ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಲಾಲಿ ಹಾಡು | ಹಯವದನ | Laali Song | Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಶ್ರಾವಣ ಅಷ್ಟಮಿ ನಡುರಾತ್ರಿಯಲ್ಲಿ ರೋಹಿಣಿ ನಕ್ಷತ್ರ ಶುಭಲಗ್ನದಲ್ಲಿ
ಕಾಮಜನಕ ಕೃಷ್ಣ ಹುಟ್ಟಿದನೆಂದು ತಾಯಿ ದೇವಕೀದೇವಿ ತೂಗಿದಳು ಕೃಷ್ಣನ ||೧||

ಚತುರ್ವೇದ ನಾಲ್ಕು ಸರಪಣಿಯ ಹಾಕಿ ಚತುರ್ವರ್ಗವೆಂಬೊ ತೊಟ್ಟಿಲನೆ ಕಟ್ಟಿ
ಚತುರ್ಮುಖ ಬ್ರಹ್ಮನ ಪಡೆದೆ ನೀ ಎಂದು ಯತಿಮುನಿಗಳು ಕೃಷ್ಣನಾ ಪಾಡಿ ತೂಗಿದರು ||೨||

ಅರಳೆಲೆ ಮಾಗಾಯಿ ಕೌಸ್ತುಭಗಳಿಂದ ಹುಲಿಯುಗುರು ನಿನಗೆ ಒಪ್ಪುವ ಅಂದ
ಕಡಗ ಕಂಕಣ ವಂಕಿ ತೋಳುಗಳಿಂದ ಪರಮಾತ್ಮ ಮಲಗಿದಾ ಕೃಪೆಯಿಂದ ||೩||

ಆಕಾಶವೇ ಮೇಲು ಮಂಟಪದ ಕಟ್ಟು ಬೇಕೆಂಬೋ ನಕ್ಷತ್ರಮಾಲೆಗಳನಿಟ್ಟು
ಲೋಕಗಳನ್ನೆಲ್ಲಾ ತನ್ನಾತ್ಮದೊಳಿಟ್ಟು ಯಾಕಯ್ಯ ಮಲಗಿದೊ ತೊಟ್ಟಿಲೊಳಗುಟ್ಟು ||೪||

ಲಾಲಿ ಬಾಲ ಮುಕುಂದ ಲಾಲಿ ಲಾಲಿ ಲಾಲಿ ಲಾಲಿ ಶುಭಕರದ ಲಾಲಿ 
ಲಾಲಿ ಶ್ರೀ ಜಗದ ಆನಂದ ಲಾಲಿ ಲಾಲಿ ಶ್ರೀ ಹಯವದನ ಲಾಲಿ ರಂಗ ಲಾಲಿ ||೫||

shraavaNa aShTami naDuraatriyalli rOhiNi nakShatra shubhalagnadalli
kaamajanaka kRuShNa huTTidaneMdu taayi dEvakIdEvi tUgidaLu kRuShNana ||1||

chaturvEda naalku sarapaNiya haaki chaturvargaveMbo toTTilane kaTTi
chaturmuKa brahmana paDede nI eMdu yatimunigaLu kRuShNanaa paaDi tUgidaru ||2||

araLele maagaayi koustubhagaLiMda huliyuguru ninage oppuva aMda
kaDaga kaMkaNa vaMki tOLugaLiMda paramaatma malagidaa kRupeyiMda ||3||

AkaashavE mElu maMTapada kaTTu bEkeMbO nakShatramaalegaLaniTTu
lOkagaLannellaa tannaatmadoLiTTu yaakayya malagido toTTiloLaguTTu ||4||

laali baala mukuMda laali laali laali laali shubhakarada laali 
laali shrI jagada AnaMda laali laali shrI hayavadana laali raMga laali ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru