ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ಮೋಸ ಹೋದೆನಲ್ಲ | ಶ್ರೀಪಾದರಾಜರು | Mosa Hodenalla | Sripadarajaru

ಸಾಹಿತ್ಯ : ಶ್ರೀ ಶ್ರೀಪಾದರಾಜರು (ರಂಗ ವಿಠಲ)

Kruti: Sri Sripadarajaru (Ranga vittala)



ಮೋಸ ಹೋದೆನಲ್ಲ ಸಕಲವೂ ವಾಸುದೇವ ಬಲ್ಲ ||ಪ|| 

ಭಾಸುರಾಂಗ ಶ್ರೀವಾಸುಕೀ ಶಯನನ 
ಸಾಸಿರನಾಮವ ಲೇಸಾಗಿ ಪಠಿಸದೆ ||ಅಪ||

ದುಷ್ಟಜನರ ಕೂಡಿ ನಾನತಿ ಭ್ರಷ್ಟನಾದೆ ನೋಡಿ 
ಶ್ರೇಷ್ಠ ರೂಪ ಮುರ ಮುಷ್ಟಿಕ ವೈರಿಯ 
ನಿಷ್ಠೆಯಿಂದ ನಾ ದೃಷ್ಟಿಸಿ ನೋಡದೆ ||೧||

ಕಾಯವು ಸ್ಥಿರವಲ್ಲ ಎನ್ನೊಳು ಮಾಯೆ ತುಂಬಿತಲ್ಲ 
ಪ್ರಾಯಮದದಿ ಪರಸ್ತ್ರೀಯರ ಕೂಡಾಡಿ 
ಕಾಯಜ ಜನಕನ ಗಾಯನ ಮಾಡದೆ ||೨||

ಕಂಗಳಿಂದಲಿ ನೋಡೋ ದೇವ ನಿನ್ನಂಗ ಸಂಗವ ನೀಡೋ 
ಮಂಗಳ ಮಹಿಮ ಶ್ರೀರಂಗವಿಠ್ಠಲ ಮುಂ-
ದಂಗ ಬಾರದಂತೆ ನೀ ದಯ ಮಾಡೋ ||೩||

mOsa hOdenalla sakalavU vAsudEva balla ||pa|| 

BAsurAMga SrIvAsukI Sayanana 
sAsiranAmava lEsAgi paThisade ||apa||

duShTajanara kUDi nAnati BraShTanAde nODi 
SrEShTha rUpa mura muShTika vairiya 
niShTheyiMda nA dRuShTisi nODade ||1||

kAyavu sthiravalla ennoLu mAye tuMbitalla 
prAyamadadi parastrIyara kUDADi 
kAyaja janakana gAyana mADade ||2||

kaMgaLiMdali nODO dEva ninnaMga saMgava nIDO 
maMgaLa mahima SrIraMgaviThThala muM-
daMga bAradaMte nI daya mADO ||3||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru