Posts

Showing posts from August, 2020

ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಜನ್ಮಸಫಲವಾಯಿತು ಆದಿ ಅನಂತ | ಹಯವದನ | Janma Saphala | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಜನ್ಮ ಸಫಲವಾಯಿತು || ಪ || ಆದಿ ಅನಂತ ಜನಾರ್ದನನ ಕಂಡು  ಎನ್ನ ಜನ್ಮ ಸಫಲವಾಯಿತು || ಅಪ || ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ ಅ- ಗಮ್ಯಗೋಚರನೆಂದು ಸ್ತುತಿಸುತಿರೆ ಬ್ರಹ್ಮರುದ್ರಾದಿಗಳು ಇಂದ್ರ ಚಂದ್ರಾದಿಗಳು ನಿರ್ಮಲಮೂರುತಿ ನಿಮ್ಮ ನಿಜವ ತೋರಿದಮ್ಯಾಲೆ || ೧ || ಚತುರಮುಖನು ಬಂದು ಪೃಥುವಿ ಒಳಗೆ ನಿಂದು ಕ್ರತುಗಳ ಮಾಡಿ ಆಹುತಿ ಕೊಡಲು ಅತಿಗ್ರಾಸವಾಯಿತೆಂದು ಅನಲ ಬಂದು ಮೊರೆಯಿಡಲು ದ್ವಿತೀಯ ಗ್ರಾಸಕೆ ಕೈಯ ಒಡ್ಡಿ ನಿಂತದ್ದು ಕಂಡು || ೨ || ಮೊದಲ ಬಾಗಿಲಲಿ ನಿಮ್ಮ ಮುಖಕಮಲವ ಕಂಡೆ ಮುದದಿಂದ ಮಕರಕುಂಡಲ ಕಿರೀಟವ ಕಂಡೆ ಭುಜದ್ವಯವನು ಕಂಡೆ ಶ್ರೀವತ್ಸ ಕೌಸ್ತುಭ ಕೊರಳ ವೈಜಯಂತೀ ಮಾಲಿಕೆಗಳ ಕಂಡು ಎನ್ನ || ೩ || ನಡುವಿನ ಬಾಗಿಲಲಿ ನಾಭಿಕಮಲ ಕಂಡೆ ಉದ್ಭವಿಸಿ ಮೆರೆವ ವಿರಿಂಚಿಯ ಕಂಡೆ ಜಡಿವೊ ಪೀತಾಂಬರ ನಡುವಿನೊಡ್ಯಾಣವ ಉಡಿಗೆಜ್ಜೆ ಮೇಲಿನ ಕಿರಿಗೆಜ್ಜೆಗಳ ಕಂಡು || ೪ || ಮೂರನೆ ಬಾಗಿಲಲಿ ಮುದ್ದು ಶ್ರೀ ಚರಣವು ಶ್ರೀದೇವಿ ಭೂದೇವಿ ಸೇವೆ ಮಾಳ್ಪುದ ಕಂಡೆ ಸುರರು ಮಾನವರ ಕಂಡೆ ಸ್ತೋತ್ರಮಾಳ್ಪುದ ಕಂಡೆ ಉರಗಶಯನ ಮ್ಯಾಲೆ ಹಯವದನನ ಕಂಡು ಎನ್ನ || ೫ || janma saPalavAyitu || pa || Adi anaMta janArdanana kaMDu  enna janma saphalavAyitu || apa || brahmAnaMda suguNa nimma mahimeya a- gamyagOcaraneMdu stutisutire bra...

ಗೋದಾವರಿ ನದಿ ಕುರಿತು ವಾದಿರಾಜರ ಕೃತಿ | ಗೋದೆ ಸಮಸ್ತ | Gode samasta | Vadirajaru | A Song on River Godavari

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಗೋದೆ ಸಮಸ್ತಫಲದೆ ಸ್ನಾನ ಒದಗಿಮಾಡಿದರೊಮ್ಮೆ ವೈಕುಂಠಪದವೀವೆ || ಪ || ಬ್ರಹ್ಮಾದ್ರಿ ಶಿಖರದಿಂ ಪುಟ್ಟಿ ನೀನು ಬಲು ಬ್ರಹ್ಮ ಋಷಿಯಾದ ಗೌತಮ ಮುನಿಯ ಬ್ರಾಹ್ಮರಿಂದಲಿ ಬಂದ ಗೋಹತ್ಯ ಪರಿಹರಿಸಿ ಅಮ್ಮಮ್ಮ ಸಪ್ತಮುಖದಿಂದ ಸಾಗರವ ಬೆರೆದೆ || ೧ || ಆದಿಯಲಿ ತ್ರಿಯಂಬಕನ ಜಡೆಯಲುದಿಸಿದೆ ನೀನು ಮುದದಿಂದ ಪಶ್ಚಿಮಕಾಗಿ ನಡೆಯೆ ಕಂಡು ಒದಗಿ ಗೌತಮನು ಕುಶದಿಂದ ತಿರುಗಿಸಲು ನೀ ಸದಮಲ ಕುಶಾವರ್ತಳೆಂದೆನಿಸಿಕೊಂಡೆ || ೨ || ಔದುಂಬರ ವೃಕ್ಷಮೂಲದಿಂದುದ್ಭವಿಸಿ ಉದಧಿಯನು ಕೂಡಬೇಕೆಂದು ಬೇಗ ಮೇದಿನಿಯಿಳಿದು ತಿರುಗುತಲಿ ನೀ ಮುದದಿಂದ ಆದರದಿ ಪೂರ್ವಾಬ್ಧಿಯನು ಕೂಡಿದೆ || ೩ || ಸಿಂಹರಾಸಿಯಲಿ ಸುರಗುರು ಬಂದುದು ಕೇಳಿ ಅಂವ್ಹಂ ರಾಸಿಗಳು ಸಂಹಾರಕಾಗಿ ಬಂಹ್ವಾಯಾಸದಿ ಬಂದು ನಿಮ್ಮನು ಕಂಡೆ ಅಂವ್ಹಂಗಳು ಪರಿಹರಿಸಿ ಮುಕುತಿಯ ಕೊಡು ದೇವಿ || ೪ || ವಿನಯದಲಿ ಸ್ನಾನಪಾನವನು ಮಾಡುವರಿಗೆ ವನಜಾಕ್ಷ ಹಯವದನ ಹರಿಯ ವನಜನಾಭನ ಲೋಕಸಾಧನವಾದ ಘನ ಭಕುತಿಯನಿತ್ತು ರಕ್ಷಿಸು ದೇವಿ || ೫ || gOde samastaPalade snAna odagimADidaromme vaikuMThapadavIve || pa || brahmAdri SiKaradiM puTTi nInu balu brahma RuShiyAda gautama muniya brAhmariMdali baMda gOhatya pariharisi ammamma saptamuKadiMda sAgarava berede || 1 || Adiyali triyaMbakana jaDe...

ಭೀಮ ನಿಸ್ಸೀಮಮಹಿಮ | ಹಯವದನ | Bhima Nissima Mahima | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಭೀಮ ನಿಸ್ಸೀಮಮಹಿಮ ಅಗಣಿತ ಗುಣಸ್ತೋಮ ಕಾಮಪಿತನ ಬಂಟ ನೆನೆವರಿಗೆ ನಂಟ || ಪ || ನಿನ್ನ ಬಲವತ್ತರ ಶಕ್ತಿಯಿಂದಲಿ ಕಲಿಯ  ಬಣ್ಣಗೆಡಿಸಿದೆ ಪಿಡಿದು ಗದೆಯಿಂದ ಸದೆದು ಇನ್ನಾರು ನಿನಗೆ ಸರಿ ರಿಪುಕದಳಿಮತ್ತಕರಿ  ಎನ್ನ ನೀ ರಕ್ಷಿಸಯ್ಯ ಪಿಡಿಬ್ಯಾಗ ಕಯ್ಯ || ೧ || ಕುಂತಿಯ ಕುಮಾರ ಕೌರವಕುಲ ಕುಠಾರ ಅಂತರಂಗದಿ ಶುದ್ಧ ಎನ್ನ ಮನದೊಳಗಿದ್ದ ಸಂತಾಪಗಳ ಕೆಡಿಸೊ ಹರಿಭಕುತಿಯನು ಕೊಡಿಸೊ ಅ-  ಚಿಂತ್ಯಬಲ ಶೌರ್ಯ ದುರ್ಜನ ಕುಮುದ ಸೂರ್ಯ || ೨ || ದೇವ ನೀ ವಿಷದ ಲಡ್ಡುಗೆಯನುಂಡು ದಕ್ಕಿಸಿದ ಕಂಡು ಭಾವಶುದ್ಧದಿ ಮೊರೆಹೊಕ್ಕೆ ದೊರೆಯೆ ಆವಾವುದುಂಡರೆನಗೆ ದಕ್ಕುವಂತೆ ಮಾಡೊ ದೇವ ನಿನಗೆಣೆಗಾಣೆ ಹರಿಪದಗಳಾಣೆ || ೩ || ಬಕ ಹಿಡಿಂಬ ಕಿಮ್ಮೀರರಿಪುವೆ ಘನಸಮೀರ ನಖಾಗ್ರದಲಿ ಕೊಂದೆ ರಣಾಗ್ರದಲಿ ನಿಂದೆ ಭಕುತಿಯಲಿ ನಿನ್ನ ಪಾದ ಭಜಿಸುವವರಿಗೆ ಮೋದ ಯುಕುತಿಯಲಿ ಕೊಡಿಸೊ ವಾದಿಗಳೋಡಿಸೊ || ೪ || ದುರುಳದೈತ್ಯರ ವೈರಿ ಖಳಕುಲಕ್ಕೆ ನೀ ಮಾರಿ ದು- ಸ್ತರಣ ಭವತಾರಿ ಸುಜನರಿಗುಪಕಾರಿ ಹರಿಭಕುತಿ ತೋರಿಸಿದಿ ಮುಕುತಿಪಥ ಸೇರಿಸಿದಿ ಪೊರೆಯಯ್ಯ ಹಯವದನ ಶರಣ ಇದು ಕರುಣ || ೫ || bhIma nissImamahima agaNita guNastOma kaamapitana baMTa nenevarige naMTa || pa || ninna balavattara shaktiyiMdali kaliya  baNNageDiside piDidu gadeyiMda sadedu in...

ಕಾಯಬೇಕು ಶ್ರೀ ತ್ರಿವಿಕ್ರಮ | ಹಯವದನ | Kayabeku Sri Trivikrama | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಕಾಯಬೇಕು ಶ್ರೀ ತ್ರಿವಿಕ್ರಮ ಕಾಯಜನಯ್ಯ ಕಂಜನಯನ || ಪ || ಆರು ನಿನ್ನ ಬಣ್ಣಿಪರು ಅಮರಗುಣನಿಲಯ ಸಾರಿದ ದೇವೇಂದ್ರನಿಗೆ ಸಕಲಸಂಪದವಿತ್ತೆ || ೧ || ಈರೇಳು ಲೋಕಂಗಳನು ಇಷ್ಟಷ್ಟು ಎನ್ನದ ಮುನ್ನ ಈರಡಿಯ ಮಾಡಿದೆ ನೀ ಮುಕುಂದ ಮುರಮರ್ದನ  || ೨ || ಪಾವನ್ನ ಗಂಗಾಜಲವು ಪಾದವೆಂಬ ಪದುಮವ ತೊ- ಳೆವ ನೀರುಗಡವಿನ್ನು ತೋರೊಮ್ಮೆ ಹಯವದನ || ೩ || kAyabEku SrI trivikrama kaayajanayya kaMjanayana || pa || Aru ninna baNNiparu amaraguNanilaya sArida dEvEMdranige sakalasaMpadavitte || 1 || IrELu lOkaMgaLanu iShTaShTu ennada munna IraDiya mADide nI mukuMda muramardana  || 2 || pAvanna gaMgAjalavu pAdaveMba padumava to- Leva nIrugaDavinnu tOromme hayavadana || 3 ||

ತಪ್ಪು ನೋಡದೆ ಬಂದೆಯ | ಪ್ರಸನ್ನ ವೆಂಕಟ | Tappu Nodade Bandeya | Prasanna Venkata

Image
ಸಾಹಿತ್ಯ : ಶ್ರೀ ಪ್ರಸನ್ನ ವೇಂಕಟದಾಸರು  Kriti: Sri Prasannavenkata Dasaru ತಪ್ಪು ನೋಡದೆ ಬಂದೆಯ ನನ್ನಯ ತಂದೆ ಅಪ್ಪ ತಿರುವೆಂಗಳೇಶನೆ ನಿರ್ದೋಷನೆ || ಪ || ಅಪಾದಮೌಳಿ ಎನ್ನೊಳು ಅಘ ಬಹಳ | ಶ್ರೀಪತಿ ಕ್ಷಮಿಸಿ ಕಾಯ್ದೆಯಾ ಉದಧಿಧ್ಯೇಯ || ೧ || ಜಗದಘಹರನೆಂಬುದು ನಿನ್ನಯ ಬಿರುದು | ತ್ರಿಗುಣಾತೀತನೆ ರಾಮನೆ ಗುಣಧಾಮನೆ || ೨ || ಇನ್ನೆನ್ನ ಕಲುಷವಾರಿಸೋ ಭವತಾರಿಸೊ ಪ್ರ | ಸನ್ನ ವೆಂಕಟರಮಣ ಭಯಶಮನ || ೩ || tappu nODade baMdeya nannaya taMde appa tiruveMgaLEshane nirdOShane || pa || apaadamouLi ennoLu aGa bahaLa | shrIpati kShamisi kaaydeyaa udadhidhyEya || 1 || jagadaghaharaneMbudu ninnaya birudu | triguNaatItane raamane guNadhaamane || 2 || innenna kaluShavaarisO bhavataariso pra | sanna veMkaTaramaNa bhayashamana || 3 ||

ಈಗಲೋ ಇನ್ಯಾವಾಗಲೋ | ಹಯವದನ | Igalo Inyaavaagalo | Hayavadana

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಈಗಲೋ ಇನ್ಯಾವಾಗಲೋ ಈ ತನುವು ಪೋಗದಿರದು || ಪ || ಭೋಗದಾಸೆಯ ಬಿಡಿಸಯ್ಯ ನಾಗಶಯನ ನಳಿನನಯನ || ಅಪ|| ಎಂಬತ್ತುನಾಲ್ಕು ಲಕ್ಷ ಯೋನಿಗಳಲಿ ಬಂದು ಅಂಬುಜಾಕ್ಷ ನೊಂದೆನಯ್ಯ ಅಂದಂದು ಮಾಡಿದ ಅಘದಿ ಕುಂಭೀಪಾಕ ಮೊದಲಾದ ಕುತ್ಸಿತ ನರಕದಿ ಬಿದ್ದು ಉಂಬ ದುಃಖವ ಬಿಡಿಸಯ್ಯ ಉದಧಿಶಯನ ಪುಣ್ಯಕಥನ  || ೧ || ಓದಿ ಮರುಳಾದೆನಯ್ಯ ಓದನ ಮಾತ್ರಕ್ಕೆ ಸಭೆಯೊಳು ವಾದಿಸುವೆ ವೇದಶಾಸ್ತ್ರ ಉಪನ್ಯಾಸಂಗಳನು ಮಾಡುವೆ ಕ್ರೋಧರಹಿತನಾಗಿ ಅವರು ಕೊಡಲು ಕೊಂಡಾಡುವೆ ಆದರಿಸದಿದ್ದರವರ ಬೈದು ಬರುವೆ ಖಿನ್ನನಾಗಿ || ೨ || ದೇಶದೇಶಂಗಳಿಗೆ ಧನದ ಆಸೆಗಾಗಿ ಪೋಗಿ ಪೋಗಿ ಬ್ಯಾಸರದೆ ಕಂಡವರ ಕಾಡಿ ಬೇಡಿ ಬಳಲಿದೆ ಕಾಸಿನ ಲಾಭವು ಕಾಣೆ ಘಾಸಿಯಾದೆನಯ್ಯ ಶ್ರೀನಿ ವಾಸ ನಿನ್ನ ಪೂಜಿಸದೆ ಮೋಸ ಹೋದೆನಯ್ಯ ನಾನು || ೩ || ಸ್ನಾನ ಮೌನಂಗಳನು ಮಾಡುವೆ ಸಕಲ ಜನರ ಮುಂದೆ ಮಾನವರಿಲ್ಲದಾಗಲೇ ಮೌನವಿಲ್ಲ ಮಂತ್ರವಿಲ್ಲ ಜ್ಞಾನವ ಪೇಳುವೆ ಮೋಸಕಟ್ಟಲೆಯ ಮಾಡಿಕೊಂಡು ಧ್ಯಾನಿಸದೆ ಹೊಟ್ಟೆಯನ್ನು ಹೊರೆವೆ ನಾ ನಿನ್ನ ಮರೆವೆ || ೪ || ಹೆಣ್ಣು ಹೊನ್ನಿನಾಸೆ ಬಿಡದು ಪುಣ್ಯಕ್ಕೆ ಮನ ಒಡಂಬಡದು ಎನ್ನದೆಂಬೊ ಮಮತೆ ತಗ್ಗದು ಧನ್ಯಜನಕೆ ಶಿರವು ಬಗ್ಗದು ನಿನ್ನ ವಾರ್ತೆಯ ಕರಣ ಕೇಳದು ಅನ್ಯವಾರ್ತೆಗೆ ಹೊತ್ತು ಸಾಲದು ಇನ್ನು ಹೇಸಿಕೆ ಮನಕೆ ಬಾರದು ಮುಂದಿನ ಗತಿಗೆ ದಾರಿ ತೋರದು || ೫ || ಅಂಬುವರ ನಾನರಿಯೆ ಕುಟುಂಬಿಗಳ ಸಲಹಲೋಸುಗ...

ನಮೋ ನಮಸ್ತೆ ನರಸಿಂಹ ದೇವ | ಜಗನ್ನಾಥ ವಿಠಲ | Namo Namaste Narasimha | Jagannatha vittala

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha dasaru (Jagannatha vittala) ನಮೋ ನಮಸ್ತೆ ನರಸಿಂಹ ದೇವಾ ಸ್ಮರಿಸುವವರ ಕಾವ ||ಪ||  ಸುಮಹಾತ್ಮ ನಿನಗೆಣೆ ಲೋಕದೊಳಾವ ತ್ರಿಭುವನ ಸಂಜೀವ ||  ಉಮೆಯರಸನ ಹೃತ್ಕಮಲ ದ್ಯುಮಣಿ ಮಾರಮಣ ಕನಕ ಸಂಯಮಿ ವರ ವರದಾ ||ಅಪ||  ಕ್ಷೇತ್ರಜ್ಞ ಕ್ಷೇಮ ಧಾಮ ಭೂಮ |  ದಾನವ ಕುಲ ಭೀಮ |  ಗಾತ್ರ ಸನ್ನುತ ಬ್ರಹ್ಮಾದಿ ಸ್ತೋಮ ಸನ್ಮಂಗಳ ನಾಮ ||  ಚಿತ್ರ ಮಹಿಮ ನಕ್ಷತ್ರ ನೇಮಿ ಸರ್ವತ್ರ ಮಿತ್ರ ಸುಚರಿತ್ರ ಪವಿತ್ರ ||೧||  ಅಪರಾಜಿತ ಅನಘ ಅನಿರ್ವಿಣ್ಣ |  ಲೋಕೈಕ ಶರಣ್ಯ | ಶಫರ ಕೇತು ಕೋಟಿ ಲಾವಣ್ಯ  ದೈತೇಂದ್ರ ಹಿರಣ್ಯ | ಕಶಿಪು ಸುತನ ಕಾಯ್ದಿಪೆನೆನುತಲಿ  ನಿಷ್ಕಪಟ ಮನುಜ ಹರಿ ವಪುಷ ನೀನಾದೆ ||೨||  ತಪನ ಕೋಟಿ ಪ್ರಭಾವ ಶರೀರ ದುರಿತೌಘವಿದೂರ |  ಪ್ರಪಿತ ಮಹಾ ಮಂದಾರ ಖಳ ವಿಪಿನ ಕುಠಾರ ||  ಕೃಪಣ ಬಂಧು ತವ ನಿಪುಣ ತನಕೆ  ನಾನುಪಮೆಗಾಣೆ ಕಾಶ್ಯಪಿ ವರ ವಾಹನ ||೩||  ವೇದ ವೇದಾಂಗ ವೇದ ವೇದ್ಯ ಸಾಧ್ಯ ಅಸಾಧ್ಯ |  ಶ್ರೀಧ ಮುಕ್ತ ಮುಕ್ತಾರಾರಾಧ್ಯ ಅನುಪಮ ಅನವದ್ಯ |  ಮೋದಮಯನೆ ಪ್ರಹ್ಲಾದ ವರದ  ನಿತ್ಯೋದಯ ಮಂಗಳ ಪಾದ ಕಮಲಕೆ ||೪||  ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ  ನಿನಗೆ ಬಿನೈಸುವೆ ಎನ್ನಯ ಮಾತಾ ಲಾಲಿಸುವುದು ತಾತ  ಗಣನೆಯಿಲ್ಲದವ ಗುಣವೆಣಿಸ...

ಶ್ರೀ ಜಗನ್ನಾಥ ದಾಸ ನಮಿಪೆ | ಶ್ರೀದವಿಠಲ | Sri Jagannatha dasa namipe | Srida Vithala

Image
ಸಾಹಿತ್ಯ : ಶ್ರೀ ಶ್ರೀದ ವಿಠಲ ದಾಸರು Kruti:Sri Srida Vittala Dasaru ಶ್ರೀ ಜಗನ್ನಾಥ ದಾಸ ನಮಿಪೆ  ಗುರು ರಾಜ ಸಾತ್ವಿಕ ವಪುಷ || ಪ || ಈ ಜಗದೊಳು ನಿಮಗೆಣೆಗಾಣೆ ಸತತ ನಿರ್ವ್ಯಾಜದಿ  ಹರಿಯ ಗುಣೋಪಾಸನೆ ಮಾಳ್ಪ || ಅಪ || ಹರಿದಾಸ ಕುಲವರ್ಯರೆನಿಸಿ ಕಲ್ಪತರುವಂದದಿ ಚರ್ಯ  ಚರಿಸುತ ಧರೆಯೊಳು ಮೆರೆವ ಮಹಾತ್ಮರ  ಚರಣೇಂದ್ರೀವರಯುಗ್ಮ ದರುಶನ ಮಾಳ್ಪರ ದುರಿತರಾಶಿಗಳಿರಗೊಡದೆ ನೆರೆ ಪರಮ ಮುಕ್ತಿಯ ದಾರಿ ತೋರುತ  ಸಿರಿ ಸಹಿತ ಹರಿ ತೋರುವಂದದಿ ಕರುಣ ಮಾಳ್ಪ ಸುಗುಣಮಹೋದಧಿ || ೧ || ರವಿಯು ಸಂಚರಿಸುವಂತೆ ಭೂವಲಯದಿ ಕವಿಶ್ರೇಷ್ಠ ಚರಿಸಿದೆಯೋ  ಅವಿರುದ್ಧ ತ್ರಯಿಜ್ಞಾನ ಪ್ರವಹಂಗದಲಿ ಭುವನೈಕ ವೇದವೇದ್ಯನ ಶ್ರವಣಭಕುತಿಯಿಂದ  ದಿವಸ ದಿವಸದಿ ಪ್ರೀತಿ ಬಡಿಸುತ ಧ್ರುವವರನಂಘ್ರಿಗಳಿಗರ್ಪಿಸಿ  ಭುವನ ಪಾವನ ಮಾಡಲೋಸುಗ ಅವನಿ ತಳದಿ ವಿಹರಿಸುತಿಹ ಗುರು || ೨ || ಅಹೋ ರಾತ್ರಿ ಕ್ಷಣ ಬಿಡದೆ ಸನ್ಮನದಿ ಹೃದ್ಗುಹಾಧೀಶನನು ಬಿಡದೆ  ಸಹನ ಗುಣಗಳನ್ನು ಅನುದಿನ ಸ್ಮರಿಸುತ್ತ ಸಹನದಿ ಶಮದಮಯತು ನಿಯಮಗಳನ್ನು  ವಹಿಸಿ ಶ್ರೀದವಿಠಲನಂಘ್ರಿಯ ಮಹಿಮೆ ತೋರುತ ಪೂಜಿಸುತ  ಬಲು ಮಹಿತ ಪೂರ್ಣಾನಂದತೀರ್ಥರ ವಿಹಿತ ಶಾಸ್ತ್ರಗಳರಿತು ಬೋಧಿಪ || ೩ || shrI jagannaatha daasa namipe  guru raaja saatvika vapuSha || pa || I jagadoLu nimageNegaaNe satata nirvyaajadi  hariya...

ತಂಗಿ ನೀ ಕೇಳಿದ್ಯಾ | ಶ್ರೀದ ವಿಠಲ | Tangi Ni Kelidya | Srida Vithala

Image
ಸಾಹಿತ್ಯ : ಶ್ರೀ ಶ್ರೀದ ವಿಠಲ ದಾಸರು Kruti:Sri Srida Vittala Dasaru   ತಂಗಿ ನೀ ಕೇಳಿದ್ಯಾ ಅಂಗನಾಮಣಿ ರಂಗ ಒಲಿದ ಭಾಗವತರ ಮಹಿಮೆಗಳ ಖ್ಯಾತಿ ನೀ ಕೇಳಿದ್ಯ ಅಂಗನಾಮಣಿ || ಪ || ಶ್ರವಣಾದಿ ನವವಿಧ ಸವಿಯ ಭಕುತಿಯಿಂದ ಪ್ರವೀಣರೆನಿಸಿ ಶ್ರೀ ಮಾಧವನ ಧ್ಯಾನಿಪರ ಖ್ಯಾತಿ || ೧ || ಅಮಲ ಸತ್ಕರ್ಮದಿ ಶಮದಮಪೂರ್ವಕ  ಅಮಿತ ಮಹಿಮನಂಘ್ರಿ ಕಮಲಾರ್ಚಿಪರ ಖ್ಯಾತಿ || ೨ || ಶ್ರೀದ ವಿಠಲನ ಪಾದ ಭಜಕರಾದ ಸಾಧುವರ್ಯರ ಸುಬೋಧ ಬಣ್ಣಿಪರ ಖ್ಯಾತಿ || ೩ || taMgi nI kELidyaa aMganaamaNi raMga olida bhaagavatara mahimegaLa Kyaati nI kELidya aMganaamaNi || pa || shravaNaadi navavidha saviya bhakutiyiMda pravINarenisi shrI maadhavana dhyaanipara Kyaati || 1 || amala satkarmadi shamadamapUrvaka  amita mahimanaMghri kamalaarcipara Kyaati || 2 || shrIda viThalana paada bhajakaraada saadhuvaryara subOdha baNNipara Kyaati || 3 ||

ಆವ ಕುಲವೋ ರಂಗ | ಹಯವದನ | Ava Kulavo Ranga | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana)   ಆವ ಕುಲವೋ ರಂಗ ಅರಿಯಬಾರದು || ಪ || ಆವ ಕುಲವೆಂದರಿಯಬಾರದು ಗೋವ ಕಾವ ಗೊಲ್ಲನಂತೆ ಪಾರಿಜಾತದ ವೃಕ್ಷವ ಸತ್ಯಭಾಮೆಗೆ ತಂದಿತ್ತನಂತೆ || ಅಪ || ಗೋಕುಲದಲ್ಲಿ ಪುಟ್ಟಿದನಂತೆ ಗೋವಳರೊಡನೆ ಆಡಿದನಂತೆ ಕೊಳಲನೂದಿ ಮೃಗಪಕ್ಷಿಗಳ ಮರುಳುಮಾಡಿದ ದೇವನಂತೆ || ೧ || ಕಾಲಲ್ಲಿ ಶಕಟನ ಒದ್ದನಂತೆ ಗೂಳಿಯ ಕೊಂಬು ಕಿತ್ತನಂತೆ ಕಾಳಿಂಗನ ಹೆಡೆಯ ತುಳಿದು ಬಾಲೇರಿಗೊಲಿದ ದೇವನಂತೆ || ೨ || ಗೊಲ್ಲತೇರ ಮನೆಗಳಲ್ಲಿ ಕಳ್ಳತನವ ಮಾಡಿದನಂತೆ ಮೆಲ್ಲನೆ ಪೂತನಿ ಅಸುವಹೀರಿ ಬಲ್ಲಿದ ಕಂಸನ ಕೊಂದನಂತೆ || ೩ || ಸರ್ಪ ತನ್ನ ಹಾಸಿಗೆಯಂತೆ ಪಕ್ಷಿ ತನ್ನ ವಾಹನವಂತೆ ಸರ್ಪಭೂಷಣ ಮೊಮ್ಮಗನಂತೆ ಮುದ್ದುಮುಖದ ದೇವನಂತೆ || ೪ || ಕರಡಿಮಗಳ ತಂದನಂತೆ ಶರಧಿ ಮಗಳು ಮಡದಿಯಂತೆ ಧರಣಿಯನ್ನು ಬೇಡಿದನಂತೆ ಈರೇಳು ಲೋಕದ ಒಡೆಯನಂತೆ || ೫ || ತರಳತನದಿ ಒರಳನೆಳೆದು ಮರನ ಕೆಡಹಿ ಮತ್ತವರ ಸಲಹಿ ದುರುಳ ರಕ್ಕಸರನು ಕೊಂದ ಚೆಲುವ ಹಯವದನನಂತೆ || ೬ || Ava kulavO raMga ariyabaaradu || pa || Ava kulaveMdariyabaaradu gOva kaava gollanaMte paarijaatada vRukShava satyabhaamege taMdittanaMte || apa || gOkuladalli puTTidanaMte gOvaLaroDane ADidanaMte koLalanUdi mRugapakShigaLa maruLumaaDida dEvanaMte || 1 || kaalalli shakaTana oddanaMte g...

ಎರಡು ಒಂದಾಗದು ರಂಗ | ಪುರಂದರ ವಿಠಲ | Eradu Ondaagadu Ranga | Purandara vittala

Image
ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಎರಡು ಒಂದಾಗದು ರಂಗ ||ಪ|| ಎರಡು ಒಂದಾಗದು ಎಂದೆಂದಿಗೂ ರಂಗ || ಅ.ಪ || ಒಂದು ವೃಕ್ಷದಲ್ಲಿ ಎರಡು ಪಕ್ಷಿಗಳು | ಒಂದೇ ಗೂಡಿನಲ್ಲಿ ಇರುತಿಹವು || ಒಂದು ಪಕ್ಷಿ ಫಲಂಗಳನುಂಬುದು | ಮತ್ತೊಂದು ಫಲಂಗಳ ಉಣ್ಣದು ರಂಗ ||೧|| ಹಲವು ಕೊಂಬೆಗೆ ಒಂದು ಹಾರಿತು | ಒಂದು ಹಲವು ಕೊಂಬೆಗೆ ಹಾರಲರಿಯದು || ಹಲವನ್ನೆಲ್ಲ ಒಂದು ಬಲ್ಲುದು | ಒಂದು ಹಲವನ್ನೆಲ್ಲವ ಅರಿಯದು ರಂಗ ||೨|| ನೂರೆಂಟು ಕೊಂಬೆಗೆ ಹಾರಿತು | ಅದು ಹಾರಿ ಮೇಲಕ್ಕೇರಿ ಮೀರಿತು || ಮೀರಿ ಪುರಂದರ ವಿಠಲ | ನಿಮ್ಮನು ಸೇರಿ ಸುಖಿಯಾಗಿ ನಿಂತಿತು ರಂಗ ||೩|| eraDu oMdaagadu raMga ||pa|| eraDu oMdaagadu eMdeMdigU raMga ||a.pa|| oMdu vRukShadalli eraDu pakShigaLu | oMdE gUDinalli irutihavu || oMdu pakShi PalaMgaLanuMbudu | mattoMdu PalaMgaLa uNNadu raMga ||1|| halavu koMbegE oMdu haaritu | oMdu halavu koMbege haaralariyadu || Halavannella oMdu balludu | oMdu halavannellava ariyadu raMga ||2|| nUreMTu koMbege haaritu | adu haari mElakkEri mIritu || mIri puraMdara viThala | nimmanu sEri suKiyaagi niMtitu raMga ||3||

ಹರಿಯ ಪಟ್ಟದರಾಣಿ | ಹಯವದನ | Hariya Pattadarani | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಹರಿಯ ಪಟ್ಟದರಾಣಿ ನಿಮ್ಮ ಸಿರಿಚರಣಕ್ಕೆ ನಾ ಶರಣೆಂಬೆ ಧರಣಿ ಒರೆಸಮ್ಮ ದುರಿತಘಮ್ಮ ವಸುಧಮ್ಮ || ಪ || ಧನಧಾನ್ಯವಿತ್ತು ಮರ್ತ್ಯರ ಪೊರೆವೆ ಎಂದೆಂದು ಮನೆಗಿಂಬುಕೊಟ್ಟು  ರಕ್ಷಿಸಿದೆ ದಿನದಿನದಿ ಚರಣವಿಟ್ಟರೆ ನೊಂದುಕೊಳೆ ನಿನ್ನಗುಣಕೆ ಭೂದೇವಿ ಸರಿಗಾಣೆ  ಸಕಲಮುನಿ-ಜನರ ಪೊರೆವುದು ನಿಮ್ಮಾಣೆ ನಾರಾಯಣ ಬಂದು ನಿನ್ನ ಸಲಹುವ ಪ್ರವೀಣೆ || ೧ || ಸಪ್ತಸಮುದ್ರಗಳ ಪೊತ್ತಿಪ್ಪೆ ನಿತ್ಯ ಸಮಸ್ತಪರ್ವತಭಾರವ ನೀ ತಾಳ್ವೆ ಉತ್ತಮ ತ್ರಿವಿಕ್ರಮನ ರಥೋತ್ಸಹಕೆ ಮೊದಲಾದ ಪವಿತ್ರಾಂಕುರಾರ್ಪಣಕೆ  ನೀ ಬಂದು ವರಿಯ ಸುತ್ತಿನ ಪವಳಿಯೊಳಗೆ ನಿಂದು ನಮಗೆ ಮುಕ್ತಿ ಪದವೀವುದಕೆ ಬಾ ಕೃಪಾಸಿಂಧು || ೨ || ನಿನಗೆ ದ್ರೋಹವ ಮಾಡಿದ ಹಿರಣ್ಯಾಕ್ಷನೆಂಬ ದನುಜನ ವರಾಹನಾಗಿ ಮೊನೆಯದಾಡೆಯ  ಕೊನೆಯಲಿರಿದು ಕೊಂದು ನಿನ್ನ ಮನೋಹರ ತೊಡೆಯಲಿಟ್ಟುಕೊಂಡ ಸಿರಿ ಹಯವದನ ಹರಿಯಕರ ಕರಿಭೇರುಂಡ ಸಿರಿಗೆ ಸರಿಯೆನಿಸಿ ನಿನ್ನನ್ನು ಪೊರೆಯುತಲಿಹನು ಕಂಡಾ || ೩ || hariya paTTadarANi nimma siricharaNakke nA sharaNeMbe dharaNi oresemma duritaGamma vasudhamma || pa || dhanadhAnyavittu martyara poreve eMdeMdu manegiMbukoTTu  rakShiside dinadinadi caraNaviTTare noMdukoLe ninnaguNake BUdEvi sarigANe  sakalamuni-janara ...

ಆವ ಕಾರಣ ಮೊಗವ | ಜಗನ್ನಾಥವಿಠಲ | Ava Karana Mogava | Jagannatha Vithala

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha dasaru (Jagannatha vittala) ಆವ ಕಾರಣ ಮೊಗವ ತಿರುಹಿದ್ಯೋ ಪೇಳೊ  ಭೂವರಾಹ ಸ್ವಾಮಿಪುಷ್ಕರಣೀತೀರಗನೆ || ಪ || ರಥಸಮೂಹಗಳೇರಿ ಪ್ರಕಾಶಿಪ ಬಗೆಯೊ  ಸತಿಯ ಲಾವಣ್ಯಾತಿಶಯವ ನೋಡುವ ಬಗೆಯೊ ಮಿತಿಯಿಲ್ಲದಸುರರ ಉಪೇಕ್ಷೆ ಮಾಡುವ ಬಗೆಯೊ  ಪತಿತಪಾವನ ಪೂರ್ಣಕಾಮ ನಿನಗೆ  ನುತಿಸಿ ಬಿನ್ನೈಸುವೆನು ಪೇಳೊ || ೧ || ಭಜಕರೆನ್ನನು ಬಿಡರೆಂಬ ಮನಸಿನ ಬಗೆಯೊ  ಅಜಭವಾದಿಗಳ ಸಂಸ್ತುತಿಗಳಾಲಿಪ ಬಗೆಯೊ  ರಜನೀಚರರ ಸದೆದು ನಾಟ್ಯವಾಡುವ ಬಗೆಯೊ  ಭುಜಗಭೂಷಣಪೂಜ್ಯಚರಣ  ತ್ರಿಜಗದ್ವಿಲಕ್ಷಣ ಸುರೂಪನಿರ್ಲೇಪ || ೨ || ಅನುಗರೊಶ ನೀನಾದಡೆಮ್ಮನು ಮರೆವರೆಂದು  ವನಿತೆಗಾರರಿಯದಂತುಪದೇಶಿಸುವ ಬಗೆಯೊ  ಘನಲಕ್ಷಣಮುಖಾಬ್ಜವನು ಚುಂಬಿಸುವ ಬಗೆಯೊ  ವನಜಸಂಭವನಾಸ್ಯಜನೆ ಜಗ  ಜ್ಜನಕ ಜಗನ್ನಾಥವಿಠಲ || ೩ || Ava kAraNa mogava tiruhidyO pELo  BUvarAha svAmipuShkaraNItIragane || pa || rathasamUhagaLEri prakASipa bageyo  satiya lAvaNyAtiSayava nODuva bageyo mitiyilladasurara upEkShe mADuva bageyo  patitapAvana pUrNakAma ninage  nutisi binnaisuvenu pELo || 1 || Bajakarennanu biDareMba manasina bageyo  ajaBavAdigaLa sa...

ಗಣಪತಿ ಎನ್ನ ಪಾಲಿಸೋ | ವೆಂಕಟವಿಠಲ | Ganapati Enna Paliso | Venkata Vithala

Image
ಸಾಹಿತ್ಯ : ಶ್ರೀ ವೆಂಕಟವಿಠಲ ದಾಸರು Kruti: Sri Venkata Vittala Dasaru ಗಣಪತಿ ಎನ್ನ ಪಾಲಿಸೋ ಗಂಭೀರ ||ಪ|| ಪಾರ್ವತಿ ನಂದನ ಸುಂದರ ವದನ || ಶರ್ವಾದಿ ಸುರಪ್ರಿಯ ಶಿರ ಬಾಗುವೆನು ||೧|| ಆದಿಪೂಜಿತ ನೀನು ಮೋದ ಭಕ್ತರಿಗೀವ | ಮಾಧವನಲಿ ಮನ ಸದಾ ನಿಲ್ಲಿಸೋ ನೀ ||೨|| ಪಂಕಜ ನಯನ ಶ್ರೀ ವೆಂಕಟವಿಠಲನ ಕಿಂಕರನೆನಿಸೆನ್ನ ಶಂಕರ ತನಯನೇ ||೩|| gaNapati enna pAlisO gaMBIra ||pa||   pArvati naMdana suMdara vadana || sharvAdi surapriya shira bAguvenu ||1||   AdipUjita nInu mOda BaktarigIva | mAdhavanali mana sadA nillisO nI ||2||   paMkaja nayana SrI veMkaTaviThalana kiMkaranenisenna SaMkara tanayanE ||3||  

ಅಂಬಾ ತನಯ ಹೇರಂಬ | ಜಗನ್ನಾಥ ವಿಠಲ | Amba tanaya Heramba | Jagannatha vittala

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha dasaru (Jagannatha vittala) ಅಂಬಾ ತನಯ ಹೇರಂಬ | ಕರುಣಾಂಬುಧಿ ತವ ಚರಣಾಂಬೋಜಕ್ಕೆರಗುವೆ ||ಅಪ|| ದಶನಮೋದಕ ಪಾಶಾಂಕುಶ ಪಾಣೀ ಅಸಮ ಸಾಹಸಿ ಚಾರುದೇಷ್ಣ ವಂದಿಪೆ ||೧|| ವೃಂದಾರಕ ವೃಂದ ವಂದಿತ ಚರಣಾರ | ವಿಂದ ಯುಗಳ ದಯದಿಂದ ನೋಡು ಎನ್ನ ||೨|| ಯೂಥಪವದನ ಪ್ರದ್ಯೋತ ಸನ್ನಿಭ | ಜಗನ್ನಾಥ ವಿಠಲನ ಸಂಪ್ರೀತಿ ವಿಷಯ ಜಯ ||೩|| aMbA tanaya hEraMba | karuNAMbudhi tava caraNAMbOjakkeraguve ||apa|| daSanamOdaka pASAMkuSa pANI asama saahasi cArudEShNa vaMdipe ||1||   vRuMdAraka vRuMda vaMdita caraNAra | viMda yugaLa dayadiMda nODu enna ||2||   yUthapavadana pradyOta sanniBa | jagannAtha viThalana saMprIti viShaya jaya ||3||

ಗೌರಿ ಆರತಿ ಹಾಡು | ಗೌರಿ ದೇವಿಗೆ ಸಖಿ | ಶ್ಯಾಮಸುಂದರ | Gouri Arati Song | Gouri Devige| Shyamasundara

Image
ಸಾಹಿತ್ಯ : ಶ್ರೀ ಶ್ಯಾಮಸುಂದರ ದಾಸರು Kruti: Sri Shyamasundara Dasaru ಗೌರಿ ದೇವಿಗೆ ಸಖಿ ತಾರೇ ಆರುತಿ || ಪ || ಮುನಿಜನ ವಂದಿತೆ ಮನದಭಿಮಾನಿಯೇ ಗಣಪತಿ ಷಣ್ಮುಖ ಜನನೀ ದೇವಿಗೆ || ೧ || ಶಂಕರಿ ಭಕ್ತ ಸುಶಂಕರಿ ದೈತ್ಯ ಭಯಂಕಾರಿಯಾದ ಶಶಾಂಕ ಮುಖಿಗೆ || ೨ || ಶ್ಯಾಮಸುಂದರ ನಾಮ ಪತಿ ಸಹ ನೇಮದಿ ನೇಮದಿ ಪಠಿಸುವ ಹೈಮಾವತಿಗೆ || ೩ || gouri dEvige saKi taarE Aruti || pa || munijana vaMdite manadabhimaaniyE gaNapati ShaNmuKa jananI dEvige || 1 || shaMkari bhakta sushaMkari daitya bhayaMkaariyaada shashaaMka muKige || 2 || shyaamasuMdara naama pati saha nEmadi nEmadi paThisuva haimaavatige || 3 ||

ಪಾರ್ವತಿ ವರಸುತ ಗಜಾನನ | ವರರಂಗ ವಿಠಲ | Parvati Varasuta Gajanana | Vararanga Vithala

Image
ಅಂಕಿತ : ವರರಂಗ ವಿಠಲ Ankita : Vararanga Vittala  ಪಾರ್ವತಿ ವರಸುತ ಗಜಾನನ ಪಾಲಿಸು ಎನ್ನನು ಗಜಾನನ ||ಪ|| ಪಾಶಾಂಕುಶಧರ ಪಾಪ ವಿಮೋಚಕ ರಕ್ಷಿಸು ಎನ್ನನು ಗಜಾನನ ||೧|| ಲಂಬೋದರನೆ ನಂಬಿದೆ ನಿನ್ನನು ಬೆಂಬಿಡಬೇಡವೊ ಗಜಾನನ ||೨|| ವರರಂಗ ವಿಠಲನ ಸ್ಮರಣೆಯ ಮಾಡುವೆ ಕೈ ಬಿಡಬೇಡವೋ ಗಜಾನನ ||೩|| pArvati varasuta gajAnana pAlisu ennanu gajAnana ||pa|| pAshAMkuSadhara pApa vimOchaka rakShisu ennanu gajAnana ||1|| laMbOdarane naMbide ninnanu beMbiDabEDavo gajAnana ||2|| vararaMga viThalana smaraNeya mADuve kai biDabEDavO gajAnana ||3||

ಗಜವದನ ಪಾಲಿಸೋ | ವಿಜಯ ವಿಠಲ | Gajavadana Paliso | Vijaya Vithala

Image
ಸಾಹಿತ್ಯ : ಶ್ರೀ ವಿಜಯದಾಸರು (ವಿಜಯ ವಿಠಲ) Kruti:Sri Vijayadasaru (Vijaya vittala) ಗಜವದನ ಪಾಲಿಸೋ | ಲಾಲಿಸೋ ||ಪ|| ತ್ರಿಜಗವಂದಿತನೆ ಭುಜಗ ಭೂಷಣನೆ ||ಅಪ||  ಭಕ್ತಿಯೊಳ್ ಭಜಿಪೆನು ರಕ್ತಾಂಬರಧರ | ಮುಕ್ತಿಪಥವ ತೋರೋ ಶಕ್ತಿ ಸ್ವರೂಪನೆ ||೧|| ಈಸು ದಿನಕೆ ನಿನ್ನಯ ದಾಸನ ಸಲಹುವ | ಈಶವಾಸಿಯೊಳ್ ನಿತ್ಯವಾಸನೆನುತ ||೨|| ಪೊಡವಿಯೊಳಗೆ ನಿನ್ನ ಬಿಡುವರು ಯಾರು | ಕಡು ಹರುಷದಿ ಕಾಯೋ ವಿಜಯ ವಿಠಲ ದಾಸ ||೩|| gajavadana pAlisO | lAlisO ||pa|| trijagavaMditane bhujaga bhooShaNane || apa||  bhaktiyoL bhajipenu raktAMbaradhara | muktipathava tOrO shakti svarUpane  ||1||   Isu dinake ninnaya dAsana salahuva | IshavAsiyoL nityavAsanenuta ||2||   poDaviyoLage ninna biDuvaru yAru | kaDu haruShadi kAyO vijaya viThala dAsa ||3||

ಆರಂಭದಲಿ ನಮಿಪೆ | ಶ್ಯಾಮಸುಂದರ | Arambhadali Namipe | Shyamasundara

Image
ಸಾಹಿತ್ಯ : ಶ್ರೀ ಶ್ಯಾಮಸುಂದರ ದಾಸರು Kruti: Sri Shyamasundara Dasaru ಆರಂಭದಲಿ ನಮಿಪೆ ಬಾಗಿ ಶಿರವ | ಹೇರಂಬ ನೀನೊಲಿದು ನೀಡೆಮಗೆ ವರವ ||ಪ|| ದ್ವಿರದವದನನೆ ನಿರುತ ದ್ವಿರದವರದನ ಮಹಿಮೆ ಹರುಷದಲಿ ಕರಜಿಹ್ವೆ ಎರಡರಿಂದ | ಬರೆದು ಪಾಡುವುದಕ್ಕೆ ಬರುವ ವಿಘ್ನವ ತರಿದು ಕರುಣದಿಂದಲಿ ಎನ್ನ ಕರ ಪಿಡಿದು ಸಲಹೆಂದು ||೧|| ಕುಂಭಿಣಿಜೆ ಪತಿರಾಮ ಜಂಬಾರಿ ಧರ್ಮಜರು ಅಂಬರಾಧಿಪ ರಕುತಾಂಬರನೆ ನಿನ್ನ ||  ಸಂಭ್ರಮದಿ ಪೂಜಿಸಿದರೆಂಬ ವಾರುತೆ ಕೇಳಿ | ಹಂಬಲವ ಸಲಿಸೆಂದು ನಂಬಿ ನಿನ್ನಡಿಗಳಿಗೆ ||೨|| ಸೋಮಶಾಪದ ವಿಜಿತ ಕಾಮ ಕಾಮಿತದಾತ ವಾಮದೇವನ ತನಯ ನೇಮದಿಂದ ||  ಶ್ರೀ ಮನೋಹರನಾದ ಶ್ಯಾಮಸುಂದರ ಸ್ವಾಮಿ | ನಾಮ ನೆನೆಯುವ ಭಾಗ್ಯ ಪ್ರೇಮದಲಿ ಕೊಡು ಎಂದು ||೩|| AraMbhadali namipe baagi shirava | hEraMba nInolidu nIDemage varava ||pa|| dviradavadanane niruta dviradavaradana mahime haruShadali karajihve eraDariMda | baredu paaDuvudakke baruva vighnava taridu karuNadiMdali enna kara piDidu salaheMdu ||1|| kuMbhiNije patiraama jaMbaari dharmajaru aMbaraadhipa rakutaaMbarane ninna ||  saMbhramadi pUjisidareMba vaarute kELi | haMbalava saliseMdu naMbi ninnaDigaLige ||2|| sOmashaapada vijita kaama kaamitadaata vaamadEvan...

ಭದ್ರಾಣಿ ದೇಹಿಮೇ ಗೌರಿ | ಹಯವದನ | Bhadrani Dehi Me Gowri | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಭದ್ರಾಣಿ ದೇಹಿಮೇ ಗೌರಿ ||ಪ||  ಭದ್ರಾಣಿ ದೇಹಿ ಗೌರಿ ರುದ್ರಾಣಿ ಭೂರ್ಯಾಭರಣಿ ||ಅಪ||  ಗರ್ವಾದಿ ನಿರ್ಮಿತಾನಿ ದೂರ್ವಾಸ ಸುಖದಾನಿ |  ಶರ್ವಾದಿ ಪಾತಕಾನಿ ಸರ್ವಾಣಿ ಚಿಂತಾನಿ ||೧||  ಅಂಭೋಜನಾಭ ಸಹಿತೆ ರಂಭೋರು ಶಂಭೋದಯಿತೆ  ಗಾಂಭೀರ್ಯ ಸುಗುಣ ಸಹಿತೇ ಕುಂಭೋದ್ಭವಾದಿ ವಿನುತೆ ||೨||  ಇಂದೀವರಾಭ ನಯನೇ | ವಂದಿತ ಹಯವದನೆ  ಕುಂದ ಕುಟ್ಮಲರದನೆ ಚಂದ್ರಸಹಸ್ರವದನೇ ||೩||  BadrANi dEhimE gauri ||pa||  BadrANi dEhi gauri rudrANi BUryABaraNi ||apa||    garvAdi nirmitAni dUrvAsa suKadAni |  SarvAdi pAtakAni sarvANi ciMtAni ||1||    aMBOjanABa sahite raMBOru SaMBOdayite  gAMBIrya suguNa sahitE kuMBOdBavAdi vinute ||2||    iMdIvarABa nayanE | vaMdita hayavadane  kuMda kuTmalaradane caMdrasahasravadanE ||3||

ಎಂಥಾ ಪಾಪಿ ದೃಷ್ಟಿ ತಾಗಿತು | ಪುರಂದರ ವಿಠಲ | Entha paapi drushti | Purandara vittala

Image
ಸಾಹಿತ್ಯ : ಶ್ರೀ ಪುರಂದರ  ದಾಸರು (ಪುರಂದರ ವಿಠಲ) Kruti: Sri Purandara dasaru (Purandara vittala) ಎಂಥಾ ಪಾಪಿ ದೃಷ್ಟಿ ತಾಗಿತು | ಗೋಪಾಲ ಕೃಷ್ಣಗೆ | ಕೆಟ್ಟ ಪಾಪಿ ದೃಷ್ಟಿ ತಾಗಿತು || ಪ || ಶಿಶು ಹಸಿದನೆಂದು ಗೋಪಿ ಮೊಸರು ಕುಡಿಸುತ್ತಿರಲು  ನೋಡಿ ಹಸಿದ ಬಾಲರ ದೃಷ್ಟಿ ತಾಗಿ ಮೊಸರು ಕುಡಿಯಲೊಲ್ಲನೆ || ೧ || ಕೃಷ್ಣ ಹಸಿದನೆಂದು ಗೋಪಿ ಬಟ್ಟಲೊಳಗೆ ಕ್ಷೀರ ಕೊಡಲು ಕೆಟ್ಟ ಬಾಲರ ದೃಷ್ಟಿ ತಾಗಿ ಕೊಟ್ಟ ಹಾಲು ಮುಟ್ಟನೇ || ೨ || ಚಿನ್ನ ಹಸಿದನೆಂದು ಗೋಪಿ ಬೆಣ್ಣೆ ಕೈಯಲಿ ಕೊಡಲು ನೋಡಿ ಸಣ್ಣ ಬಾಲರ ದೃಷ್ಟಿ ತಾಗಿ ಬೆಣ್ಣೆ ವಿಷಮವಾಯಿತೆ || ೩ || ಅಂಗಿ ಹಾಕಿ ಉಂಗುರವಿಟ್ಟು ಕಂಗಳಿಗೆ ಕಪ್ಪನ್ನಿಟ್ಟು ಅಂಗಳದೊಳು ಆಡೋ ಕೃಷ್ಣಗೆ ಹೆಂಗಳಾ ದೃಷ್ಟಿಯಿದೇನೋ || ೪ || ಶಲ್ಲೆ ಉಡಿಸಿ ಮಲ್ಲೆ ಮುಡಿಸಿ ಚೆಲ್ವ ಫಣೆಗೆ ತಿಲಕನಿಟ್ಟು ವಲ್ಲಭ ಪುರಂದರ ವಿಠಲನ ಫುಲ್ಲನೇತ್ರೇರು ನೋಡಿದರೇನೋ || ೫ || eMthaa paapi dRuShTi taagitu | gOpaala kRuShNage | keTTa paapi dRuShTi taagitu || pa || shishu hasidaneMdu gOpi mosaru kuDisuttiralu  nODi hasida baalara dRuShTi taagi mosaru kuDiyalollane || 1 || kRuShNa hasidaneMdu gOpi baTTaloLage kShIra koDalu keTTa baalara dRuShTi taagi koTTa haalu muTTanE || 2 || cinna hasidaneMdu gOpi beNNe kaiyali koDalu ...

ಗಜವದನ ಪಾವನ | ಗೋಪಾಲ ವಿಠಲ | Gajavadana paavana | Gopala vittala

Image
ಸಾಹಿತ್ಯ : ಶ್ರೀ ಗೋಪಾಲ ದಾಸರು (ಗೋಪಾಲ ವಿಠಲ) Kruti: Sri Gopala Dasaru (Gopala vittala) ಗಜವದನ ಪಾವನ ವಿಘ್ನನಾಶನ ಗಜವದನ ಪಾವನ || ಪ || ಪಾಶಾಂಕುಶಧರ ಪರಮ ದಯಾಳು  ಕರುಣಾಪೂರಿತ ಗೌರಿ ಕುಮಾರನೆ || ೧ || ಸುಂದರ ವದನಾರವಿಂದ ಚರಿತ ಘನ  ಸುಂದರಿ ಕುವರನೆ ಬಂದು ರಕ್ಷಿಸೊ || ೨ || ಗೋಪಾಲ ವಿಠಲನ ಚರಣ ಭಜಕನೆ ಶಾಪಾನುಗ್ರಹಶಕ್ತ ಅನೇಕ ಮಹಿಮ || ೩ || gajavadana paavana viGnanaashana gajavadana paavana || pa || paashaaMkushadhara parama dayaaLu  karuNaapUrita gouri kumaarane || 1 || suMdara vadanaaraviMda carita Gana  suMdari kuvarane baMdu rakShiso || 2 || gOpaala viThalana caraNa bhajakane shaapaanugrahashakta anEka mahima || 3 ||

ಹರೇ ವೇಂಕಟಶೈಲ | ಶ್ರೀಪತಿ ವಿಠಲ | Hare Venkata Shaila | Sripati Vithala

Image
ಸಾಹಿತ್ಯ :    ಶ್ರೀ ಶ್ರೀಪತಿ ವಿಠಲ ದಾಸರು  Kruti: Sri Sripathi Vittala Dasaru ಹರೇ ವೇಂಕಟಶೈಲ ವಲ್ಲಭ ಸ್ಮರಿಸುವೆ ನಾ ನಿನ್ನ || ಪ || ಕರುಣಾಪೂರ್ಣ ವರಪ್ರದ ಚರಿತಾ ಪರಿಪಾಲಿಸು ನಮ್ಮ || ಅಪ || ಪತಿತ ಪಾವನಾ ನತಜನ ಅತಿಹಿತ ದಿತಿಜ ಮಥನ ರಂಗ | ಪ್ರತತಾಚ್ಯುತ ಅಚ್ಯುತನಿಲಯನೆ ಕೇಳ್ ಸತತ ಸುಗುಣ ರಂಗ || ೧ || ದೋಷದೂರ ಪರಾಶರಾರ್ಚಿತ ಕ್ಲೇಷ ನಾಶ ದೇವಾ | ವಾಸುದೇವ ಸರ್ವೇಶ ಸಾಧುಜನ ಪೋಷ ಸುಪ್ರಭಾವ || ೨ || ಅಜಭವನುತ ಪದ ದ್ವಿಜ ಧ್ವಜಗಮನ ಭಜಕರ ಭಯಹಾರಿ | ತ್ರಿಜಗ ಪೋಷಕ ಶ್ರೀಪತಿ ವಿಠಲ ನಿಜ ಜನರುಪಕಾರಿ || ೩ || harE vEMkaTashaila vallabha smarisuve naa ninna || pa || karuNaapUrNa varaprada caritaa paripaalisu namma || apa || patita paavanaa natajana atihita ditija mathana raMga | pratataacyuta acyutanilayane kEL satata suguNa raMga || 1 || dOShadUra paraasharaarcita klESha naasha dEvaa | vaasudEva sarvEsha saadhujana pOSha suprabhaava || 2 || ajabhavanuta pada dvija dhvajagamana bhajakara bhayahaari | trijaga pOShaka shrIpati viThala nija janarupakaari || 3 ||

ರಮಾ ಸಮುದ್ರನ | ಶೇಷ ವಿಠಲ | Ramaa Samudrana | Shesha Vithala

Image
ಸಾಹಿತ್ಯ : ಶ್ರೀ ಶೇಷ ವಿಠಲ ದಾಸರು Kruti:Sri Shesha Vittala Dasaru  ರಮಾ ಸಮುದ್ರನ ಕುಮಾರಿ ನಿನ್ನ ಸರಿ ಸಮಾನರ‍್ಯಾರಮ್ಮ ||ಪ|| ಉಮೇಶ ಮೊದಲಾದ ಅಮರನಿಕರವು ಭ್ರಮಿಸಿ ನಿನ್ನ ಪಾದ ಕಮಲ ಭಜಿಪರೋ ||ಅಪ|| ಅಪಾರ ಮಹಿಮನ ವ್ಯಾಪಾರಗಳ ತಿಳಿದು ಕಾಪಾಡು ಈ ಜಗವಾ || ಕೋಪರಹಿತಳಾಗಿ ಶ್ರೀಪತಿಯೊಳು ನಮ್ಮ ತಾಪತ್ರಯವ ಪೇಳಿ ಕಾಪಾಡಬೇಕಮ್ಮ ||೧|| ಕರುಣಾವಾರಿಧಿ ಎಂದು ಶರಣ ಜನರು ನಿನ್ನ ಸ್ಮರಣೆಯ ಮಾಡುವರೇ || ಹರಿಣಾಕ್ಷಿ ಕೇಳೆಲೆ ಕರುಣದಿಂದ | ಹರಿ ಚರಣವ ತೋರಿ ಅಘಹರಣವ ಮಾಡಿಸೇ ||೨|| ವಾಸವನುತ ಸಿರಿ ಶೇಷ ವಿಠಲನೊಳು | ವಾಸವ ಮಾಡುವಳೇ || ಘಾಸಿಗೊಳಿಸದಲೆ ಈ ಸಮಯದಲಿ | ವಾಸುದೇವಗೆ ಪೇಳಿ ಪೋಷಿಸಬೇಕಮ್ಮ ||೩|| ramaa samudrana kumaari ninna sari samaanar^yaaramma ||pa|| umEsha modalaada amaranikaravu bhramisi ninna paada kamala bhajiparO ||apa|| apaara mahimana vyaapaaragaLa tiLidu kaapaaDu I jagavaa || kOparahitaLaagi shrIpatiyoLu namma taapatrayava pELi kaapaaDabEkamma ||1|| karuNaavaaridhi eMdu sharaNa janaru ninna smaraNeya maaDuvarE || hariNaakShi kELele karuNadiMda | hari caraNava tOri aghaharaNava maaDisE ||2|| vaasavanuta siri shESha viThalanoLu | vaasava maaDuvaLE || ghaasigoLisadale I samayadali | ...

ಕರುಣಿಯೆಂಬೆ ಕರುಣಾಬ್ಧಿಯೆಂಬೆ | ಪ್ರಸನ್ನ ವೆಂಕಟ ದಾಸರು | Karuniyembe Karunabdhi | Prasanna Venkata Dasaru

Image
ಸಾಹಿತ್ಯ : ಶ್ರೀ ಪ್ರಸನ್ನ ವೆಂಕಟ ದಾಸರು Kruti: Sri Prasanna Venkata Dasaru ಕರುಣಿಯೆಂಬೆ ಕರುಣಾಬ್ಧಿಯೆಂಬೆ ಶರಣು ಶರಣೆಂಬೆ ಸ್ವಾಮಿ || ಪ || ಪರಮಭಾಗವತರ ಅರಿಗಳ ತರಿದು ನೀ ನರಕ ತಪ್ಪಿಸಿ ನಿಜಪುರಕ್ಕೊಯ್ಯುವಿಯೆಂದು || ಅಪ || ತಾಯಿಯೆಂಬೆ ಎನ್ನ ತವರೂರೆಂಬೆ ತ್ರಾಹಿ ತ್ರಾಹಿ ಎಂಬೆ ಸ್ವಾಮಿ | ಬಾ ಎಂಬೆ ಮಾನವರ ಘಾಯ ಕಾಣಿಸುತಿರೆ ನೀ ಅಜಮಿಳಗಾಶ್ರಯವಿತ್ತೆಂಬೆ || ೧ || ತಾತನೆಂಬೆ ಅವ್ಯಾಪ್ತನೆಂಬೆ ನಾಥ ನಾಥೆಂಬೆ ಸ್ವಾಮಿ | ಪಾತಕ ಕೌರವರ ಆತಂಕ ಬಿಡಿಸಿ ಸಂಪ್ರೀತಿಲಿ ಪಾಂಡವರ ಕಾಯ್ದಿ ಎಂದು || ೨ || ಏಕನೆಂಬೆ ಅನೇಕನೆಂಬೆ ಸಾಕು ಸಾಕೆಂಬೆ ಸ್ವಾಮಿ | ಶ್ರೀಕಾಂತ ಪ್ರಸನ್ವೆಂಕಟೇಕಾಂತ ಭಕ್ತರ ಬೇಕಾಗಿ ದಡ ನೂಕುವಿ ಎಂದು || ೩ || karuNiyeMbe karuNaabdhiyeMbe sharaNu sharaNeMbe svaami || pa || paramabhaagavatara arigaLa taridu nI naraka tappisi nijapurakkoyyuviyeMdu || apa || taayiyeMbe enna tavarUreMbe traahi traahi eMbe svaami | baa eMbe maanavara Gaaya kaaNisutire nI ajamiLagaashrayavitteMbe || 1 || taataneMbe avyaaptaneMbe naatha naatheMbe svaami | paataka kouravara AtaMka biDisi saMprItili paaMDavara kaaydi eMdu || 2 || EkaneMbe anEkaneMbe saaku saakeMbe svaami | shrIkaaMta prasanveMkaTEkaaMta bhaktara b...

ಲಾಲಿ ಹಾಡು | ಹಯವದನ | Laali Song | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಶ್ರಾವಣ ಅಷ್ಟಮಿ ನಡುರಾತ್ರಿಯಲ್ಲಿ ರೋಹಿಣಿ ನಕ್ಷತ್ರ ಶುಭಲಗ್ನದಲ್ಲಿ ಕಾಮಜನಕ ಕೃಷ್ಣ ಹುಟ್ಟಿದನೆಂದು ತಾಯಿ ದೇವಕೀದೇವಿ ತೂಗಿದಳು ಕೃಷ್ಣನ ||೧|| ಚತುರ್ವೇದ ನಾಲ್ಕು ಸರಪಣಿಯ ಹಾಕಿ ಚತುರ್ವರ್ಗವೆಂಬೊ ತೊಟ್ಟಿಲನೆ ಕಟ್ಟಿ ಚತುರ್ಮುಖ ಬ್ರಹ್ಮನ ಪಡೆದೆ ನೀ ಎಂದು ಯತಿಮುನಿಗಳು ಕೃಷ್ಣನಾ ಪಾಡಿ ತೂಗಿದರು ||೨|| ಅರಳೆಲೆ ಮಾಗಾಯಿ ಕೌಸ್ತುಭಗಳಿಂದ ಹುಲಿಯುಗುರು ನಿನಗೆ ಒಪ್ಪುವ ಅಂದ ಕಡಗ ಕಂಕಣ ವಂಕಿ ತೋಳುಗಳಿಂದ ಪರಮಾತ್ಮ ಮಲಗಿದಾ ಕೃಪೆಯಿಂದ ||೩|| ಆಕಾಶವೇ ಮೇಲು ಮಂಟಪದ ಕಟ್ಟು ಬೇಕೆಂಬೋ ನಕ್ಷತ್ರಮಾಲೆಗಳನಿಟ್ಟು ಲೋಕಗಳನ್ನೆಲ್ಲಾ ತನ್ನಾತ್ಮದೊಳಿಟ್ಟು ಯಾಕಯ್ಯ ಮಲಗಿದೊ ತೊಟ್ಟಿಲೊಳಗುಟ್ಟು ||೪|| ಲಾಲಿ ಬಾಲ ಮುಕುಂದ ಲಾಲಿ ಲಾಲಿ ಲಾಲಿ ಲಾಲಿ ಶುಭಕರದ ಲಾಲಿ  ಲಾಲಿ ಶ್ರೀ ಜಗದ ಆನಂದ ಲಾಲಿ ಲಾಲಿ ಶ್ರೀ ಹಯವದನ ಲಾಲಿ ರಂಗ ಲಾಲಿ ||೫|| shraavaNa aShTami naDuraatriyalli rOhiNi nakShatra shubhalagnadalli kaamajanaka kRuShNa huTTidaneMdu taayi dEvakIdEvi tUgidaLu kRuShNana ||1|| chaturvEda naalku sarapaNiya haaki chaturvargaveMbo toTTilane kaTTi chaturmuKa brahmana paDede nI eMdu yatimunigaLu kRuShNanaa paaDi tUgidaru ||2|| araLele maagaayi koustubhagaLiMda huliyuguru ninage op...

ಕಂಡೆ ಕಂಡೆ ರಾಜರ ಶ್ರೀ ವಾದಿರಾಜರ | Kande kande Rajara Sri Vadirajara

Image
  ಕಂಡೆ ಕಂಡೆ ರಾಜರ ಶ್ರೀ ವಾದಿರಾಜರ  ಕಂಡೆ ಕಂಡೆ ರಾಜರ ||ಪ||    ಕಂಡೆ ಕಂಡೆನು ಕರುಣನಿಧಿಯನು ಕರಗಳಂಜಲಿ ಮಾಡಿ ಮುಗಿವೆನು |  ಲಂಡ ಮಾಯ್ಗಳ ಗುಂಡಿಯೊಡೆಯಲುದ್ದಂಡ ಮಾರುತಿ ಪದಕೆ ಬರುವನ ||ಅಪ||    ಪಂಚ ವೃಂದಾವನದಿ ಮೆರೆವನ ಪಂಚ ಬಾಣನ ಪಿತನ ಸ್ಮರಿಸುವ |  ಪಂಚ ನಂದನ ಮುಂದೆ ಆಗುತ ಮಿಂಚಿನಂದದಿ ಹೊಳೆವ ಮಹಿಮನ ||೧||    ಪಂಕಪಾತಕ ಕಳೆವ ದೇವನ ಪಂಕಜಾರಿನಿ ಭೇಂದ್ರ ವಕ್ರನ |  ಆತಂಕವಿಲ್ಲದೆ ಭಜಿಪ ಸುಜನರ ಶಂಕೆ ಬಿಡಿಸುವ ಶಂಕರೇಶನ ||೨||    ಭಜಿಸುವರಿಗೆ ಭಾಗ್ಯ ಕೊಡುವನ ಋಜುಗಣೇಶಮರೇಂದ್ರ ವಂದಿತ |  ನಿಜ ಪುರಂದರ ವಿಠಲೇಶನ ಭಜನೆ ಮಾಡುವ ಭಾವೀ ಮರುತರ ||೩||  kaMDe kaMDe rAjara SrI vAdirAjara  kaMDe kaMDe rAjara ||pa||    kaMDe kaMDenu karuNanidhiyanu karagaLaMjali mADi mugivenu |  laMDa mAygaLa guMDiyoDeyaluddaMDa mAruti padake baruvana ||apa||    paMca vRuMdAvanadi merevana paMca bANana pitana smarisuva |  paMca naMdana muMde Aguta miMcinaMdadi hoLeva mahimana ||1||    paMkapAtaka kaLeva dEvana paMkajArini BEMdra vakrana |  AtaMkavillade Bajipa sujanara SaMke biDisuva Sa...

ಪಾರ್ವತಿ ಪಾಲಿಸೆನ್ನ | ವೇಣುಗೋಪಾಲ ವಿಠಲ | Parvati Palisenna | Venu Gopala Vithala

Image
ಸಾಹಿತ್ಯ : ಶ್ರೀ ವೇಣುಗೋಪಾಲ ವಿಠಲ ದಾಸರು  Kruti: Sri Venugopala Vittala Dasaru ಪಾರ್ವತಿ ಪಾಲಿಸೆನ್ನ ಮಾನಿನಿರನ್ನೆ | ಪಾರ್ವತಿ ಪಾಲಿಸೆನ್ನ ||ಪ||  ಪಾರ್ವತಿ ಭಕುತರ ಸಾರಥಿ ವಂದಿಪೆ ಸುರಪತಿ ಗಜಮುಖ ಮೂರುತಿ ಮಾತೆ ||ಅಪ||  ಮನಕಭಿಮಾನಿಯೇ ನೆನೆವೆನು ನಿನ್ನನು | ಅನುಗ್ರಹಿಸೆನ್ನನು ಅಂಬುಜಪಾಣೀ ||೧||  ಮಂಗಳೆ ಮೃಡನಂತರಂಗಳೆ ಹರಿಪಾದ || ಭೃಂಗಳೆ ಪಿಂಗಳೆ ಪನ್ನಗವೇಣಿ ||೨||  ಶ್ರೀನಿಧಿ ವೇಣುಗೋಪಾಲ ವಿಠಲನ ಕಾಣಿಸಿ ಕೊಡುವಂಥ ಶೂಲಿಯ ರಾಣಿ ||೩|| pArvati pAlisenna mAniniranne | pArvati pAlisenna ||pa||    pArvati Bakutara sArathi vaMdipe surapati gajamuKa mUruti mAte ||apa||    manakaBimAniyE nenevenu ninnanu | anugrahisennanu aMbujapANI ||1||    maMgaLe mRuDanaMtaraMgaLe haripAda || BRuMgaLe piMgaLe pannagavENi ||2||    SrInidhi vENugOpAla viThalana kANisi koDuvaMtha SUliya rANi ||3||

ಗೋವಿಂದ ಗೋಪಾಲ | ಹಯವದನ | Govinda Gopala Gopika | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಗೋವಿಂದ ಗೋಪಾಲ ಗೋಪಿಕಾವಲ್ಲಭ ಗೋವರ್ಧನೋದ್ಧಾರಕ || ಪ. || ನಾರಾಯಣ ಆಚ್ಯುತ ನರಮೃಗರೂಪ ಶ್ರೀಪತಿ ಶೌರಿ ಹರಿ  ವಾರಿಜೋದ್ಭವವಂದ್ಯ ವಂದಿತ ಚರಿತ್ರ  ಪುರಮರ್ದನಮಿತ್ರ ಪರಮಪವಿತ್ರ || 1 || ಗರುಡತುರಗಗಮನ ಕಲ್ಯಾಣಗುಣಗಣ ನಿರುಪಮಲಾವಣ್ಯ ನಿರ್ಮಲಶರಣ್ಯ  ಪರಮಮುನಿವರೇಣ್ಯ ಭಕ್ತಲೋಕಕಾರುಣ್ಯ || 2 || ಇನಶಶಿಲೋಚನ ಇಂದುನಿಭಾನನ  ಎನುತ ಕುಂಡಲನಾದನ  ಕನಕಮಯವಾಸನ ಘನ ಪಾಪನಾಶನ ಎನುತ ಕುಂಡಲನಾದ ವೇಣುನಾದ ಹಯವದನ || 3 || gOviMda gOpAla gOpikAvallaBa gOvardhanOddhAraka || pa. || nArAyaNa Acyuta naramRugarUpa SrIpati Sauri hari  vArijOdBavavaMdya vaMdita caritra  puramardanamitra paramapavitra || 1 || garuDaturagagamana kalyANaguNagaNa nirupamalAvaNya nirmalaSaraNya  paramamunivarENya BaktalOkakAruNya || 2 || inashashilOcana iMduniBAnana  enuta kuMDalanAdana  kanakamayavAsana Gana pApanASana enuta kuMDalanAda vENunAda hayavadana || 3 ||

ಓಡಿ ಓಡಿ ಬಾ | ಇಂದಿರೇಶ ದಾಸರು | Odi Odi Baa | Indiresha Dasaru

Image
ಸಾಹಿತ್ಯ :    ಶ್ರೀ ಇಂದಿರೇಶ ದಾಸರು (ಇಂದಿರೇಶ)  Kruti: Sri Indiresha Dasaru (Indiresha) ಓಡಿ ಓಡಿ ಬಾ ಅಂಕದೊಳಾಡೋ ಕೂಸೇ ಬಾ | ನೋಡುವೆ ನಿನ್ನಯ ಮುಖವನು ರಾಮನ ಕೂಡಿ ಕರುಣಿಯೇ ಬಾ || ಪ || ಚೆಂಡು ಕೊಡುವೆನೊ ಬಾ ಗೋಲಿ ಗುಂಡು ಕೊಡುವೆನು ಬಾ || ದುಂಡು ಕರದೊಳು ಗುಂಡು ಬಿಂದುಲಿ ಉಂಗುರ ನೀಡುವೆ ಬಾ || ೧ || ಬೆಣ್ಣೆ ಕೊಡುವೆನು ಬಾ ಬಾಳೆಹಣ್ಣು ಕೊಡುವೆನು ಬಾ || ಸಣ್ಣ ಸಣ್ಣ ಹೆಜ್ಜೆಯನಿಕ್ಕುತ ಮನ್ಮಥಪಿತನೇ ಬಾ || ೨ || ನಾರಿವತ್ಸೆ ಬಾ ಮುತ್ತಿನ ಹಾರ ಹಾಕುವೆ ಬಾ | ಪಾರಿಜಾತ ಮುಡಿಸಿದ ರುಕ್ಮಿಣಿ ಧೀರ ಕೃಷ್ಣನೆ ಬಾ || ೩ || ಮುರಳೀಧರನೇ ಬಾ ಮುಂಗುರುಳ ಭೂಷಿತ ಬಾ | ಪರಿಪರಿ ವಸ್ತ್ರವನ್ನಿಟ್ಟು ನೋಡುವೆ ಮರಳಿ ಮರಳಿ ಬಾ || ೪ || ನಂದನ ಕಂದನೆ ಮನಕಾನಂದ ಪಡಿಸುತಾ ನಿಂದಿರ ನಾರಿ || ನಿನ್ನ ನೋಡದೆ ಇಂದಿರೇಶನೇ ಬಾ ಬಾ || ೫ || ODi ODi baa aMkadoLaaDO kUsE baa | nODuve ninnaya muKavanu raamana kUDi karuNiyE baa || pa || ceMDu koDuveno baa gOli guMDu koDuvenu baa || duMDu karadoLu guMDu biMduli uMgura nIDuve baa || 1 || beNNe koDuvenu baa baaLehaNNu koDuvenu baa || saNNa saNNa hejjeyanikkuta manmathapitanE baa || 2 || naarivatse baa muttina haara haakuve baa | paarijaata muDisida rukmiNi dhIra kRuShNane baa || ...

ಎಲ್ಲಡಗಿದನೊ ಹರಿ | ವಿಜಯದಾಸರು | EllaDagidano hari | Vijayadasaru

Image
ಸಾಹಿತ್ಯ : ಶ್ರೀ ವಿಜಯ ವಿಠಲ ದಾಸರು (ವಿಜಯ ವಿಠಲ) Kruti:Sri Vijaya vithala dasaru (Vijaya vittala)  ಎಲ್ಲಡಗಿದನೊ ಹರಿ ಎನ್ನಯ ದೊರಿ || ಪ || ಎಲ್ಲೆಲ್ಲಿ ಪರಿಪೂರ್ಣನೆಂಬೊ ಸೊಲ್ಲನು ಮುನ್ನಾ | ಅಲ್ಲಲ್ಲಿ ಪುಸಿ ಮಾಡಿ ಮಲ್ಲ ಮರ್ದನ ಹರಿ || ಅಪ || ಶರಣೆಂದವರ ಕಾಯ್ವ ಕರುಣಾ ಸಮುದ್ರನು | ತರುಣನ ಅರಿಯದೆ ಹರಿಣಾಂಕನಿಭವಕ್ತ್ರ || ೧ || ಕರಿರಾಜನ ಮೊರೆ ಕೇಳಿ ತ್ವರಿತದಿಂದ | ಗರುಡನೇರಿ ಬಂದ ಗರ್ವರಹಿತ ದೇವ || ೨ || ವರ ಭುಜದಲಿ ಶಂಖಚಕ್ರವ ಧರಿಸಿದ | ಪರಮಸುಂದರ ಮೂರ್ತಿ ಪರಮೇಷ್ಠಿ ಜನಕನು || ೩ || ವನಜ ಮಲ್ಲಿಗೆ ಜಾಜಿ ವನದಲ್ಲಿ ಚಲಿಸುವ |  ವನಿತೆಯರಾಟಕ್ಕೆ ಮನಮೆಚ್ಚಿ ನಡೆದಾನೊ || ೪ || ಗೋವುಗಳ ಹಿಂಡು ಗೋಪಾಲರನು ಕಂಡು | ಕಾವ ವಿಷಯಕ್ಕಾಗಿ ಕಮಲಲೋಚನ ಹರಿ || ೫ || ಇನಚಂದ್ರನಿಭವಕ್ತ್ರ ಕನಕಾಂಬರಧರ | ವಿನಯದಿಂದಾಡುತ್ತ ಮುನಿಗಳಲ್ಲಿಗೆ ದೇವ || ೬ || ಗಜಧ್ರುವ ಬಲಿ ಪಾಂಚಾಲಿ ವರದನೆಂಬ | ನಿಜವಾದ ಬಿರುದುಳ್ಳ ವಿಜಯವಿಠ್ಠಲರೇಯ || ೭ || ellaDagidano hari ennaya dori || pa || ellelli paripUrNaneMbo sollanu munnaa | allalli pusi maaDi malla mardana hari || apa || sharaNeMdavara kaayva karuNaa samudranu | taruNana ariyade hariNaaMkanibhavaktra || 1 || kariraajana more kELi tvaritadiMda | garuDanEri baMda garvarahita dEva || 2 || vara bh...

ಗೋವಿಂದ ನಿನ್ನ ಪಾದವ ಕಂಡೆ | ಗುರು ಶ್ರೀಶವಿಠಲ | Govinda Ninna Paadava | Guru Shreesha Vithala

Image
ಸಾಹಿತ್ಯ : ಶ್ರೀ ಗುರು ಶ್ರೀಷ ವಿಠಲ ದಾಸರು Kruti: Sri Guru Shrisha Vithala Dasaru ಗೋವಿಂದ ನಿನ್ನ ಪಾದವ ಕಂಡೆ || ಪ || ಆವ ಜನ್ಮದ ಪುಣ್ಯ ಫಲಿಸಿತೋ ಪಾವನ ಮೂರ್ತಿಯ ಪಾದವ ಕಂಡೆ || ಅಪ || ಬಲಿಯ ದಾನವ ಬೇಡಿ ಶಿಲೆಯನುದ್ಧರಿಸಿದ | ತಲೆಯಲಿ ಗಂಗೆಯ ಪೊತ್ತವಗೊಲಿದ || ೧ || ಗಂಗೆಯ ಪಡೆದು ಜನಂಗಳ ಪಾಪವ | ಹಿಂಗಿಸುತ್ತಿಪ್ಪ ಶ್ರೀರಂಗ ಮೂರ್ತಿಯ || ೨ || ದರುಶನ ಮಾತ್ರದಿ ದುರಿತಗಳೋಡಿಸಿ | ಹರುಷ ಸುರಿಸುವ ಗುರು ಶ್ರೀಷ ವಿಠಲ || ೩ || gOviMda ninna paadava kaMDe || pa || Ava janmada puNya PalisitO paavana mUrtiya paadava kaMDe || apa || baliya daanava bEDi shileyanuddharisida | taleyali gaMgeya pottavagolida || 1 || gaMgeya paDedu janaMgaLa paapava | hiMgisuttippa shrIraMga mUrtiya || 2 || darushana maatradi duritagaLODisi | haruSha surisuva guru shrISha viThala || 3 ||  

ಕುಂದಣದ ಹಸೆಗೆ | ಶ್ಯಾಮಸುಂದರ ರಾಣಿ | Kundanada Hasege | Shyamasundara Rani

Image
ಸಾಹಿತ್ಯ : ಶ್ರೀ ಶ್ಯಾಮಸುಂದರ ದಾಸರು (ಶ್ಯಾಮಸುಂದರ ರಾಣಿ) Kruti: Sri Shyamasundara Dasaru (Shyamasundara Rani) ಕುಂದಣದ ಹಸೆಗೆ ಚಂದದಲಿ ಬಾರೆ ಚೆಂದದಲಿ ಬಾರೆ ಸಿಂಧು ಕುಮಾರಿ || ಪ || ಶೃಂಗಾರಮಯವಾದ ರಂಗು ಮಂಟಪದೊಳು ಕಂಗೊಳಿಸು ಇಲ್ಲಿ ತಿಂಗಳ ಸೋದರಿ || ೧ || ಕುಂದ ಕುಡ್ಮಲರದನೆ ಸಿಂಧೂರ ಗಮನೆ ಇಂದುಧರಾದಿ ಸುರವೃಂದ ವಂದಿತ ಚರಣೆ || ೨ || ಕಾಮನ ಜನನಿ ಕಾಮಿತದಾಯಿನಿ ಗೋಮಿನಿ ರುಕ್ಮಿಣಿ ಶ್ಯಾಮಸುಂದರ ರಾಣಿ || ೩ || kuMdaNada hasege caMdadali baare ceMdadali baare siMdhu kumaari || pa || shRuMgaaramayavaada raMgu maMTapadoLu kaMgoLisu illi tiMgaLa sOdari || 1 || kuMda kuDmalaradane siMdhUra gamane iMdudharaadi suravRuMda vaMdita caraNe || 2 || kaamana janani kaamitadaayini gOmini rukmiNi shyaamasuMdara raaNi || 3 ||

ನೀ ಪಾಲಿಸೋ ಗುರುರಾಯ | ಗುರು ಜಗನ್ನಾಥ ವಿಠಲ | Ni Paliso Gururaya | Guru Jagannatha Vithala

Image
ಸಾಹಿತ್ಯ : ಶ್ರೀ ಕೋಸಿಗಿ ಸ್ವಾಮಿರಾಯಾಚಾರ್ಯರು (ಗುರು ಜಗನ್ನಾಥ ವಿಠಲ) Kruti: Sri Kosigi Swamirayacharyaru (Guru Jagannatha vittala) ನೀ ಪಾಲಿಸೋ ಗುರುರಾಯ ಎನ್ನ ಕಾಪಾಡು ಈಗ ಮಹರಾಯ || ಪ || ಭೂಪತಿ ನೀ ಎನ್ನ ಆಪದ್ಬಾಂಧವ ಶ್ರೀಪತಿ ಪದಪ್ರಿಯ ಈ ಪರಿ ಮಾಡದೆ || ಅಪ || ಪಾಪಿಗಳೊಳಗೆ ಹಿರಿಯನು ನಾ | ನಿಷ್ಪಾಪಿಗಳರಸೆ ಗುರುರಾಯಾ | ಅಪಾರ ಜನುಮದಿ ಬಂದಿಹ | ತಾಪತ್ರಯ ಕಳಿ ಮಹರಾಯಾ || ೧ || ದೀನರ ಒಳಗೆ ದೀನನು ನಾನೈ | ದಾನಿಗಳರಸನೇ ಗುರುರಾಯಾ | ಜ್ಞಾನವು ಇಲ್ಲದೆ ನಾನು ನನ್ನದೆಂದು | ಹೀನ ಮತ್ಯಾದೆನೋ ಮಹರಾಯಾ || ೨ || ನೀಚರ ಒಳಗೆ ನೀಚನು ನಾ | ಪಾಪ ಮೋಚನೆ ಮಾಡೋ ಗುರುರಾಯಾ | ಯೋಚನೆ ಇಲ್ಲದೆ ಅನ್ಯರ ಅನುದಿನ | ಯಾಚಿಸಿ ಕೆಟ್ಟೆನೋ ಮಹರಾಯಾ || ೩ || ಅನ್ನವು ಇಲ್ಲದೆ ಅನ್ಯರ ಮನೆಯಲ್ಲಿ | ಕುನ್ನಿಯಾದೆನೋ ಮಹರಾಯಾ | ನಿನ್ನನೇ ನಂಬಿ  ಅನ್ಯರ ಬೇಡೋದು | ಘನ್ನತೆಯೇ ನಿನಗೆ ಮಹರಾಯಾ || ೪ || ದಾತನೇ ನಿನ್ನ ಪೋತನು ನಾನು | ಈ ರೀತಿ ಮಾಳ್ಪರೆ ಗುರುರಾಯಾ | ನೀತ ಗುರು ಜಗನ್ನಾಥ | ವಿಠಲ ಪದದೂತನು ನೀನೆ ಮಹರಾಯಾ || ೫ || nI paalisO gururaaya enna kaapaaDu Iga maharaaya || pa || bhUpati nI enna ApadbaaMdhava shrIpati padapriya I pari maaDade || apa || paapigaLoLage hiriyanu naa | niShpaapigaLarase gururaayaa | apaara janumadi baMdiha | taapatraya kaLi maharaaya...

ವಂದಿಸುವೆ ಗುರು | ಜಗನ್ನಾಥ ವಿಠಲ | Vandisuve Guru Raghavendra | Jagannatha Vithala

Image
ಸಾಹಿತ್ಯ : ಶ್ರೀ ಜಗನ್ನಾಥ ದಾಸರು (ಜಗನ್ನಾಥ ವಿಠಲ) Kruti:Sri Jagannatha dasaru (Jagannatha vittala) ವಂದಿಸುವೆ ಗುರು ರಾಘವೇಂದ್ರಾರ್ಯರ | ವೃಂದಾವನ ಪ್ರತೀಕಕೆ ದಿನ ದಿನಾ || ಪ || ಸುವಿರೋಧಿ ವತ್ಸರದಿ ಶ್ರಾವಣ ಪರದ್ವಿತೀಯ | ಕವಿವಾರ ತುಂಗಭದ್ರಾ ತೀರದಿ |  ನವ ಸುಮಂತ್ರಾಲಯದಿ ಒಂದು ರೂಪದಲಿದ್ದು|  ಮಾ- ಧವನ ಪುರಕೈದ ಮಹಾತ್ಮರಿವರೆಂದು || ೧ || ಸ್ವಪದಾವಲಂಬಿಗಳಿಗುಪನಿಷತ್ ಖಂಡಾರ್ಥ ಉಪದೇಶಗೈದು ಕಾಶ್ಯಪಿಸುತರನು | ಪ್ರಪುನೀತರನು ಮಾಡಿ ಅಪವರ್ಗದವರೊಳಗೆ | ಉಪಮರಿಲ್ಲೆಂದರುಹಿದ ಉಪಕಾರಿಗಳ ಕಂಡು || ೨ || ದೇವತೆಗಳಿವರದಕೆ ಸಂದೇಹ ಪಡೆಸಲ್ಲ ವೃಂ ದಾವನವ ರಚಿಸಿ | ಪೂಜಿಪ ಭಕ್ತರ | ಸೇವೆಯೈ ಕೊಂಡು ಈವರು ಮನೋರಥವ  ಶ್ರೀ ವರ ಜಗನ್ನಾಥ ವಿಠಲಗತಿಪ್ರಿಯರೆಂದು || ೩ || vaMdisuve guru rAGavEMdrAryara | vRuMdAvana pratIkake dina dinA || pa || suvirOdhi vatsaradi SrAvaNa paradvitIya | kavivAra tuMgaBadrA tIradi |  nava sumaMtrAlayadi oMdu rUpadaliddu|  mA- dhavana purakaida mahAtmarivareMdu || 1 || svapadAvalaMbigaLigupaniShat KaMDArtha upadESagaidu kASyapisutaranu | prapunItaranu mADi apavargadavaroLage | upamarilleMdaruhida upakArigaLa kaMDu || 2 || dEvategaLivaradake saMdEha paDesalla vRu...

ನೋಡಿದ್ಯಾ ಗುರುರಾಯರ | ಗುರುಜಗನ್ನಾಥ ವಿಠಲ | Nodidya Gururayara | Guru Jagannatha Vithala

Image
ಸಾಹಿತ್ಯ : ಶ್ರೀ ಕೋಸಿಗಿ ಸ್ವಾಮಿರಾಯಾಚಾರ್ಯರು (ಗುರು ಜಗನ್ನಾಥ ವಿಠಲ) Kruti: Sri Kosigi Swamirayacharyaru (Guru Jagannatha vittala) ನೋಡಿದ್ಯಾ ಗುರುರಾಯರ ನೋಡಿದ್ಯಾ ||ಪ|| ನೋಡಿದ್ಯಾ ಮನವೆ ನೀನಿಂದು ಕೊಂಡಾಡಿದ್ಯಾ  ಪುರದಲ್ಲಿ ನಿಂದು - ಆಹಾ ಮಾಡಿದ್ಯಾ ವಂದನೆ ಬೇಡಿದ್ಯಾ ವರಗಳ ಈಡು ಇಲ್ಲದೆ ವರವ ನೀಡೋ ಗುರುಗಳ ||ಅಪ|| ಸುಂದರತಮ ವೃಂದಾವನದಿ ತಾನು ನಿಂದು ಪೂಜೆಯ ಕೊಂಬ ಮುದದಿ ಭಕ್ತ ನೀನಂದ ನೀಡುವೆನೆಂದು ತ್ವರದಿ ಇಲ್ಲಿ ಬಂದು ನಿಂತಿಹನು ಪ್ರಮೋಧಿ || ಆಹಾ ಹಿಂದಿನ ಮಹಿಮವು ಒಂದೊಂದೆ ತೋರುವ ಮಂದ ಜನರ ಹೃನ್ಮಂದಿರ ಗತರನ್ನ ||೧|| ದೂರದಿಂದಲಿ ಬಂದ ಜನರ ಮಹಘೋರ ವಿಪತ್ಪರಿಹಾರ ಮಾಡಿ  ಸಾರಿದಭೀಷ್ಟವು ಪೂರ ನೀಡಿ ಪಾರು ಮಾಡುವ ತನ್ನ ಜನರಾ ಆಹಾ ಆರಾಧಿಸುವರ ಸಂಸಾರ ವಾರಿಧಿಯಿಂದ ದೂರಯೈದಿಸಿ ಸುಖಸೂರಿ ಕೊಡುವೊರನ್ನ ||೨|| ನಿತ್ಯನೇಮದಿ ತನ್ನ ಪಾದಯುಗ ಸತ್ಯಪೂರ್ವಕದಿ ನಂಬೀದ  ನಿಜ ಭೃತ್ಯನಪೇಕ್ಷ ಮಾಡಿದ ಕಾರ್ಯ ಸತ್ಯ ಮಾಡುವ ಪೂಜ್ಯಪಾದ ಆಹಾ ಮತ್ಸ್ಯಾದಿ ಸುರರೊಳು ಎತ್ತ ನೋಡಿದಲಿನ್ನು ಉತ್ತಮರಾರಯ್ಯ ಭೃತ್ಯವತ್ಸಲರನ್ನ ||೩|| ಅಂತರದಲಿ ತಾನು ನಿಂತು ಜನ ಸಂತತ ಕಾರ್ಯಗಳಿಂತು ಮಾಡಿ  ಕಂತುಪಿತಗೆ ಅರ್ಪಿಸ್ಯಂತು ತಿಳಿಸದಂತೆ ಎಮ್ಮೊಳಗಿರುವೊ ತಂತು ಆಹಾ ಸಂತತ ಕರ್ಮಗಳಂತು ಮಾಡುತ ಜೀವರಂತೆ ಗತಿಯುತಾ ಪ್ರಾಂತಕ್ಕೆ ನೀಡುವರ ||೪|| ಅಗಣಿತ ಮಹಿಮವಗಾಧ ಬಹು ಸುಗುಣನಿಧಿ ಮಹಾಭೋದ ನಾನು ಪೊಗಳುವದೇನು ಸಮ್ಮೋದ ತೀರ್...

ರಾಮ ಮಂತ್ರವ ಜಪಿಸೋ | ಪುರಂದರ ವಿಠಲ | Rama Mantrava Japiso | Purandara Vithala

Image
ಸಾಹಿತ್ಯ : ಶ್ರೀ ಪುರಂದರ  ದಾಸರು Kruti: Sri Purandara dasaru ರಾಮ ಮಂತ್ರವ ಜಪಿಸೋ ಹೇ ಮನುಜ ||ಪ||  ಆ ಮಂತ್ರ ಈ ಮಂತ್ರ ಜಪಿಸಿ ನೀ ಕೆಡಬೇಡ  ಸೋಮಶೇಖರ ತನ್ನ ಭಾಮೆಗೆ ಪೇಳಿದ ಮಂತ್ರ ||ಅಪ||  ಕುಲಹೀನನಾದರೂ ಕೂಗಿ ಜಪಿಸುವ ಮಂತ್ರ  ಜಲಜವಾಣಿ ನಿತ್ಯ ಸೇವಿಪ ಮಂತ್ರ  ಕಲುಷ ಪರ್ವತಕಿದು ಕುಲಿಶವಾಗಿಪ್ಪ ಮಂತ್ರ  ಸುಲಭದಿಂದಲಿ ಮೋಕ್ಷ ಸೂರೆಗೊಂಬುವ ಮಂತ್ರ ||೧||  ಮರುತಾತ್ಮಜ ನಿತ್ಯ ಸ್ಮರಣೆ ಮಾಡುವ ಮಂತ್ರ |  ಸರ್ವ ಋಷಿಗಳಲ್ಲಿ ಸೇರಿದ ಮಂತ್ರ |  ದುರಿತ ಕಾನನಕಿದು ದಾವಾನಲ ಮಂತ್ರ |  ಪೊರೆದು ವಿಭೀಷಣಗೆ ಪಟ್ಟಕಟ್ಟಿದ ಮಂತ್ರ ||೨||  ಜ್ಞಾನನಿಧಿ ನಮ್ಮ ಆನಂದತೀರ್ಥರು  ಸಾನುರಾಗದಿ ನಿತ್ಯ ಸೇವಿಪ ಮಂತ್ರ ||  ಭಾನು ಕುಲಾಂಬುಧಿ ಸೋಮನೆನಿಪ ಮಂತ್ರ  ದೀನ ರಕ್ಷಕ ನಮ್ಮಾ ಪುರಂದರ ವಿಠಲನ ಮಂತ್ರ ||೩||  rAma maMtrava japisO hE manuja ||pa||    A maMtra I maMtra japisi nI keDabEDa  sOmaSEKara tanna BAmege pELida maMtra ||apa||    kulahInanAdarU kUgi japisuva maMtra  jalajavANi nitya sEvipa maMtra  kaluSha parvatakidu kuliSavAgippa maMtra  sulaBadiMdali mOkSha sUregoMbuva maMtra ||1||    marutAtmaja nit...

ಏನಾದರೂ ಮಾಡು | ಗುರು ಶ್ಯಾಮಸುಂದರ | Enadaru Madu | Guru Shyamasundara

Image
ಸಾಹಿತ್ಯ : ಶ್ರೀ ಗುರು ಶ್ಯಾಮಸುಂದರ ವಿಠಲ ದಾಸರು  Kruti: Sri Guru Shyamasundara Vithala Dasaru  ಏನಾದರೂ ಮಾಡು ನೀ ದಯದಿ ನೋಡು ಮಾನ ನಿನ್ನದು ಗುರುವೆ ಮೌನಿ ಗುರುರಾಯ || ಪ || ಮಣ್ಣಾದರೂ ಮಾಡು ಮೃತ್ತಿಕೆ ಎನಿಸು ಹೊನ್ನಾದರೂ ಮಾಡು ಆಭರಣ ಎನಿಸು ಘನ್ನ ಮರವಾದರೂ ನಿನ್ನ ಪಾದದಲ್ಲಿರಿಸು ಮುನ್ನ ಬಿದಿರಾದರೂ ನಿನ್ನ ಕರದಲಿ ಧರಿಸು || ೧ || ವೀಣೆಯಾದರೂ ಮಾಡು ನಿನ್ನ ಉರದಲ್ಲಿ ಧರಿಸು ಜಾಣ ಗೋಪಾಲನ ಕರುಣೆಯನೇ ಸುರಿಸು ಮಾಣಿಕ ಮಾಡೆನ್ನ ಶ್ರೀರಾಮಗರ್ಪಿಸು ಪ್ರಾಣ ನಿನ್ನಯ ಪಾದಕಮಲದಲ್ಲಿ ಇರಿಸು || ೨ || ಇಂತೆನ್ನ ಜೀವನವು ನಿನ್ನ ಸೇವೆಗೆ ಮುಡಿಪು ಎಂತಾದರೂ ನಾನು ನಿನ್ನ ಸೇವಕನು ಕಂತುಪಿತ ಗುರುಶಾಮಸುಂದರನ ನಿಜದಾಸ ಎಂತಾದರಂತಿರಲಿ ನಿನ್ನ ದಯೆ ಎನಗಿರಲಿ || ೩ || EnaadarU maaDu nI dayadi nODu maana ninnadu guruve mouni gururaaya || pa || maNNaadarU maaDu mRuttike enisu honnaadarU maaDu AbharaNa enisu Ganna maravaadarU ninna paadadallirisu munna bidiraadarU ninna karadali dharisu || 1 || veeNeyaadarU maaDu ninna uradalli dharisu jaaNa gOpaalana karuNeyanE surisu maaNika maaDenna shrIraamagarpisu praaNa ninnaya paadakamaladalli irisu || 2 || iMtenna jIvanavu ninna sEvege muDipu eMtaadarU naanu ninna sEvaka...

ನಗುಮೊಗದಗಜೇ ನೀ ಬಾರಮ್ಮಾ| ತಂದೆ ವೆಂಕಟೇಶ ವಿಠಲ | Nagumogadagaje | Tande Venkatesha Vithala

Image
ಸಾಹಿತ್ಯ : ಶ್ರೀ ತಂದೆ ವೆಂಕಟೇಶ ವಿಠಲ ದಾಸರು  Kruti: Sri Tande Venkatesha Vittala Dasaru ನಗುಮೊಗದಗಜೇ ನೀ ಬಾರಮ್ಮಾ | ನಿನ್ನ ಅಗಣಿತ ಮಹಿಮೆಯ ತೋರಮ್ಮಾ || ಪ || ನಿಗಮ ತುರಗ ಪನ್ನಗಭೂಷಣ ಭುಜಯುಗಳಾಲಿಂಗನ ಮಿಗೆ ಸುಖಭಾಗಿನಿ || ಅಪ || ಚರಣಾಭರಣ ಸುನಾದೆ ವರ ಹರಿ ನಡು ಮೇಖಲಾ ಮೋದೆ | ಕರ ಕಿಂಕಿಣಿ ಕಿಣಿ ಸುಖದೇ ಪರಿ ಸ್ಫುರಿತ ಪೀತಾಂಬರೇ ವಿಭುದೇ | ಕೀರವಾಣಿ ಶರ್ವಾಣಿ ವಿರಾಗಿಣಿ ಕರಣಾಮೃತ ರಸಧುನಿ ಹರಿ ಭಗಿನೀ || ೧ || ದಿತಿ ಜವಿತಾನಕೃತಾಂತೆ ಹಿಮಭೃತ ಪರ್ವತಸುತೆ ಶಾಂತೆ | ನತ ಪಾವನೆ ಜಯವಂತೆ ಸುರಪತಿವಿನಮಿತ ಪದಪ್ರಾಂತೆ | ಮತಿಪ್ರೇರಕೆ ಸದ್ಗತಿಕೊಡು ಪತಿಹೃದ್ಗತ ಮೂರ್ತಿಯ ಚಿತ್ಪಥದಲಿ ತೋರಿ || ೨ || ಪಂಕಜಾಕ್ಷಿ ಪಾರ್ವತಿಯೆ ಶಿವೆ ಶಂಕರಿ ಮೃಡಣಿ ಭಾರ್ಗವಿಯೆ | ಸಂಕಟ ಹರೇ ಗತಮಾಯೇ ಶಿಖಿ ಅಂಕಿತಗಣಪರ ತಾಯೇ | ಕಿಂಕರ ಜನ ಹೃತ್ಪಂಕಜಾರ್ಕೆ ತಂದೆ ವೇಂಕಟೇಶ ವಿಠಲನ ಬಿಂಕದ ಸೋದರಿ || ೩ || nagumogadagajE nI baarammaa | ninna agaNita mahimeya tOrammaa || pa || nigama turaga pannagabhUShaNa bhujayugaLaaliMgana mige suKabhaagini || apa || caraNaabharaNa sunaade vara hari naDu mEKalaa mOde | kara kiMkiNi kiNi suKadE pari sPurita pItaaMbarE vibhudE | kIravaaNi sharvaaNi viraagiNi karaNaamRuta rasadhuni hari bhaginI || 1 || diti javitaanak...

ರಾಜ ಮನೆಗೆ ಬಂದ | ಮೋಹನ ವಿಠಲ | Raja Manege Banda | Mohana Vithala

Image
ಸಾಹಿತ್ಯ : ಶ್ರೀ ಮೋಹನ ದಾಸರು (ಮೋಹನ ವಿಠಲ)  Kruti:     Sri Mohana Dasaru (Mohana Vithala) ರಾಜ ಮನೆಗೆ ಬಂದ ಶ್ರೀಗುರು || ಪ || ಚಂದನ ಲೇಪಿತ ಚಂದಿರ ನಯನ ರಾಘವೇಂದ್ರ ಜೀಯಾ || ಅಪ || ಶೋಭಿಸುತಿರೆ ಕೊರಳೊಳು ತುಳಸೀಮಾಲೆ ತ್ರಿಲೋಕ  ಮಹಿಮನ ಕರದಲಿ ಜಪಮಾಲೆ ವೃಂದಾವನದಿಂದ || ೧ || ಮಸ್ತಕದಲಿ ಹರಿ ಶ್ರೀಮುದ್ರೆ ಹೃದಯಮೂಲೆಲಿ  ಶ್ರೀರಾಮಭದ್ರೆಗೆ ದಿವ್ಯಾಂಬರದಿಂದ || ೨ || ಮಧ್ವಮತಾಂಬುಧಿ ಸುರವರ ಚಂದಿರ ಘನ ಕರುಣಾಂಬುಧಿ ತ್ರಿಲೋಕ ಸುಂದರ ಮೋಹನ ವಿಠಲ ಪ್ರಿಯ || ೩ || raaja manege baMda shrIguru || pa || caMdana lEpita caMdira nayana raaGavEMdra jIyaa || apa || shObhisutire koraLoLu tuLasImaale trilOka  mahimana karadali japamaale vRuMdaavanadiMda || 1 || mastakadali hari shrImudre hRudayamUleli  shrIraamabhadrege divyaaMbaradiMda || 2 || madhvamataaMbudhi suravara caMdira Gana karuNaaMbudhi trilOka suMdara mOhana viThala priya || 3 ||

ಮುದದಿ ನಂಬಿದೆನೊ | ಹಯವದನ | Mudadi Nambideno Hayavadana | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಮುದದಿ ನಂಬಿದೆನೊ ಹಯವದನನೆ || ಪ || ಭಕ್ತರನ್ನು ಭವಸಮುದ್ರದಿಂದ ನೂಕೊ ಇತ್ತ ಒಂದೂ ತಿಳಿಯದ್ಹಾಂಗೆ ಹೀಗೆ ಇರುವರೊ || ೧ || ಮಾಯಪಾಶದೊಶಕೆ ಕೊಟ್ಟ ಮಾಯಕಾರನೆ ತೋಯಜಾಕ್ಷ ನಾನಿದಕುಪಾಯ ಕಾಣೆನೊ || ೨ || ಸತ್ಯಸಂಧನೆಂಬೊ ಬಿರುದು ಎತ್ತ ಹೋಯಿತೊ ಹಸ್ತಿವರದನೆಂಬೊ ಕೀರ್ತಿ ಸುತ್ತ ಮೆರೆಸಿತೊ || ೩ || ಗೂಢತನದಿ ಗುಡಿಯ ಮಾಡದಲ್ಲಿ ಇರುವರೆ ನಾಡಜನರು ನಿನ್ನ ಆಡಿಕೊಳದೆ ಬಿಡುವರೆ || ೪ || ಸಿರಿಹಯವದನ ಎನ್ನ ಗುರು ಶಿರೋಮಣಿ  ಧರೆಯೊಳರಸಿದೆನೊ ನಿನಗೆ ಸರಿಯು ನಾ ಕಾಣೆ || ೫ || mudadi naMbideno hayavadanane || pa || bhaktarannu bhavasamudradiMda nUko itta oMdU tiLiyad^haaMge hIge iruvaro || 1 || maayapaashadoshake koTTa maayakaarane tOyajaakSha naanidakupaaya kaaNeno || 2 || satyasaMdhaneMbo birudu etta hOyito hastivaradaneMbo kIrti sutta meresito || 3 || gUDhatanadi guDiya maaDadalli iruvare naaDajanaru ninna ADikoLade biDuvare || 4 || sirihayavadana enna guru shirOmaNi  dhareyoLarasideno ninage sariyu naa kaaNe || 5 ||

ಕೊಂಡಾಲಳವೇ ನಿನ್ನಯ ಕೀರ್ತಿ | ಹಯವದನ| Kondadalalave ninnaya keerthi | Vadirajaru

Image
ಸಾಹಿತ್ಯ : ಶ್ರೀ ವಾದಿರಾಜರು (ಹಯವದನ) Kruti:Sri Vadirajaru (Hayavadana) ಕೊಂಡಾಲಳವೇ ನಿನ್ನಯ ಕೀರ್ತಿ  ಭೂಮಂಡಲದೊಳಗೆ ಹಯಗ್ರೀವ ಮೂರ್ತಿ || ಪ || ವೇದಂಗಳ ಜಲದಿಂದ ತಂದೆ ನೀ | ಪೋದಗಿರಿಯ ಬೆನ್ನೊಳಾಂತು ನಿಂದೆ || ಮೇದಿನಿಯ ಕದ್ದೊಯ್ದನ ಕೊಂದೆ ಸಂ ವಾದದಿಂದ ಕಂಬದಿಂದ ಬಂದೆ || ೧ || ಚರಣಾಗ್ರದಲಿ ನದಿಯ ಪೆತ್ತೆ | ತೀಕ್ಷ್ಣ  ಪರಶು ಪಿಡಿದು ಬಾಹುಜರ ಕಿತ್ತೆ | ನೆರೆನಂಬಿದವಗೆ ಸ್ಥಿರ ಪಟ್ಟವನಿತ್ತೆ | ದೊಡ್ಡ  ದುರುಳ ಕಾಳಿಂಗನ ಶಿರದಲಿ ನಿಂತೆ || ೨ || ಪತಿವ್ರತೆಯರ ಮಾನ ಭೇದನ ಚತುರ  ತುರುಗವೇರಿ ನಲಿವನ  ಕ್ಷಿತಿಯೊಳುತ್ತಮ ವಾದಿರಾಜನ ಸ್ವಾಮಿ  ಸತತ ರಕ್ಷಿಪ ಶ್ರೀಹಯವದನನ || ೩ || koMDAlaLavE ninnaya kIrti  BUmaMDaladoLage hayagrIva mUrti || pa || vEdaMgaLa jaladiMda taMde nI | pOdagiriya bennoLAMtu niMde || mEdiniya kaddoydana koMde saM vAdadiMda kaMbadiMda baMde || 1 || charaNAgradali nadiya pette | tIkShNa  paraSu piDidu bAhujara kitte | nerenaMbidavage sthira paTTavanitte | doDDa duruLa kALiMgana Siradali niMte || 2 || pativrateyara mAna BEdana catura  turugavEri nalivana  kShitiyoLuttama vAdirAjana svAmi  satata rakShipa SrIhayavadana...

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru