ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಡೀ ಡೀ ಆಡ್ಯಾನೆ ರಂಗ | ವಿಜಯ ವಿಠ್ಠಲ | Di Di Adyane Ranga | Sri Vijaya Dasaru



ಸಾಹಿತ್ಯ : ಶ್ರೀ ವಿಜಯ ದಾಸರು

Kruti: Sri Vijaya Dasaru



ಡೀ ಡೀ ಆಡ್ಯಾನೆ ರಂಗ ಡೀ ಡೀ ಆಡ್ಯಾನೆ ||ಪ||
ಓಡಿ ಓಡಿ ಬಂದು ಹಣೆಗೆ ನೀಡಿ ನೀಡಿ ಡಿಡಿಕ್ಕ ಡಿಡಿಕ್ಕ ಡಿಡಿಕ್ಕ ಎಂದು ||ಅಪ||

ಮರಕತ ನವರತ್ನ ವಜ್ರ 
ಹರಳು ಕೆತ್ತಿಸಿದ ದ್ಯುಮಣಿ
ಕಿರಣ ಮುಕುಟ ಧರಿಸಿದ ಶಿರದಲಿ
ಸರಿ ಸರಿ ಸರಿ ಸರಿ ಸರಿ ಸರಿದಾಡುತ ||೧||

ಚಂದ್ರಶೇಖರ ಹಂಸವಾಹನ 
ಇಂದ್ರಾದ್ಯರಾಕಾಶದಲ್ಲಿ 
ದುಂ ದುಂ ದುಂ ದುಂ ದುಂದುಭಿ
ನುಡಿಸೆ ಬಂದೆ ಇಕ್ಕೋ ಬಂದೆ ಬಂದೆ ಎಂದೆನುತ ||೨||

ಹಿಂದಿರುಗಿ ಪೋಗಿ ನೀನು
ಅಂತರಿಸಿ ದೂರದಲ್ಲಿ ನಿಂತು
ವಿಜಯ ವಿಠ್ಠಲ ರಾಯನು
ಇಂತಿರಿ ತಿರಿ ತಿರಿ ತಿರಿ ತಿರಿ ಎಂದು  ||೩||

DI DI ADyaane raMga DI DI ADyaane ||pa||
ODi ODi baMdu haNege nIDi nIDi DiDikka DiDikka DiDikka eMdu ||apa||

marakata navaratna vajra 
haraLu kettisida dyumaNi
kiraNa mukuTa dharisida Siradali
sari sari sari sari sari saridaaDuta ||1||

chaMdrashEkhara haMsavaahana 
iMdraadyaraakaaSadalli 
duM duM duM duM duMdubhi
nuDise baMde ikkO baMde baMde eMdenuta ||2||

hiMdirugi pOgi nInu
aMtarisi dUradalli niMtu
vijaya viThThala raayanu
iMtiri tiri tiri tiri tiri eMdu  ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru