Posts

Showing posts from September, 2020

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ರಾಮ ರಾಮ ಶ್ರೀ ರಘುರಾಮ | ಭೀಮೇಶ ಕೃಷ್ಣ | Rama Rama Sri Raghurama | Bhimesha Krishna

Image
ಸಾಹಿತ್ಯ :    ಶ್ರೀ ಹರಪನಹಳ್ಳಿ ಭೀಮವ್ವ (ಭೀಮೇಶ ಕೃಷ್ಣ) Kruti: Sri Harapanahalli Bhimavva (Bhimesha Krishna) ರಾಮ ರಾಮ ಶ್ರೀ ರಘುರಾಮ ನೀಲಮೇಘಶ್ಯಾಮ ನಿಸ್ಸೀಮ  ಕಾಮಿತಾರ್ಥವ ಕರೆದತಿ ಪ್ರೇಮದಿಂದ ಪಾಲಿಪುದು ನಿನ್ನ ನಾಮ  || ಪ || ಕಲ್ಲೋದ್ಧಾರಕ ಕರುಣಾಳು ರಾಮ ಬಿಲ್ಲನೆತ್ತಿದ್ದ ಬಿರುದಾತ ರಾಮ ಸೊಲ್ಲು ಸೊಲ್ಲುಗಿರಲು ಹರಿನಾಮ ಚಿಲ್ಲ್ಯಾಡುವ ದಯ ಅವರಲ್ಲಿ ಪ್ರೇಮ || ೧ || ಧೀರಪುರುಷನೆ ದಿಗ್ವಿಜಯ ರಾಮ ವಾರಿಧಿಯ ಕಟ್ಟಿದ ವನಜಾಕ್ಷ ರಾಮ ಕ್ರೂರರಾಕ್ಷಸನನ್ನು ಕೊಂದು ಲಂಕಾ ಸೂರೆಯನು ಮಾಡಿದಂಥ ನಿಸ್ಸೀಮ  || ೨ || ದುಷ್ಟರಾವಣಶತ್ರು ಶ್ರೀರಾಮ ಹುಟ್ಟಿ ಭಾನುವಂಶದಿ ಸೀತಾರಾಮ ಮುಟ್ಟಿಭಜಿಸೆ ಸಜ್ಜನರಿಗೆ ಭೀಮೇಶ- ಕೃಷ್ಣ ಕರೆದು ನೀಡುವ ತನ್ನ ಧಾಮ || ೩ || rAma rAma SrI raGurAma nIlamEGaSyAma nissIma  kAmitArthava karedati prEmadiMda pAlipudu ninna nAma  || pa || kallOddhAraka karuNALu rAma billanettidda birudAta rAma sollu sollugiralu harinAma cillyADuva daya avaralli prEma || 1 || dhIrapuruShane digvijaya rAma vAridhiya kaTTida vanajAkSha rAma krUrarAkShasanannu koMdu laMkA sUreyanu mADidaMtha nissIma  || 2 || duShTarAvaNaSatru SrIrAma huTTi BAnuvaMSadi sItArAma muTTiBaj...

ಓ ಸಂತಸದ ಸೆಲೆಯೇ | ಕನ್ನಡ ದ್ವಾದಶಸ್ತೋತ್ರ | ಬನ್ನಂಜೆ ಗೋವಿಂದಾಚಾರ್ಯ | Kannada Dwadasha Stotra | O Santasada

Image
ಶ್ರೀ ಮದಾನಂದತೀರ್ಥ ವಿರಚಿತ ದ್ವಾದಶ ಸ್ತೋತ್ರದ ಕನ್ನಡ ಅನುವಾದ  Kannada translation of Dwadasha Stotra by Srimad Ananda Teerthacharya ಕನ್ನಡ ಅನುವಾದ : ಶ್ರೀ ಬನ್ನಂಜೆ ಗೋವಿಂದಾಚಾರ್ಯ  Kannada Translation : Sri Bannanje Govindacharya ಓ ಸಂತಸದ ಸೆಲೆಯೇ ಬಿಡುಗಡೆಯನೀವವನೆ ಓ ಅರಳುದಾವರೆಯ ಕಣ್ಗಳವನೆ ಆನಂದ ತೀರ್ಥರಿಗೆ ತುಂಬು ಸಂತಸವೆಂಬ  ವರವಿತ್ತ ದೈವತವೇ ನಿನಗೆ ನಮನಂ || ೧ || ಬಗೆಯ ಸುಂದರಿಯನ್ನು ಎದೆಯಲ್ಲಿ ಹೊತ್ತವನೇ ಓಹೋ ಗೋವಿಂದನೇ ನಿನಗೆ ನಮನಂ  ಆನಂದ ತೀರ್ಥರಿಗೆ ತುಂಬು ಸಂತಸವೆಂಬ  ವರವಿತ್ತ ದೈವತವೇ ನಿನಗೆ ನಮನಂ || ೨ || ಚಂದಿರನ ಹೊತ್ತಿರುವ ನವಿಲ ಸೋಗೆಯ ತೊಟ್ಟು ಜಗಕೆ ಸಂತಸವೀವ ನಿನಗೆ ನಮನಂ ಆನಂದ ತೀರ್ಥರಿಗೆ ತುಂಬು ಸಂತಸವೆಂಬ  ವರವಿತ್ತ ದೈವತವೇ ನಿನಗೆ ನಮನಂ || ೩ || ಬಗೆಯ ಬೆಳಗುವ ಚಂದ್ರ ಸುರರನಾಳುವ ಇಂದ್ರ ಇವರಿಂದ ವಂದಿತನೇ ನಿನಗೆ ನಮನಂ ಆನಂದ ತೀರ್ಥರಿಗೆ ತುಂಬು ಸಂತಸವೆಂಬ  ವರವಿತ್ತ ದೈವತವೇ ನಿನಗೆ ನಮನಂ || ೪ || ದೇವಲೋಕದ ಎಲ್ಲ ಸಗ್ಗಿಗರ ಗಡಣವು ಭಕ್ತಿಯಿಂದ ಎರಗುತಿಹ ನಿನಗೆ ನಮನಂ ಆನಂದ ತೀರ್ಥರಿಗೆ ತುಂಬು ಸಂತಸವೆಂಬ  ವರವಿತ್ತ ದೈವತವೇ ನಿನಗೆ ನಮನಂ || ೫ || ನಿನ್ನೆಡೆಗೆ ಹರಿದು ಬಹ ಸುರರೆಡೆಗೆ ಕಾರುಣ್ಯ ರಸವನ್ನು ಸುರಿಸುತಿಹ ನಿನಗೆ ನಮನಂ ಆನಂದ ತೀರ್ಥರಿಗೆ ತುಂಬು ಸಂತಸವೆಂಬ  ವರವಿತ್ತ ದೈವತವೇ ನಿನಗೆ ನಮನಂ || ೬ ...

ಪಂಢರಾಪುರರಾಜ ವಿಠಲ | ಪ್ರಸನ್ವೇಂಕಟ | Pandarapura Raja Vithala | Prasanvenkata

Image
ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟ ದಾಸರು  Kruti: Sri Prasanna Venkata Dasaru ಪಂಢರಾಪುರ ರಾಜ ವಿಠ್ಠಲಾ || ಪ || ಪಂಡಿತಾರ್ಚಿತ ಕುಂಡಲೀಶಯನ | ಪಾಂಡುರಂಗ ಹರಿಗೋಪಾಲಾ || ಅಪ || ಚತುರಾನನಪಿತ ಚತುರ್ಭುಜಾಂಕಿತ | ಚಟುಲರೂಪ ಚತುರಾಚ್ಯುತಮಹತಾ || ಸತ್‌ಚಿತ್ತಾಕೃತ ಅಚಿಂತ್ಯಾದ್ಭುತ | ಚಿತ್ರಚರಿತ ಜಗದೇಕ ಜಾಗೃತಾ || ೧ || ಇಟ್ಟಿಗೆ ಮೇಲಿಟ್ಟ ಪುಟ್ಟ ಪಾದವು | ಸೃಷ್ಟಿಸಿತು ಪಾಪರಟ್ಟುಮಾಳ್ಪನದಿ || ಕಟಿಯಲಿಟ್ಟ ಕರ ದುಷ್ಟಕೂಟದ | ಹುಟ್ಟಡಗಿಸಿ ಜಗ ಸೃಷ್ಟಿಸಿತು || ೨ || ನೊಸಲೊಳಗಿರಿಸಿದ ಕಸ್ತೂರಿ ತಿಲಕ | ಹಸನಾಗಿ ವೈಷ್ಣವ ಮುದ್ರೆಗಳೊಪ್ಪುವಾ | ವಸನ ಶ್ವೇತ ಶಶಿ ಸೂರ್ಯಾಭರಣ | ವಾಸುದೇವ ಸಿರಿ ಪ್ರಸನ್ವೇಂಕಟರನ್ನಾ || ೩ || paMDharApura rAja viThThalA || pa || paMDitArcita kuMDalISayana | pAMDuraMga harigOpAlA || apa || chaturAnanapita chaturBujAMkita | chaTularUpa chaturAcyutamahatA || satchittAkRuta achiMtyAdButa | chitracarita jagadEka jAgRutA || 1 || iTTige mEliTTa puTTa pAdavu | sRuShTisitu pAparaTTumALpanadi || kaTiyaliTTa kara duShTakUTada | huTTaDagisi jaga sRuShTisitu || 2 || nosaloLagirisida kastUri tilaka | hasanAgi vaiShNava mudregaLoppuvA | vasana SvEta SaSi sUryABaraNa | vAsudEva siri pr...

ಅಧಿಕಮಾಸದ ಹಾಡು| ಅಧಿಕಮಾಸ ಬಂದು | ಮಧ್ವೇಶಕೃಷ್ಣ | Adhika Masa Bandu | Madhvesha Krishna

Image
ಸಾಹಿತ್ಯ : ಶ್ರೀ ಮಧ್ವೇಶ ವಿಠಲ ದಾಸರು  Kruti: Sri Madhwesha Vittala Dasaru ಅಧಿಕ ಮಾಸ ಬಂದು ಅಧಿಕಾನಂದ ತಂದು  ಅಗಣಿತ ಮಹಿಮನ ಆರಾಧಿಸಲೆಂದು ಅಧಿಕ ಅಧಿಕವಾಗಿ ಅನುಗ್ರಹ ಪೊಂದಲು  ಅಪೂಪ ದಾನಗಳ ನೀಡೆನ್ನಲು || ಪ || ಅಷ್ಟ ವಸುಗಳು ಏಕಾದಶ ರುದ್ರರು  ದ್ವಾದಶ ಆದಿತ್ಯರ ಸಹಿತವಾಗಿ  ವಷಟ್ಕಾರ ಮತ್ತು ಭಗಧಾತು ಎಂದು ಮೂವತ್ತಮೂರು ರಂಗೋಲೆ ಹಾಕಿ || ೧ || ಅಧಿಕ ಮಾಸದಲ್ಲಿ ಮುದ ಮನದಿಂದ ಭಕ್ತರಿಗೆ ದಾನವ ಮಾಡಲು ಅಧಿಕಧಿಕವಾಗಿ ಫಲ ಬರುವುದೆಂದು ಪದುಮನಾಭನ ದಯೆ ಸಿಗುವುದೆಂದು || ೨ || ವ್ರತ ನೇಮ ಉಪವಾಸ ಸಂಪತ್ತು ಭೋಜನ ಲಕ್ಷ ಬತ್ತಿ ಲಕ್ಷ ನಮಸ್ಕಾರವು ಏಕಭುಕ್ತಿ ದಿಕ್ಕು ಬದಲಿಸಿ ಊಟ ಧಾರಣೆ ಪಾರಣೆ ವಿಷ್ಣು ಪಂಚಕವು || ೩ || ಲಕ್ಷ ಪುಷ್ಪಾರ್ಚನೆ ಮೌನವ್ರತವು ಬಳಿಕ ಅರಿಷಿಣ ಕುಂಕುಮ ಮರದ ಬಾಗಿನವು ವಸ್ತ್ರಗಳ ದಾನ ಭಾಗವತ ಶ್ರವಣ ಪುರಾಣಾದಿಗಳ ಮನನವು || ೪ || ನಿತ್ಯ ಧಾನ್ಯಗಳ ದಾನ ವಿವಿಧ ಫಲಗಳ ದಾನ ನಿತ್ಯ ಗೆಜ್ಜೆವಸ್ತ್ರದ ದಾನವು ನಾರಿಕೇಳದ ದಾನ ಕಲ್ಲು ಸಕ್ಕರೆ ದಾನ ಖರ್ಜೂರದಾ ದಾನಗಳು || ೫ || ಹಾಲು ಮೊಸರಿನ ದಾನ ಅಡಿಕೆ ವೀಳ್ಯದೆಲೆ ದಾನ ಸಾಲಿಗ್ರಾಮದ ದಾನಗಳು ಭಾಗವತ ಗ್ರಂಥದ ದಾನವು ಮುವ್ವತ್ತ ಮೂರು ದಾಸರ ಪದ ಗಾಯನವು || ೬ || ದಿನದಿನವು ಮನೆಯಲ್ಲಿ ಶಾಂತಿಯು ನೆಲೆಸುವುದು ಅನುದಿನ ಆನಂದವಾಗುವುದು ಸಚ್ಚಿದಾನಂದನ ದಯೆ ಸಿಗಲೆಂದು ಮಧ್ವೇಶ ಕೃಷ್ಣನಲ್ಲಿ ಬೇಡುವುದು || ೭ || adhika maasa baMdu ...

ರಾಮ ರಾಮ ರಾಮ ಎನ್ನಿರೋ | ಪುರಂದರ ವಿಠಲ | Rama Rama Enniro | Purandara vittala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ರಾಮ ರಾಮ ರಾಮ ಎನ್ನಿರೋ  ಇಂಥ ಸ್ವಾಮಿಯ ನಾಮವ ಮರೆಯದಿರೋ || ಪ ||  ತುಂಬಿದ ಪಟ್ಟಣಕ್ಕೆ ಒಂಭತ್ತು ಬಾಗಿಲು |  ಸಂಭ್ರಮದರಸರು ಐದು ಮಂದಿ ||  ಡಂಭಕತನದಿಂದ ತಿರುಗುವ ಕಾಯವ |  ನಂಬಿ ನೆಚ್ಚಿ ನೀವು ಕೆಡಬೇಡಿರೋ || ೧ ||  ನೆಲೆಯಿಲ್ಲದೀ ಕಾಯ ಎಲುಬಿನ ಪಂಜರ |  ಒಲಿದು ಸುತ್ತಿದ ಚರ್ಮದ ಹೊದಿಕೆ ||  ಮಲಮೂತ್ರಂಗಳು ಕೀವು ಕ್ರಿಮಿಗಳಿಂದ ಭರಿತ  ದೇಹವ ನೆಚ್ಚಿ ಕೆಡಬೇಡಿರೋ || ೨ ||  ತೊಗಲು ಬೊಂಬೆಯ ಮಾಡಿ ಜಗದೊಳು ನಿಲ್ಲಿಸಿ |  ನೆಗೆದಾಡಿಸಿ ಹೊತ್ತು ಹೋಗದಂತೆ ||  ಒಗುವೀಣೆಯಿಂದಲಿ ಉಬ್ಬುವ ಕಾಯವ |  ಹಗಲು ಇರುಳು ನೆಚ್ಚಿ ಕೆಡಬೇಡಿರೋ || ೩ ||  ಮಡದಿಯು ಮಕ್ಕಳು ಒಡವೆಗಳುಂಟೆಂದು  ಕಡು ಕೊಬ್ಬುತನದಿಂದ ತಿರುಗಬೇಡಿರೋ ||  ಪಿಡಿದೆಳೆದು ತಾರೆಂದು ಯಮನು ಪೀಡಿಸಲಾಗ ||  ಒಡನೆ ಆರೊಬ್ಬರು ಬಾಹೋರಿಲ್ಲವೋ || ೪ ||  ಹರಬ್ರಹ್ಮ ಸುರರಿಂದ ವಂದಿತನಾಗಿಪ್ಪ  ಹರಿ ಸರ್ವೋತ್ತಮನೊಬ್ಬ ಕಾಣಿರೋ  ಪುರಂದರ ವಿಠಲನ ಭಜನೆಯ ಮಾಡಿರೋ  ದುರಿತ ಪರ್ವತವೆಲ್ಲ ಪರಿಹಾರವೋ || 5 || rAma rAma rAma ennirO  iMtha svAmiya nAmava mareyadirO ||pa||    tuMbida paTTaNakke oMBattu bAgilu...

ಆವ ಸಿರಿಯಲಿ ನೀನು | ಕಾಗಿನೆಲೆಯಾದಿ ಕೇಶವ | Ava siriyali ninu | Kaaginele Adi Keshava

Image
ಸಾಹಿತ್ಯ : ಶ್ರೀ ಕನಕದಾಸರು Kruti: Sri Kanaka Dasaru ಆವ ಸಿರಿಯಲಿ ನೀನು ಎನ್ನ ಮರೆತೆ? ದೇವ ಜಾನಕೀರಮಣ ಪೇಳು ರಘುಪತಿಯೆ || ಪ || ಸುರರ ಸೆರೆಯನು ಬಿಡಿಸಿ ಬಂದನೆಂಬಾ ಸಿರಿಯೆ ಕರಿ ಮೊರೆಯ ಲಾಲಿಸಿದೆ ಎಂಬ ಸಿರಿಯೆ  ಶರಧಿಗೆ ಸೇತುವೆಯ ಕಟ್ಟಿಸಿದೆನೆಂಬಾ ಸಿರಿಯೆ ಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ  || ೧ || ಕಡಲೊಳಗೆ ಮನೆ ಮಾಡಿ ಮಲಗಿದೆನೆಂಬಾ ಸಿರಿಯೆ ಮೃಡ ನಿನ್ನ ಸಖನಾದನೆಂಬ ಸಿರಿಯೆ  ಬಿಡದೆ ದ್ರೌಪದಿ ಮಾನ ಕಾಯ್ದೆನೆಂಬಾ ಸಿರಿಯೆ ದೃಢವಾಗಿ ಹೇಳೆನಗೆ ದೇವಕೀಸುತನೆ || ೨ ||  ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆ ಕಾಮ ನಿನ್ನ ಸುತನಾದನೆಂಬ ಸಿರಿಯೆ ಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆ ಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ || ೩ || ಮನುಜರೆಲ್ಲರು ನಿನ್ನ ಸ್ತುತಿಸುವರೆಂಬ ಸಿರಿಯೆ ಹನುಮ ನಿನ್ನ ಬಂಟನಾದೆನೆಂಬ ಸಿರಿಯೆ ಬಿನುಗುದೈವಗಳು ನಿನಗೆಣೆಯಿಲ್ಲವೆಂಬ ಸಿರಿಯೆ ಅನುಮಾನ ಮಾಡದೆಲೆ ಪೇಳು ನರಹರಿಯೆ || ೪ || ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿ ಪಂಥವೇ ನಿನಗಿದು ಆವ ನಡತೆ ಕಂತುಪಿತ ಕಾಗಿನೆಲೆಯಾದಿಕೇಶವ ರಂಗ ಚಿಂತೆಯನು ಬಿಡಿಸಿ ಸಂತೋಷವನುಪಡಿಸೊ || ೫ || Ava siriyali nInu enna marete? dEva jAnakIramaNa pELu raGupatiye || pa || surara sereyanu biDisi baMdaneMbA siriye kari moreya lAliside eMba siriye  Saradhige sEtuveya kaTTiside...

ಶ್ರೀ ಧನ್ವಂತರಿ ಸುಳಾದಿ | ವಿಜಯ ವಿಠಲ | Sri Dhanvantari Suladi | vijaya vittala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವುದು ಕಾಯಾ ನಿರ್ಮಲಿನಾ ಕಾರಣವಾಹದೊ ಮಾಯಾ ಹಿಂದಾಗುವುದು ನಾನಾ ರೋಗದ ಬೀಜ ಬೇಯಿಸಿ ಕಳೆವುದು ವೇಗದಿಂದ ನಾಯಿ ಮೊದಲಾದ ಕುತ್ಸಿತ ದೇಹ ನೀ ಕಾಯವಾ ತೆತ್ತು ದುಷ್ಕರ್ಮದಿಂದ ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ ಹೇಯ ಸಾಗರದೊಳು ಬಿದ್ದು ಬಳಲೀ ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ ಬಾಯಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ ರಾಯಾ ರಾಜೌಷಧಿ ನಿಯಾಮಕ ಕರ್ತ ಶ್ರೀಯರಸನೆಂದು ತುತಿಸಲಾಗಿ ತಾಯಿ ಒದಗಿ ಬಂದು ಬಾಲನ್ನ ಸಾಕಿದಂತೆ ನೋಯಗೊಡದೆ ನಮ್ಮನ್ನು ಪಾಲಿಪಾ ಧ್ಯೇಯಾ ದೇವಾದಿಗಳಿಗೆ ಧರ್ಮಜ ಗುಣಸಾಂದ್ರ ಶ್ರೇಯಸ್ಸು ಕೊಡುವನು ಭಜಕರಿಗೆ ಮಾಯಾ ಮಂತ್ರದಿಂದ ಜಗವೆಲ್ಲ ವ್ಯಾಪಿಸಿದ ಸನ್ಯಾಯವಂತನಾಗಿ ಚೇಷ್ಟೆ ಮಾಳ್ಪಾ ವಾಯುವಂದಿತ ನಿತ್ಯ ವಿಜಯ ವಿಟ್ಠಲರೇಯಾ ಪ್ರಿಯನು ಕಾಣೋ ನಮಗೆ ಅನಾದಿ ರೋಗ ಕಳೆವಾ || ೧ || ಧನ್ವಂತ್ರಿ ಶ್ರೀಧನ್ವಂತ್ರಿ ಎಂದು ಸನ್ನುತಿಸಿ ಸತತ ಭಿನ್ನ ಜ್ಞಾನದಿಂದ ನಿನ್ನವ ನಿನ್ನವನೋ ಘನ್ನತಿಯಲಿ ನೆನೆವ ಮನ್ನುಜ ಭುವನದೊಳು ಧನ್ಯನು ಧನ್ಯನೆನ್ನಿ ಚೆನ್ನಮೂರುತಿ ಸುಪ್ರಸನ್ನ ವಿಜಯ ವಿಠ್ಠಲನ್ನ ಸತ್ಯವೆಂದು ಬಣ್ಣಿಸು ಬಹು ವಿಧದಿ || ೨ || ಶಶಿಕುಲೋದ್ಭವ ದೀರ್ಘತಮ ನಂದನದೇವಾ ಶಶಿವರ್ಣ ಪ್ರಕಾಶ ಪ್ರಭುವೆ ವಿಭುವೆ ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ ಬಿಸಜಲೋಚನ ಅಶ್ವಿನೇಯ ವಂದ್ಯಾ ಶಶಿಗರ್ಭ ಭೂರುಹ ಲತೆ ಪೊದೆ ತಾಪ ಓ ಡಿಸುವ ಔಷಧಿ ಶ್ರೀತುಲಸಿ ಜ...

ನಾರಾಯಣ ಎನ್ನಿರೊ ಸಜ್ಜನರೆಲ್ಲ | ಹಯವದನ | Narayana Enniro | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ನಾರಾಯಣ ಎನ್ನಿರೊ ಸಜ್ಜನರೆಲ್ಲ || ಪ || ಸಾರರಹಿತ ಸಂಸಾರದಲ್ಲಿ ಪರ ಸಾರ ಇದು ಎಂದು ಸಂಸಾರಿ ನೀವೆಲ್ಲ || ಅಪ || ಇಹಪರ ಸುಖವುಂಟೋ ಇದರ ಫಲ ಬಹಳ ಕಟ್ಟಿದ ಗಂಟೋ ಘನಮಹಿಮಗೆ ಇದು ಮಹಮಹಿಮೆ ಇದಲ್ಲದೆ ಮಹಿಯೊಳಗಿದು ಮಹಾರಸವಾದಂಥ ಮಂತ್ರವು ಮಹಭಕುತಿಪೂರ್ವಕವಾಗಿ ಒಮ್ಮೆ || ೧ || ಹಸಿವೆಯ ಶ್ರಮವಿರಲಿ ಹಸಿವಿರದೆ ಹ ರುಷವು ತಾನಿರಲಿ ರಸಿಕಶ್ರಮ ಕೆರಳಿ ಮಾ ನಸ ವಶವು ಆಗಲಿ ಆಗದಿರಲಿ ದೋಷವಾಗಲಿ ಶುದ್ಧವಾಗಲಿ ಶ್ರೀಶನ ಮರೆಯದೆ ಹಾಂಗೆ || ೨ || ಚೋರನೆಂದೆನದೆ ಚಿತ್ತದಲ್ಲಿ ಜಾರನೆಂದೆಣಿಸದೆ ಸ್ಮರಣೆ ಮಾತ್ರದಿ ಬಹಳ ಪಾರರಹಿತ ಅನರ್ಥಸಂಚಿತ ಹರಣ ಮಾಡುವ ಪವನಪ್ರಿಯ ಸರ್ವರಂತರ ಹಯವದನ || ೩ || naaraayaNa enniro sajjanarella || pa || saararahita saMsaaradalli para saara idu eMdu saMsaari nIvella || apa || ihapara suKavuMTO idara Pala bahaLa kaTTida gaMTO Ganamahimage idu mahamahime idallade mahiyoLagidu mahaarasavaadaMtha maMtravu mahabhakutipUrvakavaagi omme || 1 || hasiveya shramavirali hasivirade ha ruShavu taanirali rasikashrama keraLi mA nasa vashavu Agali Agadirali dOShavaagali shuddhavaagali shrIshana mareyade haaMge || 2 || cOraneMdenade cittad...

ಕೇಳಿದ್ಯಾ ಕೌತುಕವ ಕೇಳಿದ್ಯಾ | ರಂಗ ವಿಠಲ | Kelidya kautukava kelidya | Ranga vittala

Image
ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ) Kruti: Sri Sripadarajaru (Ranga vittala) ಕೇಳಿದ್ಯಾ ಕೌತುಕವ ಕೇಳಿದ್ಯಾ ಕೇಳಿದೆ ನಾ ಕೌತುಕ ನಿನಗಿಂತ ಮುನ್ನ || ಪ || ಆಹಾ ಚಾಳಿಕಾರ ಕೃಷ್ಣನು ಪೇಳದೆ ಮಧುರೆಗೆ ಕೋಳಿ ಕೂಗದ ಮುನ್ನ ನಾಳೆ ಪಯಣವಂತೆ || ಅಪ || ಕರೆಯ ಬಂದಿಹನಂತೆ ಕ್ರೂರ ತಮ್ಮ ಹಿರಿಯಯ್ಯನಂತೆ ಅಕ್ರೂರ ಪುರ ಹೊರವಳಯದಿ ಬಿಟ್ಟು ತೇರ ||ಆಹಾ|| ಹಿರಿಯನೆಂದು ಕಾಲಿಗೆರಗಲು ರಾಮಕೃಷ್ಣರ ಠಕ್ಕಿಸಿಕೊಂಡು ಮರುಳು ಮಾಡಿದ ಬುದ್ಧಿ || ೧ || ಸೋದರ ಮಾವನ ಮನೆಗೆ ಬೆಳಗಾದರೆ ನಾಳಿನ ಉದಯ ಪರಮಾದರವಂತೆ ತ್ವರೆಯ ಅಲ್ಲಿ ತೋರಿದ ಮನಕೆ ನಾರಿಯ ||ಆಹಾ|| ಸಾಧಿ ಮಲ್ಲ ಮೊದಲಾದ ಬಿಲ್ಲು ಹಬ್ಬ ಸಾಧಿಸಿಕೊಂಡು ಬರುವನೆಂಬ ಸುದ್ದಿ || ೨ || ಹುಟ್ಟಿದ ಸ್ಥಳ ಮಧುರೆ ಕಂಸನಟ್ಟುಳಿಗಾರದೆ ಬೆದರಿ ತಂದಿಟ್ಟ ತನ್ನ ತಂದೆ ಚದುರೆ ತೋರಿಕೊಟ್ಟಳು ಭಯವ ಬೆದರಿ ||ಆಹಾ|| ಎಷ್ಟು ಹೇಳಲಿ ರಂಗವಿಠಲನು ಮಾವನ ಭೆಟ್ಟಿಗಾಗಿ ಒಡಂಬಟ್ಟು ಪೋಗುವ ಸುದ್ದಿ || ೩ || kELidyA kautukava kELidyA kELide nA kautuka ninagiMta munna || pa || AhA cALikAra kRuShNanu pELade madhurege kOLi kUgada munna nALe payaNavaMte || apa || kareya baMdihanaMte krUra tamma hiriyayyanaMte akrUra pura horavaLayadi biTTu tEra ||AhA|| hiriyaneMdu kAligeragalu rAmakRuShNara ThakkisikoMDu maruLu mADida buddhi || 1...

ಹದಿನಾಲ್ಕು ಲೋಕಗಳನಾಳುವ ತಂದೆಗೆ | ವಿಜಯವಿಠ್ಠಲ | Hadinalku Lokagala | Vijayavittala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಹದಿನಾಲ್ಕು ಲೋಕಗಳನಾಳುವ ತಂದೆಗೆ | ಮುದದಿಂದ ನಾನೊಬ್ಬ ಭಾರವಾದೆನೆ || ಪ || ಸುರಗಿರಿ ಶರಧಿಯೊಳು ಕಡೆವಾಗ ಮುಳುಗಲಾ || ಭರದಿಂದ ಪೋಗಿ ಬೆನ್ನಾಂತು ಪೊತ್ತೆ || ಧರಣಿಯು ಮೊರೆಯಿಡೆ ತ್ವರದಲಿ ಬಂದು | ಭೂತರುಣಿಯ ಸೆರೆಬಿಡಿಸಿ ಉಳುಹಿಕೊಳ್ಳಲಿಲ್ಲವೆ || ೧ || ಸುರಪತಿ ಮುನಿದೇಳು ಹಗಲಿರುಳು ಮಳೆಗರೆಯೆ | ಬೆರಳಲಿ ಧರಿಸಿ ತುರುಗಳ ಕಾಯ್ದೆ ನಿಜವೆ || ವರಮುನಿ ನಿನ್ನನ್ನು ಬೇಡಲಾಗಿ ಬೆದರಿ ನರ- | ನರಸಿ ನಿನ್ನ ಕರೆಯೆ ಕರುಣದಿ ಪಾಲಿಸಿದೆ || ೨ || ಜಲಜಾಕ್ಷ ಬೆಟ್ಟವನು ಪೊತ್ತು ಬಳಲಿದಾಗ | ಸಲಹಬೇಕೆಂದು ಬೇಸರಿಸಲಿಲ್ಲಾ || ಸುಲಭದಲಿ ಶೇಷಾಚಲನಾಗಿಪ್ಪ | ಒಲಿದೆನ್ನ ಸಂರಕ್ಷಿಸೊ ವಿಜಯವಿಠ್ಠಲನೆ || ೩ || hadinAlku lOkagaLanALuva taMdege | mudadiMda nAnobba BAravAdene || pa || suragiri SaradhiyoLu kaDevAga muLugalA || BaradiMda pOgi bennAMtu potte || dharaNiyu moreyiDe tvaradali baMdu | BUtaruNiya serebiDisi uLuhikoLLalillave || 1 || surapati munidELu hagaliruLu maLegareye | beraLali dharisi turugaLa kAyde nijave || varamuni ninnannu bEDalAgi bedari nara- | narasi ninna kareye karuNadi pAliside || 2 || jalajAkSha beTTavanu pottu baLalidAga | salahabEkeMdu bEsaris...

ಹರಿ ಹರಿ ಹರಿ ಎಂದು ಒದರೋ | ಮಧ್ವೇಶಕೃಷ್ಣ | Hari Hari Hari endu odaro | Madhwesha Vittala

Image
ಸಾಹಿತ್ಯ : ಶ್ರೀ ಮಧ್ವೇಶ ವಿಠಲ ದಾಸರು   Kruti:Sri Madhwesha Vittala Dasaru ಹರಿ ಹರಿ ಹರಿ ಎಂದು ಒದರೋ ನಿನ್ನ ಹರಿದಾವ ಕಾಲಕು ಬಿಡನೋ || ಪ || ಹರಿ ಹರಿ ಎಂದು ನೀ ಕುಣಿಯೋ ಹರಿ ನಿನ್ನ ಕರುಣದಿ ಪೊರೆವ || ಅಪ || ಜಗವೆಲ್ಲ ಅವನ ಅಧೀನ ನೋಡೋ ಖಗಪತಿವಾಹನ ಪ್ರಧಾನ ನಗು ಮೊಗದ ಚೆಲುವ ನಿಧಾನ ಇನ್ನು ಹಿಡಿ ಅವನ ಸನ್ನಿಧಾನ || ೧ || ನುಡಿ ನುಡಿಗೆ ಹರಿಯೆನಲು ಎಡೆಬಿಡದೆ ಪೊರೆವ ನಿಶಿ ಹಗಲು ಬಿಡದೋಡಿಸುವನು ದಿಗಲು ಸಡಗರದಿ ದಯವು ಸಿಗಲು || ೨ || ದಾಸರ ಸಂಗವ ಮಾಡೋ ಹರಿದಾಸರ ಸಂಗವ ಸೇರೋ ಈಶನ ಅನುಗ್ರಹ ಪಡೆಯೋ ಲೇಸಾಗಿ ಹರಿಕಥೆ ಸಾರೋ || ೩ || ಹೆಜ್ಜೆ ಹೆಜ್ಜೆಗೆ ನೆನೆಯೋ ಅರ್ಜುನ ಸಾರಥಿ ಕಾವಾ ನಿರ್ಜರೇಶ ಬಂದು ಕಾವಾ ಸಜ್ಜಾಗಿ ಒಲಿಯುತ ನಲಿವಾ || ೪ || ನೀರೊಳು ಮುಳುಗಿ ತಾ ಬಂದಾ ಅಲ್ಲಿ ಭಾರವ ಪೊತ್ತು ತಾ ನಿಂದಾ  ಭೂಮಿಯ ಮೇಲಕೆ ತಂದಾ ತರಳಗೆ ಕಂಭದಿ ಬಂದಾ || ೫ || ದಾನವ ಬೇಡಿ ತಾ ನಿಂದು ಮುಂದೆ ತನ್ನ ತಾನೆ ಗೆದ್ದು ಬಂದು ಹೆಣ್ಣು ಕದ್ದವನ ಕೊಂದು ಧನ್ಯನಾದ ಗೋಕುಲದಿ ಬಂದು || ೬ || ಬೌದ್ಧನಾಗಿ ಅವತರಿಸಿ ಬುದ್ಧಿ ಮೋಹಕ ಮಾಡಿ ಕಲ್ಕಿಯಾಗಿ ತಾ ಬಂದು ಮಧ್ವೇಶ ಕೃಷ್ಣನಾಗಿ ನಿಂದು || ೭ || hari hari hari eMdu odarO ninna haridaava kaalaku biDanO || pa || hari hari eMdu nI kuNiyO hari ninna karuNadi poreva || apa || jagavella avana adhIna nODO Kagapativaahana pradhaana na...

ಧನ್ಯನಾದೆ ವಿಠಲನ ಕಂಡು | ಜಗನ್ನಾಥ ವಿಠಲ | Dhanyanade Vithalana | Jagannatha vittala

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha dasaru (Jagannatha vittala) ಧನ್ಯನಾದೆ ವಿಠಲನ ಕಂಡು ||ಪ||  ಧನ್ಯನಾದೆ ಕಾಮನ್ನ ಪಿತನ ಲಾವಣ್ಯ ಮೂರುತಿಯ ಕಣ್ಣಲ್ಲಿ ಕಂಡು ||ಅಪ||  ದೇವವರೇಣ್ಯ ಸದಾ ವಿನೋದಿ |  ವೃಂದಾವನದಿ ಸಂಚರಿಪನ ಕಂಡು ||೧||  ಮಂಗಳಾಂಗ ಕಾಳಿಂಗ ಮಥನ |  ಮಾತಂಗ ವರದ ವರ ರಂಗನ ಕಂಡು ||೨||  ಹಾಟಕಾಂಬರ ಕಿರೀಟಿ ಸಾರಥಿ |  ತಾಟಕಾರಿ ವೈರಾಟನ ಕಂಡು ||೩||  ಚಿಂತಿತ ಫಲದ ಕೃತಾಂತನಾತ್ಮಜಾ |  ದ್ಯಂತ ರಹಿತ ನಿಶ್ಚಿಂತನ ಕಂಡು ||೪||  ಮಾತುಳಾಂತಕ ವಿಧಾತ ಪಿತ ಜಗನ್ನಾಥ ವಿಠಲ  ವಿಖ್ಯಾತನ ಕಂಡು ||೫||  dhanyanAde viThalana kaMDu ||pa||  dhanyanAde kAmanna pitana lAvaNya mUrutiya kaNNalli kaMDu ||apa||    dEvavarENya sadA vinOdi |  vRuMdAvanadi saMcaripana kaMDu ||1||    maMgaLAMga kALiMga mathana |  mAtaMga varada vara raMgana kaMDu ||2||    hATakAMbara kirITi sArathi |  tATakAri vairATana kaMDu ||3||    ciMtita Palada kRutAMtanAtmajA |  dyaMta rahita niSciMtana kaMDu ||4||    mAtuLAMtaka vidhAta pita jagannA...

ಬಾ ಬಾ ಭಕುತರ ಹೃದಯ ಮಂದಿರ | ವಿಜಯ ವಿಠಲ | Ba Ba Jagadoddhara | Vijaya Vithala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಬಾ ಬಾ ಭಕುತರ ಹೃದಯ ಮಂದಿರ ಬಾ ಬಾ ಜಗದೋದ್ಧಾರ || ಪ || ಬಾ ಬಾ ವೇಂಕಟಾಚಲ ವಿಹಾರ ಬಾ ಬಾನೇಕಾವತಾರ ಧೀರ-ಶೂರ || ಅಪ || ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷ ಲಕ್ಷ್ಮಣಾಗ್ರಜ ಲಕ್ಷ್ಮೀವಕ್ಷ ಪಕ್ಷಿವಾಹನ ಪೂರ್ಣಲಕ್ಷಣ ಸರ್ವೇಶ ಮೋಕ್ಷದಾಯಕ ಪಾಂಡವ ಪಕ್ಷ ಅಕ್ಷಯವಂತ ಸೂಕ್ಷ್ಮಾಂಬರ ಧರಾ- ಧ್ಯಕ್ಷ ಪ್ರತ್ಯಕ್ಷದ ದೈವ ಅಕ್ಷತನಾರೇರ ತಕ್ಷಣದಲಿ ತಂದ ಅಕ್ಷರ ಪುರುಷ ಗೋವಿಂದ ||೧|| ಜಾಂಬೂನಾದಾಂಬರ ಸಾಂಬಜನಕ-ನೀ ಲಾಂಬುದ ವರ್ಣಸುಪೂರ್ಣ ಸಾಂಬವಿನುತ ಸುಗುಣಾಂಬುಧಿ ನಾನಾ ವಿ ಡಂಬನ ತೋರಿದ ಮಹಿಮ ಕಾಂಬೆ ನಿನ್ನ ಚರಣಾಂಬುಜ ಮನದೊಳು ಜಾಂಬವಂತನ ಪರಿಪಾಲಾ ವಿ- ಶ್ವಂಭರಂಬರಗ್ಗಣಿಯ ಪಡೆದ ವೃ- ತ್ತುಂಬರೇಶಾಂಬುಧಿ ಶಾಯಿ ||೨|| ತಾಳ ಜಾಗಟೆ ಮದ್ದಳೆ ದುಂದುಭಿ ಭೇರಿ ಕಹಳೆ ಹೆಗ್ಗಾಳೆ ತಮ್ಮಟೆ ನಿ- ಸ್ಸಾಳೆ ಪಟಹ ತಂಬೂರಿ ಪಣವ ಕಂಸಾಳೆ ಕಂಬುಡಿಕ್ಕಿ ವಾದ್ಯ ಸೂಳೈಸುತಲಿರೆ ಭಾಗವತರು ಸಂ ಮೇಳದಿ ಕುಣಿದೊಲಿದಾಡೆ ಸಾಲುಪಂಜಿನ ಗುಂಜಿ ಛತ್ರ ಚಾಮರ ಧ್ವಜ ಢಾಲುಗಳು ಒಪ್ಪಿರಲು || ೩ || ಮೂರು ನಾಮಂಗಳ ಧರಿಸಿದ ದಾಸರು ವೀರ ಮಾರುತಿ ಮತದವರು ಸಾರುತ್ತ ಬೊಮ್ಮಾದಿ ಸುರರುಗಳನ್ನು ತಾರತಮ್ಯದಿಂದ ತಿಳಿದು ಬಾರಿಬಾರಿಗೆ ನಿಮ್ಮ ಹಾರೈಸಿ ಆನಂದ ವಾರಿಧಿಯಲಿ ಮಗ್ನರಾಗಿ ತಾರರು ಮನಸಿಗೆ ಮುರಡು ದೇವತೆಗಳ ಸಾರ ಹೃದಯ ನಿಂದಿಹರು || ೪ || ಬಂಗಾರ ರಥದೊಳು ಶೃಂಗಾರವಾದ ಶ್ರೀ ಮಂಗಳಾಂಗ ಕಳಿಂಗ ಭಂಗ ನರಸಿಂಗ ಅಂಗಜ ಜನಕ ಸಾ- ರಂ...

ವಾದಿರಾಜರ ಕೃತಿ 'ಬಾ ಬಾ ಬಾರೈ'| Baa baa baarai | Hayavadana

Image
ರಚನೆ : ಭಾವೀಸಮೀರ ಶ್ರೀ ವಾದಿರಾಜರು Krithi : Bhavi Sameera Sri Vadirajaru ಬಾ ಬಾ ಬಾರೈ ಬಾ ಬಾ ಬಾ ಬಾರೈ ಬಾ ಬೇಗ ಬಾರೆಂದು ಭಕುತರು ಕರೆಯಲು ಹರಿ || ಪ || ಶ್ರೀಸತಿಯಪ್ಪಿಕೊಂಡಿಪ್ಪನೆ ಬಾ ಶೇಷಶಯನ ಎನ್ನಪ್ಪನೆ ಬಾ || ೧ || ಮತ್ಸ್ಯನಾಗಿ ಜಲದೊಳಾಡಿದವನೆ ಬಾ ಕಚ್ಛಪವತಾರವ ಮಾಳ್ದನೆ ಬಾ || ೨ || ಧರೆಗಾಗಿ ಜಲದೊಳಗಿಳಿದನೆ ಬಾ ಹಿರಣ್ಯಕನುದರವ ಸೀಳ್ದನೆ ಬಾ || ೩ || ಶಕ್ರನ ಪೊರೆದ ಶ್ರೀ ವಾಮನನೆ ಬಾ ವಕ್ರನೃಪಾಲಕುಲ ಶಮನನೆ ಬಾ || ೪ || ರಾವಣಾಂತಕ ರಘುರಾಮನೆ ಬಾ ದೇವಕಿ ನಿಜಸುತ ಪ್ರೇಮನೆ ಬಾ || ೫ || ಸತಿಯರ ವ್ರತವ ಕೆಡಿಸಿದನೆ ಬಾ ಚತುರ ಕಲಿಯನೋಡಿಸಿದನೆ ಬಾ || ೬ || ಹಯವದನಾಶ್ರಿತ ಶರಣನೆ ಬಾ ಪ್ರಿಯಸುರ ಸೇವಿತ ಚರಣನೆ ಬಾ || ೭ || baa baa baarai baa baa baa baarai baa bEga baareMdu bhakutaru kareyalu hari || pa || shrIsatiyappikoMDippane baa shEShashayana ennappane baa || 1 || matsyanaagi jaladoLaaDidavane baa kacCapavataarava maaLdane baa || 2 || dharegaagi jaladoLagiLidane baa hiraNyakanudarava sILdane baa || 3 || shakrana poreda shrI vaamanane baa vakranRupaalakula shamanane baa || 4 || raavaNaaMtaka raghuraamane baa dEvaki nijasuta prEmane baa || 5 || satiyara vratava keDisidane baa catura kaliyanO...

ಬಾರೋ ಮನೆಗೆ ಬಾರೋ ವೆಂಕಟ | ವಿಜಯ ವಿಠಲ | Baaro Manege Baaro | Vijaya Vithala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಬಾರೋ ಮನೆಗೆ ಬಾರೋ ವೆಂಕಟರಮಣ || ಪ || ಕಂಸಾಸುರ ಮರ್ದನನೇ ಬಾರೋ ಕೌಶಿಕ ಯಜ್ಞಪ ಬಾರೋ ಹಂಸಡಿಬಿಕನಂತಕ ಬಾರೋ ಹಂಸವಾಹನನ ಪಿತನೇ ಬಾರೋ || ೧ || ಸಾಸಿರಮುಖನ ಪೆತ್ತವನೇ ಬಾರೋ ಸಾಸಿರಗಣ್ಣಿನ ಅನುಜ ಬಾರೋ ಸಾಸಿರವದನ ಶಯನ ಬಾರೋ  ಭೂಸುರರಿಗೆ ಪ್ರಿಯನೇ ಬಾರೋ || ೨ || ವಾರಿಧಿಯೊಳು ಪೊಕ್ಕವನೇ ಬಾರೋ ವಾರಿಧಿಯ ಮಾನಭಂಗನೇ ಬಾರೋ ವಾರಿಧಿಸುತೆಯ ಪಡೆದ ಕರುಣಾವಾರಿಧಿ ಸಿರಿ ವಿಜಯವಿಠಲ ಬಾರೋ || ೩ || baarO manege baarO veMkaTaramaNa || pa || kaMsaasura mardananE baarO koushika yajnapa baarO haMsaDibikanaMtaka baarO haMsavaahanana pitanE baarO || 1 || saasiramuKana pettavanE baarO saasiragaNNina anuja baarO saasiravadana shayana baarO  bhUsurarige priyanE baarO || 2 || vaaridhiyoLu pokkavanE baarO vaaridhiya maanabhaMganE baarO vaaridhisuteya paDeda karuNaavaaridhi siri vijayaviThala baarO || 3 ||  

ಧೀರನ ನೋಡಿರೈ | ಶ್ರೀ ಕೃಷ್ಣ | Dhirana Nodirai | Vyasarajaru

Image
ಸಾಹಿತ್ಯ :    ಶ್ರೀ ವ್ಯಾಸರಾಜರು  (ಶ್ರೀ ಕೃಷ್ಣ) Kruti: Sri Vyasarajaru (Sri Krishna) ಧೀರನ ನೋಡಿರೈ ಕರುಣಾಪೂರನ ಪಾಡಿರೈ || ಪ || ವಾರಿಜವದನ ಸಮೀರಜ ಕಪಿನೃಪ ದ್ವಿಜನ ಭಾವೀ ಅಜನ || ಅಪ || ಕಣಕಾಲಂದಿಗೆ ಒಪ್ಪುವ ಸರ ಕಂಠಮಣಿಯ ವಜ್ರದ ಖಣಿಯ ಮಣಿಯದ ಬಹಳ ಕಠಿಣ ದಿತಿಜರನೆಲ್ಲ ಹಣೆಯಬೇಕೆಂಬೊ ದಣಿಯ ಪ್ರಣತಿಸಿ ನಾರಾಯಣಪದ ಭಕ್ತಾಗ್ರಣಿಯ ಚಿಂತಾಮಣಿಯ ತೃಣಕೃತಾಮರಪತಿ ಯಶೋಮಾಧವ ಫಣಿಯ ಕಪಿಶಿರೋಮಣಿಯ || ೧ || ಮಂದಸ್ಮಿತಯುತ ಕುಂದಕುಟ್ಮಲಸಮರದನ ಪೂರ್ಣಚಂದ್ರವದನ ಇಂದುಧರಾದಿ ಸುರವೃಂದವಂದಿತ ಪದಯುಗನ ಹಸ್ತಾಯುಧನ ಬಂದೀಕೃತ ಸುರಸುಂದರೀ ಸಮುದಯ ಸದನ ಜಿತಾನೇಕ ಮದನ ಮಂದಮತಿ ಜರಾಸಂಧನಂಗವ ಸೀಳಿದನ ಬಹುಬಲ್ಲಿದನ || ೨ || ಮುದ್ದುಮುಖವ ನೋಡಿ ತಿದ್ದಿಮಾಡಿದ ಮೈಸಿರಿಯ ಇನ್ನೊಮ್ಮೆ ದೊರೆಯ ಒದ್ದಕ್ಷಕುವರನ ಗುದ್ದಿ ಬಿಸುಟ ಹೊಂತಕಾರಿಯ ಭಾರತೀದೊರೆಯ ಶುದ್ಧಾನಂದಸಮುದ್ರ ಶ್ರೀಕೃಷ್ಣಗೆ ಕಿರಿಯ ಮಿಕ್ಕಜಗಕ್ಹಿರಿಯ ಅದ್ವೈತಶಾಸ್ತ್ರದ ಸದ್ದನಡಗಿಸಿದ ಆರ್ಯ ನಮ್ಮ ಮಧ್ವಾಚಾರ್ಯ || ೩ || dhIrana nODirai karuNaapUrana paaDirai || pa || vaarijavadana samIraja kapinRupa dvijana bhaavI ajana || apa || kaNakaalaMdige oppuva sara kaMThamaNiya vajrada KaNiya maNiyada bahaLa kaThiNa ditijaranella haNeyabEkeMbo daNiya praNatisi naaraayaNapada bhaktaagraNiya ciMtaamaNiya tRu...

ಭೀಮರಾಯನ ನಂಬಿ ಭೀಮಸೇನನ | ಹಯವದನ | Bhimaraayana Nambi | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಭೀಮರಾಯನ ನಂಬಿ ಭೀಮಸೇನನ ಭೀಮಭವವಾರಿಧಿಯ ಬೇಗ ದಾಟುವರೆ ನಮ್ಮ || ಪ || ಬಕ ಮೊದಲಾದ ಹಿಡಿಂಬಕ ದುರ್ಜನರ ಕೊಂದು ಸುಖಪಡಿಸಿದನಂದು ದ್ವಿಜಕುಲಜರಾಗ ಕೂಡ || ೧ || ಜರಾಸಂಧನ ಕೂಡೆ ವರ ಯುದ್ಧವನ್ನೇ ಮಾಡಿ ಸರಕು ಮಾಡದೆ ಕೊಂದ ಧಾರುಣಿಯೊಳಗೆ ನಿಂದ || ೨ || ಅಸುರ ಕೀಚಕನೆಂಬುವ ಸತಿಯ ಕೃಷ್ಣೆಯ ಬಾಧಿಸೆ ಘಾಸಿಮಾಡಲು ವಂದ್ಯರ ಹೇಸದೆ ಮೋಸದಿ ಕೊಂದ || ೩ || ಕಡುತೃಷೆಗೆ ದುಶ್ಯಾಸನನೊಡಲ ಬಗಿದು ರಕ್ತ ಕುಡಿದಂತೆ ತೋರ್ದ ನಮ್ಮೊಡೆಯ ದ್ರೌಪದಿಪ್ರಿಯ || ೪ || ಭೀಮ ತನ್ನ ಮರೆಹೊಕ್ಕ ಸುಜನರ ಕಾವ ಸ್ವಾಮಿ ಶ್ರೀಹಯವದನ ರಾಮನಾಣೆ ಸತ್ಯವಿದು || ೫ || bhImaraayana naMbi bhImasEnana bhImabhavavaaridhiya bEga dATuvare namma || pa || baka modalaada hiDiMbaka durjanara koMdu suKapaDisidanaMdu dvijakulajaraaga kUDa || 1 || jaraasaMdhana kUDe vara yuddhavannE maaDi saraku maaDade koMda dhaaruNiyoLage niMda || 2 || asura kIcakaneMbuva satiya kRuShNeya baadhise GaasimaaDalu vaMdyara hEsade mOsadi koMda || 3 || kaDutRuShege dushyaasananoDala bagidu rakta kuDidaMte tOrda nammoDeya droupadipriya || 4 || bhIma tanna marehokka sujanara kaava svaami shrIhayav...

ಪಾಲಯ ಪಾಲಯ ಪಾರ್ವತಿ ತನಯ | ಇಂದಿರೇಶ | Palaya Palaya Parvati Tanaya | Indiresha

Image
ಸಾಹಿತ್ಯ :    ಶ್ರೀ ಇಂದಿರೇಶ ದಾಸರು (ಇಂದಿರೇಶ)  Kruti: Sri Indiresha Dasaru (Indiresha) ಪಾಲಯ ಪಾಲಯ ಪಾರ್ವತಿ ತನಯ ಪಾಶಾಂಕುಶ ಧರ ಜೀಯಾ ಜಯ ||ಪ|| ಪುರಹರ ಹರಸುತ ಸ್ಮರಿಸುವೆ ನಿನ್ನನು  ಕರುಣದಿ ಮತಿಗಳ ನೀಡೋ ಜಯ ||೧|| ಬಾದರಾಯಣ ಸುತ ಭಾರತ ಲೇಖಕ  ಭಾವಿಪೆ ನಿನ್ನನು ಜೀಯಾ ಜಯ ||೨|| ಸುಂದರ ಗಣಪತಿ ಬಂದ ವಿಘ್ನವ ಕಳೆ  ಇಂದಿರೇಶನ ಬೇಗ ತೋರೋ ಜಯ ||೩|| pAlaya pAlaya pArvati tanaya pASAMkuSa dhara jIyA jaya ||pa|| purahara harasuta smarisuve ninnanu  karuNadi matigaLa nIDO jaya ||1|| bAdarAyaNa suta BArata lEKaka  BAvipe ninnanu jIyA jaya ||2|| suMdara gaNapati baMda viGnava kaLe  iMdirESana bEga tOrO jaya ||3||

ಹರನೇ ನಾ ನಿನ್ನ ಪರಿಸರನಯ್ಯಾ | ಗುರು ಜಗನ್ನಾಥ ವಿಠಲ | Harane Na Ninna Parisara | Guru Jagannatha Vithala

Image
ಸಾಹಿತ್ಯ : ಶ್ರೀ ಗುರು ಜಗನ್ನಾಥ ದಾಸರು Kruti:Sri Guru Jagannatha dasaru ಹರನೇ ನಾ ನಿನ್ನ ಪರಿಸರನಯ್ಯಾ |  ಪೊರೆಯೆನ್ನ ಜೀಯಾ || ಪ || ಸುರವರ ಸ್ಮರಮುಖ ಸುರಗಣ ಸೇವ್ಯ ಸ್ಸಿ |  ನರವರಗೆ ನೀ ಹರಿ ಮಹಿಮೆಯ ಪೇಳಿದೆ || ಅಪ ||  ಅಂಬಾಧವ ಹೇರಂಬನ ತಾತ್ರ ಶರಜನ್ಮನ ಪಿತ  ಶಂಭರಾರಿಯು ಭಯ ನಿರ್ಜೀತ |  ಸುರವರನಾಥ ಕುಂಭಿಣಿ ರಥ ಹರ  ಶಂಭೋ ಶಂಕರ ಶಿವ ನಂಬಿದೆ ನಿನ್ನನು ತ್ರ್ಯಂಬಕ ಪಾಲಿಸೋ ||೧||  ಗಂಗಾಧರ ದಿಗಂಬರಾವೇಶ ಧರಿಸಿದ ಈಶ  ಲಿಂಗಾಕಾರದಿ ಜನಮನ ತೋಷ ಮಾಡುವಿ ಜಗದೀಶ  ಮಂಗಳಕರ ಭವ ಸಂಗ ವಿವರ್ಜಿತ  ತುಂಗ ಮಹಿಮ ಭಸಿತಾಂಗ ಶುಭಾಂಗ ||೨||  ದಾತ ಗುರು ಜಗನ್ನಾಥ ವಿಠಲ ದೂತ  ಪ್ರೀತಾನಾಗೆನ್ನೆಯ ಮಾತಾ ಲಾಲಿಸೋ ಖ್ಯಾತ  ಪಾತಕ ಕಾನನ ವೀತಿ ಹೋತ್ರ ಶುಭ  ವ್ರಾತವ ಪಾಲಿಸನಾಥನ ಪೊರೆಯೋ ||೩||  haranE nA ninna parisaranayyA |  poreyenna jIyA || pa || suravara smaramuKa suragaNa sEvya ssi |  naravarage nI hari mahimeya pELide || apa ||    aMbAdhava hEraMbana tAtra sharajanmana pita  shaMbharAriyu bhaya nirjIta |  suravaranAtha kuMbhiNi ratha hara  shaMbhO shaMkara shiva naMbide ninnanu tryaMbaka pAlisO ||1||  ...

ಮಾತನಾಡೈ ಮನ್ನಾರಿ ಕೃಷ್ಣ | ವಿಜಯವಿಠಲ | Matanadai Mannari Krishna | Vijaya vithala

Image
ಸಾಹಿತ್ಯ : ಶ್ರೀ ವಿಜಯ ದಾಸರು Kruti:Sri Vijaya Dasaru ಮಾತನಾಡೈ ಮನ್ನಾರಿ ಕೃಷ್ಣ || ಪ || ದಾತನು ನೀನೆಂದು ನಿನ್ನ ಬಯಸಿ ಬಂದೆ || ಅಪ || ಊದುವ ಸಿರಿ ಪೊಂಗೊಳಲೋ | ಜಗದಾಧಾರದ ನಿಜ ಹೊಳಲೋ ಪಾದದ ಪೊಂಗೆಜ್ಜೆ ಘಳಿರೋ ಸರ್ವ ವೇದಗಳ ಅರಸುವ ಮಹಿಮೆಯ ಥಳಲೋ || ೧ || ಕಸ್ತೂರಿ ತಿಲಕದ ಮೊಗವೋ ಇದು ಮಕುಟ ಮಸ್ತಕದ ಝಗ ಝಗವೋ ವಿಸ್ತರದಿ ಪೊತ್ತ ಜಗವೋ ಪರವಸ್ತುವೇ ನಂದ ಯಶೋದೆಯ ಮಗುವೋ || ೨ || ನವನೀತ ಪಿಡಿದ ಕರವೋ ನವನವ ಮೋಹನದ ಶೃಂಗಾರವೋ ಅವನೀ ತರಿಸಿದ ಸುರತರುವೋ ದೇವ ರವಿಯುಂಗುರವಿಟ್ಟು ತೂಗುವ ಭರವೋ || ೩ || ಆನಂದ ಜ್ಞಾನದ ಹೃದವೋ ಶುಭ ಮಾನವರಿಗೆ ಬಲು ಮೃದುವೋ ಆನನ ಛವಿಯೊಳು ಮಿದುವೋ ಪಾಪ ಕಾನನ ದಹಿಸುವ ಪಾವಕ ಪದವೋ || ೪ || ತ್ರಿಜಗದಿ ನಿರುತ ಪಾವನನೋ ಪಂಕಜನೇತ್ರೆಯ ನಾಯಕನೋ ಅಜಭವಾದಿಗಳ ಜನಕನೋ ನಮ್ಮ ವಿಜಯವಿಠಲ ರೇಯ ಯದುಕುಮಾರಕನೋ || ೫ || maatanaaDai mannaari kRuShNa || pa || daatanu nIneMdu ninna bayasi baMde || apa || Uduva siri poMgoLalO | jagadaadhaarada nija hoLalO paadada poMgejje GaLirO sarva vEdagaLa arasuva mahimeya thaLalO || 1 || kastUri tilakada mogavO idu makuTa mastakada Jaga JagavO vistaradi potta jagavO paravastuvE naMda yashOdeya maguvO || 2 || navanIta piDida karavO navanava mOhanada shRuMgaaravO avanI tarisida...

ಜೋ ಜೋ ಶ್ರೀ ಕೃಷ್ಣ | ಪುರಂದರ ವಿಠಲ | Jo Jo Sri Krishna | Purandara Vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಜೋ ಜೋ ಶ್ರೀ ಕೃಷ್ಣ ಪರಮಾನಂದ  ನಂದಗೋಪಿಯ ಕಂದ ನಂದ ಮುಕುಂದ ಜೋ ಜೋ ||ಪ|| ಪಾಲುಗಡಲೊಳು ಪವಡಿಸಿದವನೆ  ಆಲದೆಲೆಯ ಮೇಲೆ ಮಲಗಿದ ಮಗುವೆ  ಶ್ರೀಲಲಿತಾಂಗಿಯರ ಚಿತ್ತದೊಲ್ಲಭನೆ  ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ ||೧|| ಹೊಳೆವಂಥ ರನ್ನದ ತೊಟ್ಟಿಲ ಮೇಲೆ  ಥಳಥಳಿಸುವ ಗುಲುಗುಂಜಿಯ ಮಾಲೆ  ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ  ನಳಿನನಾಭನೆ ನಿನ್ನ ಪಾಡಿ ತೂಗುವೆನು ಜೋ ಜೋ ||೨|| ಆರ ಕಂದ ನೀನು ಆರ ನಿಧಾನಿ  ಆರ ರತ್ನವೋ ನೀನು ಆರ ಮಾಣಿಕವೋ  ಸೇರಿತು ಎನಗೊಂದು ಚಿಂತಾಮಣಿಯೆಂದು  ಬಾಲ ನಿನ್ನನು ಪಾಡಿ ತೂಗುವೆನಯ್ಯಾ ಜೋ ಜೋ ||೩|| ಗುಣನಿಧಿಯೆ ನಿನ್ನನೆತ್ತಿಕೊಂಡಿದ್ದರೆ  ಮನೆಯ ಕೆಲಸವಾರು ಮಾಡುವರಯ್ಯ  ಮನಕೆ ಸುಖನಿದ್ರೆಯ ತಂದುಕೊ ಬೇಗ  ಫಣಿಶಯನನೆ ನಿನ್ನ ಪಾಡಿ ತೂಗುವೆನು ಜೋ ಜೋ ||೪|| ಅಂಡಜವಾಹನ ಅನಂತಮಹಿಮ  ಪುಂಡರೀಕಾಕ್ಷ ಶ್ರೀ ಪರಮಪಾವನ್ನ  ಹಿಂಡು ದೈವದ ಗಂಡ ಉದ್ಧಂಡನೆ  ಪಾಂಡುರಂಗ ಶ್ರೀ ಪುರಂದರ ವಿಠಲ ಜೋ ಜೋ ||೫|| jO jO SrI kRuShNa paramAnaMda  naMdagOpiya kaMda naMda mukuMda jO jO ||pa||   pAlugaDaloLu pavaDisidavane  Aladeleya mEle malagida maguve  SrIl...

ಕೋ ಕೋ ಕೋ ಎನ್ನಿರೋ | ಕನಕದಾಸರು | Ko Ko Ko Enniro | Kanakadasaru

Image
ಸಾಹಿತ್ಯ : ಶ್ರೀ ಕನಕದಾಸರು (ಕಾಗಿನೆಲೆಯಾದಿ ಕೇಶವ) Kruti: Sri Kanakadasaru (Kagineleyaadi Keshava) ಕೋ ಕೋ ಕೋ ಎನ್ನಿರೋ ಕುಂಭಿಣಿಯವರೆಲ್ಲ  ಕೋ ಕೋ ಕೋ ಎನ್ನಿರೋ ಕೋ ಕೋ ಕೋ ಎನ್ನಿರೋ || ಪ || ನಮ್ಮ ಗೋಕುಲದೊಳಗೊಬ್ಬ ಕಳ್ಳ ಬರುತಾನೆಂದು ಕೋ ಕೋ ಕೋ ಎನ್ನಿರೋ ಕೋ ಕೋ ಕೋ ಎನ್ನಿರೋ || ಅಪ || ಪೊಂದಿ ಮೊಲೆಯನುಂಡವಳಸುವನೆ ಕೊಂದ ಮುದ್ದುಗಾರ ಕಳ್ಳ ಕೋ ಕೋ ಕೋ ಎನ್ನಿರೋ ಕದ್ದುಕೊಂಡೊಯ್ಯುವ ರಕ್ಕಸರನೆಲ್ಲರ ಕಾಲಲೊದ್ದರಿಸಿದ ಕಳ್ಳ ಕೋ ಕೋ ಕೋ ಎನ್ನಿರೋ  ಹದ್ದು ಹಗೆಯ ಹಾಸಿಗೆಯ ಮೇಲೊರಗಿದ ಮುದ್ದುಗಾರ ಕಳ್ಳ ಕೋ ಕೋ ಕೋ ಎನ್ನಿರೋ ಅರ್ಧ ದೇಹನ ಕೈಯ ತಲೆಯ ಕಪಟದಿಂದ ಕದ್ದು ಬಿಸುಟ ಕಳ್ಳ ಕೋ ಕೋ ಕೋ ಎನ್ನಿರೋ || ೧ || ಕೇಸರಿ ಎಂಬ ರಕ್ಕಸರನೆಲ್ಲರ ಕೊಂದ ವೇಷಧಾರಿ ಕಳ್ಳ ಕೋ ಕೋ ಕೋ ಎನ್ನಿರೋ ಮೋಸದಿ ಬಲಿಯ ದಾನವ ಬೇಡಿ ಅನುದಿನ ಬೇಸರಿಸಿದ ಕಳ್ಳ ಕೋ ಕೋ ಕೋ ಎನ್ನಿರೋ ಮೀಸಲ ಅನ್ನವ ಕೂಸಾಗಿ ಸವಿದುಂಡ ವೇಷಧಾರಿ ಕಳ್ಳ ಕೋ ಕೋ ಕೋ ಎನ್ನಿರೋ ಸಾಸಿರ ನಾಮಕ್ಕೆ ಹೆಸರಾದ ಚಪ್ಪನ್ನ ದೇಶಧಾರಿ ಕಳ್ಳ ಕೋ ಕೋ ಕೋ ಎನ್ನಿರೋ || ೨ || ಕ್ಷೀರ ವಾರಿಧಿ ವೈಕುಂಠನಗರಿಯನ್ನು ಸೇರಿಸಿದ ಕಳ್ಳ ಕೋ ಕೋ ಕೋ ಎನ್ನಿರೋ ದ್ವಾರಾವತಿಯನು ನೀರೊಳು ಬಚ್ಚಿಟ್ಟ ಊರುಗಳ್ಳ ಬಂದ ಕೋ ಕೋ ಕೋ ಎನ್ನಿರೋ ದ್ವಾರಕೆ ಆಳುವ ಉಭಯ ದಾಸರ ತನ್ನ ಊರಿಗೊಯ್ದ ಕಳ್ಳ ಕೋ ಕೋ ಕೋ ಎನ್ನಿರೋ ಕಾರಣಾತ್ಮನು ಕಾಗಿನೆಲೆಯಾದಿ ಕೇಶವ ಕ್ಷೀರ ಬೆಣ್ಣೆಯ ಕಳ್ಳ ಕೋ ಕೋ ಕೋ ಎನ್ನಿರೋ || ೩ || kO ...

ಯಶೋದೆ ನಿನ್ನ ಕಂದಗೆ | ಪುರಂದರ ವಿಠಲ | Yashode ninna Kandage | Purandara vithala

Image
ಸಾಹಿತ್ಯ : ಶ್ರೀ ಪುರಂದರ ದಾಸರು Kruti: Sri Purandara dasaru ಯಶೋದೆ ನಿನ್ನ ಕಂದಗೆ ಎಷ್ಟು ರೂಪವೇ ||ಪ||  ಶಿಶುವಲ್ಲ ನಿನ್ನ ಮಗ ಕೃಷ್ಣ ಜಗತ್ಪತಿಯೇ ||ಅಪ||  ಹಸುಗಳ ಕರೆವಲ್ಲಿ ಹಲವು ರೂಪ ತೋರುವ | ಬಿಸಿ ಹಾಲಿಡುವಲ್ಲಿ ಬೆನ್ನ ಹಿಂದಿರುವ || ಮೊಸರು ಕಡೆವಲ್ಲಿ ಮುಂದೆ ತಾ ನಿಂದಿರುವ |  ಹಸನಾಗಿ ಮೋಸ ಮಾಡಿ ಬೆಣ್ಣೆಯ ಮೆಲುವ ||೧||  ಒಬ್ಬರ ಮನೆಯಲ್ಲಿ ಮಲಗಿ ತಾನಿರುವ |  ಒಬ್ಬರ ಮನೆಯಲ್ಲಿ ಪುಟ ಚೆಂಡನಾಡುವ ||  ಒಬ್ಬರ ಮನೆಯಲ್ಲಿ ರತಿ ಕ್ರೀಡೆಯಾಡುತ್ತಿರುವ |  ಒಬ್ಬರ ಮನೆಯಲ್ಲಿ ಬೆಣ್ಣೆ ಕದ್ದು ಮೆಲುವ ||೨||  ಹಿಂದೆ ನಿಂದಿರುವ ಮುಂದೆ ಹೋಗುತ್ತಿರುವ |  ಇಂದು ಮುಖಿಯರ ಕೂಡೆ ಸರಸವಾಡುವ ||  ಬಂದು ನೋಡೆ ಯಶೋದೆ ಬಣ್ಣದ ಮಾತಲ್ಲ |  ನಂದ ಗೋಪನ ಕಂದ ಪುರಂದರ ವಿಠಲ ||೩||  yashOde ninna kaMdage eShTu rUpavE ||pa||    shishuvalla ninna maga kRuShNa jagatpatiyE ||apa||    hasugaLa karevalli halavu rUpa tOruva | bisi hAliDuvalli benna hiMdiruva ||  mosaru kaDevalli muMde tA niMdiruva |  hasanAgi mOsa maaDi beNNeya meluva ||1||    obbara maneyalli malagi tAniruva |  obbara maneyalli puTa ceMDanADuva || obbara maneyal...

ಹೊಸ ಬೆಣ್ಣಿ ಕೊಡುವೆನು | ಪ್ರಸನ್ನವೆಂಕಟ | Hosa Benne Koduvenu | Prasanna Venkata

Image
ಸಾಹಿತ್ಯ : ಶ್ರೀ ಪ್ರಸನ್ನ ವೆಂಕಟ ದಾಸರು Kruti: Sri Prasanna Venkata Dasaru ಹೊಸ ಬೆಣ್ಣೆ ಕೊಡುವೆನು ಕುಸುಮನಾಭನೆ ಕೃಷ್ಣ ಮನೆಗೆ ಬಾರೋ ರಂಗ ಬಾರೋ ಮನೆಗೆ || ಪ || ಕೆನೆ ಹಾಲು ಮೊಸರು ತಂಗಳು ಬೆಣ್ಣೆ ನಿನಗೇನು ಬೇಕೋ ಹೇಳೋ ರಂಗಯ್ಯ || ಅಪ || ಕಳುವು ಮಾಡುವುದ್ಯಾಕೋ ಗೆಳೆಯರ ಸಂಗವ್ಯಾಕೋ ನಿನಗೇನು ಬೇಕೋ ಹೇಳೋ ರಂಗಯ್ಯಾ || ೧ || ಊರೂರು ತಿರುಗುವ ದಾಸನ ಮಗನೇನೋ ನಿನಗ್ಯಾವ ಕೊರತೆಯೋ ಎನ್ನ ಮನೆಯಲ್ಲಿ || ೨ || ನಿನ್ನ ದರುಶನವೇ ಚಿನ್ನದ ಅರಸೆ ಘನ್ನ ಮಹಿಮ ಪ್ರಸನ್ನ ವೆಂಕಟಪತಿ ಕೃಷ್ಣ || ೩ || hosa beNNe koDuvenu kusumanaabhane kRuShNa manege baarO raMga baarO manege || pa || kene haalu mosaru taMgaLu beNNe ninagEnu bEkO hELO raMgayya || apa || kaLuvu maaDuvudyaakO geLeyara saMgavyaakO ninagEnu bEkO hELO raMgayyaa || 1 || UrUru tiruguva daasana maganEnO ninagyaava korateyO enna maneyalli || 2 || ninna darushanavE cinnada arase Ganna mahima prasanna veMkaTapati kRuShNa || 3 ||

ಕಣ್ಣು ಎರಡು ಸಾಲದು | ಗುರು ಶ್ಯಾಮಸುಂದರ | Kannu eradu saaladu | Guru Shyamasundara

Image
ಸಾಹಿತ್ಯ : ಶ್ರೀ ಗುರು ಶ್ಯಾಮಸುಂದರ ವಿಠಲ ದಾಸರು Kruti: Sri Guru Shyamasundara Vittala Dasaru ಕಣ್ಣು ಎರಡು ಸಾಲದು ನಮ್ಮ ಬೆಣ್ಣೆ ಮೆಲ್ಲುವ ಬಾಲಕೃಷ್ಣನ ನೋಡಲು || ಪ || ಗುಂಗುರು ಕೂದಲಿಗೆ ಸಿಕ್ಕಿಸಿದ ನವಿಲುಗರಿ |  ಮುಂಗುರುಳಿನ ಕಾಂತಿ ಮುಖದ ಚೆಲುವ ರಾಶಿ || ಹೆಂಗಳೆಯರು ನಾಚಿ ಮೋಹಿಸುವ ರೀತಿ | ಹಿಂಗದೆ ನೋಡಲು ದೃಷ್ಟಿ ತಾಕುವ ಭೀತಿ || ೧ || ಹಣೆಯೊಳು ಒಪ್ಪುವ ಕಸ್ತೂರಿ ತಿಲಕ | ಕರ್ಣದೊಳು ಆಡುವ ಕುಂಡಲ ಝಳಕ || ವರ್ಣ ವರ್ಣದ ಪೀತಾಂಬರದ ಉಡುಗೆಯ | ವರ್ಣಿಸಲು ಅಳವಲ್ಲ ಮನುಜ ಮಾತಿನಲಿ || ೨ || ಚಾರು ಚರಣದಲ್ಲಿ ಶೋಭಿಪ ನೂಪುರ | ಸಾರ ಭಕ್ತರ ಮನವ ಸೂರೆಗೊಂಬ ತೆರದಿ || ಮಾರಪಿತ ಗುರು ಶ್ಯಾಮಸುಂದರ | ನಿನ್ನ ಈ ರೂಪವ ಎನ್ನ ಮನದಲಿ ನಿಲಿಸೊ || ೩ || kaNNu eraDu saaladu namma beNNe melluva baalakRuShNana nODalu || pa || guMguru kUdalige sikkisida navilugari |  muMguruLina kaaMti muKada celuva raashi || heMgaLeyaru naaci mOhisuva rIti | hiMgade nODalu dRuShTi taakuva bhIti || 1 || haNeyoLu oppuva kastUri tilaka | karNadoLu ADuva kuMDala JaLaka || varNa varNada pItaaMbarada uDugeya | varNisalu aLavalla manuja maatinali || 2 || caaru caraNadalli shObhipa nUpura | saara bhaktara manava sUregoMba ter...

ನಡಿರೆ ನಡಿರೆ ನೋಡುವ ಶ್ರೀಕೃಷ್ಣನ | ಮಹಿಪತಿದಾಸರು | Nadire nadire noduva | Mahipati

Image
ಸಾಹಿತ್ಯ : ಶ್ರೀ ಮಹಿಪತಿ ದಾಸರು Kruti: Sri Mahipati Dasaru ನಡಿರೆ ನಡಿರೆ ನೋಡುವ ಶ್ರೀಕೃಷ್ಣನ ನಡಿರೆ ನಡಿರೆ ನೋಡುವ ||ಪ|| ನಡಿರೆ ನೋಡುವ ಬನ್ನಿ ತುಡುಗ ಶ್ರೀಕೃಷ್ಣನ ಅಡಿಗಳಾಶ್ರಯ ಹಿಡಿವ ಮಂಡಲದೊಳು ||ಅ.ಪ.|| ತುಡುಗತನದಿ ಬಂದು ಕಡಿದ ಬೆಣ್ಣೆಯ ಮೆದ್ದು ಒಡನೆ ಗೋಪ್ಯೇರ ಕಾಡಿದ ನೋಡಮ್ಮ | ಬಿಡದೆ ಕಾಳಿಂಗನ ಹೆಡೆಯ ಮೆಟ್ಟಿದ ನೋಡಿ ತಡೆಯದೆ ಧುಮುಕಿದ ಮಡುವಿನೊಳು ರಂಗ ||೧|| ಕ್ರೀಡಿಸಿ ಗೋಪ್ಯೇರ ಉಡುಗೆ ಸೆಳೆದುಕೊಂಡು ಒಡನೆ ಗಿಡವನೇರಿದ ನೋಡಮ್ಮ | ಮಾಡಿದ ಮಣಿದ ಬಿಡದೆ ಬೇಡಿಸಿಕೊಂಡು ಒಡನೆ ಉಡುಗೆ ನೀಡಿದ ನೋಡಮ್ಮ ||೨|| ಬಡವರಿಗಳವಲ್ಲ ಪೊಡವಿಯೊಳಗೆ ಇದು ಆಡಿದಾನಂದದಾಟವ ನೋಡಮ್ಮ ಹಿಡಿಯ ಹೋಗಲು ಮೂಢ ಮಹಿಪತಿಯ ನೋಡಿ ಒಡಲ ಹೊಕ್ಕು ಕೂಡಿದ ಒಡೆಯನಮ್ಮ ||೩|| naDire naDire nODuva SrIkRuShNana naDire naDire nODuva ||pa|| naDire nODuva banni tuDuga SrIkRuShNana aDigaLASraya hiDiva maMDaladoLu ||a.pa.|| tuDugatanadi baMdu kaDida beNNeya meddu oDane gOpyEra kADida nODamma | biDade kALiMgana heDeya meTTida nODi taDeyade dhumukida maDuvinoLu raMga ||1|| krIDisi gOpyEra uDuge seLedukoMDu oDane giDavanErida nODamma | mADida maNida biDade bEDisikoMDu oDane uDuge nIDida nODamma ||2|| baDavarigaLavalla poDaviyoLage idu ADidAna...

ನಂದ ನಂದನ ಬಾರೋ | ಪುರಂದರವಿಠಲ | Nanda nandana baaro | Purandara vittala

Image
ಸಾಹಿತ್ಯ : ಶ್ರೀ ಪುರಂದರ ದಾಸರು Kruti: Sri Purandara dasaru ನಂದ ನಂದನ ಬಾರೋ || ಪ || ಎನಗೆ ನಿನ್ನ ಸೌಂದರ್ಯ ಲೀಲೆಯ ತೋರೋ ತೋರೋ || ಅಪ || ಕೊಳಲನೂದುವ ಚಂದದಿ ಹಣೆಯಲ್ಲಿ ಸುಳಿಗೂದಲಾಡುವಂದದಿ ಚಂದದಿ | ತುಳಸೀ ಪುಷ್ಪದ ಬೃಂದದಿ ಪುರದಾಚೆಯಲ್ಲಿ ನಲಿ ನಲಿದಾಡುವಂದದಿ ಚಂದದಿ ಘಲ ಘಲ ಘಲ ಘಲ ನಲಿವ ಕುಂಡಲ ನಿಜ ತೋಳುಗಳೊಪ್ಪುವ ಬಾಪುರಿಗಳಿಂದಲಿ ಥಳ ಥಳ ಥಳ ಥಳ ಕಾಂತಿಗಳಿಂದ || ೧ || ಮಣಿಯಿಲ್ಲದ ಕೌಸ್ತುಭದಿ ಎಸೆವ ಮುಕುಟ ಮಣಿಹಾರ ಶ್ರೀವತ್ಸದಿ ವತ್ಸದಿ  ಮಣಿಮಯ ಕಿರೀಟದಿ ಅಂದದೊಪ್ಪುವ ಅಗಣಿತ ಮಹ ತೇಜದಿ ತೇಜದಿ ಝಣ ಝಣ ಝಣ ಝಣ ಝಂ ಪರಿಮಳದಿ ಕಿಣಿ ಕಿಣಿ ಕಿಣಿ ಕಿಣಿ ಕಿಂಕಿಣಿ ರವದಿಂದ ಠಣ ಠಣ ಠಣ ಉಡು ಝಂಗೆಗಳಿಂದ || ೨ || ಅಮಿತ ಜಯ ಪಾಂಡುರಂಗ ವಿಜಯ ಭವ ಅಮರೇಶ ನಿಕರ ತುಂಗ ತುಂಗ ವಿಮಲಪುರಿ ಅಂತರಂಗ ಪುರಂದರ ವಿಠಲೇಶ ನಿಕರ ತುಂಗ ತುಂಗ ಘಮ ಘಮ ಘಮ ಘಮ ಘಂ ಪರಿಮಳದಿ ಅಮರರು ಮೃದಂಗ ತಾಳಗಳಿಂದ ಧಿಮಿ ಧಿಮಿ ಧಿಮಿ ಧಿಮಿ ಧಿಂ ಧಿಂ ಎನ್ನುತ || ೩ || naMda naMdana baarO || pa || enage ninna souMdarya lIleya tOrO tOrO || apa || koLalanUduva caMdadi haNeyalli suLigUdalaaDuvaMdadi caMdadi | tuLasI puShpada bRuMdadi puradaaceyalli nali nalidaaDuvaMdadi caMdadi Gala Gala Gala Gala naliva kuMDala nija tOLugaLoppuva baapurigaLiMdali thaLa thaLa thaLa thaLa kaaMtiga...

ಎಂದು ಕಾಂಬೆನೋ ಎನ್ನ ಸಲಹುವ | ಪ್ರಸನ್ನ ವೆಂಕಟ | Endu Kambeno Enna Salahuva | Prasanna Venkata

Image
ಸಾಹಿತ್ಯ : ಶ್ರೀ ಪ್ರಸನ್ನ ವೆಂಕಟ ದಾಸರು Kruti: Sri Prasanna Venkata Dasaru ಎಂದು ಕಾಂಬೆನೋ ಎನ್ನ ಸಲಹುವ ತಂದೆ ಉಡುಪಿನ ಜಾಣನ |  ಮಂದಹಾಸ ಪ್ರವೀಣನ ಇಂದಿರಾ ಭೂ ರಮಣನ ||ಪ|| ಕಡಲ ದಡದೊಳು ಎಸೆವ ರಂಗನ ಕಡಗೋಲ್ ನೇಣನು ಪಿಡಿದನಾ |  ಮೃಡ ಪುರಂದರರೊಡೆಯನ ಈರಡಿಗಳಲಿ ಶಿರವಿಡುವೆನಾ ||೧|| ದೇವಕಿಯ ಜಠರದಲಿ ಬಂದನ ಆವ ಪಳ್ಳಿಲಿ ನಿಂದನ |  ಮಾವ ಕಂಸನ ಕೊಂದನ ಕಾವನಯ್ಯ ಮುಕುಂದನ ||೨|| ಪೂರ್ಣಪ್ರಜ್ಞರಿಗೊಲಿದು ದ್ವಾರಕೆ ಮಣ್ಣಿನೊಳು ಪ್ರಕಟಿಸಿದನ |  ಭವಾರ್ಣವಕೆ ಪ್ಲವನಾದನ ಪ್ರಸನ್ನ ವೆಂಕಟ ಕೃಷ್ಣನ ||೩|| eMdu kAMbenO enna salahuva taMde uDupina jANana |  maMdahAsa pravINana iMdirA BU ramaNana ||pa||   kaDala daDadoLu eseva raMgana kaDagOlnENanu piDidanA |  mRuDa puraMdararoDeyana IraDigaLali SiraviDuvenA ||1||   dEvakiya jaTharadali baMdana Ava paLLili niMdana |  mAva kaMsana koMdana kAvanayya mukuMdana ||2||   pUrNaprajnarigolidu dvArake maNNinoLu prakaTisidana |  BavArNavake plavanAdana prasanna veMkaTa kRuShNana ||3||

ಶರಣೆಂಬೆ ವಾಣಿ | ಪುರಂದರ ವಿಠಲ | Shranembe Vaani | Purandara Vittala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಶರಣೆಂಬೆ ವಾಣಿ ಪೊರೆವ ಕಲ್ಯಾಣಿ ||ಪ||  ವಾಗಾಭಿಮಾನಿ ವರ ಬ್ರಹ್ಮಾಣಿ |  ಸುಂದರ ವೇಣಿ ಸುಚರಿತ್ರಾಣಿ ||೧||  ಜಗದೊಳು ನಿಮ್ಮ ಪೊಗಳುವೆನಮ್ಮಾ |  ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ ||೨||  ಪಾಡುವೆ ಶೃತಿಯ ಬೇಡುವೆ ಮತಿಯ |  ಪುರಂದರ ವಿಠಲನ ಸೋದರ ಸೊಸೆಯ ||೩||  sharaNeMbe vANi poreva kalyANi ||pa||    vAgABimAni vara brahmANi |  suMdara vENi sucaritrANi ||1||    jagadoLu nimma pogaLuvenammA |  hariya tOriseMdu prArthipenamma ||2||    pADuve shRutiya bEDuve matiya |  puraMdara viThalana sOdara soseya ||3||

ಜಗದ ಇರವು | ಕನ್ನಡ ದ್ವಾದಶಸ್ತೋತ್ರ | Jagada iravu | Dwadasha Stotra Kannada

Image
ಸಾಹಿತ್ಯ : ಶ್ರೀ ಮನ್ಮಧ್ವಾಚಾರ್ಯರ ದ್ವಾದಶ ಸ್ತೋತ್ರದ ಏಳನೇ ಅಧ್ಯಾಯ  ಕನ್ನಡ ಅನುವಾದ : ಶ್ರೀ ಬನ್ನಂಜೆ ಗೋವಿಂದಾಚಾರ್ಯರು   Kruti: Srimanmadhwacharya's 7th Chapter of Dwadasha Stotra Kannada Translation: Sri Bannanje Govindacharya  ಜಗದ ಇರವು ಮೇಣಳಿವು ಹುಟ್ಟು ಐಸಿರಿಯ ಹಿರಿಯ ಯೋಗ | ಬಾಳು ತಿಳಿವು ನಿಯಮನವು ಅಂತೆ ಅಜ್ಞಾನ ಬಂಧ ಮೋಕ್ಷ || ಯಾವ ರಮೆಯ ಕಡೆಗಣ್ಣ ನೋಟಕೀ ಎಲ್ಲ ನಡೆಯುತಿಹುದೋ | ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೧ || ಬ್ರಹ್ಮ-ರುದ್ರ-ದೇವೇಂದ್ರ-ಸೂರ್ಯ-ಯಮಧರ್ಮ-ಚಂದ್ರರಾದಿ | ಸುರರ ಗುಂಪು ಈ ಜಗದ ವಿಜಯವನು ತಿಳಿವಿಗೆಟುಕದಂಥ || ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನಡೆಯುತಿಹುದೋ | ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೨ || ಧರ್ಮನಿರತ ಸಜ್ಜನರ ಪೂಜೆಯನು ಕೊಳುವ ದೇವತೆಗಳೂ | ಸತ್ಯದರಿವು-ಧರ್ಮಾರ್ಥ-ಕಾಮ-ಮುಂತಾದ ಮಂಗಲವನು || ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನೀಡುತಿಹರೋ | ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೩ || ಯಾರನಾಶ್ರಯಿಸೆ ಬಾಳ ದುಗುಡ ನಮ್ಮೆಡೆಗೆ ಬರದೊ ಅಂಥ | ಆರು ವೈರಿಗಳ ಗೆದ್ದ ಮುನಿಗಳೂ ಹರಿಯ ಮಹಿಮೆಯನ್ನು || ಯಾವ ರಮೆಯ ಕಡೆಗಣ್ಣ ನೋಟದಾಶ್ರಯದಿ ನೆನೆಯುತಿಹರೋ | ಅಂಥವಳನು ತನ್ನ ಮೆಲುನೋಟದಿಂದ ಕಾಪಿಡುವ ಹರಿಗೆ ನಮನಂ || ೪ || ಶೇಷ-ಗರುಡ-ಗೌರೀಶ-ಇಂದ್ರ-ಮನು ಎಂಬ ತುಂಬ ಬಗೆಯ | ಸೃಷ...

ಕರುಣದಿಂದ ಕರವ ಪಿಡಿಯೊ ತೊರವೆ ನರಹರೇ | ಇಂದಿರೇಶ | Karunadinda Karava Pidiyo | Indiresha

Image
ಸಾಹಿತ್ಯ :    ಶ್ರೀ ಇಂದಿರೇಶ ದಾಸರು  Kruti: Sri Indiresha Dasaru ಕರುಣದಿಂದ ಕರವ ಪಿಡಿಯೊ ತೊರವೆ ನರಹರೇ ಶರಣಾಗತರಿಗಮರ ತರುವೆ ಕರುಣ ಬೇಡುವೆ || ಪ || ಸ್ತಂಭಜಾತ ನಂಬಿಹೆನೊ ಅಂಬುಜಾಕ್ಷನೆ ಡಿಂಭನಂತೆ ಪಾಲಿಸೆನ್ನ ಸಾಂಬವಿನುತನೆ || ೧ || ಛಟಛಟೆಂದು ಒಡೆದು ಕಂಭ ಪುಟಿದು ಸಭೆಯೊಳು ಕಟಿಯ ತಟದೊಳಿಟ್ಟು ನೃಪನ ಒಡಲ ಬಗೆದೆಯೊ || ೨ || ಇಂದಿರೇಶ ಎನ್ನ ಹೃದಯಮಂದಿರದೊಳು  ಬಂದು ತೋರೋ ನಿನ್ನ ಮುಖವ ವಂದಿಸುವೆವು || ೩ || karuNadiMda karava piDiyo torave naraharE sharaNaagatarigamara taruve karuNa bEDuve || pa || staMbhajaata naMbiheno aMbujaakShane DiMbhanaMte paalisenna saaMbavinutane || 1 || CaTaCaTeMdu oDedu kaMbha puTidu sabheyoLu kaTiya taTadoLiTTu nRupana oDala bagedeyo || 2 || iMdirESa enna hRudayamaMdiradoLu  baMdu tOrO ninna muKava vaMdisuvevu || 3 ||

ಎಂದು ಕಾಂಬೆನು ನಿನ್ನ ಹೇ ಶ್ರೀನಿವಾಸ | ಶ್ರೀದವಿಠಲ | Endu kambenu ninna | Srida Vittala

Image
ಸಾಹಿತ್ಯ : ಶ್ರೀ ಶ್ರೀದವಿಠಲ ದಾಸರು Kruti: Sri Srida Vittala Dasaru ಎಂದು ಕಾಂಬೆನು ನಿನ್ನ ಹೇ ಶ್ರೀನಿವಾಸ || ಪ || ನಗೆಮೊಗದ ನತಜನ ಬಂಧು ನೀ ಬಾರೆನ್ನ ಸದಾ ಸುಪ್ರಸನ್ನ  ಮುಂದೆ ಗತಿ ಏನಯ್ಯ ಭಕುತರ ಹಿಂದುಳಿದುದಲ್ಲದೆಲೆ ತನು ಸಂಬಂಧಿಗಳ ವಶನಾಗಿ ದುರ್ವಿಷಯಾಂಧ ಕೂಪದಿ ಮುಳುಗಿದವನಾ || ಅಪ || ಹಲವು ಜನ್ಮದ ನೋವ ನಾ ಹೇಳಿ ಕೊಳಲೆನ್ನಳವೆ ದೇವರದೇವಾ ಭೂವಲಯದೊಳು ನಂಬಿದ ಭಕುತರ ಕಾವ ಮಹಾನುಭಾವ ಸುಲಭರಲಿ ಅತಿ ಸುಲಭವೆಂದು ಅಲವಭೋದ ಮತಾನುಗರು ಎನಗೊಲಿದು ಪೇಳಿದ್ದ  ದನು ಮನದಲಿ ತಿಳಿದುದೇನಿಸುವೆನಲು ಕಲುಷ ಸಂಸ್ಕಾರಗಳ ವಶದಿಂ ಫಲವು ಗಾಣದೆ ಹಲಬುತಿರುವೆನು ಹೊಲಯ ಮನದ್ಹರಿದಾಟ ತಪ್ಪಿಸಿ  ನೆಲೆಯ ನಿಲ್ಲಿಸದಿರ್ದ ಬಳಿಕ || ೧ || ಭಾರತೀಪತಿಪ್ರೀಯ ಎಂದೆಂದೂ ಭಕುತರ ಭಾರ ನಿನ್ನದು  ಜೀಯ ಜಗವರಿಯೆ ಕರುಣಾ ವಾರಿನಿಧಿ ಪಿಡಿ ಕೈಯ್ಯಾ ಫಣಿರಾಜ ಶಯ್ಯ  ತಾರಕನು ನೀನೆಂದು ತಿಳಿಯದ ಕಾರಣದಿ ಸುಖದುಃಖಮಯ  ಸಂಸಾರ ದುಸ್ತರ ವಾರಿಧಿಯೊಳು ಪಾರುಗಾಣದೆ ಪರಿದು ಪೋಪೆನೊ ದೂರ ನೋಳ್ಪುದು ಧರ್ಮವಲ್ಲವೊ ದ್ವಾರಕಾಪುರ ನಿಲಯ ಪರಮೋದಾರ ಕರುಣದಿ ರಕ್ಷಿಸುವ ಭಾರ ನಿನ್ನದೊ ಭವ ವಿಮೋಚಕ || ೨ || ವಿಖನ ಸಾರ್ಚಿತ ಪಾದ ವಿಶ್ವೇಶ ಜನ್ಮಾದ್ಯಖಿಳ ಕಾರಣನಾದ ನಿರ್ದೋಷ ಚಿತ್ತನೆ ಸುಖ ಗುಣಾರ್ಣವ ಶ್ರೀದವಿಠಲ ಪ್ರಸೀದ ಸಕಲ ಸತ್ಕೃತು ಯಾಗಗಳು ಬಂಧಕವು ತೋತ್ಪರ ಇಲ್ಲದಿರಲೆನೆ ನಿಖಿಲ ಜೀವರು ಭಿನ್ನ ನಿನ್ನಯ ಶಕುತಿಗೆ ನಮೋ ಎಂಬೆನಲ್ಲದೆ ಯುಕ...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru