ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಜನ್ಮಸಫಲವಾಯಿತು ಆದಿ ಅನಂತ | ಹಯವದನ | Janma Saphala | Hayavadana


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಜನ್ಮ ಸಫಲವಾಯಿತು || ಪ ||

ಆದಿ ಅನಂತ ಜನಾರ್ದನನ ಕಂಡು 
ಎನ್ನ ಜನ್ಮ ಸಫಲವಾಯಿತು || ಅಪ ||

ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ ಅ-
ಗಮ್ಯಗೋಚರನೆಂದು ಸ್ತುತಿಸುತಿರೆ
ಬ್ರಹ್ಮರುದ್ರಾದಿಗಳು ಇಂದ್ರ ಚಂದ್ರಾದಿಗಳು
ನಿರ್ಮಲಮೂರುತಿ ನಿಮ್ಮ ನಿಜವ ತೋರಿದಮ್ಯಾಲೆ || ೧ ||

ಚತುರಮುಖನು ಬಂದು ಪೃಥುವಿ ಒಳಗೆ ನಿಂದು
ಕ್ರತುಗಳ ಮಾಡಿ ಆಹುತಿ ಕೊಡಲು
ಅತಿಗ್ರಾಸವಾಯಿತೆಂದು ಅನಲ ಬಂದು ಮೊರೆಯಿಡಲು
ದ್ವಿತೀಯ ಗ್ರಾಸಕೆ ಕೈಯ ಒಡ್ಡಿ ನಿಂತದ್ದು ಕಂಡು || ೨ ||

ಮೊದಲ ಬಾಗಿಲಲಿ ನಿಮ್ಮ ಮುಖಕಮಲವ ಕಂಡೆ
ಮುದದಿಂದ ಮಕರಕುಂಡಲ ಕಿರೀಟವ ಕಂಡೆ
ಭುಜದ್ವಯವನು ಕಂಡೆ ಶ್ರೀವತ್ಸ ಕೌಸ್ತುಭ ಕೊರಳ
ವೈಜಯಂತೀ ಮಾಲಿಕೆಗಳ ಕಂಡು ಎನ್ನ || ೩ ||

ನಡುವಿನ ಬಾಗಿಲಲಿ ನಾಭಿಕಮಲ ಕಂಡೆ
ಉದ್ಭವಿಸಿ ಮೆರೆವ ವಿರಿಂಚಿಯ ಕಂಡೆ
ಜಡಿವೊ ಪೀತಾಂಬರ ನಡುವಿನೊಡ್ಯಾಣವ
ಉಡಿಗೆಜ್ಜೆ ಮೇಲಿನ ಕಿರಿಗೆಜ್ಜೆಗಳ ಕಂಡು || ೪ ||

ಮೂರನೆ ಬಾಗಿಲಲಿ ಮುದ್ದು ಶ್ರೀ ಚರಣವು
ಶ್ರೀದೇವಿ ಭೂದೇವಿ ಸೇವೆ ಮಾಳ್ಪುದ ಕಂಡೆ
ಸುರರು ಮಾನವರ ಕಂಡೆ ಸ್ತೋತ್ರಮಾಳ್ಪುದ ಕಂಡೆ
ಉರಗಶಯನ ಮ್ಯಾಲೆ ಹಯವದನನ ಕಂಡು ಎನ್ನ || ೫ ||

janma saPalavAyitu || pa ||

Adi anaMta janArdanana kaMDu 
enna janma saphalavAyitu || apa ||

brahmAnaMda suguNa nimma mahimeya a-
gamyagOcaraneMdu stutisutire
brahmarudrAdigaLu iMdra caMdrAdigaLu
nirmalamUruti nimma nijava tOridamyAle || 1 ||

caturamuKanu baMdu pRuthuvi oLage niMdu
kratugaLa mADi Ahuti koDalu
atigrAsavAyiteMdu anala baMdu moreyiDalu
dvitIya grAsake kaiya oDDi niMtaddu kaMDu || 2 ||

modala bAgilali nimma muKakamalava kaMDe
mudadiMda makarakuMDala kirITava kaMDe
Bujadvayavanu kaMDe SrIvatsa kaustuBa koraLa
vaijayaMtI mAlikegaLa kaMDu enna || 3 ||

naDuvina bAgilali nABikamala kaMDe
udBavisi mereva viriMciya kaMDe
jaDivo pItAMbara naDuvinoDyANava
uDigejje mElina kirigejjegaLa kaMDu || 4 ||

mUrane bAgilali muddu SrI caraNavu
SrIdEvi BUdEvi sEve mALpuda kaMDe
suraru mAnavara kaMDe stOtramALpuda kaMDe
uragaSayana myAle hayavadanana kaMDu enna || 5 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru