ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನಿತ್ಯವೆಂಬುದು ಕೇಳು ಜೀವ | ಹಯವದನ | Nityavembudu kelu jeeva | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ನಿತ್ಯವೆಂಬುದು ಕೇಳು ಜೀವ ಬಲು ಅ-
ನಿತ್ಯವೆಂಬುದು ಈಗ ಬಾಳುವ ಕಾಯ || ಪ ||

ಸತ್ಯ ಸತ್ಯ ಸರ್ವ ಜೀವರನಿಟ್ಟುಕೊಂಡು
ವಿಸ್ತಾರವಾದೊಂದಾಲದೆಲೆಯಲ್ಲಿ ಮಲಗಿದ್ದು || ಅಪ ||

ಹರಿ ಹ್ಯಾಗೆ ನಿತ್ಯನೊ ಹಾಗೆ ಜೀವನು ನಿತ್ಯ
ಹರಿಯೆಂಬೋ ಧಣಿಗೆ ಈ ಜೀವನು ಭೃತ್ಯ
ಹರಿ ಜೀವರೊಳಗೆ ಹೀಗೆ ತಿಳಿದವನೆ
ಧರೆಯೊಳಗೆಂದೆಂದಿಗು ಕೃತಕೃತ್ಯನು || ೧ ||

ಹರಿಯೆಂಬೊ ರಾಜಗೆ ಗುರುಮಾರುತಿ ಮಂತ್ರಿ
ಪರಿವಾರ ಇವರಯ್ಯ ಜೀವಂಗಳು
ಅರಿತು ಈ ವಿಧದಲ್ಲಿ ನಿರುತ ಪಾಡುವರಿಗೆ
ಪರಲೋಕದಲಿ ದಿವ್ಯಭೋಗಂಗಳು || ೨ ||

ಭಿನ್ನ ಭಿನ್ನ ಜೀವ ಭಿನ್ನ ಭಿನ್ನ ಕರ್ಮ-
ವೆನ್ನುವುದೆ ಘನ್ನತತ್ತ್ವಂಗಳು
ಅನ್ಯಥಾ ನುಡಿಯಲ್ಲ ಇನ್ನು ಸಂಶಯವಿಲ್ಲ
ಎನ್ನೊಡೆಯ ಹಯವದನ ಬಲ್ಲ || ೩ ||

nityaveMbudu kELu jIva balu a-
nityaveMbudu Iga baaLuva kaaya || pa ||

satya satya sarva jIvaraniTTukoMDu
vistaaravaadoMdaaladeleyalli malagiddu || apa ||

hari hyaage nityano haage jIvanu nitya
hariyeMbO dhaNige I jIvanu bhRutya
hari jIvaroLage hIge tiLidavane
dhareyoLageMdeMdigu kRutakRutyanu || 1 ||

hariyeMbo raajage gurumaaruti maMtri
parivaara ivarayya jIvaMgaLu
aritu I vidhadalli niruta paaDuvarige
paralOkadali divyabhOgaMgaLu || 2 ||

bhinna bhinna jIva bhinna bhinna karma-
vennuvude ghannatattvaMgaLu
anyathaa nuDiyalla innu saMshayavilla
ennoDeya hayavadana balla || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru