ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಯಶೋದೆ ನಿನ್ನ ಕಂದಗೆ | ಪುರಂದರ ವಿಠಲ | Yashode ninna Kandage | Purandara vithala


ಸಾಹಿತ್ಯ : ಶ್ರೀ ಪುರಂದರ ದಾಸರು
Kruti: Sri Purandara dasaru


ಯಶೋದೆ ನಿನ್ನ ಕಂದಗೆ ಎಷ್ಟು ರೂಪವೇ ||ಪ|| 

ಶಿಶುವಲ್ಲ ನಿನ್ನ ಮಗ ಕೃಷ್ಣ ಜಗತ್ಪತಿಯೇ ||ಅಪ|| 

ಹಸುಗಳ ಕರೆವಲ್ಲಿ ಹಲವು ರೂಪ ತೋರುವ |
ಬಿಸಿ ಹಾಲಿಡುವಲ್ಲಿ ಬೆನ್ನ ಹಿಂದಿರುವ ||
ಮೊಸರು ಕಡೆವಲ್ಲಿ ಮುಂದೆ ತಾ ನಿಂದಿರುವ | 
ಹಸನಾಗಿ ಮೋಸ ಮಾಡಿ ಬೆಣ್ಣೆಯ ಮೆಲುವ ||೧|| 

ಒಬ್ಬರ ಮನೆಯಲ್ಲಿ ಮಲಗಿ ತಾನಿರುವ | 
ಒಬ್ಬರ ಮನೆಯಲ್ಲಿ ಪುಟ ಚೆಂಡನಾಡುವ || 
ಒಬ್ಬರ ಮನೆಯಲ್ಲಿ ರತಿ ಕ್ರೀಡೆಯಾಡುತ್ತಿರುವ | 
ಒಬ್ಬರ ಮನೆಯಲ್ಲಿ ಬೆಣ್ಣೆ ಕದ್ದು ಮೆಲುವ ||೨|| 

ಹಿಂದೆ ನಿಂದಿರುವ ಮುಂದೆ ಹೋಗುತ್ತಿರುವ | 
ಇಂದು ಮುಖಿಯರ ಕೂಡೆ ಸರಸವಾಡುವ || 
ಬಂದು ನೋಡೆ ಯಶೋದೆ ಬಣ್ಣದ ಮಾತಲ್ಲ | 
ನಂದ ಗೋಪನ ಕಂದ ಪುರಂದರ ವಿಠಲ ||೩|| 

yashOde ninna kaMdage eShTu rUpavE ||pa|| 
 
shishuvalla ninna maga kRuShNa jagatpatiyE ||apa|| 
 
hasugaLa karevalli halavu rUpa tOruva |
bisi hAliDuvalli benna hiMdiruva || 
mosaru kaDevalli muMde tA niMdiruva | 
hasanAgi mOsa maaDi beNNeya meluva ||1|| 
 
obbara maneyalli malagi tAniruva | 
obbara maneyalli puTa ceMDanADuva ||
obbara maneyalli rati krIDeyADuttiruva | 
obbara maneyalli beNNe kaddu meluva ||2|| 
 
hiMde niMdiruva muMde hOguttiruva | 
iMdu muKiyara kUDe sarasavADuva || 
baMdu nODe yaSOde baNNada mAtalla | 
naMda gOpana kaMda puraMdara viThala ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru