ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹೊಸ ಬೆಣ್ಣಿ ಕೊಡುವೆನು | ಪ್ರಸನ್ನವೆಂಕಟ | Hosa Benne Koduvenu | Prasanna Venkata


ಸಾಹಿತ್ಯ : ಶ್ರೀ ಪ್ರಸನ್ನ ವೆಂಕಟ ದಾಸರು
Kruti: Sri Prasanna Venkata Dasaru


ಹೊಸ ಬೆಣ್ಣೆ ಕೊಡುವೆನು ಕುಸುಮನಾಭನೆ ಕೃಷ್ಣ ಮನೆಗೆ ಬಾರೋ ರಂಗ ಬಾರೋ ಮನೆಗೆ || ಪ ||

ಕೆನೆ ಹಾಲು ಮೊಸರು ತಂಗಳು ಬೆಣ್ಣೆ ನಿನಗೇನು ಬೇಕೋ ಹೇಳೋ ರಂಗಯ್ಯ || ಅಪ ||

ಕಳುವು ಮಾಡುವುದ್ಯಾಕೋ ಗೆಳೆಯರ ಸಂಗವ್ಯಾಕೋ ನಿನಗೇನು ಬೇಕೋ ಹೇಳೋ ರಂಗಯ್ಯಾ || ೧ ||

ಊರೂರು ತಿರುಗುವ ದಾಸನ ಮಗನೇನೋ ನಿನಗ್ಯಾವ ಕೊರತೆಯೋ ಎನ್ನ ಮನೆಯಲ್ಲಿ || ೨ ||

ನಿನ್ನ ದರುಶನವೇ ಚಿನ್ನದ ಅರಸೆ ಘನ್ನ ಮಹಿಮ ಪ್ರಸನ್ನ ವೆಂಕಟಪತಿ ಕೃಷ್ಣ || ೩ ||


hosa beNNe koDuvenu kusumanaabhane kRuShNa manege baarO raMga baarO manege || pa ||

kene haalu mosaru taMgaLu beNNe ninagEnu bEkO hELO raMgayya || apa ||

kaLuvu maaDuvudyaakO geLeyara saMgavyaakO ninagEnu bEkO hELO raMgayyaa || 1 ||

UrUru tiruguva daasana maganEnO ninagyaava korateyO enna maneyalli || 2 ||

ninna darushanavE cinnada arase Ganna mahima prasanna veMkaTapati kRuShNa || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru