ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಶರಣು ಸಕಲ ಪ್ರಾಣನಾಥ | ಮಧ್ವಪ್ರಸನ್ನವೆಂಕಟ | Sharanu Sakala Prananatha | Madhwa Prasanna Venkata


 

ಸಾಹಿತ್ಯ : ಶ್ರೀ ಮಧ್ವಪ್ರಸನ್ನವೆಂಕಟ ದಾಸರು
Kruti:Sri Madhwaprasanna Venkata Dasaru


ಶರಣು ಸಕಲ ಪ್ರಾಣನಾಥ
ಸರಸಿಜಭವ ಪದವಿಭೋಕ್ತ
ಮೂರವತಾರಿ ಮುಖ್ಯಪ್ರಾಣ
ಹರಿಪರಾಯಣ ತೇ ನಮೋ || ಪ ||

ರಕ್ತಶಿವನ ಬಿಸುಟು ಜಗದ
ಕರ್ತ ರಘು ಪುಂಗವನ ಪದದಿ
ಭಕ್ತಿ ಬಲಿದು ಇತರ ವಿಷಯ 
ಚಿತ್ತನಾಗದ ಸುಗುಣಧೀ
ಹತ್ತು ಹೆಡಕಿನವನ ವನವ
ಕಿತ್ತು ಪುರವನುರುಹಿ ಭಯವ
ಬಿತ್ತಿ ಜನನಿ ಕುಶಲ ಒಡೆಯ
ಗಿತ್ತ ಹನುಮ ತೇ ನಮೋ || ೧ ||

ಮುಪ್ಪಿನವಳ ಮಗನತರಿದು ಕೃ -
ಷ್ಣಾರ್ಪಣವನೆ ಮಾಡಿ ನೃಪರ
ಕಪ್ಪ ಹೊರಿಸಿ ತಂದು ಮಖಕೆ
ಒಪ್ಪಿಸಿದ ಅಗ್ರಜಾತಗೆ
ಭೂಪನಣ್ಣನ ಅಣುಗರನ್ನು
ಅಪ್ಪಳಿಸಿ ತಮಸಕೆ ಕಳುಹಿ
ತಪ್ಪದೆಂದೂ ರಂಗ ಸೇವೆಯೊ
ಳಿಪ್ಪ ಶ್ರೀಭೀಮ ತೇ ನಮೋ || ೨ ||

ವಿಷ್ಣುಭಟರ ಮತಿಗೆ ಕಲಿಯು
ವೇಷ್ಟಿಸಿರಲು ಬ್ರಹ್ಮ ಸೂತ್ರ
ಸ್ಪಷ್ಟ ತಿಳುಹಿ ತಾತ್ವಿಕ ಜನ
ಶ್ರೇಷ್ಠಿ ನೆರಹಿ ಮಿಥ್ಯರ
ಭ್ರಷ್ಟವಚನ ನಿರಾಕರಿಸಿ ನಿ
ಜೇಷ್ಟಮತವ ಹೊರೆದೆ ಗುರುವ
ರಿಷ್ಟ ಮಧ್ವಪ್ರಸನ್ನವೆಂಕಟ
ಕೃಷ್ಣ ಮರ್ತ್ಯ ತೇ ನಮೋ || ೩ ||

sharaNu sakala praaNanaatha
sarasijabhava padavibhOkta
mUravataari muKyapraaNa
hariparaayaNa tE namO || pa ||

raktashivana bisuTu jagada
karta raghu puMgavana padadi
bhakti balidu itara viShaya 
cittanaagada suguNadhI
hattu heDakinavana vanava
kittu puravanuruhi bhayava
bitti janani kushala oDeya
gitta hanuma tE namO || 1 ||

muppinavaLa maganataridu kRu -
ShNaarpaNavane maaDi nRupara
kappa horisi taMdu maKake
oppisida agrajaatage
bhUpanaNNana aNugarannu
appaLisi tamasake kaLuhi
tappadeMdU raMga sEveyo
Lippa shrIbhIma tE namO || 2 ||

viShNubhaTara matige kaliyu
vEShTisiralu brahma sUtra
spaShTa tiLuhi taatvika jana
shrEShThi nerahi mithyara
bhraShTavacana niraakarisi ni
jEShTamatava horede guruva
riShTa madhvaprasannaveMkaTa
kRuShNa matya tE namO || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru