ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಹನುಮ ಭೀಮ ಮಧ್ವ ಮುನಿಯ | ಪುರಂದರ ವಿಠಲ | Hanuma Bhima Madhwa muniya | Purandara Dasaru


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೋ ||ಪ||
ಅನುಮಾನಂಗಳಿಲ್ಲದಲೆ ಮನೋಭೀಷ್ಟಂಗಳನೀವ ||ಅಪ||

ಪ್ರಾಣಿಗಳ ಪ್ರಾಣೋದ್ಧಾರ ಜೀವರೋಳುತ್ತಮನು ಮತ್ತೆ
ಪ್ರಾಣೋಪಾನ ವ್ಯಾನೋದಾನ ಸಮಾನರೋಳುತ್ಕೃಷ್ಟ ||
ಕ್ಷೋಣಿ ದೈತ್ಯರನ್ನು ಸೀಳಿ ಪಾಲಿಪ ಸಜ್ಜನರನ್ನು |
ಪ್ರಾಣದಿಂದಲಿ ಮೆರೆವ ಬಹು ಜಾಣ ಗುರು ಮುಖ್ಯಪ್ರಾಣ ||೧||

ಕಾಮಧೇನು ಚಿಂತಾಮಣಿ ಕಲ್ಪವೃಕ್ಷನಾದ ಸ್ವಾಮಿ
ನೇಮದಿಂದಲಿ ನೆನೆಯುವವರ ಭಾಗ್ಯಕ್ಕೆ ಎಣೆಯುಂಟೆ ||
ಸಾಮಾನ್ಯವಲ್ಲವೋ ಈತ ಮೋಕ್ಷಾದಿ ಸಂಪದವಿಗಳಿಗೆ |
ಆ ಮಹಾ ಅಪರೋಕ್ಷ ಜ್ಞಾನದಾರಢ್ಯ ಭಕುತಿಯ ಕೊಡುವ ||೨||

ಅವತಾರತ್ರಯಗಳಿಂದ ಶ್ರೀಹರಿಯ ಸೇವಿಸುತ್ತ |
ತವಕದಿಂದಲಿ ಪೂಜಿಪ ಮಹಾ ಮಹಿಮೆಯುಳ್ಳವನು ||
ಕವಿತಾವಾಕ್ಯವಲ್ಲವಿದು ಅವಿವೇಕಿಗಳೆಂದೆನಿಸಬೇಡಿ
ಭವಬಂಧನವ ಬಿಡಿಸಿ ನಮ್ಮ ಕಾಯ್ವ ಪುರಂದರ ವಿಠಲನ ದಾಸ ||೩||

hanuma BIma madhva muniya nenedu badukirO ||pa||
anumAnaMgaLilladale manOBIShTaMgaLanIva ||apa||
 
prANigaLa prANOddhAra jIvarOLuttamanu matte
prANOpAna vyAnOdAna samAnarOLutkRuShTa ||
kShONi daityarannu sILi pAlipa sajjanarannu |
prANadiMdali mereva bahu jANa guru muKyaprANa ||1||
 
kAmadhEnu ciMtAmaNi kalpavRukShanAda svAmi
nEmadiMdali neneyuvavara BAgyakke eNeyuMTe ||
sAmAnyavallavO Ita mOkShAdi saMpadavigaLige |
A mahA aparOkSha j~jAnadAraDhya Bakutiya koDuva ||2||
 
avatAratrayagaLiMda SrIhariya sEvisutta |
tavakadiMdali pUjipa mahA mahimeyuLLavanu ||
kavitAvAkyavallavidu avivEkigaLeMdenisabEDi
BavabaMdhanava biDisi namma kAyva puraMdara viThalana dAsa ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru