ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಏನು ದಾನವ ಮಾಡಲಿ | ಪುರಂದರ ವಿಠಲ | Enu Danava Madali | Sri Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಏನು ದಾನವ ಮಾಡಲಿ ಹರಿಯೇ ಯಾವ ದಾನವ ಮಾಡಲಿ 
ಹರಿ ಧ್ಯಾನಕ್ಕೆ ಸಮನಾದ ದಾನಂಗಳುಂಟೆ ||ಪ||

ಶತಕೋಟಿ ಕನ್ಯಾ ಪ್ರದಾನವ ಮಾಡಲಿ
ಅತಿಶಯದ ಉದಕ ದಾನವ ಮಾಡಲಿ
ಮತಿಶುದ್ಧನಾಗಿ ಭೂದಾನವ ಮಾಡಲಿ
ಕೃತಿರಮಣ ನಿನ್ನ ಧ್ಯಾನಕ್ಕೆ ಸರಿಯುಂಟೆ ||೧||

ದಿನಕ್ಕೊಂದು ಸಾವಿರ ಗೋದಾನ ಮಾಡಲಿ
ಅನುದಿನ ಅನ್ನದಾನವ ಮಾಡಲಿ
ಘನವಾಗಿ ಸುವರ್ಣ ದಾನವ ಮಾಡಲಿ
ವನಜನಾಭನೆ ನಿನ್ನ ಧ್ಯಾನಕ್ಕೆ ಸರಿಯುಂಟೆ ||೨||

ಸಾದರದಿ ತರ್ಕ ವ್ಯಾಕರಣ ಪೇಳಲಿ
ವೇದಗೀತ ಭಾಷ್ಯವನೋದಲಿ
ಸಾಧಿಸಿ ಸ್ನಾನ ಜಪಂಗಳ ಮಾಡಲಿ
ಮಾಧವ ನಿನ್ನ ಧ್ಯಾನಕ್ಕೆ ಸರಿಯುಂಟೆ ||೩||

ಉತ್ತಮವಾದ ವಸ್ತ್ರ ದಾನವ ಮಾಡಲಿ
ಮುತ್ತು ಮಾಣಿಕ್ಯ ದಾನವ ಮಾಡಲಿ
ಅತ್ಯಂತ ವಿದ್ಯಾ ಪ್ರದಾನವ ಮಾಡಲಿ
ಚಿತ್ತಜ ಪಿತನ ಧ್ಯಾನಕ್ಕೆ ಸರಿಯುಂಟೆ ||೪||

ನಾನಾ ತೀರ್ಥಗಳಲ್ಲಿ ಸ್ನಾನವ ಮಾಡಲಿ
ಕಾನನದೊಳಗೆ ತಪವನು ಮಾಡಲಿ
ಜ್ಞಾನದಿಂದ ಶಾಸ್ತ್ರಾರ್ಥ ಮಾಡಲಿ
ನಿನ್ನ ಧ್ಯಾನಕ್ಕೆ ಸರಿಯುಂಟೆ ಪುರಂದರ ವಿಠಲ ||೫||

Enu daanava maaDali hariyE yaava daanava maaDali 
hari dhyaanakke samanaada daanaMgaLuMTe ||pa||

SatakOTi kanyaa pradaanava maaDali
atiSayada udaka daanava maaDali
matiSuddhanaagi bhUdaanava maaDali
kRutiramaNa ninna dhyaanakke sariyuMTe ||1||

dinakkoMdu saavira gOdaana maaDali
anudina annadaanava maaDali
Ganavaagi suvarNa daanava maaDali
vanajanaabhane ninna dhyaanakke sariyuMTe ||2||

saadaradi tarka vyaakaraNa pELali
vEdagIta bhaaShyavanOdali
saadhisi snaana japaMgaLa maaDali
maadhava ninna dhyaanakke sariyuMTe ||3||

uttamavaada vastra daanava maaDali
muttu maaNikya daanava maaDali
atyaMta vidyaa pradaanava maaDali
cittaja pitana dhyaanakke sariyuMTe ||4||

naanaa tIrthagaLalli snaanava maaDali
kaananadoLage tapavanu maaDali
j~jaanadiMda shaastraartha maaDali
ninna dhyaanakke sariyuMTe puraMdara viThala ||5||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru