ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹರಿಯ ಪಟ್ಟದರಾಣಿ | ಹಯವದನ | Hariya Pattadarani | Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಹರಿಯ ಪಟ್ಟದರಾಣಿ ನಿಮ್ಮ ಸಿರಿಚರಣಕ್ಕೆ ನಾ ಶರಣೆಂಬೆ
ಧರಣಿ ಒರೆಸಮ್ಮ ದುರಿತಘಮ್ಮ ವಸುಧಮ್ಮ || ಪ ||

ಧನಧಾನ್ಯವಿತ್ತು ಮರ್ತ್ಯರ ಪೊರೆವೆ ಎಂದೆಂದು ಮನೆಗಿಂಬುಕೊಟ್ಟು 
ರಕ್ಷಿಸಿದೆ ದಿನದಿನದಿ ಚರಣವಿಟ್ಟರೆ ನೊಂದುಕೊಳೆ ನಿನ್ನಗುಣಕೆ ಭೂದೇವಿ ಸರಿಗಾಣೆ 
ಸಕಲಮುನಿ-ಜನರ ಪೊರೆವುದು ನಿಮ್ಮಾಣೆ ನಾರಾಯಣ ಬಂದು ನಿನ್ನ ಸಲಹುವ ಪ್ರವೀಣೆ || ೧ ||

ಸಪ್ತಸಮುದ್ರಗಳ ಪೊತ್ತಿಪ್ಪೆ ನಿತ್ಯ ಸಮಸ್ತಪರ್ವತಭಾರವ ನೀ ತಾಳ್ವೆ
ಉತ್ತಮ ತ್ರಿವಿಕ್ರಮನ ರಥೋತ್ಸಹಕೆ ಮೊದಲಾದ ಪವಿತ್ರಾಂಕುರಾರ್ಪಣಕೆ 
ನೀ ಬಂದು ವರಿಯ ಸುತ್ತಿನ ಪವಳಿಯೊಳಗೆ ನಿಂದು ನಮಗೆ ಮುಕ್ತಿ ಪದವೀವುದಕೆ ಬಾ ಕೃಪಾಸಿಂಧು || ೨ ||

ನಿನಗೆ ದ್ರೋಹವ ಮಾಡಿದ ಹಿರಣ್ಯಾಕ್ಷನೆಂಬ ದನುಜನ ವರಾಹನಾಗಿ ಮೊನೆಯದಾಡೆಯ 
ಕೊನೆಯಲಿರಿದು ಕೊಂದು ನಿನ್ನ ಮನೋಹರ ತೊಡೆಯಲಿಟ್ಟುಕೊಂಡ ಸಿರಿ ಹಯವದನ ಹರಿಯಕರ ಕರಿಭೇರುಂಡ ಸಿರಿಗೆ ಸರಿಯೆನಿಸಿ ನಿನ್ನನ್ನು ಪೊರೆಯುತಲಿಹನು ಕಂಡಾ || ೩ ||

hariya paTTadarANi nimma siricharaNakke nA sharaNeMbe
dharaNi oresemma duritaGamma vasudhamma || pa ||

dhanadhAnyavittu martyara poreve eMdeMdu manegiMbukoTTu 
rakShiside dinadinadi caraNaviTTare noMdukoLe ninnaguNake BUdEvi sarigANe 
sakalamuni-janara porevudu nimmANe nArAyaNa baMdu ninna salahuva pravINe || 1 ||

saptasamudragaLa pottippe nitya samastaparvataBArava nI tALve
uttama trivikramana rathOtsahake modalAda pavitrAMkurArpaNake 
nI baMdu variya suttina pavaLiyoLage niMdu namage mukti padavIvudake bA kRupAsiMdhu || 2 ||

ninage drOhava mADida hiraNyAkShaneMba danujana varAhanAgi moneyadADeya 
koneyaliridu koMdu ninna manOhara toDeyaliTTukoMDa siri hayavadana hariyakara kariBEruMDa sirige sariyenisi ninnannu poreyutalihanu kaMDA || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru