ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಅಂಬಾ ನೀ ಹೂವ ಪಾಲಿಸೆ | ಭೀಮೇಶಕೃಷ್ಣ | Amba Ni Hoova Palise | Bhimesha Krishna


ಸಾಹಿತ್ಯ :    ಶ್ರೀ ಹರಪನಹಳ್ಳಿ ಭೀಮವ್ವ (ಭೀಮೇಶಕೃಷ್ಣ) 
Kruti: Sri Harapanahalli Bhimavva (Bhimesha Krishna)


ಅಂಬಾ ನೀ ಹೂವ ಪಾಲಿಸೆ ವರ ನೀಡೆ ಶ್ರೀ
ಜಗದಂಬಾ ನೀ ಹೂವ ಪಾಲಿಸೆ 
ಅಂಬಾ ನೀ ಹೂವ ಪಾಲಿಸೆ ಶಂಭು ಶಂಕರನ ರಾಣಿ
ರಂಭೆ ಪಾರ್ವತಿ ನಿನ್ನ ಪಾದಾಂಬುಜಕ್ಕೆರಗುವೆ ||ಪ||

ಬಳೆಯು ಕರಿಯಮಣಿ ಕೊರಳ ಮಂಗಳ ಸೂತ್ರ
ಸ್ಥಿರವಾಗಿಯಿರುವಂತೆ ಸರ್ವ ಸಂಪತ್ತು ನೀಡೆ ಅಂಬಾ ||೧||

ಮಕ್ಕಳು ಮನೆ ಭಾಗ್ಯ ತೊಟ್ಟಿಲು ತೂಗುವಂತೆ
ಮೃಷ್ಟಾನ್ನ ದಾನ ಮಾಡಲಿಷ್ಟಾರ್ಥದ್ವರಗಳ ಅಂಬಾ ||೨||

ರುದ್ರನ ಸತಿಯಳೆ ಬುದ್ಯಾತ್ಮಳೆನಿಸುವಿ 
ಭದ್ರೆ ನಿನ್ನಯ ಮುಡಿಯಲ್ಲಿದ್ದ ಮಲ್ಲಿಗೆ ನೀಡೆ ಅಂಬಾ  ||೩||

ಇಂದು ಬೇಡುವೆ ನಿನ್ನ ಸಂಪಿಗೆ ಮುಡಿಮ್ಯಾಲಿ-
ದ್ದಂಥ ಕುಸುಮದೊಳು ಸೇವಂತಿಗೆ ಸರವ ||೪||  

ಭೀಮೇಶಕೃಷ್ಣನ ನಿಜ ಪಾದಭಜಕಳೆ ನೀ
ದಯದಿಂ ಧರ್ಮ ಕಾಮ್ಯಾದಿ ವರಗಳ ನೀಡೆ  ||೫||


aMbaa nI hUva paalise vara nIDe SrI
jagadaMbaa nI hUva paalise 
aMbaa nI hUva paalise SaMbhu SaMkarana raaNi
raMBe paarvati ninna paadaaMbujakkeraguve ||pa||

baLeyu kariyamaNi koraLa maMgaLa sUtra
sthiravaagiyiruvaMte sarva saMpattu nIDe aMbaa ||1||

makkaLu mane bhaagya toTTilu tUguvaMte
mRuShTaanna daana maaDaliShTaartha varagaLa aMbaa ||2||

rudrana satiyaLe budhyatmaLenisuvi
bhadre ninnaya muDiyallidda mallige nIDe aMbaa ||3||

iMdu bEDuve ninna saMpige muDimyaali-
ddaMtha kusumadoLu SevaMtige sarava ||4||

bhImESakRuShNana nija paadabhajakaLe nI
dayadiM dharma kaamyaadi varagaLa nide ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru