ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಓಡಿ ಓಡಿ ಬಾ | ಇಂದಿರೇಶ ದಾಸರು | Odi Odi Baa | Indiresha Dasaru


ಸಾಹಿತ್ಯ :    ಶ್ರೀ ಇಂದಿರೇಶ ದಾಸರು (ಇಂದಿರೇಶ) 
Kruti: Sri Indiresha Dasaru (Indiresha)


ಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ | ನೋಡುವೆ
ನಿನ್ನಯ ಮುಖವನು ರಾಮನ ಕೂಡಿ ಕರುಣಿಯೇ ಬಾ || ಪ ||

ಚೆಂಡು ಕೊಡುವೆನೊ ಬಾ ಗೋಲಿ ಗುಂಡು ಕೊಡುವೆನು ಬಾ ||
ದುಂಡು ಕರದೊಳು ಗುಂಡು ಬಿಂದುಲಿ ಉಂಗುರ ನೀಡುವೆ ಬಾ || ೧ ||

ಬೆಣ್ಣೆ ಕೊಡುವೆನು ಬಾ ಬಾಳೆಹಣ್ಣು ಕೊಡುವೆನು ಬಾ ||
ಸಣ್ಣ ಸಣ್ಣ ಹೆಜ್ಜೆಯನಿಕ್ಕುತ ಮನ್ಮಥಪಿತನೇ ಬಾ || ೨ ||

ನಾರಿವತ್ಸೆ ಬಾ ಮುತ್ತಿನ ಹಾರ ಹಾಕುವೆ ಬಾ |
ಪಾರಿಜಾತ ಮುಡಿಸಿದ ರುಕ್ಮಿಣಿ ಧೀರ ಕೃಷ್ಣನೆ ಬಾ || ೩ ||

ಮುರಳೀಧರನೇ ಬಾ ಮುಂಗುರುಳ ಭೂಷಿತ ಬಾ |
ಪರಿಪರಿ ವಸ್ತ್ರವನ್ನಿಟ್ಟು ನೋಡುವೆ ಮರಳಿ ಮರಳಿ ಬಾ || ೪ ||

ನಂದನ ಕಂದನೆ ಮನಕಾನಂದ ಪಡಿಸುತಾ ನಿಂದಿರ ನಾರಿ ||
ನಿನ್ನ ನೋಡದೆ ಇಂದಿರೇಶನೇ ಬಾ ಬಾ || ೫ ||

ODi ODi baa aMkadoLaaDO kUsE baa | nODuve
ninnaya muKavanu raamana kUDi karuNiyE baa || pa ||

ceMDu koDuveno baa gOli guMDu koDuvenu baa ||
duMDu karadoLu guMDu biMduli uMgura nIDuve baa || 1 ||

beNNe koDuvenu baa baaLehaNNu koDuvenu baa ||
saNNa saNNa hejjeyanikkuta manmathapitanE baa || 2 ||

naarivatse baa muttina haara haakuve baa |
paarijaata muDisida rukmiNi dhIra kRuShNane baa || 3 ||

muraLIdharanE baa muMguruLa bhUShita baa |
paripari vastravanniTTu nODuve maraLi maraLi baa || 4 ||

naMdana kaMdane manakaanaMda paDisutaa niMdira naari ||
ninna nODade iMdirEshanE baa baa || 5 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru