ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಾಮ ರಾಮ ರಾಮ ಎನ್ನಿರೋ | ಪುರಂದರ ವಿಠಲ | Rama Rama Enniro | Purandara vittala


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara dasaru (Purandara vittala)


ರಾಮ ರಾಮ ರಾಮ ಎನ್ನಿರೋ 
ಇಂಥ ಸ್ವಾಮಿಯ ನಾಮವ ಮರೆಯದಿರೋ || ಪ || 

ತುಂಬಿದ ಪಟ್ಟಣಕ್ಕೆ ಒಂಭತ್ತು ಬಾಗಿಲು | 
ಸಂಭ್ರಮದರಸರು ಐದು ಮಂದಿ || 
ಡಂಭಕತನದಿಂದ ತಿರುಗುವ ಕಾಯವ | 
ನಂಬಿ ನೆಚ್ಚಿ ನೀವು ಕೆಡಬೇಡಿರೋ || ೧ || 

ನೆಲೆಯಿಲ್ಲದೀ ಕಾಯ ಎಲುಬಿನ ಪಂಜರ | 
ಒಲಿದು ಸುತ್ತಿದ ಚರ್ಮದ ಹೊದಿಕೆ || 
ಮಲಮೂತ್ರಂಗಳು ಕೀವು ಕ್ರಿಮಿಗಳಿಂದ ಭರಿತ 
ದೇಹವ ನೆಚ್ಚಿ ಕೆಡಬೇಡಿರೋ || ೨ || 

ತೊಗಲು ಬೊಂಬೆಯ ಮಾಡಿ ಜಗದೊಳು ನಿಲ್ಲಿಸಿ | 
ನೆಗೆದಾಡಿಸಿ ಹೊತ್ತು ಹೋಗದಂತೆ || 
ಒಗುವೀಣೆಯಿಂದಲಿ ಉಬ್ಬುವ ಕಾಯವ | 
ಹಗಲು ಇರುಳು ನೆಚ್ಚಿ ಕೆಡಬೇಡಿರೋ || ೩ || 

ಮಡದಿಯು ಮಕ್ಕಳು ಒಡವೆಗಳುಂಟೆಂದು 
ಕಡು ಕೊಬ್ಬುತನದಿಂದ ತಿರುಗಬೇಡಿರೋ || 
ಪಿಡಿದೆಳೆದು ತಾರೆಂದು ಯಮನು ಪೀಡಿಸಲಾಗ || 
ಒಡನೆ ಆರೊಬ್ಬರು ಬಾಹೋರಿಲ್ಲವೋ || ೪ || 

ಹರಬ್ರಹ್ಮ ಸುರರಿಂದ ವಂದಿತನಾಗಿಪ್ಪ 
ಹರಿ ಸರ್ವೋತ್ತಮನೊಬ್ಬ ಕಾಣಿರೋ 
ಪುರಂದರ ವಿಠಲನ ಭಜನೆಯ ಮಾಡಿರೋ 
ದುರಿತ ಪರ್ವತವೆಲ್ಲ ಪರಿಹಾರವೋ || 5 ||

rAma rAma rAma ennirO 
iMtha svAmiya nAmava mareyadirO ||pa|| 
 
tuMbida paTTaNakke oMBattu bAgilu | 
saMBramadarasaru aidu maMdi || 
DaMBakatanadiMda tiruguva kAyava | 
naMbi necci nIvu keDabEDirO || 1 || 
 
neleyilladI kAya elubina paMjara | 
olidu suttida carmada hodike || 
malamUtraMgaLu kIvu krimigaLiMda Barita 
dEhava necci keDabEDirO || 2 || 
 
togalu boMbeya mADi jagadoLu nillisi | 
negedADisi hottu hOgadaMte || 
oguvINeyiMdali ubbuva kAyava | 
hagalu iruLu necci keDabEDirO || 3 || 
 
maDadiyu makkaLu oDavegaLuMTeMdu 
kaDu kobbutanadiMda tirugabEDirO || 
piDideLedu tAreMdu yamanu pIDisalAga || 
oDane Arobbaru bAhOrillavO || 4 || 
 
harabrahma surariMda vaMditanAgippa 
hari sarvOttamanobba kANirO 
puraMdara viThalana Bajaneya mADirO 
durita parvatavella parihAravO || 5 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru