ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕೋ ಕೋ ಕೋ ಎನ್ನಿರೋ | ಕನಕದಾಸರು | Ko Ko Ko Enniro | Kanakadasaru


ಸಾಹಿತ್ಯ : ಶ್ರೀ ಕನಕದಾಸರು (ಕಾಗಿನೆಲೆಯಾದಿ ಕೇಶವ)
Kruti: Sri Kanakadasaru (Kagineleyaadi Keshava)


ಕೋ ಕೋ ಕೋ ಎನ್ನಿರೋ ಕುಂಭಿಣಿಯವರೆಲ್ಲ 
ಕೋ ಕೋ ಕೋ ಎನ್ನಿರೋ ಕೋ ಕೋ ಕೋ ಎನ್ನಿರೋ || ಪ ||

ನಮ್ಮ ಗೋಕುಲದೊಳಗೊಬ್ಬ ಕಳ್ಳ ಬರುತಾನೆಂದು
ಕೋ ಕೋ ಕೋ ಎನ್ನಿರೋ ಕೋ ಕೋ ಕೋ ಎನ್ನಿರೋ || ಅಪ ||

ಪೊಂದಿ ಮೊಲೆಯನುಂಡವಳಸುವನೆ ಕೊಂದ ಮುದ್ದುಗಾರ ಕಳ್ಳ ಕೋ ಕೋ ಕೋ ಎನ್ನಿರೋ
ಕದ್ದುಕೊಂಡೊಯ್ಯುವ ರಕ್ಕಸರನೆಲ್ಲರ ಕಾಲಲೊದ್ದರಿಸಿದ ಕಳ್ಳ ಕೋ ಕೋ ಕೋ ಎನ್ನಿರೋ 
ಹದ್ದು ಹಗೆಯ ಹಾಸಿಗೆಯ ಮೇಲೊರಗಿದ ಮುದ್ದುಗಾರ ಕಳ್ಳ ಕೋ ಕೋ ಕೋ ಎನ್ನಿರೋ
ಅರ್ಧ ದೇಹನ ಕೈಯ ತಲೆಯ ಕಪಟದಿಂದ ಕದ್ದು ಬಿಸುಟ ಕಳ್ಳ ಕೋ ಕೋ ಕೋ ಎನ್ನಿರೋ || ೧ ||

ಕೇಸರಿ ಎಂಬ ರಕ್ಕಸರನೆಲ್ಲರ ಕೊಂದ ವೇಷಧಾರಿ ಕಳ್ಳ ಕೋ ಕೋ ಕೋ ಎನ್ನಿರೋ
ಮೋಸದಿ ಬಲಿಯ ದಾನವ ಬೇಡಿ ಅನುದಿನ ಬೇಸರಿಸಿದ ಕಳ್ಳ ಕೋ ಕೋ ಕೋ ಎನ್ನಿರೋ
ಮೀಸಲ ಅನ್ನವ ಕೂಸಾಗಿ ಸವಿದುಂಡ ವೇಷಧಾರಿ ಕಳ್ಳ ಕೋ ಕೋ ಕೋ ಎನ್ನಿರೋ
ಸಾಸಿರ ನಾಮಕ್ಕೆ ಹೆಸರಾದ ಚಪ್ಪನ್ನ ದೇಶಧಾರಿ ಕಳ್ಳ ಕೋ ಕೋ ಕೋ ಎನ್ನಿರೋ || ೨ ||

ಕ್ಷೀರ ವಾರಿಧಿ ವೈಕುಂಠನಗರಿಯನ್ನು ಸೇರಿಸಿದ ಕಳ್ಳ ಕೋ ಕೋ ಕೋ ಎನ್ನಿರೋ
ದ್ವಾರಾವತಿಯನು ನೀರೊಳು ಬಚ್ಚಿಟ್ಟ ಊರುಗಳ್ಳ ಬಂದ ಕೋ ಕೋ ಕೋ ಎನ್ನಿರೋ
ದ್ವಾರಕೆ ಆಳುವ ಉಭಯ ದಾಸರ ತನ್ನ ಊರಿಗೊಯ್ದ ಕಳ್ಳ ಕೋ ಕೋ ಕೋ ಎನ್ನಿರೋ
ಕಾರಣಾತ್ಮನು ಕಾಗಿನೆಲೆಯಾದಿ ಕೇಶವ ಕ್ಷೀರ ಬೆಣ್ಣೆಯ ಕಳ್ಳ ಕೋ ಕೋ ಕೋ ಎನ್ನಿರೋ || ೩ ||

kO kO kO ennirO kuMbhiNiyavarella 
kO kO kO ennirO kO kO kO ennirO || pa ||

namma gOkuladoLagobba kaLLa barutaaneMdu
kO kO kO ennirO kO kO kO ennirO || apa ||

poMdi moleyanuMDavaLasuvane koMda muddugaara kaLLa kO kO kO ennirO
kaddukoMDoyyuva rakkasaranellara kaalaloddarisida kaLLa kO kO kO ennirO 
haddu hageya haasigeya mEloragida muddugaara kaLLa kO kO kO ennirO
ardha dEhana kaiya taleya kapaTadiMda kaddu bisuTa kaLLa kO kO kO ennirO || 1 ||

kEsari eMba rakkasaranellara koMda vEShadhaari kaLLa kO kO kO ennirO
mOsadi baliya daanava bEDi anudina bEsarisida kaLLa kO kO kO ennirO
mIsala annava kUsaagi saviduMDa vEShadhaari kaLLa kO kO kO ennirO
saasira naamakke hesaraada cappanna dESadhaari kaLLa kO kO kO ennirO || 2 ||

kShIra vaaridhi vaikuMThanagariyannu sErisida kaLLa kO kO kO ennirO
dvaaraavatiyanu nIroLu bacciTTa UrugaLLa baMda kO kO kO ennirO
dvaarake ALuva ubhaya daasara tanna Urigoyda kaLLa kO kO kO ennirO
kaaraNaatmanu kaagineleyaadi kEshava kShIra beNNeya kaLLa kO kO kO ennirO || 3 ||

Popular posts from this blog

ಹರಿಕಥಾಮೃತಸಾರ | ಪಿತೃಗಣ ಸಂಧಿ | ಜಗನ್ನಾಥವಿಠಲ | Pitrugana Sandhi | Jagannatha Dasaru | Harikathamruthasara

ಗೌರಿ ಆರತಿ ಹಾಡು | ಗೌರಿ ದೇವಿಗೆ ಸಖಿ | ಶ್ಯಾಮಸುಂದರ | Gouri Arati Song | Gouri Devige| Shyamasundara

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru