ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹರೇ ವೇಂಕಟಶೈಲ | ಶ್ರೀಪತಿ ವಿಠಲ | Hare Venkata Shaila | Sripati Vithala


ಸಾಹಿತ್ಯ :    ಶ್ರೀ ಶ್ರೀಪತಿ ವಿಠಲ ದಾಸರು 
Kruti: Sri Sripathi Vittala Dasaru


ಹರೇ ವೇಂಕಟಶೈಲ ವಲ್ಲಭ ಸ್ಮರಿಸುವೆ ನಾ ನಿನ್ನ || ಪ ||
ಕರುಣಾಪೂರ್ಣ ವರಪ್ರದ ಚರಿತಾ ಪರಿಪಾಲಿಸು ನಮ್ಮ || ಅಪ ||

ಪತಿತ ಪಾವನಾ ನತಜನ ಅತಿಹಿತ ದಿತಿಜ ಮಥನ ರಂಗ |
ಪ್ರತತಾಚ್ಯುತ ಅಚ್ಯುತನಿಲಯನೆ ಕೇಳ್ ಸತತ ಸುಗುಣ ರಂಗ || ೧ ||

ದೋಷದೂರ ಪರಾಶರಾರ್ಚಿತ ಕ್ಲೇಷ ನಾಶ ದೇವಾ |
ವಾಸುದೇವ ಸರ್ವೇಶ ಸಾಧುಜನ ಪೋಷ ಸುಪ್ರಭಾವ || ೨ ||

ಅಜಭವನುತ ಪದ ದ್ವಿಜ ಧ್ವಜಗಮನ ಭಜಕರ ಭಯಹಾರಿ |
ತ್ರಿಜಗ ಪೋಷಕ ಶ್ರೀಪತಿ ವಿಠಲ ನಿಜ ಜನರುಪಕಾರಿ || ೩ ||

harE vEMkaTashaila vallabha smarisuve naa ninna || pa ||
karuNaapUrNa varaprada caritaa paripaalisu namma || apa ||

patita paavanaa natajana atihita ditija mathana raMga |
pratataacyuta acyutanilayane kEL satata suguNa raMga || 1 ||

dOShadUra paraasharaarcita klESha naasha dEvaa |
vaasudEva sarvEsha saadhujana pOSha suprabhaava || 2 ||

ajabhavanuta pada dvija dhvajagamana bhajakara bhayahaari |
trijaga pOShaka shrIpati viThala nija janarupakaari || 3 ||

Popular posts from this blog

ಹರಿಕಥಾಮೃತಸಾರ | ಪಿತೃಗಣ ಸಂಧಿ | ಜಗನ್ನಾಥವಿಠಲ | Pitrugana Sandhi | Jagannatha Dasaru | Harikathamruthasara

ಗೌರಿ ಆರತಿ ಹಾಡು | ಗೌರಿ ದೇವಿಗೆ ಸಖಿ | ಶ್ಯಾಮಸುಂದರ | Gouri Arati Song | Gouri Devige| Shyamasundara

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru