ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹರಿ ಹರಿ ಹರಿ ಎಂದು ಒದರೋ | ಮಧ್ವೇಶಕೃಷ್ಣ | Hari Hari Hari endu odaro | Madhwesha Vittala


ಸಾಹಿತ್ಯ : ಶ್ರೀ ಮಧ್ವೇಶ ವಿಠಲ ದಾಸರು  
Kruti:Sri Madhwesha Vittala Dasaru


ಹರಿ ಹರಿ ಹರಿ ಎಂದು ಒದರೋ
ನಿನ್ನ ಹರಿದಾವ ಕಾಲಕು ಬಿಡನೋ || ಪ ||

ಹರಿ ಹರಿ ಎಂದು ನೀ ಕುಣಿಯೋ
ಹರಿ ನಿನ್ನ ಕರುಣದಿ ಪೊರೆವ || ಅಪ ||

ಜಗವೆಲ್ಲ ಅವನ ಅಧೀನ ನೋಡೋ ಖಗಪತಿವಾಹನ ಪ್ರಧಾನ
ನಗು ಮೊಗದ ಚೆಲುವ ನಿಧಾನ ಇನ್ನು ಹಿಡಿ ಅವನ ಸನ್ನಿಧಾನ || ೧ ||

ನುಡಿ ನುಡಿಗೆ ಹರಿಯೆನಲು ಎಡೆಬಿಡದೆ ಪೊರೆವ ನಿಶಿ ಹಗಲು
ಬಿಡದೋಡಿಸುವನು ದಿಗಲು ಸಡಗರದಿ ದಯವು ಸಿಗಲು || ೨ ||

ದಾಸರ ಸಂಗವ ಮಾಡೋ ಹರಿದಾಸರ ಸಂಗವ ಸೇರೋ
ಈಶನ ಅನುಗ್ರಹ ಪಡೆಯೋ ಲೇಸಾಗಿ ಹರಿಕಥೆ ಸಾರೋ || ೩ ||

ಹೆಜ್ಜೆ ಹೆಜ್ಜೆಗೆ ನೆನೆಯೋ ಅರ್ಜುನ ಸಾರಥಿ ಕಾವಾ
ನಿರ್ಜರೇಶ ಬಂದು ಕಾವಾ ಸಜ್ಜಾಗಿ ಒಲಿಯುತ ನಲಿವಾ || ೪ ||

ನೀರೊಳು ಮುಳುಗಿ ತಾ ಬಂದಾ ಅಲ್ಲಿ ಭಾರವ ಪೊತ್ತು ತಾ ನಿಂದಾ 
ಭೂಮಿಯ ಮೇಲಕೆ ತಂದಾ ತರಳಗೆ ಕಂಭದಿ ಬಂದಾ || ೫ ||

ದಾನವ ಬೇಡಿ ತಾ ನಿಂದು ಮುಂದೆ ತನ್ನ ತಾನೆ ಗೆದ್ದು ಬಂದು
ಹೆಣ್ಣು ಕದ್ದವನ ಕೊಂದು ಧನ್ಯನಾದ ಗೋಕುಲದಿ ಬಂದು || ೬ ||

ಬೌದ್ಧನಾಗಿ ಅವತರಿಸಿ ಬುದ್ಧಿ ಮೋಹಕ ಮಾಡಿ
ಕಲ್ಕಿಯಾಗಿ ತಾ ಬಂದು ಮಧ್ವೇಶ ಕೃಷ್ಣನಾಗಿ ನಿಂದು || ೭ ||

hari hari hari eMdu odarO
ninna haridaava kaalaku biDanO || pa ||

hari hari eMdu nI kuNiyO
hari ninna karuNadi poreva || apa ||

jagavella avana adhIna nODO Kagapativaahana pradhaana
nagu mogada celuva nidhaana innu hiDi avana sannidhaana || 1 ||

nuDi nuDige hariyenalu eDebiDade poreva nishi hagalu
biDadODisuvanu digalu saDagaradi dayavu sigalu || 2 ||

dAsara saMgava maaDO haridaasara saMgava sErO
Ishana anugraha paDeyO lEsaagi harikathe saarO || 3 ||

hejje hejjege neneyO arjuna saarathi kaavaa
nirjarEsha baMdu kaavaa sajjaagi oliyuta nalivaa || 4 ||

nIroLu muLugi taa baMdaa alli bhaarava pottu taa niMdaa 
bhUmiya mElake taMdaa taraLage kaMbhadi baMdaa || 5 ||

daanava bEDi taa niMdu muMde tanna taane geddu baMdu
heNNu kaddavana koMdu dhanyanaada gOkuladi baMdu || 6 ||

bouddhanaagi avatarisi buddhi mOhaka maaDi
kalkiyaagi taa baMdu madhvEsha kRuShNanaagi niMdu || 7 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru