ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಮಂದಿರಕ್ಕೆ ಬಾ ಬಾ ಹರಿ | ಶ್ರೀ ಕಮಲೇಶ ವಿಠ್ಠಲ | Mandirakke Ba Ba Hari | Sri Kamalesha Vithala


ಸಾಹಿತ್ಯ :    ಶ್ರೀ ಕಮಲೇಶ ವಿಠಲ ದಾಸರು  
Kruti: Sri Kamalesha Vithala Dasaru


ಮಂದಿರಕ್ಕೆ ಬಾ ಬಾ ಹರಿ ಮನ ಮಂದಿರಕ್ಕೆ ಬಾ ಬಾ || ಪ ||

ವಾರಿಜಭವ ಮೊದಲಾದ ಅಮರರ
ಪರಿವಾರ ಸಹಿತ ಸುಖ ತೋರುವಂತೆ || ೧ ||

ದಯ ಮಾಡೆನ್ನಲಿ ಇಭಗೊಲಿದವನೆ
ಮೋದಗೊಳಿಸು ಪ್ರಹ್ಲಾದವರದ || ೨ ||

ಶ್ರೀ ಕಮಲೇಶ ವಿಠ್ಠಲ ಪಾಲಿಸೊ 
ಅನುಮಾನ ಬೇಡ ತವ ದಾಸನೆನಿಸೊ || ೩ ||

maMdirakke baa baa hari mana maMdirakke baa baa || pa ||

vaarijabhava modalaada amarara
parivaara sahita suKa tOruvaMte || 1 ||

daya maaDennali ibhagolidavane
mOdagoLisu prahlaadavarada || 2 ||

shrI kamalEsha viThThala paaliso
anumaana bEDa tava daasaneniso || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru