ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಏನಾದರೂ ಮಾಡು | ಗುರು ಶ್ಯಾಮಸುಂದರ | Enadaru Madu | Guru Shyamasundara


ಸಾಹಿತ್ಯ : ಶ್ರೀ ಗುರು ಶ್ಯಾಮಸುಂದರ ವಿಠಲ ದಾಸರು 
Kruti: Sri Guru Shyamasundara Vithala Dasaru 


ಏನಾದರೂ ಮಾಡು ನೀ ದಯದಿ ನೋಡು ಮಾನ ನಿನ್ನದು ಗುರುವೆ ಮೌನಿ ಗುರುರಾಯ || ಪ ||

ಮಣ್ಣಾದರೂ ಮಾಡು ಮೃತ್ತಿಕೆ ಎನಿಸು ಹೊನ್ನಾದರೂ ಮಾಡು ಆಭರಣ ಎನಿಸು
ಘನ್ನ ಮರವಾದರೂ ನಿನ್ನ ಪಾದದಲ್ಲಿರಿಸು ಮುನ್ನ ಬಿದಿರಾದರೂ ನಿನ್ನ ಕರದಲಿ ಧರಿಸು || ೧ ||

ವೀಣೆಯಾದರೂ ಮಾಡು ನಿನ್ನ ಉರದಲ್ಲಿ ಧರಿಸು ಜಾಣ ಗೋಪಾಲನ ಕರುಣೆಯನೇ ಸುರಿಸು
ಮಾಣಿಕ ಮಾಡೆನ್ನ ಶ್ರೀರಾಮಗರ್ಪಿಸು ಪ್ರಾಣ ನಿನ್ನಯ ಪಾದಕಮಲದಲ್ಲಿ ಇರಿಸು || ೨ ||

ಇಂತೆನ್ನ ಜೀವನವು ನಿನ್ನ ಸೇವೆಗೆ ಮುಡಿಪು ಎಂತಾದರೂ ನಾನು ನಿನ್ನ ಸೇವಕನು
ಕಂತುಪಿತ ಗುರುಶಾಮಸುಂದರನ ನಿಜದಾಸ ಎಂತಾದರಂತಿರಲಿ ನಿನ್ನ ದಯೆ ಎನಗಿರಲಿ || ೩ ||

EnaadarU maaDu nI dayadi nODu maana ninnadu guruve mouni gururaaya || pa ||

maNNaadarU maaDu mRuttike enisu honnaadarU maaDu AbharaNa enisu
Ganna maravaadarU ninna paadadallirisu munna bidiraadarU ninna karadali dharisu || 1 ||

veeNeyaadarU maaDu ninna uradalli dharisu jaaNa gOpaalana karuNeyanE surisu
maaNika maaDenna shrIraamagarpisu praaNa ninnaya paadakamaladalli irisu || 2 ||

iMtenna jIvanavu ninna sEvege muDipu eMtaadarU naanu ninna sEvakanu
kaMtupita gurushaamasuMdarana nijadaasa eMtaadaraMtirali ninna daye enagirali || 3 ||


Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru