ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಆಡಿದನೋ ರಂಗ | ಶ್ರೀ ಪುರಂದರ ದಾಸರು | Aadidano Ranga | Sri Purandara Vithala


ಸಾಹಿತ್ಯ : ಶ್ರೀ ಪುರಂದರ ದಾಸರು (ಪುರಂದರ ವಿಠಲ)
Kruti: Sri Purandara Dasaru (Purandara vittala)


ಆಡಿದನೋ ರಂಗ ಅದ್ಭುತದಿಂದಲಿ ಕಾಳಿಂಗನ ಫಣೆಯಲಿ ||ಪ||
ಪಾಡಿದವರಿಗೆ ಬೇಡಿದ ವರಗಳ ನೀಡುತಲಿ ದಯ 
ಮಾಡುತಲಿ ನಲಿದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ ||ಅಪ||

ಅಂಬುರುಹೋದ್ಭವ ಅಖಿಳ ಸುರರು ಕೂಡಿ ಅಂಬರದಲಿ ನಿಂತು ಅವರ್ ಸ್ತುತಿಸೆ
ರಂಭೆ ಊರ್ವಶಿ ರಮಣಿಯರೆಲ್ಲರು ಚೆಂದದಿಂ ಭರತನಾಟ್ಯವ ನಟಿಸೆ 
ಝಂತಟ ತಕಧಿಮಿ ತಧಿಗಿಣಿ ತೊಂ ಎಂದು ಝಂಪೆತಾಳದಿ ತುಂಬುರನೊಪ್ಪಿಸೆ 
ಧಾ ಮ ಪ ಪಾ ಧ ಸ ರೀ ಎಂದು ದ್ವನಿಯಿಂದ ನಾರದ ತುಂಬುರರು ಗಾನವ ಮಾಡಲು ನಂದಿಯು ಮದ್ದಲೆ ಚೆಂದದಿ ಹಾಕಲು ||೧||

ಫಣವ ಮೆಟ್ಟಿ ಬಾಲವ ಕೈಯಲ್ಲಿ ಪಿಡಿದು ಫಳಫಳಿಸುತ್ತ ನಾಟ್ಯವನಾಡೆ
ಚಂದ್ರಮಂಡಲದಂತೆ ಪೊಳೆಯುವ ಮುಖದೊಳು ಚಲಿಸುವ ನೀಲ ಕೇಶಗಳಾಡೆ 
ಕಾಲಲಂದುಗೆ ಗೆಜ್ಜೆ ಘಲಿಘಲಿರೆನುತ ಉಡಿಗೆಜ್ಜೆ ಗಂಟೆಗಳಾಡೆ ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ
ಪುಟ್ಟಪಾದವ ಇಟ್ಟು ಶ್ರೀಕೃಷ್ಣನು ಮೆಟ್ಟಿದನು ತಕಧಿಮಿ ತಧಿಕೆನುತ ||೨||

ಸುರರು ಪುಷ್ಪದ ವೃಷ್ಟಿಯ ಕರೆಯಲು ಸುದತಿಯರೆಲ್ಲರು ಪಾಡಲು 
ನಾಗಕನ್ನಿಕೆಯರು ನಾಥನ ಬೇಡಲು ನಾನಾ ವಿಧದಿ ಸ್ತುತಿ ಮಾಡಲು
ರಕ್ಕಸರೆಲ್ಲರು ಕಕ್ಕಸವನೆ ಕಂಡು ದಿಕ್ಕು ದಿಕ್ಕುಗಳಿಗೆ ಓಡಲು ಚಿಕ್ಕವನಿವನಲ್ಲ
ಪುರಂದರ ವಿಠಲ ವೇಂಕಟರಮಣನ ಬೇಗ ಯಶೋದೆ ಬಿಂಕದೊಳೆತ್ತಿ ಮುದ್ದಾಡೆ ಶ್ರೀಕೃಷ್ಣನ ||೩|| 

ADidanO raMga adbhutadiMdali kaaLiMgana PaNeyali ||pa||
paaDidavarige bEDida varagaLa nIDutali daya 
maaDutali nalidaaDutali beNNe bEDutali kRuShNa ||apa||

aMburuhOdbhava akhiLa suraru kUDi aMbaradali niMtu avar stutise
raMbhe UrvaSi ramaNiyarellaru ceMdadiM BaratanaaTyava naTise 
JaMtaTa takadhimi tadhigiNi toM eMdu JaMpetaaLadi tuMburanoppise 
dhaa ma pa paa dha sa rI eMdu dvaniyiMda naarada tuMburaru gaanava maaDalu naMdiyu maddale ceMdadi haakalu ||1||

PaNava meTTi baalava kaiyalli piDidu PaLaPaLisutta naaTyavanaaDe
caMdramaMDaladaMte poLeyuva mukhadoLu calisuva nIla kEshagaLaaDe 
kaalalaMduge gejje GaliGalirenuta uDigejje gaMTegaLaaDe duShTa kaaLiMgana meTTi BaradiMda
puTTapaadava iTTu SRrIkRRuShNanu meTTidanu takadhimi tadhikenuta ||2||

suraru puShpava vRuShTiya kareyalu sudatiyarellaru paaDalu 
naagakannikeyaru naathanu bEDalu naanaa vidhadi stuti maaDalu
rakkasarellaru kakkasavane kaMDu dikku dikkugaLige ODalu cikkavanivanalla
puraMdara viThala vEMkaTaramaNana bEga yashOde biMkadoLetti muddaaDe shrIkRuShNana ||3|| 

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru