ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಅಧಿಕಮಾಸದ ಹಾಡು| ಅಧಿಕಮಾಸ ಬಂದು | ಮಧ್ವೇಶಕೃಷ್ಣ | Adhika Masa Bandu | Madhvesha Krishna


ಸಾಹಿತ್ಯ : ಶ್ರೀ ಮಧ್ವೇಶ ವಿಠಲ ದಾಸರು 
Kruti: Sri Madhwesha Vittala Dasaru

ಅಧಿಕ ಮಾಸ ಬಂದು ಅಧಿಕಾನಂದ ತಂದು 
ಅಗಣಿತ ಮಹಿಮನ ಆರಾಧಿಸಲೆಂದು
ಅಧಿಕ ಅಧಿಕವಾಗಿ ಅನುಗ್ರಹ ಪೊಂದಲು 
ಅಪೂಪ ದಾನಗಳ ನೀಡೆನ್ನಲು || ಪ ||

ಅಷ್ಟ ವಸುಗಳು ಏಕಾದಶ ರುದ್ರರು 
ದ್ವಾದಶ ಆದಿತ್ಯರ ಸಹಿತವಾಗಿ 
ವಷಟ್ಕಾರ ಮತ್ತು ಭಗಧಾತು ಎಂದು
ಮೂವತ್ತಮೂರು ರಂಗೋಲೆ ಹಾಕಿ || ೧ ||

ಅಧಿಕ ಮಾಸದಲ್ಲಿ ಮುದ ಮನದಿಂದ
ಭಕ್ತರಿಗೆ ದಾನವ ಮಾಡಲು
ಅಧಿಕಧಿಕವಾಗಿ ಫಲ ಬರುವುದೆಂದು
ಪದುಮನಾಭನ ದಯೆ ಸಿಗುವುದೆಂದು || ೨ ||

ವ್ರತ ನೇಮ ಉಪವಾಸ ಸಂಪತ್ತು ಭೋಜನ
ಲಕ್ಷ ಬತ್ತಿ ಲಕ್ಷ ನಮಸ್ಕಾರವು
ಏಕಭುಕ್ತಿ ದಿಕ್ಕು ಬದಲಿಸಿ ಊಟ
ಧಾರಣೆ ಪಾರಣೆ ವಿಷ್ಣು ಪಂಚಕವು || ೩ ||

ಲಕ್ಷ ಪುಷ್ಪಾರ್ಚನೆ ಮೌನವ್ರತವು ಬಳಿಕ
ಅರಿಷಿಣ ಕುಂಕುಮ ಮರದ ಬಾಗಿನವು
ವಸ್ತ್ರಗಳ ದಾನ ಭಾಗವತ ಶ್ರವಣ
ಪುರಾಣಾದಿಗಳ ಮನನವು || ೪ ||

ನಿತ್ಯ ಧಾನ್ಯಗಳ ದಾನ ವಿವಿಧ ಫಲಗಳ ದಾನ
ನಿತ್ಯ ಗೆಜ್ಜೆವಸ್ತ್ರದ ದಾನವು
ನಾರಿಕೇಳದ ದಾನ ಕಲ್ಲು ಸಕ್ಕರೆ ದಾನ
ಖರ್ಜೂರದಾ ದಾನಗಳು || ೫ ||

ಹಾಲು ಮೊಸರಿನ ದಾನ ಅಡಿಕೆ ವೀಳ್ಯದೆಲೆ ದಾನ
ಸಾಲಿಗ್ರಾಮದ ದಾನಗಳು
ಭಾಗವತ ಗ್ರಂಥದ ದಾನವು
ಮುವ್ವತ್ತ ಮೂರು ದಾಸರ ಪದ ಗಾಯನವು || ೬ ||

ದಿನದಿನವು ಮನೆಯಲ್ಲಿ ಶಾಂತಿಯು ನೆಲೆಸುವುದು
ಅನುದಿನ ಆನಂದವಾಗುವುದು
ಸಚ್ಚಿದಾನಂದನ ದಯೆ ಸಿಗಲೆಂದು
ಮಧ್ವೇಶ ಕೃಷ್ಣನಲ್ಲಿ ಬೇಡುವುದು || ೭ ||

adhika maasa baMdu adhikaanaMda taMdu 
agaNita mahimana AraadhisaleMdu
adhika adhikavaagi anugraha poMdalu 
apUpa daanagaLa nIDennalu || pa ||

aShTa vasugaLu Ekaadasha rudraru 
dvaadasha Adityara sahitavAgi 
vaShaTkaara mattu bhagadhaatu eMdu
mUvattamUru raMgOle haaki || 1 ||

adhika maasadalli muda manadiMda
bhaktarige daanava maaDalu
adhikadhikavaagi Pala baruvudeMdu
padumanaabhana daye siguvudeMdu || 2 ||

vrata nEma upavaasa saMpattu bhOjana
lakSha batti lakSha namaskaaravu
Ekabhukti dikku badalisi UTa
dhaaraNe paaraNe viShNu paMcakavu || 3 ||

lakSha puShpaarcane mounavratavu baLika
ariShiNa kuMkuma marada baaginavu
vastragaLa daana bhaagavata shravaNa
puraaNaadigaLa mananavu || 4 ||

nitya dhaanyagaLa daana vividha PalagaLa daana
nitya gejjevastrada daanavu
naarikELada daana kallu sakkare daana
KarjUradaa daanagaLu || 5 ||

haalu mosarina daana aDike vILyadele daana
saaligraamada daanagaLu
bhaagavata graMthada daanavu
muvvatta mUru daasara pada gaayanavu || 6 ||

dinadinavu maneyalli shaaMtiyu nelesuvudu
anudina AnaMdavaaguvudu
saccidaanaMdana daye sigaleMdu
madhvEsha kRuShNanalli bEDuvudu || 7 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru