ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಧೀರನ ನೋಡಿರೈ | ಶ್ರೀ ಕೃಷ್ಣ | Dhirana Nodirai | Vyasarajaru


ಸಾಹಿತ್ಯ :    ಶ್ರೀ ವ್ಯಾಸರಾಜರು  (ಶ್ರೀ ಕೃಷ್ಣ)
Kruti: Sri Vyasarajaru (Sri Krishna)


ಧೀರನ ನೋಡಿರೈ ಕರುಣಾಪೂರನ ಪಾಡಿರೈ || ಪ ||

ವಾರಿಜವದನ ಸಮೀರಜ ಕಪಿನೃಪ ದ್ವಿಜನ ಭಾವೀ ಅಜನ || ಅಪ ||

ಕಣಕಾಲಂದಿಗೆ ಒಪ್ಪುವ ಸರ ಕಂಠಮಣಿಯ ವಜ್ರದ ಖಣಿಯ
ಮಣಿಯದ ಬಹಳ ಕಠಿಣ ದಿತಿಜರನೆಲ್ಲ ಹಣೆಯಬೇಕೆಂಬೊ ದಣಿಯ
ಪ್ರಣತಿಸಿ ನಾರಾಯಣಪದ ಭಕ್ತಾಗ್ರಣಿಯ ಚಿಂತಾಮಣಿಯ
ತೃಣಕೃತಾಮರಪತಿ ಯಶೋಮಾಧವ ಫಣಿಯ ಕಪಿಶಿರೋಮಣಿಯ || ೧ ||

ಮಂದಸ್ಮಿತಯುತ ಕುಂದಕುಟ್ಮಲಸಮರದನ ಪೂರ್ಣಚಂದ್ರವದನ
ಇಂದುಧರಾದಿ ಸುರವೃಂದವಂದಿತ ಪದಯುಗನ ಹಸ್ತಾಯುಧನ
ಬಂದೀಕೃತ ಸುರಸುಂದರೀ ಸಮುದಯ ಸದನ ಜಿತಾನೇಕ ಮದನ
ಮಂದಮತಿ ಜರಾಸಂಧನಂಗವ ಸೀಳಿದನ ಬಹುಬಲ್ಲಿದನ || ೨ ||

ಮುದ್ದುಮುಖವ ನೋಡಿ ತಿದ್ದಿಮಾಡಿದ ಮೈಸಿರಿಯ ಇನ್ನೊಮ್ಮೆ ದೊರೆಯ
ಒದ್ದಕ್ಷಕುವರನ ಗುದ್ದಿ ಬಿಸುಟ ಹೊಂತಕಾರಿಯ ಭಾರತೀದೊರೆಯ
ಶುದ್ಧಾನಂದಸಮುದ್ರ ಶ್ರೀಕೃಷ್ಣಗೆ ಕಿರಿಯ ಮಿಕ್ಕಜಗಕ್ಹಿರಿಯ
ಅದ್ವೈತಶಾಸ್ತ್ರದ ಸದ್ದನಡಗಿಸಿದ ಆರ್ಯ ನಮ್ಮ ಮಧ್ವಾಚಾರ್ಯ || ೩ ||

dhIrana nODirai karuNaapUrana paaDirai || pa ||

vaarijavadana samIraja kapinRupa dvijana bhaavI ajana || apa ||

kaNakaalaMdige oppuva sara kaMThamaNiya vajrada KaNiya
maNiyada bahaLa kaThiNa ditijaranella haNeyabEkeMbo daNiya
praNatisi naaraayaNapada bhaktaagraNiya ciMtaamaNiya
tRuNakRutaamarapati yashOmaadhava PaNiya kapishirOmaNiya || 1 ||

maMdasmitayuta kuMdakuTmalasamaradana pUrNacaMdravadana
iMdudharaadi suravRuMdavaMdita padayugana hastaayudhana
baMdIkRuta surasuMdarI samudaya sadana jitaanEka madana
maMdamati jaraasaMdhanaMgava sILidana bahuballidana || 2 ||

muddumuKava nODi tiddimaaDida maisiriya innomme doreya
oddakShakuvarana guddi bisuTa hoMtakaariya bhaaratIdoreya
shuddhaanaMdasamudra shrIkRuShNage kiriya mikkajagak hiriya
advaitashaastrada saddanaDagisida Arya namma madhvaacaarya || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru