ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಂದ ನಂದನ ಬಾರೋ | ಪುರಂದರವಿಠಲ | Nanda nandana baaro | Purandara vittala


ಸಾಹಿತ್ಯ : ಶ್ರೀ ಪುರಂದರ ದಾಸರು
Kruti: Sri Purandara dasaru


ನಂದ ನಂದನ ಬಾರೋ || ಪ ||

ಎನಗೆ ನಿನ್ನ ಸೌಂದರ್ಯ ಲೀಲೆಯ ತೋರೋ ತೋರೋ || ಅಪ ||

ಕೊಳಲನೂದುವ ಚಂದದಿ ಹಣೆಯಲ್ಲಿ ಸುಳಿಗೂದಲಾಡುವಂದದಿ ಚಂದದಿ |
ತುಳಸೀ ಪುಷ್ಪದ ಬೃಂದದಿ ಪುರದಾಚೆಯಲ್ಲಿ ನಲಿ ನಲಿದಾಡುವಂದದಿ ಚಂದದಿ
ಘಲ ಘಲ ಘಲ ಘಲ ನಲಿವ ಕುಂಡಲ ನಿಜ ತೋಳುಗಳೊಪ್ಪುವ ಬಾಪುರಿಗಳಿಂದಲಿ
ಥಳ ಥಳ ಥಳ ಥಳ ಕಾಂತಿಗಳಿಂದ || ೧ ||

ಮಣಿಯಿಲ್ಲದ ಕೌಸ್ತುಭದಿ ಎಸೆವ ಮುಕುಟ ಮಣಿಹಾರ ಶ್ರೀವತ್ಸದಿ ವತ್ಸದಿ 
ಮಣಿಮಯ ಕಿರೀಟದಿ ಅಂದದೊಪ್ಪುವ ಅಗಣಿತ ಮಹ ತೇಜದಿ ತೇಜದಿ
ಝಣ ಝಣ ಝಣ ಝಣ ಝಂ ಪರಿಮಳದಿ ಕಿಣಿ ಕಿಣಿ ಕಿಣಿ ಕಿಣಿ ಕಿಂಕಿಣಿ ರವದಿಂದ
ಠಣ ಠಣ ಠಣ ಉಡು ಝಂಗೆಗಳಿಂದ || ೨ ||

ಅಮಿತ ಜಯ ಪಾಂಡುರಂಗ ವಿಜಯ ಭವ ಅಮರೇಶ ನಿಕರ ತುಂಗ ತುಂಗ ವಿಮಲಪುರಿ ಅಂತರಂಗ
ಪುರಂದರ ವಿಠಲೇಶ ನಿಕರ ತುಂಗ ತುಂಗ ಘಮ ಘಮ ಘಮ ಘಮ ಘಂ ಪರಿಮಳದಿ
ಅಮರರು ಮೃದಂಗ ತಾಳಗಳಿಂದ ಧಿಮಿ ಧಿಮಿ ಧಿಮಿ ಧಿಮಿ ಧಿಂ ಧಿಂ ಎನ್ನುತ || ೩ ||

naMda naMdana baarO || pa ||

enage ninna souMdarya lIleya tOrO tOrO || apa ||

koLalanUduva caMdadi haNeyalli suLigUdalaaDuvaMdadi caMdadi |
tuLasI puShpada bRuMdadi puradaaceyalli nali nalidaaDuvaMdadi caMdadi
Gala Gala Gala Gala naliva kuMDala nija tOLugaLoppuva baapurigaLiMdali
thaLa thaLa thaLa thaLa kaaMtigaLiMda || 1 ||

maNiyillada koustubhadi eseva mukuTa maNihaara shrIvatsadi vatsadi 
maNimaya kirITadi aMdadoppuva agaNita maha tEjadi tEjadi
JaNa JaNa JaNa JaNa JaM parimaLadi kiNi kiNi kiNi kiNi kiMkiNi ravadiMda
ThaNa ThaNa ThaNa uDu JaMgegaLiMda || 2 ||

amita jaya paaMDuraMga vijaya bhava amarEsha nikara tuMga tuMga vimalapuri aMtaraMga
puraMdara viThalEsha nikara tuMga tuMga ghama ghama ghama ghama ghaM parimaLadi
amararu mRudaMga taaLagaLiMda dhimi dhimi dhimi dhimi dhiM dhiM ennuta || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru