ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶ್ರೀ ಜಗನ್ನಾಥ ದಾಸ ನಮಿಪೆ | ಶ್ರೀದವಿಠಲ | Sri Jagannatha dasa namipe | Srida Vithala


ಸಾಹಿತ್ಯ : ಶ್ರೀ ಶ್ರೀದ ವಿಠಲ ದಾಸರು
Kruti:Sri Srida Vittala Dasaru


ಶ್ರೀ ಜಗನ್ನಾಥ ದಾಸ ನಮಿಪೆ 
ಗುರು ರಾಜ ಸಾತ್ವಿಕ ವಪುಷ || ಪ ||
ಈ ಜಗದೊಳು ನಿಮಗೆಣೆಗಾಣೆ ಸತತ ನಿರ್ವ್ಯಾಜದಿ 
ಹರಿಯ ಗುಣೋಪಾಸನೆ ಮಾಳ್ಪ || ಅಪ ||

ಹರಿದಾಸ ಕುಲವರ್ಯರೆನಿಸಿ ಕಲ್ಪತರುವಂದದಿ ಚರ್ಯ 
ಚರಿಸುತ ಧರೆಯೊಳು ಮೆರೆವ ಮಹಾತ್ಮರ 
ಚರಣೇಂದ್ರೀವರಯುಗ್ಮ ದರುಶನ ಮಾಳ್ಪರ
ದುರಿತರಾಶಿಗಳಿರಗೊಡದೆ ನೆರೆ ಪರಮ ಮುಕ್ತಿಯ ದಾರಿ ತೋರುತ 
ಸಿರಿ ಸಹಿತ ಹರಿ ತೋರುವಂದದಿ
ಕರುಣ ಮಾಳ್ಪ ಸುಗುಣಮಹೋದಧಿ || ೧ ||

ರವಿಯು ಸಂಚರಿಸುವಂತೆ ಭೂವಲಯದಿ ಕವಿಶ್ರೇಷ್ಠ ಚರಿಸಿದೆಯೋ 
ಅವಿರುದ್ಧ ತ್ರಯಿಜ್ಞಾನ ಪ್ರವಹಂಗದಲಿ
ಭುವನೈಕ ವೇದವೇದ್ಯನ ಶ್ರವಣಭಕುತಿಯಿಂದ 
ದಿವಸ ದಿವಸದಿ ಪ್ರೀತಿ ಬಡಿಸುತ ಧ್ರುವವರನಂಘ್ರಿಗಳಿಗರ್ಪಿಸಿ 
ಭುವನ ಪಾವನ ಮಾಡಲೋಸುಗ ಅವನಿ ತಳದಿ ವಿಹರಿಸುತಿಹ ಗುರು || ೨ ||

ಅಹೋ ರಾತ್ರಿ ಕ್ಷಣ ಬಿಡದೆ ಸನ್ಮನದಿ ಹೃದ್ಗುಹಾಧೀಶನನು ಬಿಡದೆ 
ಸಹನ ಗುಣಗಳನ್ನು ಅನುದಿನ ಸ್ಮರಿಸುತ್ತ ಸಹನದಿ ಶಮದಮಯತು ನಿಯಮಗಳನ್ನು 
ವಹಿಸಿ ಶ್ರೀದವಿಠಲನಂಘ್ರಿಯ ಮಹಿಮೆ ತೋರುತ ಪೂಜಿಸುತ 
ಬಲು ಮಹಿತ ಪೂರ್ಣಾನಂದತೀರ್ಥರ ವಿಹಿತ ಶಾಸ್ತ್ರಗಳರಿತು ಬೋಧಿಪ || ೩ ||

shrI jagannaatha daasa namipe 
guru raaja saatvika vapuSha || pa ||
I jagadoLu nimageNegaaNe satata nirvyaajadi 
hariya guNOpaasane maaLpa || apa ||

haridaasa kulavaryarenisi kalpataruvaMdadi carya 
carisuta dhareyoLu mereva mahaatmara 
caraNEMdrIvarayugma darushana maaLpara
duritaraashigaLiragoDade nere parama muktiya daari tOruta 
siri sahita hari tOruvaMdadi
karuNa maaLpa suguNamahOdadhi || 1 ||

raviyu saMcarisuvaMte bhUvalayadi kavishrEShTha carisideyO 
aviruddha trayijnaana pravahaMgadali
bhuvanaika vEdavEdyana shravaNabhakutiyiMda 
divasa divasadi prIti baDisuta dhruvavaranaMghrigaLigarpisi 
bhuvana paavana maaDalOsuga avani taLadi viharisutiha guru || 2 ||

ahO raatri kShaNa biDade sanmanadi hRudguhaadhIshananu biDade 
sahana guNagaLannu anudina smarisutta sahanadi shamadamayatu niyamagaLannu 
vahisi shrIdaviThalanaMGriya mahime tOruta pUjisuta 
balu mahita pUrNaanaMdatIrthara vihita shaastragaLaritu bOdhipa || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru