ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಗುಮೊಗದಗಜೇ ನೀ ಬಾರಮ್ಮಾ| ತಂದೆ ವೆಂಕಟೇಶ ವಿಠಲ | Nagumogadagaje | Tande Venkatesha Vithala


ಸಾಹಿತ್ಯ : ಶ್ರೀ ತಂದೆ ವೆಂಕಟೇಶ ವಿಠಲ ದಾಸರು 
Kruti: Sri Tande Venkatesha Vittala Dasaru


ನಗುಮೊಗದಗಜೇ ನೀ ಬಾರಮ್ಮಾ |
ನಿನ್ನ ಅಗಣಿತ ಮಹಿಮೆಯ ತೋರಮ್ಮಾ || ಪ ||

ನಿಗಮ ತುರಗ ಪನ್ನಗಭೂಷಣ ಭುಜಯುಗಳಾಲಿಂಗನ ಮಿಗೆ ಸುಖಭಾಗಿನಿ || ಅಪ ||

ಚರಣಾಭರಣ ಸುನಾದೆ ವರ ಹರಿ ನಡು ಮೇಖಲಾ ಮೋದೆ |
ಕರ ಕಿಂಕಿಣಿ ಕಿಣಿ ಸುಖದೇ ಪರಿ ಸ್ಫುರಿತ ಪೀತಾಂಬರೇ ವಿಭುದೇ |
ಕೀರವಾಣಿ ಶರ್ವಾಣಿ ವಿರಾಗಿಣಿ ಕರಣಾಮೃತ ರಸಧುನಿ ಹರಿ ಭಗಿನೀ || ೧ ||

ದಿತಿ ಜವಿತಾನಕೃತಾಂತೆ ಹಿಮಭೃತ ಪರ್ವತಸುತೆ ಶಾಂತೆ |
ನತ ಪಾವನೆ ಜಯವಂತೆ ಸುರಪತಿವಿನಮಿತ ಪದಪ್ರಾಂತೆ |
ಮತಿಪ್ರೇರಕೆ ಸದ್ಗತಿಕೊಡು ಪತಿಹೃದ್ಗತ ಮೂರ್ತಿಯ ಚಿತ್ಪಥದಲಿ ತೋರಿ || ೨ ||

ಪಂಕಜಾಕ್ಷಿ ಪಾರ್ವತಿಯೆ ಶಿವೆ ಶಂಕರಿ ಮೃಡಣಿ ಭಾರ್ಗವಿಯೆ |
ಸಂಕಟ ಹರೇ ಗತಮಾಯೇ ಶಿಖಿ ಅಂಕಿತಗಣಪರ ತಾಯೇ |
ಕಿಂಕರ ಜನ ಹೃತ್ಪಂಕಜಾರ್ಕೆ ತಂದೆ ವೇಂಕಟೇಶ ವಿಠಲನ ಬಿಂಕದ ಸೋದರಿ || ೩ ||

nagumogadagajE nI baarammaa |
ninna agaNita mahimeya tOrammaa || pa ||

nigama turaga pannagabhUShaNa bhujayugaLaaliMgana mige suKabhaagini || apa ||

caraNaabharaNa sunaade vara hari naDu mEKalaa mOde |
kara kiMkiNi kiNi suKadE pari sPurita pItaaMbarE vibhudE |
kIravaaNi sharvaaNi viraagiNi karaNaamRuta rasadhuni hari bhaginI || 1 ||

diti javitaanakRutaaMte himabhRuta parvatasute shaaMte |
nata paavane jayavaMte surapativinamita padapraaMte |
matiprErake sadgatikoDu patihRudgata mUrtiya citpathadali tOri || 2 ||

paMkajaakShi paarvatiye shive shaMkari mRuDaNi bhaargaviye |
saMkaTa harE gatamaayE shiKi aMkitagaNapara taayE |
kiMkara jana hRutpaMkajaarke taMde vEMkaTESa viThalana biMkada sOdari || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru