASrayadi kuNiyabahanO |
aMthavaLanu tanna melunOTadiMda kApiDuva harige namanaM || 6 ||
 
SaMkarAdivaMditanu SESha tAnitara surarigirada |
hariya pAdapaMkajake pIThavaha hiriya BAgyavannu ||
yAva rameya kaDegaNNa nOTadASrayadi paDeyabahanO |
aMthavaLanu tanna melunOTadiMda kApiDuva harige namanaM || 7 ||
 
amitavEga naDugisuva balada pauruShada garuDadEva |
surara kalpanegu nilukadaMtha SrI hariya horuva puNyaM ||
yAva rameya kaDegaNNa nOTadASrayadi paDeyabahanO |
aMthavaLanu tanna melunOTadiMda kApiDuva harige namanaM || 8 ||
 
madhva muniya muKakamaladiMda horahommidaMtha hADu |
hiriya arthavanu sArutide | hari-rameyaraccumeccu ||
BaktiyiMda BagavaMtanannu nenedidanu Oduvavanu |
hariya - rameya kRupeyiMda hoMduvanu tanna bayakegaLanu || 9 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru