ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ವೈದ್ಯನ ನಾನರಿಯೆ ಭವರೋಗಕೆ | ಪುರಂದರ ವಿಠಲ | Vaidya Nanariye | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ವೈದ್ಯನ ನಾನರಿಯೆ ಭವರೋಗಕೆ ವೈದ್ಯನು ನೀ ಹರಿಯೆ ||ಪ||

ಕೃಷ್ಣನೇ ಕೈಪಿಡಿದು ಕಪಟದಿ ಉಷ್ಣವಾಯುವ ಜರಿದು
ವಿಷ್ಣುಭಕ್ತಿ ನಿನ್ನ ಸೇವಕಗಿತ್ತು ಉತ್ಕೃಷ್ಟನ ಮಾಡೆನ್ನ ಕಷ್ಟವ ಪಡಿಸದೆ ||೧||

ಹರಿ ನಿಮ್ಮ ಶರಣೆಂಬೊ ರಸದಲಿ ಚರಣ ಧ್ಯಾನವನಿತ್ತು 
ಗುರುತರ ಮಾತ್ರೆಗಳೆನಗೆ ಕೊಟ್ಟು ದುರಿತ ಪಾರುಗೈವ ಬಂಧು ನೀನಲ್ಲದೆ ||೨||

ನಿನ್ನ ದಾಸ ನಾನು ದುರಿತಗಳೆನ್ನ ಕಾಡುವುದೇನು ಉಚಿತವಯ್ಯ
ಘನ್ನ ಶ್ರೀಪುರಂದರವಿಠಲರಾಯನೆ ಎನ್ನ ದುರಿತವ ಹರಿಸುವನಲ್ಲದೆ ||೩|| 

vaidyana naanariye bhavarOgake vaidyanu nI hariye ||pa||
bhavarOgake baMdhu nIne ||apa||

kRuShNanE kaipiDidu kapaTadi uShNavaayuva jaridu
viShNubhakti ninna sEvakagittu utkRuShTana maaDenna kaShTava paDisade ||1||

hari nimma SaraNeMbo rasadali caraNa dhyaanavanittu 
gurutara maatregaLenage koTTu durita paarugaiva baMdhu nInallade ||2||

ninna daasa naanu duritagaLenna kaaDuvudEnu ucitavayya
Ganna shrIpuraMdaraviThalaraayane enna duritava harisuvanallade ||3|| 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru