ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಭೀಮ ನಿಸ್ಸೀಮಮಹಿಮ | ಹಯವದನ | Bhima Nissima Mahima | Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ಭೀಮ ನಿಸ್ಸೀಮಮಹಿಮ ಅಗಣಿತ ಗುಣಸ್ತೋಮ ಕಾಮಪಿತನ ಬಂಟ ನೆನೆವರಿಗೆ ನಂಟ || ಪ ||

ನಿನ್ನ ಬಲವತ್ತರ ಶಕ್ತಿಯಿಂದಲಿ ಕಲಿಯ 
ಬಣ್ಣಗೆಡಿಸಿದೆ ಪಿಡಿದು ಗದೆಯಿಂದ ಸದೆದು
ಇನ್ನಾರು ನಿನಗೆ ಸರಿ ರಿಪುಕದಳಿಮತ್ತಕರಿ 
ಎನ್ನ ನೀ ರಕ್ಷಿಸಯ್ಯ ಪಿಡಿಬ್ಯಾಗ ಕಯ್ಯ || ೧ ||

ಕುಂತಿಯ ಕುಮಾರ ಕೌರವಕುಲ ಕುಠಾರ
ಅಂತರಂಗದಿ ಶುದ್ಧ ಎನ್ನ ಮನದೊಳಗಿದ್ದ
ಸಂತಾಪಗಳ ಕೆಡಿಸೊ ಹರಿಭಕುತಿಯನು ಕೊಡಿಸೊ ಅ- 
ಚಿಂತ್ಯಬಲ ಶೌರ್ಯ ದುರ್ಜನ ಕುಮುದ ಸೂರ್ಯ || ೨ ||

ದೇವ ನೀ ವಿಷದ ಲಡ್ಡುಗೆಯನುಂಡು ದಕ್ಕಿಸಿದ ಕಂಡು
ಭಾವಶುದ್ಧದಿ ಮೊರೆಹೊಕ್ಕೆ ದೊರೆಯೆ
ಆವಾವುದುಂಡರೆನಗೆ ದಕ್ಕುವಂತೆ ಮಾಡೊ
ದೇವ ನಿನಗೆಣೆಗಾಣೆ ಹರಿಪದಗಳಾಣೆ || ೩ ||

ಬಕ ಹಿಡಿಂಬ ಕಿಮ್ಮೀರರಿಪುವೆ ಘನಸಮೀರ
ನಖಾಗ್ರದಲಿ ಕೊಂದೆ ರಣಾಗ್ರದಲಿ ನಿಂದೆ
ಭಕುತಿಯಲಿ ನಿನ್ನ ಪಾದ ಭಜಿಸುವವರಿಗೆ ಮೋದ
ಯುಕುತಿಯಲಿ ಕೊಡಿಸೊ ವಾದಿಗಳೋಡಿಸೊ || ೪ ||

ದುರುಳದೈತ್ಯರ ವೈರಿ ಖಳಕುಲಕ್ಕೆ ನೀ ಮಾರಿ ದು-
ಸ್ತರಣ ಭವತಾರಿ ಸುಜನರಿಗುಪಕಾರಿ
ಹರಿಭಕುತಿ ತೋರಿಸಿದಿ ಮುಕುತಿಪಥ ಸೇರಿಸಿದಿ
ಪೊರೆಯಯ್ಯ ಹಯವದನ ಶರಣ ಇದು ಕರುಣ || ೫ ||

bhIma nissImamahima agaNita guNastOma kaamapitana baMTa nenevarige naMTa || pa ||

ninna balavattara shaktiyiMdali kaliya 
baNNageDiside piDidu gadeyiMda sadedu
innaaru ninage sari ripukadaLimattakari 
enna nI rakShisayya piDibyaaga kayya || 1 ||

kuMtiya kumaara kouravakula kuThaara
aMtaraMgadi shuddha enna manadoLagidda
saMtaapagaLa keDiso haribhakutiyanu koDiso a- 
ciMtyabala shourya durjana kumuda sUrya || 2 ||

dEva nI viShada laDDugeyanuMDu dakkisida kaMDu
bhaavashuddhadi morehokke doreye
AvaavuduMDarenage dakkuvaMte maaDo
dEva ninageNegaaNe haripadagaLaaNe || 3 ||

baka hiDiMba kimmIraripuve GanasamIra
naKaagradali koMde raNaagradali niMde
bhakutiyali ninna paada bhajisuvavarige mOda
yukutiyali koDiso vaadigaLODiso || 4 ||

duruLadaityara vairi KaLakulakke nI maari du-
staraNa bhavataari sujanarigupakaari
haribhakuti tOrisidi mukutipatha sErisidi
poreyayya hayavadana sharaNa idu karuNa || 5 ||

 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru