ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಎಂಥಾ ಪಾಪಿ ದೃಷ್ಟಿ ತಾಗಿತು | ಪುರಂದರ ವಿಠಲ | Entha paapi drushti | Purandara vittala


ಸಾಹಿತ್ಯ : ಶ್ರೀ ಪುರಂದರ  ದಾಸರು (ಪುರಂದರ ವಿಠಲ)
Kruti: Sri Purandara dasaru (Purandara vittala)


ಎಂಥಾ ಪಾಪಿ ದೃಷ್ಟಿ ತಾಗಿತು | ಗೋಪಾಲ ಕೃಷ್ಣಗೆ | ಕೆಟ್ಟ ಪಾಪಿ ದೃಷ್ಟಿ ತಾಗಿತು || ಪ ||

ಶಿಶು ಹಸಿದನೆಂದು ಗೋಪಿ ಮೊಸರು ಕುಡಿಸುತ್ತಿರಲು 
ನೋಡಿ ಹಸಿದ ಬಾಲರ ದೃಷ್ಟಿ ತಾಗಿ ಮೊಸರು ಕುಡಿಯಲೊಲ್ಲನೆ || ೧ ||

ಕೃಷ್ಣ ಹಸಿದನೆಂದು ಗೋಪಿ ಬಟ್ಟಲೊಳಗೆ ಕ್ಷೀರ ಕೊಡಲು
ಕೆಟ್ಟ ಬಾಲರ ದೃಷ್ಟಿ ತಾಗಿ ಕೊಟ್ಟ ಹಾಲು ಮುಟ್ಟನೇ || ೨ ||

ಚಿನ್ನ ಹಸಿದನೆಂದು ಗೋಪಿ ಬೆಣ್ಣೆ ಕೈಯಲಿ ಕೊಡಲು
ನೋಡಿ ಸಣ್ಣ ಬಾಲರ ದೃಷ್ಟಿ ತಾಗಿ ಬೆಣ್ಣೆ ವಿಷಮವಾಯಿತೆ || ೩ ||

ಅಂಗಿ ಹಾಕಿ ಉಂಗುರವಿಟ್ಟು ಕಂಗಳಿಗೆ ಕಪ್ಪನ್ನಿಟ್ಟು
ಅಂಗಳದೊಳು ಆಡೋ ಕೃಷ್ಣಗೆ ಹೆಂಗಳಾ ದೃಷ್ಟಿಯಿದೇನೋ || ೪ ||

ಶಲ್ಲೆ ಉಡಿಸಿ ಮಲ್ಲೆ ಮುಡಿಸಿ ಚೆಲ್ವ ಫಣೆಗೆ ತಿಲಕನಿಟ್ಟು
ವಲ್ಲಭ ಪುರಂದರ ವಿಠಲನ ಫುಲ್ಲನೇತ್ರೇರು ನೋಡಿದರೇನೋ || ೫ ||

eMthaa paapi dRuShTi taagitu | gOpaala kRuShNage | keTTa paapi dRuShTi taagitu || pa ||

shishu hasidaneMdu gOpi mosaru kuDisuttiralu 
nODi hasida baalara dRuShTi taagi mosaru kuDiyalollane || 1 ||

kRuShNa hasidaneMdu gOpi baTTaloLage kShIra koDalu
keTTa baalara dRuShTi taagi koTTa haalu muTTanE || 2 ||

cinna hasidaneMdu gOpi beNNe kaiyali koDalu
nODi saNNa baalara dRuShTi taagi beNNe viShamavaayite || 3 ||

aMgi haaki uMguraviTTu kaMgaLige kappanniTTu
aMgaLadoLu ADO kRuShNage heMgaLaa dRuShTiyidEnO || 4 ||

shalle uDisi malle muDisi celva PaNege tilakaniTTu
vallabha puraMdara viThalana PullanEtrEru nODidarEnO || 5 ||
 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru