ಕೋಟೀಶ್ವರ ಸುಳಾದಿ | ಶ್ರೀ ವಿಜಯದಾಸರ ಕೃತಿ | Koteeshwara Sulaadi | Sri Vijayadasara Kruti

Image
Koteeshwara Sulaadi / ಕೋಟೀಶ್ವರ ಸುಳಾದಿ ಧ್ರುವತಾಳ ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ | ಮುದ್ರದೊಳಗೆ ಹತ್ತು ಮಹಾಕಲ್ಪಾ | ಇದ್ದು ಕ್ಷಾರೋದಕ ಪಾನಮಾಡಿ ಪದವಿ | ಸಿದ್ಧ ಮಾಡಿಕೊಂಡು ನರಸಿಂಹನ ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು | ತ್ರಿದ್ದಶರಲ್ಲಿ ಮಹಾದೇವನೆನಿಸಿ | ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ | ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ | ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ | ನಿರ್ದೋಷರಾಗುವರು ಸಜ್ಜನರೂ | ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ | ರುದ್ರನ ಪಾಲಿಪ ಪ್ರಭುವೆ ಎನ್ನಿ ||೧|| ಮಟ್ಟತಾಳ ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ | ಇರುತಿಪ್ಪನು ತನ್ನ ಪರಿವಾರದ ಒಡನೆ | ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ | ಸುರರಿಗೆ ಗುರುವೆನಿಸಿ ಪರಮ | ಪುರುಷ ನಮ್ಮ ವಿಜಯವಿಠಲನಿಂದಾ | ಶರಣರ ಭಯ ಉತ್ತಾರ ಮಾಡುವಾ ಕರುಣಿ ||೨|| ತ್ರಿವಿಡಿತಾಳ ಭಸ್ಮಾಸುರನು ಮಹತಪಮಾಡಿ ಉಗ್ರದಲಿ | ಪಶುಪತಿಯಾ ಒಲಿಸಿದ ಭಕುತಿಯಿಂದ | ಅಸಮನೇತ್ರನು ಬಂದು ನುಡಿದ ನಿನಗೇನು | ಕುಶಲ ಬೇಕೆನಲು ವಂದಿಸಿ ತಲೆವಾಗಿ | ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು | ಬೆಸಸೀದನು ಉರಿಹಸ್ತಾ ಕರುಣಿಸೆಂದೂ | ಎಸೆವ ಮಾತಿಗೆ ಸತಿಯಿಂದಾಗಲೆ ಅವನು | ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ | ದಶೆಗೆಟ್ಟು ಮುಂದಾಣ ಯೋಚನೆ ತೋರದೆ | ದಶದಿಶಿಗೆ ಓಡಿದಾ ಭೀತಿಯಿಂದ | ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ | ವಸತಿ ಇದೆ ಎಂದು ಅಡಗಿದಾನಲ್ಲಿ ...

ನೋಡಿದೆ ಶ್ರೀ ಕೃಷ್ಣನ | ಹಯವದನ | Nodide Sri Krishna Naa | Sri Vadirajaru


ಸಾಹಿತ್ಯ : ಶ್ರೀ ವಾದಿರಾಜರು (ಹಯವದನ)
Kruti:Sri Vadirajaru (Hayavadana)


ನೋಡಿದೆ ಶ್ರೀ ಕೃಷ್ಣನ ನೋಡಿದೆ  || ಪ ||

ನೋಡಿದೆ ಒಂಭತ್ತು ಗೂಡಿನ ಕಿಟಕಿಯೊಳ್-
ಕೂಡಿದ ಮಂದಿಯೊಳ್ಗಾಡಿಕಾರನನಿಂದು || ಅಪ ||

ನಾರಿಪುರುಷರೊಂದುಗೂಡಿ ಮುಂದೆ
ದಾರಿಯ ಬಿಡದೆ ಹೋರ್ಯಾಡಿ ದೇಹ 
ಯಾರದಂತೆ ಪುಡಿ ಪುಡಿ ಮತ್ತೆ ಶ್ರೀರಮಣನ ಪಾಡಿಬೇಡಿ ||ಆಹಾ|| ಸುತ್ತ 
ಸೇರಿದ ಜನರಿವರ ಮಧ್ಯದಿ 
ಚಾರು ಮೌಕ್ತಿಕದ ಮಣಿಹಾರ ಶೃಂಗಾರನ್ನ || ೧ ||

ಅಂಗದೊಳಿಹ ದಿವ್ಯಾಭರಣ ಕನ
ಕಂಗಳೊಪ್ಪಿದ ರವಿಕಿರಣ ಮುನಿ 
ಪುಂಗವೆ ವಂದಿಪ ಚರಣಕಮಲಂಗಳ ನೆನೆವರ ಕರುಣಾ ||ಆಹಾ||
ಹಿಂಗದೆ ಪೊರೆವ ಶ್ರೀರಂಗನುತ್ಸವಕೆಂದು 
ಮಂಗಳಾರತಿಯಾಗಿ ಸಂಗಡ ಪೊರಡಲು || ೨ ||

ಭರದಿಂದ ಪಲ್ಲಕ್ಕಿನೇರಿ 
ಮಧ್ವಸರೋವರದೆಡೆಯನು ಸಾರಿ ಸುತ್ತ 
ಮೆರೆವ ದೀಪದಿಂಬೀರಿ ನೋಳ್ಪಜನರಿಗೆ ಜಲಕ್ರೀಡೆ ತೋರಿ ||ಆಹಾ|| 
ಸಿರಿ ಅರಸನು ಹಯವದನನೀಪರಿ ಮೆರೆವ ಉಡುಪಿಯೊ-
ಳ್ಪರಿಯಾಯ ವಿನೋದವನ್ನು || ೩ ||

nODide SrI kRuShNana nODide  || pa ||

nODide oMBattu gUDina kiTakiyo-
LkUDida maMdiyoLgADikArananiMdu || apa ||

nAripuruSharoMdugUDi muMde
dAriya biDade hOryADi dEha 
yAradaMte puDi puDi matte SrIramaNana pADibEDi ||AhA|| sutta 
sErida janarivara madhyadi 
cAru mauktikada maNihAra SRuMgAranna || 1 ||

aMgadoLiha divyABaraNa kana
kaMgaLoppida ravikiraNa muni 
puMgave vaMdipa caraNakamalaMgaLa nenevara karuNA ||AhA||
hiMgade poreva SrIraMganutsavakeMdu 
maMgaLAratiyAgi saMgaDa poraDalu || 2 ||

BaradiMda pallakkinEri madhvasarOvaradeDeyanu sAri sutta 
mereva dIpadiMbIri nOLpajanarige jalakrIDe tOri ||AhA|| 
siri arasanu hayavadananIpari mereva uDupiyo-
LpariyAya vinOdavannu || 3 ||

Popular posts from this blog

ನಾರಾಯಣ ನಾರಾಯಣ ಗೋವಿಂದ | ಪುರಂದರ ವಿಠಲ | Narayana Narayana Govinda | Purandara Vithala

ಶ್ರೀನಿವಾಸ ಕಲ್ಯಾಣ | ಸ್ತ್ರೀಯರೆಲ್ಲರು ಬನ್ನಿರೆ | ಹಯವದನ | Srinivasa Kalyana | Vadirajaru

ಶ್ರೀ ಕಂಕಣಾಕಾರ ಸುಳಾದಿ | ಶ್ರೀ ವಿಜಯ ದಾಸರ ರಚನೆ | Sri Kankanakara Suladi | Sri Vijaya Dasaru