ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಮೋ ನಮಸ್ತೆ ನರಸಿಂಹ ದೇವ | ಜಗನ್ನಾಥ ವಿಠಲ | Namo Namaste Narasimha | Jagannatha vittala


ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)
Kruti:Sri Jagannatha dasaru (Jagannatha vittala)


ನಮೋ ನಮಸ್ತೆ ನರಸಿಂಹ ದೇವಾ ಸ್ಮರಿಸುವವರ ಕಾವ ||ಪ|| 
ಸುಮಹಾತ್ಮ ನಿನಗೆಣೆ ಲೋಕದೊಳಾವ ತ್ರಿಭುವನ ಸಂಜೀವ || 
ಉಮೆಯರಸನ ಹೃತ್ಕಮಲ ದ್ಯುಮಣಿ ಮಾರಮಣ ಕನಕ ಸಂಯಮಿ ವರ ವರದಾ ||ಅಪ|| 

ಕ್ಷೇತ್ರಜ್ಞ ಕ್ಷೇಮ ಧಾಮ ಭೂಮ | 
ದಾನವ ಕುಲ ಭೀಮ | 
ಗಾತ್ರ ಸನ್ನುತ ಬ್ರಹ್ಮಾದಿ ಸ್ತೋಮ ಸನ್ಮಂಗಳ ನಾಮ || 
ಚಿತ್ರ ಮಹಿಮ ನಕ್ಷತ್ರ ನೇಮಿ ಸರ್ವತ್ರ ಮಿತ್ರ ಸುಚರಿತ್ರ ಪವಿತ್ರ ||೧|| 

ಅಪರಾಜಿತ ಅನಘ ಅನಿರ್ವಿಣ್ಣ | 
ಲೋಕೈಕ ಶರಣ್ಯ | ಶಫರ ಕೇತು ಕೋಟಿ ಲಾವಣ್ಯ 
ದೈತೇಂದ್ರ ಹಿರಣ್ಯ | ಕಶಿಪು ಸುತನ ಕಾಯ್ದಿಪೆನೆನುತಲಿ 
ನಿಷ್ಕಪಟ ಮನುಜ ಹರಿ ವಪುಷ ನೀನಾದೆ ||೨|| 

ತಪನ ಕೋಟಿ ಪ್ರಭಾವ ಶರೀರ ದುರಿತೌಘವಿದೂರ | 
ಪ್ರಪಿತ ಮಹಾ ಮಂದಾರ ಖಳ ವಿಪಿನ ಕುಠಾರ || 
ಕೃಪಣ ಬಂಧು ತವ ನಿಪುಣ ತನಕೆ 
ನಾನುಪಮೆಗಾಣೆ ಕಾಶ್ಯಪಿ ವರ ವಾಹನ ||೩|| 

ವೇದ ವೇದಾಂಗ ವೇದ ವೇದ್ಯ ಸಾಧ್ಯ ಅಸಾಧ್ಯ | 
ಶ್ರೀಧ ಮುಕ್ತ ಮುಕ್ತಾರಾರಾಧ್ಯ ಅನುಪಮ ಅನವದ್ಯ | 
ಮೋದಮಯನೆ ಪ್ರಹ್ಲಾದ ವರದ 
ನಿತ್ಯೋದಯ ಮಂಗಳ ಪಾದ ಕಮಲಕೆ ||೪|| 

ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ 
ನಿನಗೆ ಬಿನೈಸುವೆ ಎನ್ನಯ ಮಾತಾ ಲಾಲಿಸುವುದು ತಾತ 
ಗಣನೆಯಿಲ್ಲದವ ಗುಣವೆಣಿಸದೆ ಪ್ರತಿಕ್ಷಣಕೆ 
ಕಥಾಮೃತ ಉಣಿಸು ನೀ ಕರುಣದಿ ||೫|| 

namO namaste narasiMha dEvA smarisuvavara kAva ||pa|| 
sumahAtma ninageNe lOkadoLAva triBuvana saMjIva || 
umeyarasana hRutkamala dyumaNi mAramaNa kanaka saMyami vara varadA ||apa|| 
 
kShEtrajna kShEma dhAma BUma | 
dAnava kula BIma | 
gAtra sannuta brahmAdi stOma sanmaMgaLa nAma || 
citra mahima nakShatra nEmi sarvatra mitra sucaritra pavitra ||1|| 
 
aparAjita anaGa anirviNNa | 
lOkaika sharaNya | shaphara kEtu kOTi lAvaNya 
daitEMdra hiraNya | kaSipu sutana kAydipenenutali 
niShkapaTa manuja hari vapuSha nInAde ||2|| 
 
tapana kOTi praBAva sharIra duritauGavidUra | 
prapita mahA maMdAra KaLa vipina kuThAra || 
kRupaNa baMdhu tava nipuNa tanake 
nAnupamegANe kASyapi vara vAhana ||3|| 
 
vEda vEdAMga vEda vEdya sAdhya asAdhya | 
SrIdha mukta muktArArAdhya anupama anavadya | 
mOdamayane prahlAda varada 
nityOdaya maMgaLa pAda kamalake ||4|| 
 
animitta baMdhu jagannAtha viThala sAMprata 
ninage binaisuve ennaya mAtA lAlisuvudu tAta 
gaNaneyilladava guNaveNisade pratikShaNake 
kathAmRuta uNisu nI karuNadi ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru