ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶ್ರೀ ಭಾಗೀರಥಿ ತಾಯೇ | ವಿಜಯ ವಿಠಲ | Sri Bhageerathi Taye | Sri Vijaya Dasaru


ಸಾಹಿತ್ಯ : ಶ್ರೀ ವಿಜಯ ದಾಸರು
Kruti:Sri Vijaya Dasaru


ಶ್ರೀ ಭಾಗೀರಥಿ ತಾಯೇ ಶೃಂಗಾರ ಶುಭಕಾಯೆ 
ಶ್ರೀ ಭೂರಮಣನ ತನಯೇ ||ಪ||

ನಿನ್ನ ಯಾತ್ರಿಗೋಸುಗ ಎನ್ನ ಮನಸು ಪುಟ್ಟಿತು
ಇನ್ನು ನೀ ಮರಿಸದೇ 
ಪುಣ್ಯನರನ ಮಾಡೊ ಪೂತೋಭಾವವೆಂದು 
ಧನ್ಯ ಜನ ಮಾನ್ಯಾ ಭಕ್ತಜನ ಪ್ರಸನ್ನೇ ||೧||

ಶಿವ ನಿನ್ನ ಶಿರದಲ್ಲಿ ಧರಿಸಿದ ಕಾರಣ 
ಪವಿತ್ರಾಂಗನಾದನೆಂದು 
ಅವನಿಯೊಳಗೆ ಮಹಾಕವಿಜನ ಪೇಳಿದ
ಶ್ರವಣದಿಂದಲಿ ಭಕುತಿಯಿಂದಲಿ ನಿಂದೆ ||೨||

ದೂರದಿಂದಲಿ ನಿನ್ನ ಸ್ಮರಿಸಿದವರ ಪಾಪ
ಹಾರಿಹೋಗುವದು ಸಿದ್ಧಾ
ಶ್ರೀರಮಣ ವಿಜಯವಿಠ್ಠಲರೇಯನ ಪಾದ
ವಾರಿಜ ಪೊಗಳುವಂತೆ ಬುದ್ಧಿ ಪಾಲಿಸುವುದು || ೩ ||

shrI bhaagIrathi taayE shRuMgaara shubhakaaye 
shrI bhUramaNana tanayE ||pa||

ninna yaatrigOsuga enna manasu puTTitu
innu nI marisadE 
puNyanarana maaDo pUtObhaavaveMdu 
dhanya jana maanyaa bhaktajana prasannE ||1||

shiva ninna shiradalli dharisida kaaraNa 
pavitraaMganaadaneMdu 
avaniyoLage mahaakavijana pELida
shravaNadiMdali bhakutiyiMdali niMde ||2||

dUradiMdali ninna smarisidavara paapa
haarihOguvadu siddhaa
shrIramaNa vijayaviThThalarEyana paada
vaarija pogaLuvaMte buddhi paalisuvudu || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru