ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ನಾರಾಯಣ ನಾರಾಯಣ ಗೋವಿಂದ ಹರೀ ನಾರಾಯಣ ನಾರಾಯಣ ಗೋವಿಂದ ||ಪ|| ನಾರಾಯಣ ಗೋವಿಂದ ಗೋವಿಂದ ಮುಕುಂದ ಪರತರ ಪರಮಾನಂದ ||ಅಪ|| (ಬದರಿ, ಪಂಢರಿ, ಉಡುಪಿ, ರಂಗ, ತಿರುಮಲ, ವೆಂಕಟ) ಮೊದಲು ಮತ್ಸ್ಯನಾಗಿ ಉದಿಸಿ ಸೋಮನ ಸದೆದು ವೇದಗಳ ತಂದ | ಮಂದರಧರ ತಾ ಸಿಂಧುವಿನೊಳಮೃತ ತಂದು ಭಕ್ತರಿಗೆ ಉಣಲೆಂದ ನಾರಾಯಣ ನಾರಾಯಣ ಗೋವಿಂದ ಹರಿ ನಾರಾಯಣ ನಾರಾಯಣ ಗೋವಿಂದ ಮತ್ಸ್ಯ ನಾರಾಯಣ ನಾರಾಯಣ ಗೋವಿಂದ ಕೂರ್ಮ ನಾರಾಯಣ ನಾರಾಯಣ ಗೋವಿಂದ ಭೂಮಿಯ ಕದ್ದಾ ಖಳನ ಮರ್ದಿಸಿ ಆ ಮಹಾಸತಿಯೆಳ ತಂದ ದುರುಳ ಹಿರಣ್ಯನ ಕರುಳು ಬಗೆದು ತನ್ನ ಕೊರಳೊಳಗಿಟ್ಟಾ ಬಗೆಯಿಂದಾ ನಾರಾಯಣ ನಾರಾಯಣ ಗೋವಿಂದ ಹರಿ ನಾರಾಯಣ ನಾರಾಯಣ ಗೋವಿಂದ ವರಾಹ ನಾರಾಯಣ ನಾರಾಯಣ ಗೋವಿಂದ ನರಹರಿ ನಾರಾಯಣ ನಾರಾಯಣ ಗೋವಿಂದ ಪುಟ್ಟನಾಗಿ ಮಹಿಕೊಟ್ಟ ಬಲಿಯ ತಲೆ ಮೆಟ್ಟಿ ತುಳಿದ ದಯದಿಂದ ಧಾತ್ರಿಯೊಳು ಮುನಿ ಪುತ್ರನಾಗಿ ಬಂದು ಕ್ಷತ್ರಿಯರೆಲ್ಲರ ಕೊಂದ ನಾರಾಯಣ ನಾರಾಯಣ ಗೋವಿಂದ ಹರಿ ನಾರಾಯಣ ನಾರಾಯಣ ಗೋವಿಂದ ವಾಮನ ನಾರಾಯಣ ನಾರಾಯಣ ಗೋವಿಂದ ಭಾರ್ಗವ ನಾರಾಯಣ ನಾರಾಯಣ ಗೋವಿಂದ ಮಡದಿಗಾಗಿ ಸರಗಡಲನೆ ಕಟ್ಟಿ ಹಿಡಿದು ರಾವಣನ ಕೊಂದ ಗೋಕುಲದಿ ಪುಟ್ಟಿ ಗೋವಳ...
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಸ್ತ್ರೀಯರೆಲ್ಲರು ಬನ್ನಿರೆ | ಶ್ರೀನಿವಾಸನ ಪಾಡಿರೇ ಜ್ಞಾನಗುರುಗಳಿಗೊಂದಿಸಿ | ಮುಂದೆ ಕಥೆಯ ಪೇಳುವೆ || ಗಂಗಾತೀರದಿ ಋಷಿಗಳು | ಅಂದು ಯಾಗವ ಮಾಡಿದರು ಬಂದು ನಾರದ ನಿಂತುಕೊಂಡು | ಯಾರಿಗೆಂದು ಕೇಳಲು ಅರಿತು ಬರಬೇಕು ಎಂದು | ಆ ಮುನಿಯು ತೆರಳಿದ -ಭೃಗುಮುನಿಯು ತೆರಳಿದ ನಂದಗೋಪನ ಮಗನ ಕಂದನ | ಮಂದಿರಕಾಗೆ ಬಂದನು ವೇದಗಳನೆ ಓದುತಾ | ಹರಿಯನು ಕೊಂಡಾಡುತಾ ಇರುವ ಬೊಮ್ಮನ ನೋಡಿದ | ಕೈಲಾಸಕ್ಕೆ ಬಂದನು ಕಂಭುಕಂಠನು ಪಾರ್ವತೀಯು | ಕಲೆತಿರುವುದ ಕಂಡನು ಸೃಷ್ಟಿಯೊಳಗೆ ನಿನ್ನ ಲಿಂಗ | ಶ್ರೇಷ್ಠವಾಗಲೆಂದನು ವೈಕುಂಠಕ್ಕೆ ಬಂದನು | ವಾರಿಜಾಕ್ಷನ ಕಂಡನು ಕೆಟ್ಟ ಕೋಪದಿಂದ ಒದ್ದರೆ | ಎಷ್ಟು ನೊಂದಿತೆಂದನು ತಟ್ಟನೆ ಬಿಸಿನೀರಿನಿಂದ | ನೆಟ್ಟಗೆ ಪಾದ ತೊಳೆದನು ಬಂದ ಕಾರ್ಯ ಆಯಿತೆಂದು | ಅಂದು ಮುನಿಯು ತೆರಳಿದ ಬಂದು ನಿಂದು ಸಭೆಯೊಳಗೆ | ಇಂದಿರೇಶನ ಹೊಗಳಿದ ಪತಿಯ ಕೂಡೆ ಕಲಹ ಮಾಡಿ | ಕೊಲ್ಹಾಪುರಕೆ ಹೋದಳು ಸತಿಯು ಪೋಗೆ ಪತಿಯು ಹೊರಟು | ಗಿರಿಗೆ ಬಂದು ಸೇರಿದ ಹುತ್ತದಲ್ಲೇ ಹತ್ತು ಸಾವಿರ ವರುಷ | ಗುಪ್ತವಾಗೇ ಇದ್ದನು ಬ್ರಹ್ಮ ಧೇನುವಾದನು | ರುದ್ರ ವತ್ಸನಾದನು ಧೇನು ಮುಂದೆ ಮಾಡಿಕೊಂಡು | ಗೋಪಿ ಹಿಂದೆ ಬಂದಳು ಕೋಟಿ ಹೊನ್ನು ಬಾಳುವೋದು | ಕೊಡದ ಹಾಲು ಕರೆವುದು ಪ್ರೀತಿಯಿಂದಲಿ ತನ್ನ ಮನೆಗೆ | ತಂದುಕೊಂಡನು ಚೋಳನು ಒಂದು ದಿವಸ ಕಂದಗ್ಹಾಲು | ಚೆಂದದಿಂದಲಿ ಕೊ...
ಸಾಹಿತ್ಯ : ಶ್ರೀ ವಿಜಯ ದಾಸರು Kruti: Sri Vijaya Dasaru ಕಂಕಣಾಕಾರವನ್ನು ಬರೆದು ಅದರ ಮಧ್ಯ | ಓಂಕಾರ ಎರಡು ಎಡ-ಬಲದಿ ರಚಿಸಿ | ಶಂಕೆ ಇಲ್ಲದೆ ನಡುವೆ ಘೃಣಿಯೆಂದು ಲಿಪಿಸಿ ಮೀ | ನಾಂಕನಯ್ಯನ ಪೀಠಸ್ಥಳವಿದೆಂದು | ಬಿಂಕದಲಿ ಸ್ವರದೊಳಗೆ ಕಡಿಯಣಾ ಸ್ವರವೆ ಎರಡಾ | ಲಂಕಾರವನೆ ಮಾಡಿ ಅದರ ಬಳಿಯ | ಕಂಕಣಾಕಾರವನ್ನು ಒಳಗೆ ಮಾಡಿಟ್ಟುಕೊಂಡು | ಮಂಕುಮತಿಯ ತೊರೆದು ತ್ರಿಕೋಣಸುತ್ತಿಸಿ | ಶ್ರೀಂಕಾರ ಇಚ್ಛಾಶಕ್ತಿ ಕ್ಲೀಂಕಾರ ಕ್ರಿಯಾಶಕ್ತಿ | ಹ್ರೀಂಕಾರ ಜ್ಞಾನಶಕ್ತಿ ಮೂರು ಮೂಲೆಗೆ ಬರೆಯೊ | ಪಂಕಜ ಪಾಣಿಯು ಶ್ರೀ - ಭೂ - ದುರ್ಗಾನಾಮಕಳು | ಪಂಕಜಾಕ್ಷನ ರೂಪ ಮೂರು ಉಂಟು | ಕಂಕಣಾಕಾರ ಮರಳೆ ತ್ರಿಕೋಣ ಮೇಲೆ ಬರೆದು | ಸಂಕೋಚವಾಗಿ ಇದೆ ದ್ವಿತೀಯ ವಲಯ | ಪಂಕಜ ಮಿತ್ರ ಸೋಮ ಅಗ್ನಿ ಜನರ ನಾಗ ಕಂಕಣ ಅನಲ ವರುಣ ದಿಕ್ಕಿಗೆ ರಚಿಸಿ | ಕಿಂಕರ ಜನಪಾಲ ವಿಜಯ ವಿಠ್ಠಲ ಅಕ | ಳಂಕನ ಭಜಿಸುವುದು ಹೃದಯದಲಿ ತಿಳಿದು ||೧|| ಮಟ್ಟ ತಾಳ ಕರಿ ಅಜ ರಥ ವೀಥಿ ಎಂದೆಂಬುವ ಮೂರು | ಬರೆದು ಇದಕೆ ಹನ್ನೆರಡು ರಾಶಿಗಳು ವಿ- | ಸ್ತರವಾಗಿ ಉಂಟು ಎರಡೆರಡೊಂದು ಕಡೆ | ಅರಿವದು ಸ್ಥಿಮಿತ ಸಮಗತಿ ತ್ವರಗತಿ ಸೂರ್ಯನ್ನ | ಎರಡು ನಾಲಕು ಕೋಣೆ ವಿರಚಿಸಿ ಅದರ ಮೇಲೆ | ಮರಳೆ ಮಧು - ಮಾಧವಾ ಕರೆಸುವ ಋತು ಒಂದು | ಬರೆದು ಪ್ರಣವ ವಿವರ ಹೃದಯದಲ್ಲಿ ನಮ | ಸ್ಕರಿಸು ಜ್ಞಾನಾತ್ಮನೆಂದು | ಧರಿಸು ಈ ಪರಿ ಮೂರು ಎರಡು ಕೋಣಿಯ ಮಧ್ಯ | ತರುವಾಯ ಮಾಸ - ಋತು ವರುಷ ತಾರಕ ಸಂ | ಸ್ಮರಿಸಿ ಕ್ರಮ ವರ್...