ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ವಂದಿಸುವೆ ಗುರು | ಜಗನ್ನಾಥ ವಿಠಲ | Vandisuve Guru Raghavendra | Jagannatha Vithala


ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ)
Kruti:Sri Jagannatha dasaru (Jagannatha vittala)


ವಂದಿಸುವೆ ಗುರು ರಾಘವೇಂದ್ರಾರ್ಯರ |
ವೃಂದಾವನ ಪ್ರತೀಕಕೆ ದಿನ ದಿನಾ || ಪ ||

ಸುವಿರೋಧಿ ವತ್ಸರದಿ ಶ್ರಾವಣ ಪರದ್ವಿತೀಯ |
ಕವಿವಾರ ತುಂಗಭದ್ರಾ ತೀರದಿ | 
ನವ ಸುಮಂತ್ರಾಲಯದಿ ಒಂದು ರೂಪದಲಿದ್ದು|  ಮಾ-
ಧವನ ಪುರಕೈದ ಮಹಾತ್ಮರಿವರೆಂದು || ೧ ||

ಸ್ವಪದಾವಲಂಬಿಗಳಿಗುಪನಿಷತ್ ಖಂಡಾರ್ಥ
ಉಪದೇಶಗೈದು ಕಾಶ್ಯಪಿಸುತರನು |
ಪ್ರಪುನೀತರನು ಮಾಡಿ ಅಪವರ್ಗದವರೊಳಗೆ |
ಉಪಮರಿಲ್ಲೆಂದರುಹಿದ ಉಪಕಾರಿಗಳ ಕಂಡು || ೨ ||

ದೇವತೆಗಳಿವರದಕೆ ಸಂದೇಹ ಪಡೆಸಲ್ಲ ವೃಂ
ದಾವನವ ರಚಿಸಿ | ಪೂಜಿಪ ಭಕ್ತರ |
ಸೇವೆಯೈ ಕೊಂಡು ಈವರು ಮನೋರಥವ 
ಶ್ರೀ ವರ ಜಗನ್ನಾಥ ವಿಠಲಗತಿಪ್ರಿಯರೆಂದು || ೩ ||

vaMdisuve guru rAGavEMdrAryara |
vRuMdAvana pratIkake dina dinA || pa ||

suvirOdhi vatsaradi SrAvaNa paradvitIya |
kavivAra tuMgaBadrA tIradi | 
nava sumaMtrAlayadi oMdu rUpadaliddu|  mA-
dhavana purakaida mahAtmarivareMdu || 1 ||

svapadAvalaMbigaLigupaniShat KaMDArtha
upadESagaidu kASyapisutaranu |
prapunItaranu mADi apavargadavaroLage |
upamarilleMdaruhida upakArigaLa kaMDu || 2 ||

dEvategaLivaradake saMdEha paDesalla vRuM
dAvanava racisi | pUjipa bhaktara |
sEveyai koMDu Ivaru manOrathava 
SrI vara jagannAtha viThalagatipriyareMdu || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru