ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಕಂಡೆ ಕಂಡೆ ರಾಜರ ಶ್ರೀ ವಾದಿರಾಜರ | Kande kande Rajara Sri Vadirajara


 

ಕಂಡೆ ಕಂಡೆ ರಾಜರ ಶ್ರೀ ವಾದಿರಾಜರ 
ಕಂಡೆ ಕಂಡೆ ರಾಜರ ||ಪ|| 
 
ಕಂಡೆ ಕಂಡೆನು ಕರುಣನಿಧಿಯನು ಕರಗಳಂಜಲಿ ಮಾಡಿ ಮುಗಿವೆನು | 
ಲಂಡ ಮಾಯ್ಗಳ ಗುಂಡಿಯೊಡೆಯಲುದ್ದಂಡ ಮಾರುತಿ ಪದಕೆ ಬರುವನ ||ಅಪ|| 
 
ಪಂಚ ವೃಂದಾವನದಿ ಮೆರೆವನ ಪಂಚ ಬಾಣನ ಪಿತನ ಸ್ಮರಿಸುವ | 
ಪಂಚ ನಂದನ ಮುಂದೆ ಆಗುತ ಮಿಂಚಿನಂದದಿ ಹೊಳೆವ ಮಹಿಮನ ||೧|| 
 
ಪಂಕಪಾತಕ ಕಳೆವ ದೇವನ ಪಂಕಜಾರಿನಿ ಭೇಂದ್ರ ವಕ್ರನ | 
ಆತಂಕವಿಲ್ಲದೆ ಭಜಿಪ ಸುಜನರ ಶಂಕೆ ಬಿಡಿಸುವ ಶಂಕರೇಶನ ||೨|| 
 
ಭಜಿಸುವರಿಗೆ ಭಾಗ್ಯ ಕೊಡುವನ ಋಜುಗಣೇಶಮರೇಂದ್ರ ವಂದಿತ | 
ನಿಜ ಪುರಂದರ ವಿಠಲೇಶನ ಭಜನೆ ಮಾಡುವ ಭಾವೀ ಮರುತರ ||೩|| 

kaMDe kaMDe rAjara SrI vAdirAjara 
kaMDe kaMDe rAjara ||pa|| 
 
kaMDe kaMDenu karuNanidhiyanu karagaLaMjali mADi mugivenu | 
laMDa mAygaLa guMDiyoDeyaluddaMDa mAruti padake baruvana ||apa|| 
 
paMca vRuMdAvanadi merevana paMca bANana pitana smarisuva | 
paMca naMdana muMde Aguta miMcinaMdadi hoLeva mahimana ||1|| 
 
paMkapAtaka kaLeva dEvana paMkajArini BEMdra vakrana | 
AtaMkavillade Bajipa sujanara SaMke biDisuva SaMkarESana ||2|| 
 
Bajisuvarige BAgya koDuvana RujugaNESamarEMdra vaMdita | 
nija puraMdara viThalESana Bajane mADuva BAvI marutara ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru