ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕಣ್ಣು ಎರಡು ಸಾಲದು | ಗುರು ಶ್ಯಾಮಸುಂದರ | Kannu eradu saaladu | Guru Shyamasundara


ಸಾಹಿತ್ಯ : ಶ್ರೀ ಗುರು ಶ್ಯಾಮಸುಂದರ ವಿಠಲ ದಾಸರು
Kruti: Sri Guru Shyamasundara Vittala Dasaru


ಕಣ್ಣು ಎರಡು ಸಾಲದು ನಮ್ಮ ಬೆಣ್ಣೆ ಮೆಲ್ಲುವ ಬಾಲಕೃಷ್ಣನ ನೋಡಲು || ಪ ||

ಗುಂಗುರು ಕೂದಲಿಗೆ ಸಿಕ್ಕಿಸಿದ ನವಿಲುಗರಿ | 
ಮುಂಗುರುಳಿನ ಕಾಂತಿ ಮುಖದ ಚೆಲುವ ರಾಶಿ ||
ಹೆಂಗಳೆಯರು ನಾಚಿ ಮೋಹಿಸುವ ರೀತಿ |
ಹಿಂಗದೆ ನೋಡಲು ದೃಷ್ಟಿ ತಾಕುವ ಭೀತಿ || ೧ ||

ಹಣೆಯೊಳು ಒಪ್ಪುವ ಕಸ್ತೂರಿ ತಿಲಕ |
ಕರ್ಣದೊಳು ಆಡುವ ಕುಂಡಲ ಝಳಕ ||
ವರ್ಣ ವರ್ಣದ ಪೀತಾಂಬರದ ಉಡುಗೆಯ |
ವರ್ಣಿಸಲು ಅಳವಲ್ಲ ಮನುಜ ಮಾತಿನಲಿ || ೨ ||

ಚಾರು ಚರಣದಲ್ಲಿ ಶೋಭಿಪ ನೂಪುರ |
ಸಾರ ಭಕ್ತರ ಮನವ ಸೂರೆಗೊಂಬ ತೆರದಿ ||
ಮಾರಪಿತ ಗುರು ಶ್ಯಾಮಸುಂದರ |
ನಿನ್ನ ಈ ರೂಪವ ಎನ್ನ ಮನದಲಿ ನಿಲಿಸೊ || ೩ ||

kaNNu eraDu saaladu namma beNNe melluva baalakRuShNana nODalu || pa ||

guMguru kUdalige sikkisida navilugari | 
muMguruLina kaaMti muKada celuva raashi ||
heMgaLeyaru naaci mOhisuva rIti |
hiMgade nODalu dRuShTi taakuva bhIti || 1 ||

haNeyoLu oppuva kastUri tilaka |
karNadoLu ADuva kuMDala JaLaka ||
varNa varNada pItaaMbarada uDugeya |
varNisalu aLavalla manuja maatinali || 2 ||

caaru caraNadalli shObhipa nUpura |
saara bhaktara manava sUregoMba teradi ||
maarapita guru shyaamasuMdara |
ninna I rUpava enna manadali niliso || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru