ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಮಾತನಾಡೈ ಮನ್ನಾರಿ ಕೃಷ್ಣ | ವಿಜಯವಿಠಲ | Matanadai Mannari Krishna | Vijaya vithala


ಸಾಹಿತ್ಯ : ಶ್ರೀ ವಿಜಯ ದಾಸರು
Kruti:Sri Vijaya Dasaru


ಮಾತನಾಡೈ ಮನ್ನಾರಿ ಕೃಷ್ಣ || ಪ ||
ದಾತನು ನೀನೆಂದು ನಿನ್ನ ಬಯಸಿ ಬಂದೆ || ಅಪ ||

ಊದುವ ಸಿರಿ ಪೊಂಗೊಳಲೋ | ಜಗದಾಧಾರದ ನಿಜ ಹೊಳಲೋ
ಪಾದದ ಪೊಂಗೆಜ್ಜೆ ಘಳಿರೋ ಸರ್ವ ವೇದಗಳ ಅರಸುವ ಮಹಿಮೆಯ ಥಳಲೋ || ೧ ||

ಕಸ್ತೂರಿ ತಿಲಕದ ಮೊಗವೋ ಇದು ಮಕುಟ ಮಸ್ತಕದ ಝಗ ಝಗವೋ
ವಿಸ್ತರದಿ ಪೊತ್ತ ಜಗವೋ ಪರವಸ್ತುವೇ ನಂದ ಯಶೋದೆಯ ಮಗುವೋ || ೨ ||

ನವನೀತ ಪಿಡಿದ ಕರವೋ ನವನವ ಮೋಹನದ ಶೃಂಗಾರವೋ
ಅವನೀ ತರಿಸಿದ ಸುರತರುವೋ ದೇವ ರವಿಯುಂಗುರವಿಟ್ಟು ತೂಗುವ ಭರವೋ || ೩ ||

ಆನಂದ ಜ್ಞಾನದ ಹೃದವೋ ಶುಭ ಮಾನವರಿಗೆ ಬಲು ಮೃದುವೋ
ಆನನ ಛವಿಯೊಳು ಮಿದುವೋ ಪಾಪ ಕಾನನ ದಹಿಸುವ ಪಾವಕ ಪದವೋ || ೪ ||

ತ್ರಿಜಗದಿ ನಿರುತ ಪಾವನನೋ ಪಂಕಜನೇತ್ರೆಯ ನಾಯಕನೋ
ಅಜಭವಾದಿಗಳ ಜನಕನೋ ನಮ್ಮ ವಿಜಯವಿಠಲ ರೇಯ ಯದುಕುಮಾರಕನೋ || ೫ ||

maatanaaDai mannaari kRuShNa || pa ||
daatanu nIneMdu ninna bayasi baMde || apa ||

Uduva siri poMgoLalO | jagadaadhaarada nija hoLalO
paadada poMgejje GaLirO sarva vEdagaLa arasuva mahimeya thaLalO || 1 ||

kastUri tilakada mogavO idu makuTa mastakada Jaga JagavO
vistaradi potta jagavO paravastuvE naMda yashOdeya maguvO || 2 ||

navanIta piDida karavO navanava mOhanada shRuMgaaravO
avanI tarisida surataruvO dEva raviyuMguraviTTu tUguva bharavO || 3 ||

AnaMda j~jaanada hRudavO shubha maanavarige balu mRuduvO
Anana CaviyoLu miduvO paapa kaanana dahisuva paavaka padavO || 4 ||

trijagadi niruta paavananO paMkajanEtreya naayakanO
ajabhavaadigaLa janakanO namma vijayaviThala rEya yadukumaarakanO || 5 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru