ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಸೋದಾಪುರದಲಿ ನಿಂತ | ಗುರುಜಗನ್ನಾಥ ವಿಠಲ | Sodapuradali Ninta | Sri Guru Jagannatha Dasaru


ಸಾಹಿತ್ಯ : ಶ್ರೀ ಗುರು ಜಗನ್ನಾಥ ದಾಸರು
Kruti:Sri Guru Jagannatha Dasaru


ಸೋದಾಪುರದಲಿ ನಿಂತ ಸುಯತಿವರನ್ಯಾರೇ ಪೇಳಮ್ಮಯ್ಯ ||ಪ|| 

ಭೂದರ ಹಯಮುಖ ಪಾದವ ಭಜಿಸುವ 
ವಾದಿಜಗಕೆ ಮೃಗರಾಜ ಕಾಣಮ್ಮ ||ಅಪ|| 

ಅಂಚೆವಾಹನ ಪ್ರಪಂಚದಿ ಹೊಳೆವ ವಿರಿಂಚಿಗೆ ಸಮನೇನೆ ಪೇಳಮ್ಮಯ್ಯ || 
ಸಂಚಿತ ಕರ್ಮವ ಕುಂಚಿಸಿ ಭಕ್ತರ ಚಂಚಲ ಬಿಡಿಸುವನ್ಯಾರೇ || 
ಲಾಂಚಿತನಾಗಿಹನ್ಯಾರೇ ಚಂಚಲಾಕ್ಷಿ ತಿಳಿ ಪಂಚ ರೂಪಾತ್ಮಕ, 
ಮುಂಚಿಗೆ ಪ್ರಾಣ ವಿರಿಂಚಿ ಕಾಣಮ್ಮ ||೧|| 

ಮಂದಹಾಸ ಮುಖ ಕುಂದ ಕುಟ್ಮಲದಿಂದ ಶೋಭಿಪನ್ಯಾರೇ ಪೇಳಮ್ಮಯ್ಯ 
ವಂದಿಪ ಜನರಘ ವೃಂದ ಕಳೆದು ಆನಂದವ ನೀಡುವನ್ಯಾರೇ, 
ಬೃಂದಾವನ ಪ್ರತಿ ಸುಂದರ ಯತಿವರರಿಂದ ಪೂಜಿತನ್ಯಾರೇ || 
ಇಂದು ಮುಖಿಯೇ ಈತ, ಗಂಧವಾಹನನಾಗಿ ಮಂದಜಾಸರ ಪದನೈದುವನಮ್ಮ ||೨|| 

ಖ್ಯಾತ ಮಹಿಮೆ ಮಾಯಿವ್ರಾತ ವಿಘಾತನ, ಮಾಡಿಹನ್ಯಾರೇ ಪೇಳಮ್ಮಯ್ಯ || 
ಆತುರ ಜನರಿಗೆ ಮಾತಾಪಿತರಂತೆ, ನೀತ ಪಾಲಿಪನ್ಯಾರೇ || 
ದಾತ ಗುರು ಜಗನ್ನಾಥ ವಿಠಲನ ಪ್ರೀತಿಯ ಪಡೆದಿಹನ್ಯಾರೇ || 
ವೀತಭಯ ಪುರುಹೂತ ಪ್ರಮುಖನುತ, ಭೂತನಾಥನ ಪಿತ, ಮಾತರಿಶ್ವನಮ್ಮ ||೩||

sOdApuradali niMta suyativaranyArE pELammayya ||pa|| 

BUdara hayamuKa pAdava Bajisuva 
vAdijagake mRugarAja kANamma ||apa|| 

aMcevAhana prapaMcadi hoLeva viriMcige samanEne pELammayya || 
saMcita karmava kuMcisi Baktara caMcala biDisuvanyArE || 
lAMcitanAgihanyArE caMcalAkShi tiLi paMca rUpAtmaka, 
muMcige prANa viriMci kANamma ||1|| 

maMdahAsa muKa kuMda kuTmaladiMda SOBipanyArE pELammayya 
vaMdipa janaraGa vRuMda kaLedu AnaMdava nIDuvanyArE, 
bRuMdAvana prati suMdara yativarariMda pUjitanyArE || 
iMdu muKiyE Ita, gaMdhavAhananAgi maMdajAsara padanaiduvanamma ||2|| 

KyAta mahime mAyivrAta viGAtana, mADihanyArE pELammayya || 
Atura janarige mAtApitaraMte, nIta pAlipanyArE || 
dAta guru jagannAtha viThalana prItiya paDedihanyArE || 
vItaBaya puruhUta pramuKanuta, BUtanAthana pita, mAtariSvanamma ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru