ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಾರಾಯಣ ಎನ್ನಿರೊ ಸಜ್ಜನರೆಲ್ಲ | ಹಯವದನ | Narayana Enniro | Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ನಾರಾಯಣ ಎನ್ನಿರೊ ಸಜ್ಜನರೆಲ್ಲ || ಪ ||
ಸಾರರಹಿತ ಸಂಸಾರದಲ್ಲಿ ಪರ
ಸಾರ ಇದು ಎಂದು ಸಂಸಾರಿ ನೀವೆಲ್ಲ || ಅಪ ||

ಇಹಪರ ಸುಖವುಂಟೋ ಇದರ ಫಲ
ಬಹಳ ಕಟ್ಟಿದ ಗಂಟೋ ಘನಮಹಿಮಗೆ ಇದು
ಮಹಮಹಿಮೆ ಇದಲ್ಲದೆ ಮಹಿಯೊಳಗಿದು
ಮಹಾರಸವಾದಂಥ ಮಂತ್ರವು ಮಹಭಕುತಿಪೂರ್ವಕವಾಗಿ ಒಮ್ಮೆ || ೧ ||

ಹಸಿವೆಯ ಶ್ರಮವಿರಲಿ ಹಸಿವಿರದೆ ಹ
ರುಷವು ತಾನಿರಲಿ ರಸಿಕಶ್ರಮ ಕೆರಳಿ ಮಾ
ನಸ ವಶವು ಆಗಲಿ ಆಗದಿರಲಿ
ದೋಷವಾಗಲಿ ಶುದ್ಧವಾಗಲಿ ಶ್ರೀಶನ ಮರೆಯದೆ ಹಾಂಗೆ || ೨ ||

ಚೋರನೆಂದೆನದೆ ಚಿತ್ತದಲ್ಲಿ
ಜಾರನೆಂದೆಣಿಸದೆ ಸ್ಮರಣೆ ಮಾತ್ರದಿ ಬಹಳ
ಪಾರರಹಿತ ಅನರ್ಥಸಂಚಿತ
ಹರಣ ಮಾಡುವ ಪವನಪ್ರಿಯ ಸರ್ವರಂತರ ಹಯವದನ || ೩ ||

naaraayaNa enniro sajjanarella || pa ||
saararahita saMsaaradalli para
saara idu eMdu saMsaari nIvella || apa ||

ihapara suKavuMTO idara Pala
bahaLa kaTTida gaMTO Ganamahimage idu
mahamahime idallade mahiyoLagidu
mahaarasavaadaMtha maMtravu mahabhakutipUrvakavaagi omme || 1 ||

hasiveya shramavirali hasivirade ha
ruShavu taanirali rasikashrama keraLi mA
nasa vashavu Agali Agadirali
dOShavaagali shuddhavaagali shrIshana mareyade haaMge || 2 ||

cOraneMdenade cittadalli
jaaraneMdeNisade smaraNe maatradi bahaLa
paararahita anarthasaMcita
haraNa maaDuva pavanapriya sarvaraMtara hayavadana || 3 ||
 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru