ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನೀ ಪಾಲಿಸೋ ಗುರುರಾಯ | ಗುರು ಜಗನ್ನಾಥ ವಿಠಲ | Ni Paliso Gururaya | Guru Jagannatha Vithala


ಸಾಹಿತ್ಯ : ಶ್ರೀ ಕೋಸಿಗಿ ಸ್ವಾಮಿರಾಯಾಚಾರ್ಯರು (ಗುರು ಜಗನ್ನಾಥ ವಿಠಲ)
Kruti: Sri Kosigi Swamirayacharyaru (Guru Jagannatha vittala)


ನೀ ಪಾಲಿಸೋ ಗುರುರಾಯ ಎನ್ನ ಕಾಪಾಡು ಈಗ ಮಹರಾಯ || ಪ ||
ಭೂಪತಿ ನೀ ಎನ್ನ ಆಪದ್ಬಾಂಧವ ಶ್ರೀಪತಿ ಪದಪ್ರಿಯ ಈ ಪರಿ ಮಾಡದೆ || ಅಪ ||

ಪಾಪಿಗಳೊಳಗೆ ಹಿರಿಯನು ನಾ | ನಿಷ್ಪಾಪಿಗಳರಸೆ ಗುರುರಾಯಾ |
ಅಪಾರ ಜನುಮದಿ ಬಂದಿಹ | ತಾಪತ್ರಯ ಕಳಿ ಮಹರಾಯಾ || ೧ ||

ದೀನರ ಒಳಗೆ ದೀನನು ನಾನೈ | ದಾನಿಗಳರಸನೇ ಗುರುರಾಯಾ |
ಜ್ಞಾನವು ಇಲ್ಲದೆ ನಾನು ನನ್ನದೆಂದು | ಹೀನ ಮತ್ಯಾದೆನೋ ಮಹರಾಯಾ || ೨ ||

ನೀಚರ ಒಳಗೆ ನೀಚನು ನಾ | ಪಾಪ ಮೋಚನೆ ಮಾಡೋ ಗುರುರಾಯಾ |
ಯೋಚನೆ ಇಲ್ಲದೆ ಅನ್ಯರ ಅನುದಿನ | ಯಾಚಿಸಿ ಕೆಟ್ಟೆನೋ ಮಹರಾಯಾ || ೩ ||

ಅನ್ನವು ಇಲ್ಲದೆ ಅನ್ಯರ ಮನೆಯಲ್ಲಿ | ಕುನ್ನಿಯಾದೆನೋ ಮಹರಾಯಾ |
ನಿನ್ನನೇ ನಂಬಿ  ಅನ್ಯರ ಬೇಡೋದು | ಘನ್ನತೆಯೇ ನಿನಗೆ ಮಹರಾಯಾ || ೪ ||

ದಾತನೇ ನಿನ್ನ ಪೋತನು ನಾನು | ಈ ರೀತಿ ಮಾಳ್ಪರೆ ಗುರುರಾಯಾ |
ನೀತ ಗುರು ಜಗನ್ನಾಥ | ವಿಠಲ ಪದದೂತನು ನೀನೆ ಮಹರಾಯಾ || ೫ ||

nI paalisO gururaaya enna kaapaaDu Iga maharaaya || pa ||
bhUpati nI enna ApadbaaMdhava shrIpati padapriya I pari maaDade || apa ||

paapigaLoLage hiriyanu naa | niShpaapigaLarase gururaayaa |
apaara janumadi baMdiha | taapatraya kaLi maharaayaa || 1 ||

dInara oLage dInanu naanai | daanigaLarasanE gururaayaa |
j~jaanavu illade naanu nannadeMdu | hIna matyaadenO maharaayaa || 2 ||

nIcara oLage nIcanu naa | paapa mOcane maaDO gururaayaa |
yOcane illade anyara anudina | yaacisi keTTenO maharaayaa || 3 ||

annavu illade anyara maneyalli | kunniyaadenO maharaayaa |
ninnanE naMbi  anyara bEDOdu | GannateyE ninage maharaayaa || 4 ||

daatanE ninna pOtanu naanu | I rIti maaLpare gururaayaa |
nIta guru jagannaatha | viThala padadUtanu nIne maharaayaa || 5 ||


Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru