ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಎಂದು ಕಾಂಬೆನು ನಿನ್ನ ಹೇ ಶ್ರೀನಿವಾಸ | ಶ್ರೀದವಿಠಲ | Endu kambenu ninna | Srida Vittala


ಸಾಹಿತ್ಯ : ಶ್ರೀ ಶ್ರೀದವಿಠಲ ದಾಸರು
Kruti: Sri Srida Vittala Dasaru


ಎಂದು ಕಾಂಬೆನು ನಿನ್ನ ಹೇ ಶ್ರೀನಿವಾಸ || ಪ ||

ನಗೆಮೊಗದ ನತಜನ ಬಂಧು ನೀ ಬಾರೆನ್ನ ಸದಾ ಸುಪ್ರಸನ್ನ 
ಮುಂದೆ ಗತಿ ಏನಯ್ಯ ಭಕುತರ ಹಿಂದುಳಿದುದಲ್ಲದೆಲೆ
ತನು ಸಂಬಂಧಿಗಳ ವಶನಾಗಿ ದುರ್ವಿಷಯಾಂಧ ಕೂಪದಿ ಮುಳುಗಿದವನಾ || ಅಪ ||

ಹಲವು ಜನ್ಮದ ನೋವ ನಾ ಹೇಳಿ ಕೊಳಲೆನ್ನಳವೆ ದೇವರದೇವಾ
ಭೂವಲಯದೊಳು ನಂಬಿದ ಭಕುತರ ಕಾವ ಮಹಾನುಭಾವ
ಸುಲಭರಲಿ ಅತಿ ಸುಲಭವೆಂದು ಅಲವಭೋದ ಮತಾನುಗರು ಎನಗೊಲಿದು ಪೇಳಿದ್ದ 
ದನು ಮನದಲಿ ತಿಳಿದುದೇನಿಸುವೆನಲು ಕಲುಷ ಸಂಸ್ಕಾರಗಳ ವಶದಿಂ
ಫಲವು ಗಾಣದೆ ಹಲಬುತಿರುವೆನು ಹೊಲಯ ಮನದ್ಹರಿದಾಟ ತಪ್ಪಿಸಿ 
ನೆಲೆಯ ನಿಲ್ಲಿಸದಿರ್ದ ಬಳಿಕ || ೧ ||

ಭಾರತೀಪತಿಪ್ರೀಯ ಎಂದೆಂದೂ ಭಕುತರ ಭಾರ ನಿನ್ನದು 
ಜೀಯ ಜಗವರಿಯೆ ಕರುಣಾ ವಾರಿನಿಧಿ ಪಿಡಿ ಕೈಯ್ಯಾ ಫಣಿರಾಜ ಶಯ್ಯ 
ತಾರಕನು ನೀನೆಂದು ತಿಳಿಯದ ಕಾರಣದಿ ಸುಖದುಃಖಮಯ 
ಸಂಸಾರ ದುಸ್ತರ ವಾರಿಧಿಯೊಳು ಪಾರುಗಾಣದೆ ಪರಿದು ಪೋಪೆನೊ
ದೂರ ನೋಳ್ಪುದು ಧರ್ಮವಲ್ಲವೊ ದ್ವಾರಕಾಪುರ ನಿಲಯ
ಪರಮೋದಾರ ಕರುಣದಿ ರಕ್ಷಿಸುವ ಭಾರ ನಿನ್ನದೊ ಭವ ವಿಮೋಚಕ || ೨ ||

ವಿಖನ ಸಾರ್ಚಿತ ಪಾದ ವಿಶ್ವೇಶ ಜನ್ಮಾದ್ಯಖಿಳ ಕಾರಣನಾದ
ನಿರ್ದೋಷ ಚಿತ್ತನೆ ಸುಖ ಗುಣಾರ್ಣವ ಶ್ರೀದವಿಠಲ ಪ್ರಸೀದ
ಸಕಲ ಸತ್ಕೃತು ಯಾಗಗಳು ಬಂಧಕವು ತೋತ್ಪರ ಇಲ್ಲದಿರಲೆನೆ
ನಿಖಿಲ ಜೀವರು ಭಿನ್ನ ನಿನ್ನಯ ಶಕುತಿಗೆ ನಮೋ ಎಂಬೆನಲ್ಲದೆ
ಯುಕುತ ಯುಕ್ತಿಗಳೊಂದನರಿಯೆ ಅರ್ಭಕನ ಭಿನ್ನಪ ವಹಿಸಿ ನವ ವಿಧ
ಭಕುತಿ ಭಾಗ್ಯವ ಕೊಟ್ಟು ತವ ಸೇವಕರ ಸೇವಕನೆನಿಸದಿರ್ದೊಡೆ || ೩ ||

eMdu kaaMbenu ninna hE shrInivaasa || pa ||

nagemogada natajana baMdhu nI baarenna sadaa suprasanna 
muMde gati Enayya bhakutara hiMduLidudalladele
tanu saMbaMdhigaLa vashanaagi durviShayaaMdha kUpadi muLugidavanaa || apa ||

halavu janmada nOva naa hELi koLalennaLave dEvaradEvaa
bhUvalayadoLu naMbida bhakutara kaava mahaanubhaava
sulabharali ati sulabhaveMdu alavabhOda mataanugaru enagolidu peLidda 
danu manadali tiLidudEnisuvenalu kaluSha saMskaaragaLa vashadiM
Palavu gaaNade halabutiruvenu holaya manad~haridaaTa tappisi 
neleya nillisadirda baLika || 1 ||

bhaaratIpatiprIya eMdeMdU bhakutara bhaara ninnadu 
jIya jagavariye karuNaa vaarinidhi piDi kaiyyaa PaNiraaja shayya 
taarakanu nIneMdu tiLiyada kaaraNadi suKaduHKamaya 
saMsaara dustara vaaridhiyoLu paarugaaNade paridu pOpeno
dUra nOLpudu dharmavallavo dvaarakaapura nilaya
paramOdaara karuNadi rakShisuva bhaara ninnado bhava vimOcaka || 2 ||

viKana saarcita paada vishvEsha janmaadyakhiLa kaaraNanaada
nirdOSha cittane suKa guNaarNava shrIdaviThala prasIda
sakala satkRutu yaagagaLu baMdhakavu tOtpara illadiralene
niKila jIvaru bhinna ninnaya shakutige namO eMbenallade
yukuta yuktigaLoMdanariye arbhakana bhinnapa vahisi nava vidha
bhakuti bhaagyava koTTu tava sEvakara sEvakanenisadirdoDe || 3 ||

 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru